Oppo Smartphone: ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಒಪ್ಪೋ ಫೈಂಡ್ ಎನ್2 ಫ್ಲಿಪ್​ ಸ್ಮಾರ್ಟ್​​ಫೋನ್​!

 ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌

Oppo Findf N2 Flip: ಒಪ್ಪೋ ಮೊಬೈಲ್‌ ಸಂಸ್ಥೆಯು ಹೊಸದಾಗಿ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಕಳೆದ ವರ್ಷದ ಅಂತ್ಯದ ವೇಳೆ ಚೀನಾದಲ್ಲಿ ಅನಾವರಣ ಮಾಡಿತ್ತು. ಆದ್ರೆ ಈ ಫೋನ್‌ ಅನ್ನು ಅನ್ನು ಇದೇ ಫೆಬ್ರವರಿ 15 ರಂದು ಭಾರತ ಸೇರಿದಂತೆ ಗ್ಲೋಬಲ್‌ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಮುಂದೆ ಓದಿ ...
 • Share this:

  ಒಪ್ಪೋ ಕಂಪೆನಿ (Oppo Company) ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಮೊಬೈಲ್​ಗಳಿಗೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಹಳಷ್ಟು ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಮೊಬೈಲ್​ ಕಂಪೆನಿಗಳು ಸಹ ಹೊಸ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಒಪ್ಪೋ ಸಂಸ್ಥೆ ಹೊಸ ಟೆಕ್ನಾಲಜಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಅದುವೇ ಒಪ್ಪೋ ಫೈಂಡ್​ ಎನ್​2 ಫ್ಲಿಪ್ (Oppo Find N2 Flip)​ ಎಂಬುದಾಗಿದೆ. ಈ ರೀತಿಯ ಫೋಲ್ಡಬಲ್​ ಸ್ಮಾರ್ಟ್​​ಫೋನ್ (Foldable Smartphone)​ ಒಪ್ಪೋ ಕಂಪೆನಿಯಿಂದ ಮೊದಲ ಬಾರಿಗೆ ಬಿಡುಗಡೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸೋದು ಗ್ಯಾರಂಟಿ ಎಮದು ತಂತ್ರಜ್ಞರು ತಿಳಿಸಿದ್ದಾರೆ.


  ಒಪ್ಪೋ ಮೊಬೈಲ್‌ ಸಂಸ್ಥೆಯು ಹೊಸದಾಗಿ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಕಳೆದ ವರ್ಷದ ಅಂತ್ಯದ ವೇಳೆ ಚೀನಾದಲ್ಲಿ ಅನಾವರಣ ಮಾಡಿತ್ತು. ಆದ್ರೆ ಈ ಫೋನ್‌ ಅನ್ನು ಅನ್ನು ಇದೇ ಫೆಬ್ರವರಿ 15 ರಂದು ಭಾರತ ಸೇರಿದಂತೆ ಗ್ಲೋಬಲ್‌ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.


  ಒಪ್ಪೋ ಫೈಂಡ್​ ಎನ್​2 ಫ್ಲಿಪ್​ ಸ್ಮಾರ್ಟ್​​ಫೋನ್​ ಫೀಚರ್ಸ್​


  ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದ್ದು, ಇದು 1,080 × 2,520 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 120Hz ಅಡಾಪ್ಟಿವ್ ರಿಫ್ರೆಶ್‌ ರೇಟ್‌ ಪಡೆದಿದೆ. ಇದರೊಂದಿಗೆ ಈ ಫೋನ್ ಪ್ಯಾನೆಲ್‌ನಲ್ಲಿ 3.62 ಇಂಚಿನ ವಿಶೇಷ ಡಿಸ್‌ಪ್ಲೇ ಸಹ ಹೊಂದಿದೆ.


  ಇದನ್ನೂ ಓದಿ: ಇಂದಿನಿಂದ ಖರೀದಿಗೆ ಲಭ್ಯವಾಗಲಿದೆ ಒನ್​ಪ್ಲಸ್​ 11 5ಜಿ ಮೊಬೈಲ್​! ಬೆಲೆ ಎಷ್ಟು ಗೊತ್ತಾ?


  ಕ್ಯಾಮೆರಾ ಸೆಟಪ್​


  ಒಪ್ಪೋ ಫೈಂಡ್ ಎನ್​2 ಫ್ಲಿಪ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ 50 ಮೆಗಾಪಿಕ್ಸೆಲ್​ ಸೆನ್ಸಾರ್‌ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.


  ಪ್ರೊಸೆಸರ್ ಸಾಮರ್ಥ್ಯ


  ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್‌ ಸಹ ಆಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್‌ 13.0 ನಲ್ಲಿ ರನ್‌ ಆಗಲಿದೆ. ಹಾಗೆಯೇ ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ 8ಜಿಬಿ ರ್‍ಯಾಮ್ ಮತ್ತು 256ಜಿಬಿ, 12ಜಿಬಿ ರ್‍ಯಾಮ್ ಮತ್ತು 256ಜಿಬಿ ಮತ್ತು 16ಜಿಬಿ ರ್‍ಯಾಮ್ ಮತ್ತು 512ಜಿಬಿ ನ ಮೂರು ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.


  ಬ್ಯಾಟರಿ ಫೀಚರ್ಸ್​


  ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್​​​ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಇದೂ ಸಹ 44W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಒಳಗೊಂಡಿದೆ.


  ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌


  ಬೆಲೆ ಮತ್ತು ಲಭ್ಯತೆ


  ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸುಮಾರು 82,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಮದು ಅಂದಾಜಿಸಲಾಗಿದೆ. ಅಂದಹಾಗೆ ಈ ಫೋನ್ ಪಿಂಕ್ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿರಲಿದೆ.


  ಫೆಬ್ರವರಿ 15 ರಂದು ಭಾರತ ಸೇರಿದಂತೆ ಗ್ಲೋಬಲ್‌ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇನ್ನು ಈ ಫೋನ್ ಬಿಡುಗಡೆ ಕಾರ್ಯಕ್ರಮವು ರಾತ್ರಿ 8:30 ಗಂಟೆಗೆ ನಡೆಯಲಿದ್ದು, ಆಸಕ್ತ ಗ್ರಾಹಕರು ಕಾರ್ಯಕ್ರಮದ ಲೈವ್‌ ಸ್ಟ್ರೀಮಿಂಗ್‌ ಅನ್ನು ಅಧಿಕೃತ ಒಪ್ಪೋ ಸೋಶಿಯಲ್‌ ಮೀಡಿಯಾ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ.
  ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್


  ಒಪ್ಪೋ ಇತ್ತೀಚೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಿದೆ. ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​​ಫೋನ್​ನ ಮೊದಲ ಮಾರಾಟ ಫೆಬ್ರವರಿ 10 ರಂದು ಪ್ರಾರಂಭವಾಗಿದೆ. ಈ ಸ್ಮಾರ್ಟ್​​​ಫೋನ್​4,800mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ.


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಮೈಕ್ರೋ ಕರ್ವ್ಡ್ ಅಮೋಲ್ಡ್​ ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಡ್ರ್ಯಾಗನ್‌ಟ್ರೈಲ್‌ ಸ್ಟಾರ್‌2 ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, ವೈಡ್‌ವೈನ್‌ L1 ಪ್ರಮಾಣೀಕರಣವನ್ನು ಪಡೆದಿದೆ.

  Published by:Prajwal B
  First published: