25 ಸಾವಿರ ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್ OPPO F11 Pro ಯಾಕೆ ಗೊತ್ತಾ?

ಕ್ಲೌಡ್ ಸರ್ವಿಸ್​ ಗಮನಾರ್ಹ ಅಂಶವೇನೆಂದರೆ ಇದರಲ್ಲಿನ ವಿಡಿಯೋ ಸಿಂಕ್, ಫೋಟೋ ಸಿಂಕ್, ಆಲ್ಬಮ್ ಶೇರಿಂಗ್, ಬುಕ್ ಮಾರ್ಕ್ ಸಿಂಕ್, ನ್ಯೂಸ್ ಸಿಂಕ್(ಭಾರತದಲ್ಲಿ ಮಾತ್ರ) ವೈಫೈ ಕೀ ಸಿಂಕ್, ಎಸ್ಎಂಎಸ್ ಬ್ಯಾಕಪ್ ಮತ್ತು ರಿಸ್ಟೋರ್, ಕಾಲ್ ಹಿಸ್ಟರಿ ಬ್ಯಾಕಪ್ ಮತ್ತು ರಿಸ್ಟೋರ್ ಒಳಗೊಂಡಿದೆ.

zahir | news18
Updated:April 9, 2019, 5:05 PM IST
25 ಸಾವಿರ ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್ OPPO F11 Pro ಯಾಕೆ ಗೊತ್ತಾ?
ಒಪ್ಪೊ
zahir | news18
Updated: April 9, 2019, 5:05 PM IST
ಕಡಿಮೆ ಬೆಳಕಿನಲ್ಲಿ ಅತ್ಯುತ್ತಮ ಚಿತ್ರ ಸೆರೆಹಿಡಿಯಬಲ್ಲ ಕ್ಯಾಮೆರಾ ಸ್ಮಾರ್ಟ್​ಫೋನ್ ಕೊಂಡುಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಆಯ್ಕೆ OPPO F11 Pro ಆಗಿರಲಿ. ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ ಹಾಗೂ ವಿನ್ಯಾಸವನ್ನು ಒಳಗೊಂಡಿರುವ ಈ ನೂತನ ಫೋನಿನ ಬೆಲೆ 25 ಸಾವಿರ ರೂ., ಯುವ ತಲೆಮಾರಿನ ಸ್ಮಾರ್ಟ್​ಫೋನ್ ಕ್ರೇಜ್​ ಅನ್ನು ಗಮನದಲ್ಲಿರಿಸಿ ಒಪ್ಪೊ ಕಂಪೆನಿಯು ನಿರ್ಮಿಸಿರುವ ಈ ಫೋನಿನ ವಿಶೇಷತೆಗಳ ಬಗ್ಗೆ ತಿಳಿಯಿರಿ.

1. ಕ್ಯಾಮೆರಾ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಬಳಿ DSLR ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಆದರೆ OPPO F11 ಫೋನ್ 48MP ಕ್ಯಾಮೆರಾವಿದ್ದು, ಇದು ಕೂಡ ಡಿಎಸ್​ಎಲ್​ಆರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ವಿಶೇಷವಾದ ಮ್ಯಾಪಿಂಗ್ ಕರ್ವ್ ಮತ್ತು ಪಿಕ್ಸೆಲ್-ಗ್ರೇಡ್ ಕಲರ್ ಮ್ಯಾಪಿಂಗ್ ಅಲ್ಗಾರಿದಮ್ ಬಳಕೆದಾರರಿಗೆ ಎದ್ದುಕಾಣುವ ಮತ್ತು ರೋಮಾಂಚಕ ಚಿತ್ರಗಳನ್ನು ನೀಡುತ್ತದೆ. OPPO ಗಳ ವಿಶಿಷ್ಟ AI ಎಂಜಿನ್ ಮತ್ತು ಅಲ್ಟ್ರಾ-ಕ್ಲಿಯರ್ ಎಂಜಿನ್ ಮೂಲಕ ಸ್ಪಷ್ಟ ಚಿತ್ರಣವನ್ನು ಸೆರೆಹಿಡಿಯಬಹುದು.ಇದರಲ್ಲಿರುವ ಮೋಟಾರಿಸ್ಡ್ ರೈಸಿಂಗ್ ಕ್ಯಾಮೆರಾವು ಹಗಲು ಅಥವಾ ರಾತ್ರಿ ಯಾವುದೇ ಸಂದರ್ಭದಲ್ಲಿ ವೇಗವಾಗಿ ಫೋಕಸ್ ಮಾಡುವ ಮೂಲಕ ಸ್ಪಷ್ಟ ಮತ್ತು ಪ್ರಕಾಶಮಾನವಾದ ಚಿತ್ರ ಒದಗಿಸುತ್ತದೆ. ಫೋನಿನ ಸ್ಕ್ರೀನ್ ಫ್ಲಾಶ್ ಕ್ರಿಯಾತ್ಮಕತೆಯಿಂದಾಗಿ ಕಡಿಮೆ ಬೆಳಕಿನಲ್ಲೂ ಮೋಟಾರೈಸ್ಡ್ 16 MP ಕಾಮೆರಾ ಮೂಲಕ ಅತ್ಯುತ್ತಮ ಚಿತ್ರ ಸೆರೆಹಿಡಿಯಬಹುದು. ಮಧ್ಯದಲ್ಲಿ ಇರಿಸಲಾಗಿರುವ ರೈಸಿಂಗ್ ಕ್ಯಾಮೆರಾ ಬದಿಯಲ್ಲಿನ ಚಿತ್ರಗಳ ಅಸ್ಪಷ್ಟತೆಯನ್ನು ತಡೆಗಟ್ಟುತ್ತದೆ. ಇದರಿಂದ ಸೆಲ್ಫಿ ಮತ್ತಷ್ಟು ಸ್ವಾಭಾವಿಕವಾಗಿ ಕಾಣಿಸಲಿದೆ. ಹಾಗೆಯೇ ನ್ಯಾನೋ ಪ್ರಿಂಟಿಂಗ್ ತಂತ್ರಜ್ಞಾನ ಇದರಲ್ಲಿದ್ದು, ಈ ಫೀಚರ್ ಅಳವಡಿಸಿರುವ ಕಂಪೆನಿಗಳಲ್ಲಿ OPPO ಉದ್ಯಮದಲ್ಲೆ ಮೊದಲನೆಯದ್ದಾಗಿದೆ.

OPPO F11 Pro ನಲ್ಲಿ ನಿಮ್ಮ ಫೋಟೋಗಳಿಗೆ ವೃತ್ತಿಪರ ಸ್ಪರ್ಶನೀಡುವ ಹೆಚ್ಚು ಪ್ರಸಿದ್ಧ ಪೋಟ್ರೇಟ್ ಮೋಡ್ ಸಹ ಒಳಗೊಂಡಿದೆ. ಫೋನಿನ ಬ್ಯೂಟಿ ಮೂಡ್ ಮೂಲಕ ನಿಮ್ಮ ಫೋಟೋಗಳನ್ನ ಮತ್ತಷ್ಟು ಅತ್ಯುತ್ತಮವಾಗಿ ಪಡೆಯುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚಬಹುದು.

2. ಬ್ಯಾಟರಿ ಬಾಳಿಕೆ: ಇಂದಿನ ತರಾತುರಿ ಜೀವನಶೈಲಿಯಲ್ಲಿ ನೀವು ಬಹಳಷ್ಟು ಕೆಲಸಗಳನ್ನ ಮೊಬೈಲ್​ನಲ್ಲೇ ಮಾಡಬೇಕಾದ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಫೋನ್ ಬ್ಯಾಟರಿ ಮುಗಿಯುತ್ತಿರುವ ಬಗ್ಗೆ ಯೋಚಿಸುತ್ತಿರುತ್ತೀರಿ. ಹೀಗಾಗಿ, ವೇಗವಾಗಿ ಡೌನ್​ಲೋಡ್ ಮತ್ತು ಕಡಿಮೆ ಚಾರ್ಜಿಂಗ್ ಸಮಯದ ಮೂಲಕ OPPO F11 Pro ಸ್ಮಾರ್ಟ್ ಫೋನ್ ನಿಮ್ಮ ಮನರಂಜನೆಗೆ ಅತಿ ಹೆಚ್ಚು ಸಮಯ ನೀಡುತ್ತದೆ. 4000 mAh ಸಾಮರ್ಥ್ಯದೊಂದಿಗೆ ದೊಡ್ಡದಾದ ಮತ್ತು ಉತ್ತಮವಾದ ಬ್ಯಾಟರಿ ಇದರಲಿದ್ದು, VOOC 3.0 ತಂತ್ರಜ್ಞಾನದ ವೇಗದ ಚಾರ್ಜ್ ಏಕೀಕರಣದೊಂದಿಗೆ ತಯಾರಾಗಿದೆ. ಕ್ಯಾಮೆರಾ ಬಳಸಿದಾಗಲೂ OPPO F11 Pro ಬ್ಯಾಟರಿ 15.5 ಗಂಟೆಗಳವರೆಗೆ ಬರುತ್ತದೆ ಎಂದು ತಿಳಿದುಬಂದಿದೆ. ವಿಡಿಯೋ ವೀಕ್ಷಿಸುವಾಗ 12 ಗಂಟೆ, ಗೇಮ್ ಆಡುವಾಗ 5.5 ಗಂಟೆ ಮತ್ತು ನಿರಂತರ ಮ್ಯೂಸಿಕ್ ಕೇಳುವಿಕೆ ಸಂದರ್ಭ 12 ಗಂಟೆ ಬ್ಯಾಟರಿ ಬಾಳಿಕೆ ಬರುತ್ತದೆ. ಹೀಗಾಗಿ, ಈ ಫೋನ್ ಫೋನ್ ಇಂದಿನ ಪೀಳಿಗೆಯಲ್ಲೇ ಅತ್ಯುತ್ತಮವಾದ ಸ್ಮಾರ್ಟ್​ಫೋನ್​ ಎಂದರೆ ತಪ್ಪಾಗಲಾರದು.

3. ಗೇಮಿಂಗ್ ಅನುಭವ: ಇತ್ತೀಚಿನ ಆಕ್ಟಾ-ಕೋರ್ ಹೆಲಿಯೊ ಪಿ 70 ಗೇಮಿಂಗ್ ಚಿಪ್​ಸೆಟ್ ತಂತ್ರಜ್ಞಾನವು ಮೊಬೈಲ್ ಗೇಮ್ ಪ್ರೇಮಿಗಳಿಗೆ ಅತ್ಯುತ್ತಮ ಸೆಟಪ್ ಆಗಿದೆ. ಮನಮುಟ್ಟುವ ದೃಶ್ಯಾವಳಿ ಮತ್ತು PUBG ಯಂತಹ ಹೈ-ಎಂಡ್ ಆಟಗಳನ್ನು ಆಡುವಾಗ ಯಾವುದೇ ನಿಧಾನಗತಿಯ ಅನುಭವವನ್ನು ನೀಡುವುದಿಲ್ಲ. 6 ಜಿಬಿ ಮತ್ತು 64 ಜಿಬಿ ಸಾಮರ್ಥ್ಯದ ಪ್ರಬಲ RAM ಜೊತೆಗೆ ಶಾಖ ನಿರ್ವಹಣಾ ವ್ಯವಸ್ಥೆಯು ಈ ಫೋನ್​ನಲ್ಲಿದೆ. ಹೀಗಾಗಿ, ಬಹಳ ಸಮಯದವರೆಗೂ ಗೇಮ್ ಆಡಿದರೂ ಮೊಬೈಲ್ ಗೆ ಹಾನಿಯಾಗದ ರೀತಿ ಮತ್ತು ಬಿಸಿಯಾಗದಂತೆಯೂ ಇದು ತಡೆಯುತ್ತದೆ.

4. ವಿನ್ಯಾಸ: 24999 ರೂ ಮುಖ ಬೆಲೆಯ ಈ ಫೋನ್ ವಿನ್ಯಾಸ ಹಾಗೂ ಅದರ ಆಕರ್ಷಕವಾದ ನೋಟ ಮತ್ತು ಪ್ರೀಮಿಯಂ ಫಿನಿಷ್ ಹೊಂದಿಗೆ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಬರೀ ಮೇಲ್ನೋಟಕ್ಕೆ ಮಾತ್ರವಲ್ಲ ಬಳಿಕೆಯಲ್ಲೂ ಅತ್ಯುತ್ತಮವಾಗಿದ್ದು, ದುಬಾರಿ ಬೆಳೆಯ ಫೋನ್​ಗಳಿಗೆ ನೀವು ಗುಡ್ ಬೈ ಹೇಳಬಹುದು. ಇದು ಎರಡು ವಿಶಿಷ್ಟ ಅರೋರಾ ಗ್ರೀನ್ ಮತ್ತು ಕಡು ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ. ಹೀಗಾಗಿ, ನಿಮಗೆ ಇದು ಮತ್ತಷ್ಟು ಸ್ಟೈಲಿಶ್ ಲುಕ್ ಸ್ಮಾರ್ಟ್​ಫೋನ್ ಒಪ್ಪೊ ನೀಡಲಿದೆ.

OPPO F11 Pro 6.5 ಇಂಚಿನ ಡಿಸ್ ಪ್ಲೇಗೆ 90.9% ಬಾಡಿ ಸ್ಕ್ರೀನ್ ಪರದೆಯ ಅನುಪಾತದಲ್ಲಿ ನೀಡುತ್ತದೆ. ಏಕೆಂದರೆ ರೈಸಿಂಗ್ ಕ್ಯಾಮರಾದಿಂದಾಗಿ ಅಗತ್ಯಬಿದ್ದಾಗ ಅತ್ಯುತ್ತಮ ಮತ್ತು ಸಂಪೂರ್ಣ Hd+ ವೀಕ್ಷಣೆಯ ಅನುಭವ ನೀಡುವುದು ಇದರ ಉದ್ದೇಶವಾಗಿದೆ. IPS LCD ಪ್ಯಾನಲ್ ಒಳಗೊಂಡಿದ್ದು, 1,080 x 2,340 ಪಿಕ್ಸೆಲ್​ನಲ್ಲಿ ರೆಸಲ್ಯೂಷನ್ ಒದಗಿಸುತ್ತದೆ.5. AI ಮತ್ತು ಫೀಚರ್​ಗಳು: ಇದರ ಪ್ರಬಲ ಕ್ಲೌಡ್ ಸೆರ್ವಿಸ್ ಪ್ಯಾಕೇಜ್, ಡ್ರಾಯರ್ ಮೋಡ್, ಸರಳ ನ್ಯಾವಿಗೇಷನ್ ಸಿಗ್ನಲ್​ಗಳು, ಸ್ಮಾರ್ಟ್ ರೈಡಿಂಗ್ ಮೋಡ್ ಮತ್ತು ಸ್ಮಾರ್ಟ್ ತಂತ್ರಜ್ಞಾನದ ಜೊತೆಗೆ, OPPO F11 pro ಅಂತರ್ನಿರ್ಮಿತ AI ಅನ್ನು ಹೊಂದಿದೆ. ಇದು ಅದರ ಮೆಮೊರಿಯನ್ನು ಹೆಚ್ಚಿಸಲು ಬ್ಯಾಕ್ ಗ್ರೌಂಡ್ ಅಪ್ಲಿಕೇಶನ್ ಗಳನ್ನ ತಟಸ್ಥವಾಗಿಟ್ಟಿರುತ್ತದೆ. ವಿಸ್ತರಣೆಗೊಂಡಂತಹ ಕ್ಲೌಡ್ ಸರ್ವಿಸ್ ಬಳಕೆದಾರರು ತಮ್ಮ ಸಂಪರ್ಕಗಳು ಮತ್ತು ಫೋಟೋಗಳನ್ನು ಡಿಲೀಟ್ ಮಾಡಬೇಕಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಕ್ಲೌಡ್ ಸರ್ವಿಸ್​ ಗಮನಾರ್ಹ ಅಂಶವೇನೆಂದರೆ ಇದರಲ್ಲಿನ ವಿಡಿಯೋ ಸಿಂಕ್, ಫೋಟೋ ಸಿಂಕ್, ಆಲ್ಬಮ್ ಶೇರಿಂಗ್, ಬುಕ್ ಮಾರ್ಕ್ ಸಿಂಕ್, ನ್ಯೂಸ್ ಸಿಂಕ್(ಭಾರತದಲ್ಲಿ ಮಾತ್ರ) ವೈಫೈ ಕೀ ಸಿಂಕ್, ಎಸ್ಎಂಎಸ್ ಬ್ಯಾಕಪ್ ಮತ್ತು ರಿಸ್ಟೋರ್, ಕಾಲ್ ಹಿಸ್ಟರಿ ಬ್ಯಾಕಪ್ ಮತ್ತು ರಿಸ್ಟೋರ್ ಒಳಗೊಂಡಿದೆ. ಬಳಕೆದಾರರು ಅನಗತ್ಯ ಪ್ರಮೋಷನ್ ಮತ್ತು ಜಾಹೀರಾತು ನೋಟಿಫಿಕೇಶನ್ ನೋಡುವ ಕಿರಿ ಕಿರಿ ತಪ್ಪಿಸಲು OPPO F11 Pro ಫೋನಲ್ಲಿ OPUSH ಬಳಕೆ ನಿಯಮ ಮತ್ತು ಆಂಡ್ರಾಯ್ಡ್ ನೇಟಿವ್ ನೋಟಿಫಿಕೇಶನ್ ಪ್ರಿಯೋರಿಟಿಸ್ ಬಳಸುತ್ತದೆ. ಇದರಿಂದಾಗಿ ಆದ್ಯತೆಯಯಿಲ್ಲದ ನೋಟಿಫಿಕೇಶನ್ ಬರುವುದು ತಪ್ಪುತ್ತದೆ.

OPPO F11 Pro ಒಳಗೊಂಡಿರುವ ಸ್ಮಾರ್ಟ್ ಡ್ಯುಯೆಲ್ ಚಾನಲ್ ನೆಟ್​ವರ್ಕ್ ತನ್ನ ಸ್ಮಾರ್ಟ್ ಆಂಟೆನಾ ಆಲ್ಗರಿದಮ್ (ಅಪ್ ಅಂಡ್ ಡೌನ್ ಸ್ವಿಚಿಂಗ್, ಲೆಫ್ಟ್ ಅಂಡ್ ರಿಟ್ ಸ್ವಿಚಿಂಗ್, ಲ್ಯಾಂಡ್ ಸ್ಕೇಪ್ ಅಂಡ್ ಪೋರ್ಟ್ರೇಟ್ ಸ್ವಿಚಿಂಗ್. ಇತ್ಯಾದಿ) ಮುಲಕ ವೀಕ್ ನೆಟ್​ವರ್ಕ್​ ಸಮಸ್ಯೆ ನಿವಾರಿಸಿ ತೊಡಕು ರಹಿತ ಸೇವೆ ಒದಗಿಸುತ್ತದೆ.

6. ಪಾಕೆಟ್ ಫ್ರೆಂಡ್ಲಿ ಪ್ರೈಸ್: OPPO ಸ್ಮಾರ್ಟ್ ಫೋನ್ ಕಂಪೆನಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹ್ಯಾಂಡ್​ಸೆಟ್​ ಅನ್ನು ಕೇವಲ 25,000 ರೂ.ಗೆ ಪ್ರೀಮಿಯಂ ವಿನ್ಯಾಸ, 48 ಎಂಪಿ ಕ್ಯಾಮರಾ, ಅದ್ಭುತ ಬ್ಯಾಟರಿ ಜೊತೆ ಯಾಂತ್ರಿಕೃತ ರೈಸಿಂಗ್ ಕ್ಯಾಮೆರಾ ಒಳಗೊಂಡಂತೆ ಗ್ರಾಹಕರಿಗೆ ಒದಗಿಸುತ್ತಿದೆ. ಹೀಗಾಗಿ, ನಿಸ್ಸಂಶಯವಾಗಿ ನೀವು ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ಫೋನ್ OPPO F11 ಪ್ರೊ ಎನ್ನಬಹುದು.
First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ