ಒಪ್ಪೋ ಕಂಪನಿ (Oppo Company) ತನ್ನದೇ ಆದ ವಿನ್ಯಾಸದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳನ್ನು ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಪ್ಪೋ ಕಂಪನಿ ಬಹಳ ಜನಪ್ರಿಯತೆಯನ್ನು ಪಡೆದಿದೆ. ಈ ಕಂಪನಿಯಿಂದ ಬಿಡುಗಡೆಯಾಗುವ ಸ್ಮಾರ್ಟ್ಫೊನ್ಗಳಿಗಾಗಿ (Smartphone) ಕೆಲವೊಂದು ಗ್ರಾಹಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಇದೀಗ ಒಪ್ಪೋ ತನ್ನ ಗ್ರಾಹಕರಿಗೆ ಶುಭಸುದ್ದಿಯನ್ನು ನೀಡುತ್ತಿದೆ. ಇದುವರೆಗೆ ಒಪ್ಪೋದಿಂದ ಯಾವುದೇ ಫೋಲ್ಡೇಬಲ್ ಸ್ಮಾರ್ಟ್ಫೋನ್ಗಳು (Foldable Smartphone) ಬಿಡುಗಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಒಪ್ಫೋ ಇನ್ನೋ ಡೆ ಎಂಬ ಕಾರ್ಯಕ್ರಮದಲ್ಲಿ ತನ್ನ ಎರಡು ಫೋಲ್ಡೇಬಲ್ ಮೊಬೈಲ್ಗಳನ್ನು ಬಿಡುಗಡೆ ಮಾಡಿದೆ. ಒಪ್ಪೋ ಬಿಡುಗಡೆ ಮಾಡಿರುವ ಫೋಲ್ಡೇಬಲ್ ಸ್ಮಾರ್ಟ್ಫೋನ್ಗಳು ಒಪ್ಪೋ ಫೈಂಡ್ ಎನ್2 (Oppo Find N2) ಮತ್ತು ಒಪ್ಪೋ ಫೈಂಡ್ ಎನ್2 ಫ್ಲಿಪ್ (Oppo Find N2 Flip) ಎಂಬ ಹೆಸರನ್ನು ಹೊಂದಿದೆ.
ಒಪ್ಪೋದಿಂದ ಫೈಂಡ್ ಎನ್2 ಮತ್ತು ಒಪ್ಪೋ ಫೈಂಡ್ ಎನ್2 ಫ್ಲಿಪ್ ಎಂಬ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಒಪ್ಪೋದಿಂದ ಬಿಡುಗಡೆಯಾಗಿರುವಂತಹ ಹೊಸ ಮೊಬೈಲ್ಸ್ ಆಗಿದ್ದು, ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳಿಗೆ ಬಹಳಷ್ಟು ಪೈಫೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಒಪ್ಪೋ ಫೈಂಡ್ ಎನ್2 ಸ್ಮಾರ್ಟ್ಫೋನ್ನ ಫೀಚರ್ಸ್
ಬೆಲೆಯ ಕುರಿತು ಮಾತನಾಡುವುದಾದರೆ, ಫೈಂಡ್ ಎನ್2ನ 12GB + 256GB ಸ್ಟೋರೇಜ್ ಹೊಂದಿರುವ ಮೊಬೈಲ್ಗೆ ಬೆಲೆಯನ್ನು CNY 7,999 ಅಂದರೆ ಭಾರತದಲ್ಲಿ ಸುಮಾರು 95,000 ರೂಪಾಯಿಯಲ್ಲಿ ಖರೀದಿಸಬಹುದಾಗಿದೆ ಮತ್ತು 16GB + 512GB ಸ್ಠೋರೇಜ್ ಹೊಂದಿದ ಸ್ಮಾರ್ಟ್ಫೊನ್ ಅನ್ನಯ CNY 8,999 ಅಂದರೆ ಭಾರತದಲ್ಲಿ ಸುಮಾರು ರೂ 1,06,800 ನಲ್ಲಿ ಪಡೆಯಬಹುದು. ಈ ಫೋನ್ ಅನ್ನು ಕ್ಲೌಡ್ ವೈಟ್, ಪಿಂಕ್ ಗ್ರೀನ್ ಮತ್ತು ಪ್ಲೇನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.
ಒಪ್ಪೋ ಫೈಂಡ್ ಎನ್2 ಫ್ಲಿಪ್:
ಒಪ್ಪೋ ಫೈಂಡ್ ಎನ್2 ಫ್ಲಿಪ್ ಆಂಡ್ರಾಯ್ಡ್ 13 ಆಧಾರಿತ ColorOS 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಇದು 6.8-ಇಂಚಿನ ಪ್ರಾಥಮಿಕ ಪೂರ್ಣ-HD + 1,080×2,520 ಪಿಕ್ಸೆಲ್‌ಗಳ ಜೊತೆ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಡಿಸ್‌ಪ್ಲೇ ಸಹ ಹೊಂದಿದೆ.
ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುವುದಾದರೆ ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 4,300mAh ಬ್ಯಾಟರಿ ಮತ್ತು 44W SuperVOOC ಚಾರ್ಜಿಂಗ್ ಬೆಂಬಲವನ್ನು ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ.
ಬೆಲೆ ಮತ್ತು ಲಭ್ಯತೆ
ಒಪ್ಪೋ ಫೈಂಡ್ ಎನ್2 ಫ್ಲಿಪ್ 8GB + 256GB ಸ್ಟೋರೇಜ್ ಹೊಂದಿದ ಮೊಬೈಲ್ CNY 5,999 ಅಂದರೆ ಸುಮಾರು 71,000 ರೂಪಾಯಿ ನಿಗದಿ ಮಾಡಲಾಗಿದೆ. 12GB + 256GB ಸ್ಟೋರೇಜ್ ಹೊಂದಿದ ಮೊಬೈಲ್ CNY 6,399 ಅಂದರೆ ಭಾರತದಲ್ಲಿ ಸರಿಸುಮಾರು 76,000 ರೂಪಾಯಿ ಇದೆ. ಈ ಸ್ಮಾರ್ಟ್‌ಫೋನ್ ಅನ್ನು ಬ್ಲ್ಯಾಕ್, ಗೋಲ್ಡ್ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಈ ಎರಡೂ ಫೋನ್‌ಗಳು ಮುಂಬರುವ ವಾರಗಳಲ್ಲಿ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತದೆ. ಇವುಗಳು ಪ್ರಸ್ತುತವಾಗಿ ಪ್ರೀ ಬುಕಿಂಗ್‌ಗೆ ಮಾತ್ರ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ