HOME » NEWS » Tech » OPPO A9 2020 LAUNCH DATE IN INDIA NOW SEPTEMBER 16 KEY SPECIFICATIONS REVEALED HG

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ‘ಒಪ್ಪೊ A9 2020’; ಇದರ ಕ್ಯಾಮೆರಾ ಹೇಗಿದೆ ಗೊತ್ತಾ?

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ‘ಒಪ್ಪೋ A9 2020’ ಸ್ಮಾರ್ಟ್​ಫೋನ್ ಬೆಲೆಯನ್ನು  16,990 ರೂ.ವೆಂದು ಅಂದಾಜಿಸಲಾಗಿದೆ.

news18-kannada
Updated:September 10, 2019, 7:15 PM IST
ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ‘ಒಪ್ಪೊ A9 2020’; ಇದರ ಕ್ಯಾಮೆರಾ ಹೇಗಿದೆ ಗೊತ್ತಾ?
‘ಒಪ್ಪೋ A9 2020’
  • Share this:
‘ಒಪ್ಪೊ A9 2020’ ನೂತನ ಸ್ಮಾರ್ಟ್​ಫೋನ್ ಭಾರತದಲ್ಲಿ ಸೆ. 16 ರಂದು ಬಿಡುಗಡೆಯಾಗಲಿದೆ. ನೂತನ ಸ್ಮಾರ್ಟ್​ಫೋನ್​ ಬಿಡುಗಡೆ ಕಾರ್ಯಕ್ರಮವನ್ನು ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ‘ಒಪ್ಪೊ A9 2020’ ಸ್ಮಾರ್ಟ್​ಫೋನ್​ ಬೆಲೆ ಹಾಗೂ ಲಭ್ಯತೆ, ವಿಶೇಷತೆಯನ್ನು ಬಹಿರಂಗ ಪಡಿಸಲಿದೆ.

‘ಒಪ್ಪೊ A9 2020’ ಸ್ಮಾರ್ಟ್​ಫೋನ್​ ವಾಟರ್​ಡ್ರಾಪ್ ನಾಚ್​ ಡಿಸೈನ್​ ಹೊಂದಿದ್ದು, ​ಒಕ್ಟಾ ಕೋರ್​ ಕ್ವಾಲ್​ಕ್ಯಾಂ ಸ್ನಾಪ್​ಡ್ರ್ಯಾಗನ್​​ 665Soc ಯಿಂದ  ಕಾರ್ಯನಿರ್ವಹಿಸಲಿದೆ. 8GB RAM​ ಮತ್ತು 128GB ಸ್ಟೊರೇಜ್​ ಅನ್ನು ಹೊಂದಿದೆ.

Youtube Video


‘ಒಪ್ಪೊ A9 2020’ ಸ್ಮಾರ್ಟ್​ಫೋನ್​ 48 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ +​ 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​​ ಸೆನ್ಸಾರ್ ಕ್ಯಾಮೆರಾ + 2 ಮೆಗಾಫಿಕ್ಸೆಲ್ ಡೆಪ್ತ್​ ಸೆನ್ಸಾರ್​ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ ಅಲ್ಟ್ರಾ ನೈಟ್​ ಮೂಡ್​ ಮತ್ತು ವಿಡಿಯೋ ಸ್ಟೆಬಿಲಿಟಿ ಫೀಚರ್​ ಅನ್ನು ಅಳವಡಿಸಲಾಗಿದೆ. 5000mAh ಬ್ಯಾಟರಿಯನ್ನು ನೀಡಲಾಗಿದೆ. ಗ್ರಾಹಕರಿಗಾಗಿ ​‘ಒಪ್ಪೊ A9 2020’ ಸ್ಮಾರ್ಟ್​ಪೋನ್​ ಬಿಳಿ, ನೀಲಿ, ಕಪ್ಪು ಬಣ್ಣದಲ್ಲಿ ದೊರಕಲಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ‘ಒಪ್ಪೊ A9 2020’ ಸ್ಮಾರ್ಟ್​ಫೋನ್ ಬೆಲೆಯನ್ನು  16,990 ರೂ. ವೆಂದು ಅಂದಾಜಿಸಲಾಗಿದೆ.
First published: September 10, 2019, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories