HOME » NEWS » Tech » OPPO A53S 5G LAUNCHED IN INDIA CHECK PRICE SPECIFICATIONS HG

ಬಜೆಟ್​ ಬೆಲೆಯ 5G ಸ್ಮಾರ್ಟ್​ಫೋನ್ ಪರಿಚಯಿಸಿದ ಒಪ್ಪೊ; ಹೇಗಿದೆ?

ಒಪ್ಪೊ ಮಂಗಳವಾರ A53S​ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೇ 2ರಿಂದ ಗ್ರಾಹಕರ ಖರೀದಿಗೆ ಸಿಗಲಿದೆ.

news18-kannada
Updated:April 28, 2021, 5:06 PM IST
ಬಜೆಟ್​ ಬೆಲೆಯ 5G ಸ್ಮಾರ್ಟ್​ಫೋನ್ ಪರಿಚಯಿಸಿದ ಒಪ್ಪೊ; ಹೇಗಿದೆ?
Oppo A53s 5G
  • Share this:
ಮಾರುಕಟ್ಟೆಗೆ 5G ಸ್ಮಾರ್ಟ್​ಫೋನ್​ಗಳು ಧಾವಿಸುತ್ತದೆ. ವಿವಿಧ ಕಂಪೆನಿಗಳು ನಾನಾ ಫೀಚರ್​ ಜೊತೆಗೆ 5G ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್​ಫೋನ್ ಪರಿಚಯಿಸುತ್ತಿದೆ. ಅದರಲ್ಲೂ 20 ಸಾವಿರಕ್ಕಿಂತ ಮೇಲಿನ ದರಪಟ್ಟಿಯಲ್ಲಿ ಪರಿಚಯಿಸುತ್ತಿದೆ. ಇದನ್ನು ಗಮನಿಸಿದ ಚೀನಾದ ಒಪ್ಪೊ ಸ್ಮಾರ್ಟ್​ಫೋನ್ ಸಂಸ್ಥೆ ಬಜೆಟ್​ ಬೆಲೆಯ 5G ಸ್ಮಾರ್ಟ್​ಫೋನನ್ನು ಪರಿಚಯಿಸಿದೆ.

ಒಪ್ಪೊ ಮಂಗಳವಾರ A53S​ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೇ 2ರಿಂದ ಗ್ರಾಹಕರ ಖರೀದಿಗೆ ಸಿಗಲಿದೆ. ಅಂದಹಾಗೆಯೇ ಈ ಸ್ಮಾರ್ಟ್​ಫೋನ್​ ಮೀಡಿಯಾಟೆಕ್​ ಡೈಮೆನ್ಸಿಟಿ 700 ಪ್ರೊಸೆಸರ್​ ಹೊಂದಿದ್ದು, 6GB ಮತ್ತು 8GB  RAM​ ಆಯ್ಕೆಯಲ್ಲಿ ಪರಿಚಯಿಸಿದೆ. 128ಜಿಬಿ ಸ್ಟೊರೇಜ್​ ಆಯ್ಕೆಯನ್ನು ನೀಡಿದೆ.

ಒಪ್ಪೊ ವಿವಿಧ ಬೆಲೆ ಆಯ್ಕೆಯಲ್ಲಿ 5ಜಿ ಸ್ಮಾರ್ಟ್​ಫೋನ್​ ಪರಿಚಯಿಸಿದೆ. ಒಪ್ಪೊ ರೆನೊ 5 ಪ್ರೊ 5G, F​ 19 ಪ್ರೊ+ 5G, A74 5G ಪರಿಚಯಿಸಿದೆ. ಇದೀಗ ಅದರ ಸಾಲಿಗೆ A53S​ 5G ಫೋನ್ ಸೇರ್ಪಡೆಗೊಂಡಿದೆ.

ನೂತನ ಸ್ಮಾರ್ಟ್​ಫೋನ್ 6.52 ಇಂಚಿನ ಎಚ್​ಡಿ ಪ್ಲಸ್​ ಡಿಸ್​ಪ್ಲೇ ಹೊಂದಿದೆ. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಅಳವಡಿಸಿದೆ. 13 ಮೆಗಾಫಿಕ್ಸೆಲ್​, 2 ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಅಳವಡಿಸಲಾಗಿದೆ

ಒಪ್ಪೊ A53S ಸ್ಮಾರ್ಟ್​ಫೋನ್​ ದೀರ್ಘಕಾಲದ ಬಾಳಿಕೆಗಾಗಿ 5 ಸಾವಿರ ಎಮ್​ಎಹೆಚ್​ ಬ್ಯಾಟರಿ ಅಳವಡಿಸಲಾಗಿದೆ. ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ಅಳವಡಿಸಲಾಗಿದೆ. ಗ್ರಾಹಕರಿಗಾಗಿ ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಖರೀದಿಸಲು ಅವಕಾಶ ನೀಡಿದೆ.

ಅಂದಹಾಗೆಯೇ ಈ ಸ್ಮಾರ್ಟ್​ಫೋನ್​ ಬೆಲೆ 17 ಸಾವಿರ ರೂ ಆಗಿದ್ದು, ಮೇ 2ರಿಂದ 15ರವರೆಗೆ ಫ್ಲಿಪ್​ಕಾರ್ಟ್​ ಮೂಲಕ ಖರೀದಿಸಲು ಅವಕಾಶ ನೀಡಿದೆ. ಎಚ್​ಎಫ್​ಸಿ ಕ್ರೆಡಿಟ್​ ಕಾರ್ಡ್ ಬಳಕೆದಾರರಿಗೆ 1250 ರೂ ರಿಯಾಯಿತಿ ನೀಡುತ್ತಿದೆ.
Published by: Harshith AS
First published: April 28, 2021, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories