ಎಸ್​ಯುವಿಗೆ ಸೆಡ್ಡು ಹೊಡೆಯುತ್ತಾ ಜಿಮ್ನಿ ?


Updated:June 23, 2018, 4:24 PM IST
ಎಸ್​ಯುವಿಗೆ ಸೆಡ್ಡು ಹೊಡೆಯುತ್ತಾ ಜಿಮ್ನಿ ?

Updated: June 23, 2018, 4:24 PM IST
ಭಾರತದಲ್ಲಿ ಎಸ್​ಯುವಿ ಯುಗ ಆರಂಭವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.75ರಷ್ಟು ಎಸ್​ಯುವಿ ವಾಹನಗಳ ನಿರ್ಮಾಣದ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಪಾನ್​ ಮೂಲದ ಸಂಸ್ಥೆ ಸುಜುಕಿ ಇದೀಗ ವಿಶೇಷ ವಿನ್ಯಾಸ ಜಿಮ್ನಿಯನ್ನು ಜುಲೈ 5ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಭಾರತದಲ್ಲಿ ಎಸ್​ಯುವಿ ಯುಗ ಆರಂಭವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.75ರಷ್ಟು ಎಸ್​ಯುವಿ ವಾಹನಗಳ ನಿರ್ಮಾಣದ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಪಾನ್​ ಮೂಲದ ಸಂಸ್ಥೆ ಸುಜುಕಿ ಇದೀಗ ವಿಶೇಷ ವಿನ್ಯಾಸ ಜಿಮ್ನಿಯನ್ನು ಜುಲೈ 5ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಸ್ಕಾರ್ಪಿಯೋ, ಟಾಟಾ ಸಫಾರಿ, ಟಾಟಾ ಸಿಯೇರ್ರಾಗಿಂತಲೂ ಹಿಂದೆ ಮೊದಲು ಭಾರತಕ್ಕೆ ಜಿಪ್ಸಿಯನ್ನು ಪರಿಚಯಿಸಿದ ಸುಜುಕಿ ಬಳಿಕ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981ರಿಂದ 1998ರ ಅವಧಿಯಲ್ಲಿ ಮಾರಾಟ ಮಾಡಿತ್ತು. ಇದೀಗ ಮತ್ತೆ ನಾಲ್ಕನೇ ತಲೆಮಾರಿನಿ ಮಿನಿ ಎಸ್​ಯುವಿ ಜಿಮ್ನಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಲು ತೀರ್ಮಾನಿಸಿರುವ ಕಂಪನಿ ನಿಜಕ್ಕೂ ಈ ಮಾರುಕಟ್ಟೆ ಹೆಚ್ಚಿನ ಲಾಭವನ್ನು ಗಳಿಸಲಿದೆ.

660cc ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಿಮ್ನಿ ಕಾರು,1.5ಲೀಟರ್(1500cc)ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿವೆ. ಜಿಮ್ನಿ ಕಾರು ಬೆಲೆ 6ಲಕ್ಷದಿಂದ 8.50ಲಕ್ಷ ಇರಬಹುದೆನ್ನಲಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಈ ಜೀಪ್​ ಮೂರು ಡೋರ್​ಗಳನ್ನು ಹೊಂದಿದ್ದು, ಬಲಬದಿಯ ಸ್ಟೇರಿಂಗ್​ ವ್ಯವಸ್ಥೆಯಿಂದ ಕೂಡಿದೆ. ಆದರೆ ಭಾರತೀಯರಿಗೆ ಮೆಚ್ಚಿಸಲು ಐದು ಡೋರ್​ಗಳನ್ನು ತರುವ ಕುರಿತು ಚಿಂತನೆ ನಡೆಸಿದೆ.

ಜಿಮ್ನಿ ಮುಂಬಾಗದಲ್ಲಿ ರೌಂಡೆಡ್​ ಹೆಡ್​ಲೈನ್,  ಸ್ಮಾರ್ಟ್ ಕನೆಕ್ಟಿವಿಟಿ, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ. ಇಗ್ನಿಸ್​ಗೂ ಇದೇ ಮಾದರಿಯ ವ್ಯವಸ್ಥೆಯಿದೆ.

2019ರ ಸುಜುಕಿ ಜಿಮ್ನಿಯ ಪೆಟ್ರೋಲ್​ ಎಂಜಿನ್​ನೊಂದಿಗೆ ಮಾತ್ರಾ ಮಾರುಕಟ್ಟೆಗೆ ಬರಲಿದ್ದು, ಮೂರು ಎಂಜಿನ್​ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಈಗಿರುವ ಮಾಹಿತಿಗಳ ಪ್ರಕಾರ  660cc RA06 ಮೂರು ಸಿಲಿಂಡರ್​ ಟರ್ಬೋಚಾರ್ಜ್​ ಪೆಟ್ರೋಲ್​ ಎಂಜಿನ್​ ಹೊಂದಿದೆ. ಉಳಿದಂತೆ 1.0-ಲೀಟರ್​ನ ಮೂರು ಸಿಲಿಂಡರ್​ ಬೂಸ್ಟರ್​ ಜೆಟ್​ ಪೆಟ್ರೋಲ್ ಸಮಾರ್ಥ್ಯ ಮತ್ತು 1.2 ಲೀಟರ್​ ಸಾಮರ್ಥ್ಯದ ಎಂಜಿನ್​ನ್ನು ಬಿಡುಗಡೆ ಮಾಡಲಾಗುತ್ತದೆ.

ಉದ್ದಳತೆಯಲ್ಲಿ ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರುಗಳು 6 ಲಕ್ಷದಿಂದ 8.50 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...