ಕೇವಲ 10,990ಕ್ಕೆ ಒಪ್ಪೊದಿಂದ ಐಫೋನ್​ ಮಾದರಿಯ ಮೊಬೈಲ್​


Updated:July 14, 2018, 12:21 PM IST
ಕೇವಲ 10,990ಕ್ಕೆ ಒಪ್ಪೊದಿಂದ ಐಫೋನ್​ ಮಾದರಿಯ ಮೊಬೈಲ್​

Updated: July 14, 2018, 12:21 PM IST
ನವದೆಹಲಿ: ಸೆಲ್ಫಿ ಕ್ಯಾಮೆರಾ ಹಾಗು ಬಜೆಟ್​ ಶ್ರೇಣಿಯ ಮೊಬೈಲ್​ಗಳಿಂದೇ ಫೇಮಸ್​ ಆಗಿರುವ ಒಪ್ಪೋ ಮೊಬೈಲ್ ಕಂಪೆನಿಯು ಭಾರತದಲ್ಲಿ ತನ್ನ ನೂತನ ಒಪ್ಪೋ A3s ಮೊಬೈಲ್​ನ್ನು ಬಿಡುಗಡೆಗೊಳಿಸಿದೆ.

ಸಂಪೂರ್ಣ ನಾಚ್​ ಡಿಸ್​ಪ್ಲೇ ಹೊಂದಿರುವ ಒಪ್ಪೊ ಮೊಬೈಲ್​, 13MP ಹಾಗೂ 2MP ಡ್ಯುಯಲ್​ ಕ್ಯಾಮೆರಾ ಹೊಂದಿದ್ದು, ಸೆಲ್ಫಿ ಪ್ರಿಯರಿಗಾಗಿ 8 MP ಫ್ರಂಟ್​ ಕ್ಯಾಮೆರಾ ಕೂಡಾ ನೀಡಿದೆ. ಕೇವಲ 10,990ಕ್ಕೆ ಬಿಡುಗಡೆಯಾಗಿರುವ ಈ ಮೊಬೈಲ್​ ಅತ್ಯಂತ ಕಡಿಮೆ ಬೆಲೆಯ ನಾಚ್​ ಡಿಸ್​ಪ್ಲೇ ಹೊಂದಿರುವ ಮೊಬೈಲ್​ ಇದಾಗಿದೆ.

ಜುಲೈ 15ರಿಂದ ಮಾರಾಟವಾಗಲಿರುವ ಈ ಮೊಬೈಲ್​ ಬ್ಯಾಟರಿ ಮೆಲೂ ಹೆಚ್ಚು ಒತ್ತು ನೀಡಿದೆ, ಯುವ ಸಮೂಹವನ್ನು ಸೆಳೆಯಲು ನಾವು ಅತ್ಯಂತ ಕಡಿಮೆ ಬೆಲೆಯಲ್ಲಿ ಒಪ್ಪೊ A3s ಮೊಬೈಲ್​ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದಾಗಿ ಭಾರತದ ಒಪ್ಪೊ ಬ್ರಾಂಡ್​ ನಿರ್ದೇಶಕ ವಿಲ್​ ಯಾಂಗ್​ ಹೇಳಿದ್ದಾರೆ.

A3s ಮೊಬೈಲ್​ಗಳಲ್ಲಿ 4230mAh ಬ್ಯಾಟರಿ ಕ್ಷಮತೆ ಹೊಂದಿದ್ದು, ಇದರಲ್ಲಿ ಪ್ರಮುಖ ವಿಶೇಷತೆಯೆಂದರೆ ಮ್ಯೂಸಿಕ್​ ಪಾರ್ಟಿ ಎಂಬ ಆಯ್ಕೆಯ ಮೂಲಕ ಒಪ್ಪೊ ಕಲರ್​ ಆಪರೇಟಿಂಗ್​ ಸಿಸ್ಟಂ 5.1ರ ಮೆಲ್ಪಟ್ಟ ಎಲ್ಲಾ ಮೊಬೈಲ್​ಗಳಲ್ಲಿ ಏಕಕಾಲದಲ್ಲಿ ಹಾಡನ್ನು ಪ್ಲೇ ಮಾಡಬಹುದಾಗಿದೆ.

ಇನ್ನು ಉಳಿದಂತೆ ಈ ಫೋನ್​ನಲ್ಲಿ 2GB RAM ಹಾಗೂ 16 ಆಂತರಿಕ ಮೆಮೊರಿ ವ್ಯವಸ್ಥೆಯಿದ್ದು, ಸ್ನಾಪ್​ ಡ್ರಾಗನ್​ 450 ಒಕ್ಟಾಕೋರ್​ ಪ್ರೊಸೆಸರ್​ ಅಳವಡಿಸಲಾಗಿದೆ. ಮೊಬೈಲ್​ಗೆ 6.2 ಇಂಚ್​ ಡಿಸ್​ಪ್ಲೇ ವ್ಯವಸ್ಥೆಯಿದೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ