Oppo Earbuds: ಒಪ್ಪೋ ಕಂಪೆನಿಯ ಹೊಸ ಇಯರ್​​ಬಡ್ಸ್​ ಲಾಂಚ್​! ಬಜೆಟ್​ ಬೆಲೆಯಲ್ಲಿ ಲಭ್ಯ

ಒಪ್ಪೋ ಎನ್ಕೋ ಏರ್​3 ಇಯರ್​ಬಡ್ಸ್​

ಒಪ್ಪೋ ಎನ್ಕೋ ಏರ್​3 ಇಯರ್​ಬಡ್ಸ್​

ಒಪ್ಫೋ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಒಪ್ಪೋ ಎನ್ಕೋ ಏರ್​​ 3 ಎಂಬ ಹೊಸ ಇಯರ್​ಬಡ್ಸ್​ ಅನ್ನು ಬಿಡುಗಡೆ ಮಾಡಿದೆ. ಇದು ಬ್ಲೂಟೂತ್​ 5.3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ ಈ ಗ್ಯಾಜೆಟ್ಸ್​ನ ಫೀಚರ್ಸ್​​ ಹೇಗಿದೆ ಅನ್ನೋದನ್ನು ಈ ಲೇಖನದಲ್ಲಿ ಓದಿ.

  • Share this:

    ಸ್ಮಾರ್ಟ್​​​ ಗ್ಯಾಜೆಟ್​​ಗಳು (Smart Gadgets) ಟೆಕ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇದೀಗ ಈ ಗ್ಯಾಜೆಟ್​ಗಳನ್ನು ತಯಾರಿ ಮಾಡುವಲ್ಲಿ ಜನಪ್ರಿಯತೆಯನ್ನು ಪಡೆದ ಕಂಪೆನಿಗಳಲ್ಲಿ ಒಪ್ಪೋ ಸಂಸ್ಥೆಯೂ (Oppo Company) ಒಂದು. ಈ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಹೊಂದಿದೆ. ಒಪ್ಪೋ ಎಂದಾಗ ಮೊದಲು ನೆನಪಾಗೋದೇ ಸ್ಮಾರ್ಟ್​​ಫೋನ್​ಗಳು, ಆದರೆ ಇತ್ತೀಚೆಗೆ ಈ ಕಂಪೆನಿಯಿಂದ ಇಯರ್​ಬಡ್ಸ್​ಗಳೂ, ಪವರ್​ಬ್ಯಾಂಕ್​ಗಳು, ಇಯರ್​ಫೋನ್​ ಈ ತರದ ಸ್ಮಾರ್ಟ್​​​ ಡಿವೈಸ್​ಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಒಪ್ಪೋ ಕಂಪೆನಿ ಮಾರುಕಟ್ಟೆಗೆ ಹೊಸ ಸ್ಮಾರ್ಟ್​​ಫೋನ್ (Smartphone)​ ಹಾಗೂ ಇಯರ್​ಬಡ್ಸ್​ (Earbuds) ಅನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದೆ.


    ಒಪ್ಫೋ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಒಪ್ಪೋ ಎನ್ಕೋ ಏರ್​​ 3 ಎಂಬ ಹೊಸ ಇಯರ್​ಬಡ್ಸ್​ ಅನ್ನು ಬಿಡುಗಡೆ ಮಾಡಿದೆ. ಇದು ಬ್ಲೂಟೂತ್​ 5.3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ ಈ ಗ್ಯಾಜೆಟ್ಸ್​ನ ಫೀಚರ್ಸ್​​ ಹೇಗಿದೆ ಅನ್ನೋದನ್ನು ಈ ಲೇಖನದಲ್ಲಿ ಓದಿ.


    ಒಪ್ಪೋ ಎನ್ಕೋ ಏರ್​​ 3 ಇಯರ್​ಬಡ್ಸ್​ ಫೀಚರ್ಸ್​


    ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಬಳಕೆದಾರರಿಗೆ ಉತ್ತಮ ಅನುಭವವನ್ನಿ ನೀಡುವ ಉದ್ದೇಶದಿಂದ 13.4mm ಡ್ರೈವರ್‌ಗಳು ಮತ್ತು ಕ್ಯಾಡೆನ್ಸ್ ಹೈಫೈ5 ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ಒಪ್ಪೋದ ಟಾಪ್ ಆಫ್ ಲೈನ್ ಟಿಡಬ್ಲ್ಯೂಎಸ್​ ಆಗಿ ಇದು ಹೆಸರು ಪಡೆಯಲಿದೆ. ಇನ್ನು 47ms ಕಡಿಮೆ ಲೇಟೆನ್ಸಿ ಮೋಡ್ ಆಯ್ಕೆ ಇರುವುದರಿಂದ ಗೇಮಿಂಗ್‌ ಸಮಯದಲ್ಲಿ ಅತ್ಯುತ್ತಮವಾದ ಆಡಿಯೋ ಅನುಭವವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.


    ಯಾವುದೇ ಡಿವೈಸ್​ಗಳಿಗೂ ಕನೆಕ್ಟ್ ಆಗುತ್ತದೆ


    ಇದರೊಂದಿಗೆ ಸಿಬಿಎಸ್‌ ಮತ್ತು ಎಎಸಿ ಕೋಡೆಕ್‌ಗಳು ಮತ್ತು ಥಿಯೇಟರ್ ತರಹದ ಅನುಭವಕ್ಕಾಗಿ ಒಪ್ಪೋ ಲೈವ್ ಆಡಿಯೋ ಫೀಚರ್ಸ್‌ ಅನ್ನು ಈ ಇಯರ್‌ಬಡ್ಸ್‌ ಪಡೆದುಕೊಂಡಿದ್ದು, ಇನ್ನುಳಿದಂತೆ ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕಾರ್ಯನಿರ್ವಹಿಸುವ ಈ ಇಯರ್‌ಬಡ್ಸ್‌ ಯಾವುದೇ ಡಿವೈಸ್‌ಗಳಿಗೆ ಎರಡು ರೀತಿಯಲ್ಲಿ ಸಂಪರ್ಕಗೊಳ್ಳುತ್ತದೆ.




    ಡಿಸ್​​ಪ್ಲೇ ಹೇಗಿದೆ?


    ಇನ್ನು ಒಪ್ಪೋ ಬಿಡುಗಡೆ ಮಾಡಿರುವ ಈ ಇಯರ್​ಬಡ್ಸ್​ ಈ ಹಿಂದೆ ಬಿಡುಗಡೆ ಮಾಡಿದಂತಹ ಡಿವೈಸ್​​ನಂತೆಯೇ ವಿನ್ಯಾಸವನ್ನು ಪಡೆದುಕೊಂಡಿದೆ. ಆದರೆ ವಿಶೇಷವಾಗಿ ಚಾರ್ಜಿಂಗ್​ ಕೇಸ್​​ನ ಮುಚ್ಚಳವು ಇದರಲ್ಲಿ ದೊಡ್ಡ ಮಟ್ಟದಲ್ಲಿ ರೂಪಿಸಲಾಗಿದೆ. ಈ ವಿನ್ಯಾಸವೂ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ.


    ಒಪ್ಪೋ ಎನ್ಕೋ ಏರ್​3 ಇಯರ್​ಬಡ್ಸ್​


    ಇದರೊಂದಿಗೆ ಬಡ್ಸ್‌ಗಳು ಇನ್‌ ಇಯರ್‌ ವಿನ್ಯಾಸವನ್ನು ಪಡೆದುಕೊಂಡಿರುವುದರಿಂದ ಕಿವಿಗೆ ಯಾವುದೇ ನೋವು ಹಾಗೂ ಇನ್ನಿತರೆ ಸಾಮಾನ್ಯ ಸಮಸ್ಯೆ ಬಾರದಂತೆ ತಡೆಯುತ್ತವೆ. ಈ ಮೂಲಕ ಬಳಕೆದಾರರಿಗೆ ಬೇರೆ ಯಾವುದೇ ಹೊರಗಿನ ಸೌಂಡ್​ಗಳು ಕೇಳಿಸುವುದಿಲ್ಲ.


    ಟಚ್​ ಮೂಲಕ ಕಂಟ್ರೋಲ್ ಮಾಡ್ಬಹುದು


    ಒಪ್ಪೋನ ಈ ಹೊಸ ಇಯರ್‌ಬಡ್ಸ್‌ಗಳು ಟಚ್‌ ಕಂಟ್ರೋಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಈ ಫೀಚರ್​ ಮೂಲಕ ಯಾವುದೇ ಕಾಲ್​ ಬಂದ ಸಂದರ್ಭದಲ್ಲಿ ಮತ್ತು ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡಲು ಸಹಕಾರಿಯಾಗಲಿವೆ. ಇನ್ನು ಈ ಇಯರ್​​ಬಡ್ಸ್​ ನಾಯ್ಸ್​ ಕ್ಯಾನ್ಸಲಿಂಗ್ ಫೀಚರ್​ ಅನ್ನು ಹೊಂದಿದೆ. ಜೊತೆಗೆ ಇದು ಗೂಗಲ್ ಫಾಸ್ಟ್​ ಪೇರ್​​ ಬೆಂಬಲವನ್ನು ಸಹ ಹೊಂದಿದೆ. ಇನ್ನು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಐಪಿ54 ರೇಟಿಂಗ್​ ಸಾಮರ್ಥ್ಯವನ್ನು ಪಡೆದಿದೆ.


    ಎನ್ಕೋ ಏರ್​ 3 ಇಯರ್​ಬಡ್ಸ್​ ಬ್ಯಾಟರಿ ಫೀಚರ್ಸ್​


    ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅನ್ನು 10 ನಿಮಿಷ ಚಾರ್ಜ್‌ ಮಾಡಿದರೆ 2 ಗಂಟೆಗಳ ವರೆಗೆ ನಿರಂತರವಾಗಿ ಮ್ಯೂಸಿಕ್ ಅನ್ನು ಕೇಳಬಹುದು. ಇನ್ನು ಒಂದು ಪೂರ್ಣ ಚಾರ್ಜ್‌ನಲ್ಲಿ 25 ಗಂಟೆಗಳ ಪ್ಲೇ ಬ್ಯಾಕ್‌ ಸಾಮರ್ಥ್ಯವನ್ನು ಹೊಂದಿದೆ.


    ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?


    ಬೆಲೆ ಮತ್ತು ಲಭ್ಯತೆ


    ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ಗೆ ಭಾರತದಲ್ಲಿ 2,999 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಒಪ್ಪೋ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಡಿವೈಸ್​ ಇದೇ ಫೆಬ್ರವರಿ 10 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

    Published by:Prajwal B
    First published: