HOME » NEWS » Tech » OPPO F17 PRO AND OPPO F17 TO LAUNCH IN INDIA TODAY 7PM HG

Oppo F17 Pro: ಒಪ್ಪೊ ಮಾರುಕಟ್ಟೆಗೆ ಪರಿಚಯಿಸುತ್ತಿದೆ F17 ಪ್ರೊ ಸ್ಮಾರ್ಟ್​ಫೋನ್​​; ಕ್ಯಾಮೆರಾ ಎಷ್ಟಿದೆ ಗೊತ್ತಾ?

Oppo F17: ನೂತನ ಸ್ಮಾರ್ಟ್​ಫೋನ್​​ 6.43 ಇಂಚಿನ ಸೂಪರ್​ ಅಮೋಲ್ಡ್​​​​ FHD+ ಡಿಸ್​ಪ್ಲೇ ಹೊಂದಿದ್ದು, ಮೀಡಿಯಾಟೆಕ್​​ ಹೆಲಿಯೋ P95 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. 8GB RAM ​​​ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುತ್ತಿದೆ.

news18-kannada
Updated:September 2, 2020, 3:09 PM IST
Oppo F17 Pro: ಒಪ್ಪೊ ಮಾರುಕಟ್ಟೆಗೆ ಪರಿಚಯಿಸುತ್ತಿದೆ F17 ಪ್ರೊ ಸ್ಮಾರ್ಟ್​ಫೋನ್​​; ಕ್ಯಾಮೆರಾ ಎಷ್ಟಿದೆ ಗೊತ್ತಾ?
ಒಪ್ಪೊ F17 ಪ್ರೊ
  • Share this:
Oppo F17 Pro | Oppo F17 : ಚೀನಾ ಮೂಲದ ಒಪ್ಪೊ ಸಂಸ್ಥೆ ಇಂದು F17 ಮತ್ತು F17 ಪ್ರೊ ಹೆಸರಿನ ಸ್ಮಾಟ್​ಫೋನ್​​ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸಂಜೆ 7 ಗಂಟೆಗೆ ಆನ್​ಲೈನ್​ ಲೈವ್​​ ಕಾರ್ಯಕ್ರಮದ ಮೂಲಕ ನೂತನ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಯ್ಯೂಟೂಬ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ F17 ಸಿರೀಸ್​ ಬಿಡುಗಡೆ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ.

ಒಪ್ಪೊ F17 ಪ್ರೊ ವಿಶೇಷತೆ:

ನೂತನ ಸ್ಮಾರ್ಟ್​ಫೋನ್​​ 6.43 ಇಂಚಿನ ಸೂಪರ್​ ಅಮೋಲ್ಡ್​​​​ FHD+ ಡಿಸ್​ಪ್ಲೇ ಹೊಂದಿದ್ದು, ಮೀಡಿಯಾಟೆಕ್​​ ಹೆಲಿಯೋ P95 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. 8GB RAM ​​​ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುತ್ತಿದೆ.

ಕ್ಯಾಮೆರಾ: 48 ಮೆಗಾಫಿಕ್ಸೆಲ್​​​ ಕ್ವಾಡ್​ ಕೋರ್​​ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಆಲ್ಟ್ರಾವೈಡ್​​, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಮತ್ತು 2 ಮೆಗಾಫಿಕ್ಸೆಲ್​​ ಡೆಪ್ತ್​​ ಸೆನ್ಸಾರ್​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ: 4 ಸಾವಿರ mAh​ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್​ಫೋನ್​​ ಕಪ್ಪು, ನೀಲಿ, ಬಿಳಿ ಬಣ್ಣದಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

ಬೆಲೆ: ಒಪ್ಪೊ F17 ಪ್ರೊ ಸ್ಮಾರ್ಟ್​ಫೋನ್​ ಬೆಲೆ 25 ಸಾವಿರ ರೂ ಎಂದು ಅಂದಾಜಿಲಾಗಿದೆ.

ಒಪ್ಪೊ F17 ಸ್ಮಾರ್ಟ್​ಫೋನ್​ ವಿಶೇಷತೆ:ಇಂದು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಒಪ್ಪೊ F17 ಸ್ಮಾರ್ಟ್​ಫೋನ್​​ 6.44 ಇಂಚಿನ ಸೂಪರ್​ ಅಮೋಲ್ಡ್​​​​ ಎಫ್​ಹೆಚ್​ಡಿ+ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗ್ಯನ್​​​ 662 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. 6GB RAM​​​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಕ್ಯಾಮೆರಾ: 16 ಮೆಗಾಫಿಕ್ಸೆಲ್​​​ + 8 ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್​ ಮ್ಯಾಕ್ರೊ + 2 ಮೆಗಾಫಿಕ್ಸೆಲ್​​ ಡೆಪ್ತ್​​ ಸೆನ್ಸಾರ್​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ: 4 ಸಾವಿರ mAh​ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್​ಫೋನ್​​ ಕಿತ್ತಳೆ, ನೀಲಿ, ಸಿಲ್ವರ್​ ಬಣ್ಣದಲ್ಲಿ ಗ್ರಾಕರಿಗೆ ಖರೀದಿಗೆ ಸಿಗಲಿದೆ.
Published by: Harshith AS
First published: September 2, 2020, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories