ಮೊದಲ 5ಜಿ ಮೊಬೈಲ್​ ಪರೀಕ್ಷೆ ನಡೆಸಿದ ಒಪ್ಪೊ


Updated:August 29, 2018, 12:36 PM IST
ಮೊದಲ 5ಜಿ ಮೊಬೈಲ್​ ಪರೀಕ್ಷೆ ನಡೆಸಿದ ಒಪ್ಪೊ
Image: MyDrivers

Updated: August 29, 2018, 12:36 PM IST
ಈಗಾಗಲೇ 4ಜಿ ವೇಗಕ್ಕೆ ಹೊಂದಿಕೊಂಡಿರುವ ಜಗತ್ತಿಗೆ 5ಜಿ ತಂತ್ರಜ್ಞಾನದ ಪರಿಚಯ 2014ರ ಮಧ್ಯದಲ್ಲೇ ಆಗಿಹೋಗಿದೆ. ಈ ತಂತ್ರಜ್ಞಾನದ ಹಿಂದೆ ಬಿದ್ದಿರುವ ಮೊಬೈಲ್​ ಕಂಪನಿಗಳು ತಮ್ಮ ನೂತನ ಸ್ಮಾರ್ಟ್​ಫೋನ್​ಗಳಿಗೆ 5 ಜಿ ತಂತ್ರಜ್ಞಾನ ಅಳವಡಿಸಲು ಇನ್ನಿಲ್ಲದ ಸರ್ಕಸ್​ ನಡೆಸುತ್ತಿವೆ. ಇದೀಗ ಚೀನಾದ ಮೊಬೈಲ್ ಸಂಸ್ಥೆ ಒಪ್ಪೊ ಮೊಟ್ಟ ಮೊದಲ 5ಜಿ ತಂತ್ರಜ್ಞಾನದ ಅಭಿವೃದ್ಧಿ ಹೊಂದಿದ ಮೊಬೈಲ್​ ಪರೀಕ್ಷೆಯಲ್ಲಿ ಸಕ್ಸಸ್​ ಕಂಡಿದೆ.

ಈ ವರ್ಷಾಂತ್ಯಕ್ಕೆ ಅಥವಾ 2019ರ ಆರಂಭದಲ್ಲೇ 5ಜಿ ತಂತ್ರಜ್ಞಾನವನ್ನು ಪರಿಚಯಿಸಲು ತೀರ್ಮಾನಿಸಿರುವ ಒಪ್ಪೊ ಮೊಬೈಲ್​ ಸಂಸ್ತೆ ಈಗಾಗಲೇ ಪ್ರೊಸೆಸರ್​ಗಳ ಚಿಪ್ಪನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಯಾದ ಕ್ವಾಲ್ಕಾಂ ಸ್ನಾಪ್​ಡ್ರಾಗನ್​ನೊಂದಿಗೆ ಜತೆಗೂಡಿ ಮೊದಲ 5ಜಿ ಟೆಸ್ಟಿಂಗ್​ನ್ನು ಪೂರೈಸಿದೆ ಎಂದು ಚೀನೀ ವೆಬ್​ಸೈಟ್​ ಮೈಡ್ರೈವರ್ಸ್​ ಹೇಳಿದೆ.

ಕ್ವಾಲ್ಕಂನ ಸ್ನಾಪ್​ಡ್ರಾಗನ್​ X50 ಮಾಡೆಮ್​ ಮೂಲಕ ಒಪ್ಪೊ R15 ಮೊಬೈಲ್​ಗೆ ಪರೀಕ್ಷಾರ್ಥ ಮೊದಲ 5ಜಿ ಟೆಸ್ಟಿಂಗ್​ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಒಪ್ಪೊ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ತಾಂತ್ರಿಕ ಮಾಹಿತಿ ಕುರಿತು ಹೇಳುವುದಾದರೆ, 20 MHz ಇಂಟರ್​ನೆಟ್​ ವೇಗ ಹೊಂದಿರುವ5G NR n78 ಮತ್ತು 10MHz ಇಂಟರ್​ನೆಟ್​ ವೇಗದ 4G LTE Band 5 ನಡುವೆ ಪರೀಕ್ಷೆ ನಡೆಸಿರುವ ಕುರಿತು ಬಿಜಿಆರ್​ ವರದಿ ಮಾಡಿದೆ.

ಇಷ್ಟು ಮಾತ್ರವಲ್ಲದೆ ಕ್ವಾಲ್ಕಂ ಸಂಸ್ಥೆ 5ಜಿ ಮಾಡೆಮ್​ ಪೂರೈಸಲು 15ಕ್ಕೂ ಅಧಿಕ ಮೊಬೈಲ್​ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ 2019ರೊಳಗೆ 5ಜಿ ತಂತ್ರಜ್ಞಾನ ಹೊಂದಿದ ಮೊಬೈಲ್​ಗಳನ್ನು ಮಾರುಕಟ್ಟೆಗೆ ಬಿಡಬಹುದು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626