Flipkart: ಬರೀ 90 ರೂ.ಗೆ ಒಪ್ಪೊ ಸ್ಮಾರ್ಟ್​ಫೋನ್! ಈ ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ

Oppo ಕಂಪನಿಯ ಎ11ಕೆ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಡೀಲ್‌ನಲ್ಲಿ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ 8,450 ರೂ.ವರೆಗೆ ಉಳಿಸಬಹುದಾಗಿದೆ.

ಒಪ್ಪೊ ಎ11ಕೆ ಸ್ಮಾರ್ಟ್‌ಫೋನ್

ಒಪ್ಪೊ ಎ11ಕೆ ಸ್ಮಾರ್ಟ್‌ಫೋನ್

  • Share this:
    ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಒಪ್ಪೊ (Oppo) ಅಡ್ವಾನ್ಸ್ ಡೇಸ್ (Advance days) ಮಾರಾಟ ನಡೆಸುತ್ತಿದೆ. ಡಿಸೆಂಬರ್ 22 ರಿಂದ ಪ್ರಾರಂಭವಾಗಿ 25ರವರೆಗೆ ಈ ಸೇಲ್​ ಆಯೋಜಿಸಿದೆ. ಅಂದಹಾಗೆಯೇ ಒಪ್ಪೊ ಅಡ್ವಾನ್ಸ್​ ಸೇಲ್​ನಲ್ಲಿ ಸ್ಮಾರ್ಟ್‌ಫೋನ್ (Smartphone)‌, ಇಯರ್‌ಬಡ್ (Earbud)‌ ಮತ್ತು ಸ್ಮಾರ್ಟ್‌ವಾಚ್‌ಗಳ (Smart watch) ಮೇಲೆ ಅದ್ಭುತ ಕೊಡುಗೆಗಳನ್ನು ನೀಡಿದೆ. ಮಾತ್ರವಲ್ಲದೆ ಒಪ್ಪೊ ಕಂಪನಿಯ 4ಜಿ ಸ್ಮಾರ್ಟ್​ಫೋನ್​ವೊಂದನ್ನು ಕೇವಲ 90 ರೂ.ಗೆ ಖರೀದಿಸುವ ಅವಕಾಶವನ್ನು ತೆರೆದಿಟ್ಟಿದೆ.

    90 ರೂ.ಗೆ ಸ್ಮಾರ್ಟ್ ಫೋನ್ ಖರೀದಿಸಿ

    ಒಪ್ಪೊ ಅಡ್ವಾನ್ಸ್​ ಡೇಸ್​ ಮಾರಾಟದಲ್ಲಿ Oppo A11K ಸ್ಮಾರ್ಟ್‌ಫೋನ್ ಅನ್ನು 10,990 ರೂ.ಗೆ ಮಾರಾಟ ಮಾಡುತ್ತಿದೆ. ಇದರ ಮೇಲೆ ಫ್ಲಿಪ್​ಕಾರ್ಟ್​ 18% ರಿಯಾಯಿತಿಯನ್ನು ನೀಡಿದೆ. ಹಾಗಾಗಿ ಗ್ರಾಹಕರು 8,990 ರೂ.ಗೆ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಖರೀದಿಸಿದರೆ  ಶೇ. 5 ರಷ್ಟು ಕಡಿಮೆ ಬೆಲೆಗೆ ಸಿಗಲಿದೆ. ಅಂದರೆ 450 ರೂ ಕ್ಯಾಶ್‌ಬ್ಯಾಕ್ ಅನ್ನು ಪಡೆಯುತ್ತೀರಿ, ಒಟ್ಟಿನಲ್ಲಿ ಗ್ರಾಹಕರು 8,540 ರೂ.ಗೆ ಈ ಸ್ಮಾರ್ಟ್​ಫೋನ್​ ಸಿಗಲಿದೆ.

    ಎಕ್ಸ್ ಚೇಂಜ್ ಆಫರ್

    ಒಪ್ಪೊ ಕಂಪನಿಯ ಎ11ಕೆ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಡೀಲ್‌ನಲ್ಲಿ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ 8,450 ರೂ.ವರೆಗೆ ಉಳಿಸಬಹುದಾಗಿದೆ. ಈ ವಿನಿಮಯ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆದರೆ, ಕೇವಲ 90 ರೂ.ಗೆ ಇಳಿಯುತ್ತದೆ. Oppo A11K ಸ್ಮಾರ್ಟ್​ಫೋನ್​ ಮನೆಗೆ ಕೊಂಡೊಯ್ಯಬಹುದು.

    ಇದನ್ನು ಓದಿ: Godrej ಪರಿಚಯಿಸಿದೆ ಅಗ್ಗದ ಬೆಲೆಯ ಸ್ಪಾಟ್​ಲೈಟ್ ಪಿಟಿ ಕ್ಯಾಮೆರಾ; ಕಳ್ಳರು ಬಂದ್ರೆ ತಕ್ಷಣವೇ ತಿಳಿಸುತ್ತೆ

    Oppo A11K ನ ವೈಶಿಷ್ಟ್ಯಗಳು

    ಒಪ್ಪೊ ಕಂಪನಿಯ ಎ11ಕೆ 4G ಸ್ಮಾರ್ಟ್‌ಫೋನ್ 2GB RAM ಮತ್ತು 32GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಮೈಕ್ರೋ SD ಕಾರ್ಡ್‌ನ ಸಹಾಯದಿಂದ ಈ ಫೋನ್‌ನ ಸಂಗ್ರಹಣೆಯನ್ನು 32GB ನಿಂದ 256GB ವರೆಗೆ ವಿಸ್ತರಿಸಬಹುದು. 6.22-ಇಂಚಿನ HD + ಡಿಸ್​ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ AI ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ, ಇದರ ಪ್ರಾಥಮಿಕ ಸೆನ್ಸಾರ್​ 13MP ಮತ್ತು ಎರಡನೇ ಸಂವೇದಕ 2MP ಆಗಿರುತ್ತದೆ.



    ಮೀಡಿಯಾಟೆಕ್​ ಹೆಲಿಯೋ (MediaTek Helio P35) ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಈ ಫೋನ್​ ಕಾರ್ಯನಿರ್ವಹಿಸುತ್ತದೆ. ಇನ್ನು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಹೊಂದಿದೆ. 4,230mAh ಬ್ಯಾಟರಿ ಇದರಲ್ಲಿದೆ. ಈ ಸ್ಮಾರ್ಟ್​ಫೋನ್​ ಒಂದು ವರ್ಷದ ಬ್ರಾಂಡ್ ವಾರಂಟಿ ಮತ್ತು ಬಿಡಿಭಾಗಗಳ ಮೇಲೆ ಆರು ತಿಂಗಳ ವಾರಂಟಿ ಸಿಗಲಿದೆ.

    ಇದನ್ನು ಓದಿ: Smart Phone ಮಾರುಕಟ್ಟೆಯಲ್ಲಿ ರಿಯಲ್ ಮಿ ಹವಾ: 2022ರ ಮಾಡೆಲ್‌ನಲ್ಲಿ ಏನಿದೆ, ಏನಿಲ್ಲ..?

    ಫ್ಲಿಪ್‌ಕಾರ್ಟ್‌ ಚಾಲನೆಯಲ್ಲಿರುವ Oppo ಅಡ್ವಾನ್ಸ್ ಡೇಸ್‌ ಮೂಲಕ ಕೇವಲ 90 ರೂ.ಗೆ ಸ್ಮಾರ್ಟ್​ಫೋನ್​ ಖರೀದಿಸಬಹುದಾಗಿದೆ.  ಡಿಸೆಂಬರ್ 25 ಈ ಸೇಲ್​ ಕೊನೆಗೊಳ್ಳಲಿದೆ.
    Published by:Harshith AS
    First published: