OPPO A55 Review: 15 ಸಾವಿರಕ್ಕೆ ಇಷ್ಟೆಲ್ಲಾ ಫೀಚರ್ಸ್ ಇರೋ ಫೋನ್ ಸಿಗುವುದು ಅಸಾಧ್ಯ ಬಿಡಿ

ಈ ಹಬ್ಬಗಳ ಸೀಸನ್‌ಗೆ ಹೊಸ ಫೋನ್ ಬೇಕೇ? ಅದ್ಭುತ ವಿನ್ಯಾಸ, 50MP ಕ್ಯಾಮರಾ ಮತ್ತು ಬೃಹತ್ ಬ್ಯಾಟರಿ ಇರುವ ಫೋನ್ ಆದರೆ ಹೇಗೆ? ಇದು ದುಬಾರಿಯಲ್ಲ, ಕಡಿಮೆ ದರದ್ದು. ನಿಮಗಾಗಿ ಬಂದಿದೆ #OPPOA55! ಅದೇಕೆ ಅತ್ಯುತ್ತಮ ಎಂಬುದು ಇಲ್ಲಿದೆ…

OPPO A55

OPPO A55

 • Share this:
  OPPO A55 ವಿಮರ್ಶೆ: ಕೇವಲ 15 ಸಾವಿರಕ್ಕೆ ನೀವು ಅತ್ಯುತ್ತಮ ವಿನ್ಯಾಸ, 50MP AI Triple ಕ್ಯಾಮರಾ ಮತ್ತು 5,000 mAh ಬ್ಯಾಟರಿ ಪಡೆಯುವುದಾದರೆ ಬೇಡ ಎಂದು ನೀವು ಹೇಳಲು ಅಸಾಧ್ಯ

  OPPO A55 Review
  OPPO A55


  ಕೆಲವೇ ವರ್ಷಗಳಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳು ತಲುಪಿದ ಹಾದಿ ಅಚ್ಚರಿ ಹುಟ್ಟಿಸುವಂತದ್ದು. ಮೊದಲೆಲ್ಲ, ಯೋಗ್ಯವಾದ ಡಿಸ್‌ಪ್ಲೇ ಮತ್ತು ಪರವಾಗಿಲ್ಲ ಎನ್ನಬಹುದಾದ ಕ್ಯಾಮರಾ ಇದ್ದರೆ, ಅದೇ ಪುಣ್ಯ ಎನ್ನಬೇಕಿತ್ತು, ಆದರೆ ಈಗ ಹಾಗಿಲ್ಲ, ಮನಸೆಳೆಯುವ ವಿನ್ಯಾಸ, 16.55 ಸೆಂ.ಮೀ ಬೃಹತ್ ಡಿಸ್‌ಪ್ಲೇ, ಬೆರಗುಗೊಳಿಸುವ 50MP AI ಟ್ರಿಪಲ್ ಕ್ಯಾಮೆರಾ ಮತ್ತು 18W ವೇಗದ ಚಾರ್ಜಿಂಗ್‌ನೊಂದಿಗೆ ಬೃಹತ್ 5000mAh ಬ್ಯಾಟರಿ ಹೀಗೆ ಏನೆಲ್ಲಾ ವೈಶಿಷ್ಟ್ಯಗಳು ಇರಬೇಕೋ ಆ ಎಲ್ಲಾ ವೈಶಿಷ್ಟ್ಯಗಳನ್ನು OPPO A55 ಹೊತ್ತು ತಂದಿದೆ. ಇದೆಲ್ಲದರ ಜೊತೆಗೆ, ನಿಮ್ಮ 15 ಸಾವಿರ ಮೊತ್ತಕ್ಕೆ ನೀವು 4GB RAM ಮತ್ತು 64GB ಸಂಗ್ರಹಣೆ ಪಡೆಯುತ್ತೀರಿ, ಇದಕ್ಕಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಿದರೆ 6GB RAM ಮತ್ತು 128GB ಸಂಗ್ರಹಣೆಯ ವೇರಿಯಂಟ್ ಅನ್ನು ಪಡೆಯಬಹುದು.

  ಪ್ರಮುಖ ರೀಟೇಲರ್‌ಗಳ ಬಳಿ ಮತ್ತು Amazonನಲ್ಲಿ, ಕೆಲವು ಅದ್ಭುತ ಆಫರ್‌ಗಳೊಂದಿಗೆ ನೀವು 4GB/64GB ವೇರಿಯಂಟ್ ಅನ್ನು ಈಗಲೇ ಮತ್ತು 6GB/128GB ವೇರಿಯಂಟ್ ಅನ್ನು ಅಕ್ಟೋಬರ್‌ 11ರಿಂದ ಖರೀದಿಸಬಹುದು. 

  ಅಲ್ಲದೆ, ಇದರಲ್ಲಿ ಸೆಲ್ಫಿ 16 MP ಕ್ಯಾಮರಾ, ಒಂದು microSD ಕಾರ್ಡ್ ಸ್ಲಾಟ್, MediaTek Helio G35 ಚಿಪ್‌ಸೆಟ್, ಸ್ಮಾರ್ಟ್ ಬ್ಯಾಟರಿ ನಿರ್ವಹಣೆ ವ್ಯವಸ್ಥೆ, IPx4 ಸ್ಪ್ಲ್ಯಾಶ್ ರೆಸಿಸ್ಟೆನ್ಸ್ ಮತ್ತು ಇನ್ನಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂಬುದನ್ನು ನಾವು ಹೇಳಿದೆವೇ!

  OPPO A55 Review
  OPPO A55 ಫೋನ್


  ಬಹು ಮುಖ್ಯ ಭಾಗದೊಂದಿಗೆ ಆರಂಭಿಸೋಣ: ಕ್ಯಾಮರಾಗಳು

  ಈ ಅಸಾಧಾರಣ ಫೋನ್‌ನ ರೇರ್ ಕ್ಯಾಮರಾವು ಒಂದು 50MP ಘಟಕವಾಗಿದ್ದು, ಅದು ಪಿಕ್ಸೆಲ್ ಬಿನ್ನಿಂಗ್ ಅನ್ನು ಬೆಂಬಲಿಸುತ್ತದೆ. ಈ ತಂತ್ರವು ಶಬ್ದವನ್ನು ಕಡಿಮೆಗೊಳಿಸಲು ಮತ್ತು ನಿರ್ದಿಷ್ಟವಾಗಿ ಮಂದ ಬೆಳಕಿನಲ್ಲಿ, ಒಟ್ಟಾರೆ ಚಿತ್ರದ ಗುಣಮಟ್ಟವನ್ನು ಸುಧಾರಿಸುತ್ತದೆ. ನಿಯಮಿತವಾದ 12MP ಸೆನ್ಸರ್‌ನಿಂದ ಪಡೆಯುವ ಚಿತ್ರಕ್ಕಿಂತ ಅತ್ಯುತ್ತಮ ಎನಿಸುವ 12.5MP ಚಿತ್ರವನ್ನು ನೀವು ಪಡೆಯಬಹುದು. ಒಂದು ವೇಳೆ ನೀವು ಬಯಸಿದರೆ, ಸಂಪೂರ್ಣ 50MP ಚಿತ್ರವನ್ನು ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು. ನಾವು ರೇರ್ ಕ್ಯಾಮರಾವನ್ನು ಪರೀಕ್ಷಿಸಿದ್ದೇವೆ ಮತ್ತು ಚಿತ್ರದ ಗುಣಮಟ್ಟವು ಅತ್ಯುತ್ತಮವಾಗಿದೆ, ಕಡಿಮೆ ಬೆಳಕು ಇರುವ/ರಾತ್ರಿಯ ಸಂದರ್ಭಗಳಲ್ಲಿಯೂ ಸಹ ಫೋಟೋಗ್ರಾಫ್‌ಗಳ ಸ್ಪಷ್ಟತೆಯು ಖುಷಿ ನೀಡುವಂತಿದೆ.  

  ಪ್ರಾಥಮಿಕ ರೇರ್ ಕ್ಯಾಮೆರಾಕ್ಕೆ ಬೆಂಬಲಿತವಾಗಿ 2MP ಬೊಕೆ ಕ್ಯಾಮರಾ ಮತ್ತು 2MP ಮ್ಯಾಕ್ರೊ ಕ್ಯಾಮರಾ ಇವೆ. ಬೊಕೆ ಬಗ್ಗೆ ಮಾತನಾಡುವುದಾದರೆ, OPPO A55ಯಲ್ಲಿನ AI ಶಕ್ತಿಯೊಂದಿಗಿನ ತಂತ್ರಜ್ಞಾನವು, 50MP ರೇರ್ ಕ್ಯಾಮರಾವು ಮೋಹಕ ಬೊಕೆಯೊಂದಿಗೆ ಅತ್ಯುತ್ತಮ ಪೋರ್ಟ್ರೇಟ್‌ಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ ಹಾಗೂ ದೃಶ್ಯ ಮತ್ತು ಹಿನ್ನೆಲೆಯ ನಡುವೆ ಸುಗಮ ಪರಿವರ್ತನೆ ಉಂಟು ಮಾಡುತ್ತದೆ. ಈ ಡಿವೈಸ್‌ನೊಂದಿಗೆ ನಿಜವಾಗಿಯೂ ಕೆಲವು ಕ್ರಿಯಾತ್ಮಕ ಬೊಕೆ ಎಫೆಕ್ಟ್ ಇರುವ ಚಿತ್ರಗಳನ್ನು ಸೆರೆಹಿಡಿಯಬಹುದು.

  ನೈಟ್ ಮೋಡ್ ಸಹ ಇದ್ದು, ಅದು ಮಸುಕು-ರಹಿತ ಲಾಂಗ್ ಎಕ್ಸ್‌ಪೋಷರ್‌ಗಳನ್ನು ಒದಗಿಸುವ ಮೂಲಕ ಪ್ರೀಮಿಯಂ ಫೋನ್‌ಗಳ ನೈಟ್ ಮೋಡ್‌ಗೆ ಸವಾಲು ಹಾಕುವಂತಿದೆ. ನೈಟ್ ಮೋಡ್‌ನಲ್ಲಿ ಇರುವ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಅದರ HDR ಆಗಿದ್ದು, ಅದರಲ್ಲಿ ಅದ್ಭುತವಾದ, ನೈಸರ್ಗಿಕ ಬೆಳಕಿನ ಪೋರ್ಟ್ರೇಟ್‌ಗಳಂತೆ ತೋರಿಸಲು, ನಿಮ್ಮ ಮುಖ ಮತ್ತು ಹಿನ್ನೆಲೆಯನ್ನು ಅತ್ಯಂತ ಚಾಣಾಕ್ಷತನದಿಂದ ಪ್ರತ್ಯೇಕವಾಗಿ ಕಾಣಿಸುವಂತೆ ಮಾಡುತ್ತದೆ. ನಾನು ಈ ಮೊದಲೇ ಹೇಳಿದಂತೆ ರಾತ್ರಿಹೊತ್ತಿನ ನನ್ನ ಕ್ಯಾಮೆರಾ ಅನುಭವವು, ಈ ಡಿವೈಸ್‌ನಲ್ಲಿ ವಿಶೇಷವಾದುದೇನೋ ಇದೆ ಎಂಬುದನ್ನು ಸಾಬೀತುಪಡಿಸುತ್ತದೆ.

  ಇದರಲ್ಲಿನ ಇನ್ನೊಂದು ಮನಸೆಳೆಯುವ ಅಂಶ ಎಂದರೆ 16 MP ಫ್ರಂಟ್ ಕ್ಯಾಮರಾ ಆಗಿದ್ದು, ಅದು ದಿನ ಅಥವಾ ರಾತ್ರಿಯಲ್ಲಿ ಸ್ಪಷ್ಟವಾದ ಸೆಲ್ಫಿಗಳನ್ನು ಕ್ಯಾಪ್ಚರ್ ಮಾಡುತ್ತದೆ. ಇಲ್ಲಿಯೂ ಸಹ ಇನ್ನಷ್ಟು ಇದೆ. ಇದರಲ್ಲಿರುವ ಹಲವಾರು ಫಿಲ್ಟರ್‌ಗಳು ಮತ್ತು ಮೋಡ್‌ಗಳು, ಬಣ್ಣಗಳ ವೈವಿಧ್ಯತೆಯನ್ನು ಮತ್ತು ಅನನ್ಯ ಚಿತ್ರದ ಶೈಲಿಗಳನ್ನು ನೀಡುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಅವು ಅದ್ಭುತವಾಗಿ ಕಾಣಿಸುತ್ತವೆ! ನನ್ನ ಕೆಲವು ಸೆಲ್ಫಿಗಳಿಗೆ ಈ ಮೋಡ್ ಬಳಸಿದೆ ಮತ್ತು ಈ ವೈಶಿಷ್ಟ್ಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು.

  OPPO A55 Review
  OPPO A55

  ಸ್ಲಿಮ್ ಫಾರ್ಮ್ ಫ್ಯಾಕ್ಟರ್ ಮತ್ತು ವಿಶಿಷ್ಟ ವಿನ್ಯಾಸ


  OPPO A55ನ ಆಶ್ಚರ್ಯಕರ ಸಂಗತಿ ಎಂದರೆ ಇದರ ಎಲ್ಲಾ ಶಕ್ತಿಯು 8.4 ಮಿ.ಮೀ ತೆಳುವಾದ ಚಾಸಿಸ್‌ನಲ್ಲಿ ಅಡಕವಾಗಿದೆ ಮತ್ತು ಅದು 193 ಗ್ರಾಮ್ ತೂಕ ಹೊಂದಿದೆ, ಅಲ್ಲದೆ, ನೀವು ಪಡೆಯುವ 5,000 mAh ಬ್ಯಾಟರಿಯನ್ನು ಸಹ ಅದು ಹೊಂದಿದೆ.  

  ಫ್ರಂಟ್ ಮತ್ತು ರೇರ್ ಪ್ಯಾನೆಲ್‌ಗಳು ಈ ಫೋನ್‌ಗೆ ಅತ್ಯಂತ ಮೃದುವಾದ ಮತ್ತು ಅತ್ಯುನ್ನತ ಅನುಭವವನ್ನು ಕೊಡುತ್ತವೆ ಮತ್ತು ಫ್ರೇಮ್‌ನಲ್ಲಿ ಸಿಲ್ವರ್ ಮೆಟಾಲಿಕ್ ಪಿಗ್‌ಮೆಂಟ್‌ಗಳ ಬಳಕೆಯು ಈ ಡಿವೈಸ್‌ಗೆ ಮೆಟಾಲಿಕ್ ಶೀನ್ ನೀಡುತ್ತದೆ. ಶೀನ್ ಬಗ್ಗೆ ಹೇಳುವುದಾದರೆ, ಕಾಮನಬಿಲ್ಲಿನ ನೀಲಿ ಫಿನಿಶಿಂಗ್ (ಈ ಫೋನ್ ಸ್ಟಾರಿ ಬ್ಲ್ಯಾಕ್ ಬಣ್ಣದಲ್ಲಿಯೂ ಸಹ ಲಭ್ಯವಿದೆ) ಅನ್ನು ನಿರ್ದಿಷ್ಟವಾಗಿ ನೋಡಿ, ಆನಂದಿಸಬೇಕು. ಹಾಗಾಗಿ ಹಲವರು ಈ ಡಿವೈಸ್ ಬಗ್ಗೆ ನನ್ನಲ್ಲಿ ಕೇಳಿದರು ಮತ್ತು ಈ ದರದಲ್ಲಿ ದೊರೆಯುತ್ತಿರುವ ಪ್ರೀಮಿಯಂ ಗುಣಮಟ್ಟದ ವಿನ್ಯಾಸಕ್ಕೆ ಮಾರುಹೋಗಿದ್ದಾರೆ. 

  ರೇರ್ ಕ್ಯಾಮರಾದಲ್ಲಿ OPPO ಮಾಡಿರುವ ಮಾಂತ್ರಿಕತೆಯು ನಿಜವಾಗಿಯೂ ವಿಶೇಷವಾದದ್ದು ಮತ್ತು ಅದ್ಭುತವಾದದ್ದು. ಫೋನ್‌ನ ರೇರ್, ಬೆಳಕನ್ನು ಸುಂದರವಾಗಿ ಸೆರೆಹಿಡಿಯುವ ವರ್ಣವೈವಿಧ್ಯದ ಹೊಳಪನ್ನು ಪಡೆಯುತ್ತದೆ ಮತ್ತು ಇತರ ಮೊಬೈಲ್‌ಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. ರೇರ್ ಕ್ಯಾಮರಾ ಯುನಿಟ್‌ನ ಸುತ್ತಲಿನ 3D ಗ್ಲಾಸ್ ಮತ್ತು CD-ವಿನ್ಯಾಸದ ಉಂಗುರಗಳೊಂದಿಗೆ ಸಂಯೋಜಿತಗೊಂಡಿದ್ದು, ಈ ಫೋನ್ ಸುಂದರವಾಗಿ ಕಾಣಿಸುತ್ತದೆ ಎಂದಷ್ಟೇ ಹೇಳಿದರೆ ಸಾಕಾಗುವುದಿಲ್ಲ.

  16.55 ಸೆಂ.ಮೀ LCD ಪ್ಯಾನೆಲ್ ಮತ್ತು ಪಂಚ್ ಹೋಲ್ ಕ್ಯಾಮರಾಗಳೇ ಫೋನ್‌ನ ವಿನ್ಯಾಸಕ್ಕೆ ಒತ್ತು ನೀಡುತ್ತವೆ. 

  OPPO A55 Review
  OPPO A55


   

  ಇಡೀ-ದಿನದ ಬ್ಯಾಟರಿ ಬಾಳಿಕೆ (ಮತ್ತು ಇನ್ನೂ ಹಲವು), ಹಾಗೂ ಚಕಿತಗೊಳಿಸುವ ಕಾರ್ಯನಿರ್ವಹಣೆ

  ಇದರ ತೆಳುವಾದ ಚಾಸಿಸ್‌ನಲ್ಲಿ 5,000mAh ಬ್ಯಾಟರಿ ಇರುವುದರಿಂದ, ಕಡಿಮೆ ಸಮಯದಲ್ಲಿ ಚಾರ್ಜ್ ಖಾಲಿಯಾಯಿತು ಎಂದು ನೀವು ದೂರುವ ಸಂದರ್ಭ ಬರುವುದಿಲ್ಲ. ಹಾಗೂ ಒಂದು ವೇಳೆ ನಿಮಗೆ ಅಂತಹ ಪರಿಸ್ಥಿತಿ ಎದುರಾದರೆ, ಇದರಲ್ಲಿ Super Power Saving Mode ಮತ್ತು Super Nighttime Standby ವೈಶಿಷ್ಟ್ಯಗಳು ಇರುವುದರಿಂದ ಬ್ಯಾಟರಿ ಬಗ್ಗೆ ಹೆಚ್ಚು ಯೋಚಿಸದೆ ನಿಮ್ಮ ಗಮ್ಯಸ್ಥಾನವನ್ನು ತಲುಪಬಹುದು ಅಥವಾ ಚಾರ್ಜ್ ಖಾಲಿಯಾಗುವ ಭಯವಿಲ್ಲದೇ ನೆಮ್ಮದಿಯಾಗಿ ನಿದ್ರಿಸಬಹುದಾದಷ್ಟು ಬ್ಯಾಟರಿಯನ್ನು ಇದು ನೀಡುತ್ತದೆ.

  ನೀವು ಉನ್ನತವಾದುದನ್ನು ಬಯಸುವಿರಾದರೆ, ಈ ಡಿವೈಸ್ 18 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಹಾಗೂ ಅದು ನಿಮಗೆ ಕೇವಲ 30 ನಿಮಿಷಗಳಲ್ಲಿ ಒಂದನೇ ಮೂರರಷ್ಟು ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂಬುದು ಆಗಾಗ ಕಂಡುಬರುವ ಸಂಗತಿಯಲ್ಲ. Optimised Night Charging ಮೋಡ್ ಮತ್ತು ತಾಪಮಾನ ಸೆನ್ಸರ್‌ಗಳ ಶ್ರೇಣಿಯು ನಿಮ್ಮ ಚಾರ್ಜ್ ಮಾಡುವ ಅಭ್ಯಾಸಗಳಿಂದ ಬ್ಯಾಟರಿ ಬಾಳಿಕೆಗೆ ಯಾವುದೇ ಪರಿಣಾಮ ಆಗದಂತೆ ಖಚಿತಪಡಿಸುತ್ತದೆ. 

  OPPO A55 Review
  OPPO A55


  ಎಲ್ಲದರಲ್ಲಿ ಎಲ್ಲವೂ, ಅದ್ಭುತ ತಂತ್ರಜ್ಞಾನದ ಅನುಭವ

  ಬ್ಯಾಟರಿ-ಬಾಳಿಕೆ ಆಪ್ಟಿಮೈಸೇಷನ್‌ಗಳು, ದಿನವಿಡೀ ಕಣ್ಣುಗಳ ರಕ್ಷಣೆಗೆ ಅಳವಡಿಸಿರುವ ಶಕ್ತಿಯುತ ಪ್ರೊಸೆಸರ್ ಮತ್ತು ಸಿಸ್ಟಂ ಅಡೆತಡೆ ಕಡಿಮೆಗೊಳಿಸಲು ಇರುವ ಬೃಹತ್ ಸಂಖ್ಯೆಯ ವೈಶಿಷ್ಟ್ಯಗಳು ಮತ್ತು ಸುಧಾರಿತ ಫ್ರೇಮ್ ರೇಟ್‌ಗಳು,                                                                                                                                    ಇವೆಲ್ಲವುಗಳಿಂದಾಗಿ ಫೋನ್ ಮೃದುವಾದ ಕಾರ್ಯನಿರ್ವಹಣೆ ಮತ್ತು ಇಡೀ ದಿನ ಅತ್ಯುತ್ತಮ ಸ್ಪಂದನೆಯ ಅನುಭವ ನೀಡುತ್ತದೆ, ಇದರಲ್ಲಿರುವ ColorOS 11.1ಗೆ ಧನ್ಯವಾದಗಳು. FlexiDrop ಮತ್ತು Google translateಗಾಗಿ ಇರುವ ಥ್ರೀ-ಫಿಂಗರ್ ಗೆಸ್ಚರ್‌ಗಳು, ಗೇಮರ್‌ಗಳಿಗಾಗಿ ಇರುವ Game Focus ಮೋಡ್‌ಗಳು ಹಾಗೂ ಸುವ್ಯವಸ್ಥಿತಗೊಳಿಸಿದ ಅಧಿಸೂಚನೆಗಳು ಬಳಕೆದಾರ ಅನುಭವವನ್ನು ಶ್ರೀಮಂತಗೊಳಿಸುತ್ತವೆ. ಇದರಲ್ಲಿರುವ OS ಅತ್ಯಂತ ಸೂಕ್ತವಾಗಿದೆ ಮತ್ತು ಇದು ನನಗೆ ಸಂತೋಷದಾಯಕ ಅನುಭವವಾಗಿದೆ. ಹೆಚ್ಚುವರಿ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳು ನಿಮ್ಮ ಸೂಕ್ಷ್ಮ ಡಾಕ್ಯುಮೆಂಟ್‌ಗಳು ಹಾಗೂ ಚಿತ್ರಗಳನ್ನು ಸುರಕ್ಷಿತವಾಗಿರಿಸಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಸಹಕರಿಸುತ್ತವೆ. 

  OPPO A55 Review
  OPPO A55


  ನಿರ್ಣಯ: ಅದ್ಭುತ ದರದಲ್ಲಿ ಅದ್ಭುತ ಫೋನ್

  ಮಾರುಕಟ್ಟೆಯಲ್ಲಿ ಈ ರೀತಿಯ ಕೈಗೆಟುಕುವ ದರದಲ್ಲಿ, ಇಷ್ಟೆಲ್ಲಾ ವೈಶಿಷ್ಟ್ಯಗಳ ಆಕರ್ಷಕವಾದ ಸಂಯೋಜನೆಯನ್ನು ಹೊಂದಿರುವ ಫೋನ್ ಇನ್ಯಾವುದೂ ಇಲ್ಲ. 50MP AI ಟ್ರಿಪಲ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮರಾಗಳು ಈ ಫೋನ್‌ನ ವೈಶಿಷ್ಟ್ಯತೆಯನ್ನು ತಿಳಿಸುತ್ತವೆ, ಇವುಗಳ ಜೊತೆಗೆ ಅನನ್ಯ ವಿನ್ಯಾಸ, AI ವೈಶಿಷ್ಟ್ಯಗಳ ಬೃಹತ್ ಗಾತ್ರ, ಸುದೀರ್ಘ ಬಾಳಿಕೆ ಬರುವ ಬ್ಯಾಟರಿ, ಮನಮೋಹಕ ಡಿಸ್‌ಪ್ಲೇ ಮತ್ತು ನಾವು ಚರ್ಚಿಸಿದ ಪ್ರತಿಯೊಂದು ವೈಶಿಷ್ಟ್ಯಗಳು ಇದರಲ್ಲಿವೆ. ಈ ಎಲ್ಲಾ ವೈಶಿಷ್ಟ್ಯಗಳಿಂದಾಗಿ OPPO A55 ಒಂದು ಅದ್ಭುತ ದರದಲ್ಲಿ ದೊರೆಯುವ ಅದ್ಭುತ ಫೋನ್ ಎಂದು ನಿಸ್ಸಂಶಯವಾಗಿ ಹೇಳಬಹುದು.    OPPO A55 ಎರಡು ವೇರಿಯಂಟ್‌ಗಳಲ್ಲಿ ಲಭ್ಯ ಇದೆ: 4+64GB ವೇರಿಯಂಟ್ INR 15,490ಕ್ಕೆ ದೊರೆತರೆ, 6+128GB ವೇರಿಯಂಟ್ ಅಕ್ಟೋಬರ್ 11ರಿಂದ INR 17,490ದಲ್ಲಿ Amazon ಮತ್ತು ಪ್ರಮುಖ ರಿಟೇಲ್ ಔಟ್‌ಲೆಟ್‌ಗಳಾದ್ಯಂತ ಲಭ್ಯವಾಗಲಿದೆ.
  Published by:Soumya KN
  First published: