ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು (Smartphones) ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಈಗಿನ ಸ್ಮಾರ್ಟ್ಫೋನ್ಗಳನ್ನು ಮಿನಿ ಲ್ಯಾಪ್ಟಾಪ್ (Laptop) ಎಂದೂ ಕರೆಯಬಹುದು. ಯಾಕೆಂದರೆ ಲ್ಯಾಪ್ಟಾಪ್ಗಳಂತೆಯೇ ಸ್ಮಾರ್ಟ್ಫೋನ್ಗಳು ಕೂಡ ಈಗ ಕ್ಷಣಮಾತ್ರದಲ್ಲಿ ಕೆಲಸ ಮಾಡುತ್ತದೆ. ಹೆಚ್ಚಾಗಿ ಜನರು ಸ್ಮಾರ್ಟ್ಫೋನ್ಗಳನ್ನು ಕಾಲ್ನಲ್ಲಿ ಮಾತಾಡಲು, ಚಾಟ್ ಮಾಡಲು, ಅಗತ್ಯ ಸಂದೇಶಗಳನ್ನು ಇನ್ನೊಬ್ಬರಿಗೆ ಶೇರ್ ಮಾಡಲು ಉಪಯೋಗಿಸುತ್ತಾರೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳ ಕ್ಯಾಮೆರಾಗಳು ಕೂಡ ಉತ್ತಮ ಗುಣಮಟ್ಟದಲ್ಲಿ ಇದೆ. ಅದ್ದರಿಮದ ಈಗ ಇದನ್ನು ಫೋಟೋ, ವಿಡಿಯೋಗಳನ್ನು ತೆಗೆಯಲು ಹೆಚ್ಚಾಗಿ ಬಳಸುತ್ತಿದ್ದಾರೆ. ಫೈಲ್ ಮ್ಯಾನೇಜರ್ಗಳನ್ನು ಹೆಚ್ಚಾಗಿ ಗೌಪ್ಯತೆಯ ಡಾಕ್ಯುಮೆಂಟ್ಸ್ (Documents)ಗಳನ್ನು ಸೇವ್ ಆಗಿ ಇಟ್ಟುಕೊಳ್ಳಲು ಬಳಸುತ್ತಾರೆ. ಆದರೆ ಇದನ್ನು ಇನ್ನೊಬ್ಬರಿಗೆ ಸುಲಭದಲ್ಲಿ ಓಪನ್ ಮಾಡಬಹುದು. ಆದರೆ ಗೂ್ಗಲ್ ಮೂಲಕ ಲಾಕ್ ಮಾಡಬಹುದು.
ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಫೈಲ್ ಮ್ಯಾನೇಜರ್ ಬಹಳ ಅಗತ್ಯವಅದ ಅಪ್ಲಿಕೇಶನ್ ಆಗಿದೆ. ಬಳಕೆದಾರರು ಯಾವುದೇ ಫೋಟೋ, ವಿಡಿಯೋಗಳನ್ನು, ಡಾಕ್ಯುಮೆಂಟ್ಗಳನ್ನು ನೋಡಬೇಕಾದರೂ ಇದನ್ನು ಓಪನ್ ಮಅಡಿ ನೋಡಬೇಕು. ಆದರೆ ಕೆಲವೊಂದು ಗೌಪ್ಯತೆ ಡಾಕ್ಯುಮೆಂಟ್ಗಳಿದ್ದರೆ ಅದಕ್ಕೆ ಬೇರೊಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಲಾಕ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಇನ್ನುಮುಂದೆ ಗೂಗಲ್ನಲ್ಲಿ ಫೈಲ್ ಮ್ಯಾನೇಜರ್ ಓಪನ್ ಮಾಡುವ ಮೂಲಕ ಲಾಕ್ ಮಾಡಿಟ್ಟುಕೊಳ್ಳಬಹುದಾಗಿದೆ. ಹೇಗೆ ಎಂಬುದನ್ನು ಈ ಕೆಳಗೆ ಓದಿ.
ಗೂಗಲ್ನಲ್ಲಿ ಹೇಗೆ ಫೈಲ್ ಮ್ಯಾನೇಜರ್ ಓಪನ್ ಮಾಡುವುದು?
ಗೂಗಲ್ನಲ್ಲಿ ಕ್ರೋಮ್ ಬ್ರೌಸರ್ ಮೂಲಕ ಫೈಲ್ ಮ್ಯಾನೇಜರ್ ಅನ್ನು ಓಪನ್ ಮಅಡಬಹುದಾಗಿದೆ. ಇದಕ್ಕೆ ಯಾವುದೇ ಗೂಗಲ್ನಲ್ಲಿ ಸೆಟ್ಟಿಂಗ್ ಮಾಡಿಕೊಳ್ಳುವಂತಹ ಅಗತ್ಯವಿಲ್ಲ. ಈ ಫೈಲ್ ಮ್ಯಾನೇಜರ್ ಅನ್ನು ನಾವು ಇತರ ವೆಬ್ಸೈಟ್ಗಳನ್ನು ಗೂಗಲ್ನಲ್ಲಿ ಹೇಗೆ ಹುಡುಕುತ್ತೇವೆಯೋ ಅದೇ ರೀತಿ ಹುಡುಕಿದರೆ ಆಯ್ತು.
ಇದನ್ನೂ ಓದಿ: ಕೇವಲ 225 ರೀಚಾರ್ಜ್ ಮಾಡಿದ್ರೆ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಬಹುದು!
ಇನ್ನು ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ಫೈಲ್ ಮ್ಯಾನೇಜರ್ಗೆ ಇತರ ಅಪ್ಲಿಕೇಶನ್ ಮೂಲಕ ಆ್ಯಪ್ ಲಾಕ್ ಹಾಕಿದ್ದರೂ ಸಹ ಓಪನ್ ಮಾಡಬಹುದು. ಇದಕ್ಕಾಗಿ ಕೆಲವೊಂದು ಮಾರ್ಗಳಿವೆ.
ಹೌದು ಈ ಗೂಗಲ್ ಕ್ರೋಮ್ ಬ್ರೌಸರ್ ಮೂಲಕವೂ ಫೈಲ್ ಮ್ಯಾನೇಜರ್ ಅನ್ನು ಸುಲಭದಲ್ಲಿ ಓಪನ್ ಮಾಡಬಹುದ ಎಂದು ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿದೆ. ಫೈಲ್ ಮ್ಯಾನೇಜರ್ ಅನ್ನು ಒಂದು ಕೋಡ್ ಹಾಕುವ ಮೂಲಕ ಓಪನ್ ಮಾಡಿ.
ಫೈಲ್ ಮ್ಯಾನೇಜರ್ ಅನ್ನು ಓಪನ್ ಮಾಡಲು ಇದನ್ನು ಅನುಸರಿಸಿ
ಕೆಲವೊಂದು ಬಾರಿ ಬಳಕೆದಾರರು ತಮ್ಮ ಡೇಟಾಗಳನ್ನು ಸೇಫ್ ಆಗಿ ಇಟ್ಟುಕೊಳ್ಳುವ ಕಾರಣಕ್ಕಾಗಿ ಆ್ಯಪ್ ಲಾಕ್ನಂತಹ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಸುತ್ತಾರೆ. ಆದರೆ ಈ ಆ್ಯಪ್ ಲಾಕ್ ಇದ್ದರೂ ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ಫೈಲ್ ಮ್ಯಾನೇಜರ್ ಅನ್ನು ಓಪನ್ ಮಾಡಬಹುದು. ಅದಕ್ಕಾಗಿ ನಿಮಗೆ ಕ್ರೋಮ್ನ ಮೇಲ್ಗಡೆಯಲ್ಲೇ ಲಾಕ್ ಮಾಡುವಂತಹ ಅವಕಾಶಗಳಿರುತ್ತದೆ. ಇದನ್ನು ನೀವು ಮಾಡಿದರೆ ಬೇರೆ ಯಾರಿಗೂ ನಿಮ್ಮ ಅಪ್ಲಿಕೇಶನ್ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ