• Home
  • »
  • News
  • »
  • tech
  • »
  • Cyber Crime: ಕಳಿಸಿದ್ದು ಒಂದೇ ಒಂದು ಮೆಸೇಜ್, ಕಳ್ಕೊಂಡಿದ್ದು ಬರೋಬ್ಬರಿ 57 ಕೋಟಿ ರೂಪಾಯಿ!

Cyber Crime: ಕಳಿಸಿದ್ದು ಒಂದೇ ಒಂದು ಮೆಸೇಜ್, ಕಳ್ಕೊಂಡಿದ್ದು ಬರೋಬ್ಬರಿ 57 ಕೋಟಿ ರೂಪಾಯಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 ಹೌದು, ಕೆಲ ಸೈಬರ್ ವಂಚಕರು ಇತ್ತೀಚೆಗ ವಾಟ್ಸಪ್​ನಲ್ಲಿ ಫ್ಯಾಮಿಲಿಯವರಂತೆ ಮೆಸೇಜ್ ಮಾಡುವ ಮೂಲಕ ತಮ್ಮ ಡೀಟೇಲ್ಸ್​ ಕೇಳುವ ಮೂಲಕ ಡೇಟಾವನ್ನು ಹ್ಯಾಕ್​ ಮಾಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲೊಂದು ಇಂಥದ್ದೇ ಘಟನೆ ನಡೆದಿದ್ದು ಕೇವಲ ’ಹೈ ಅಮ್ಮಾ’ ಎಂದು ಮೆಸೇಜ್ ಮಾಡುವ ಮೂಲಕ ಬರೋಬ್ಬರಿ 57.84 ಕೋಟಿ ಹಣವನ್ನು ದೋಚಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಮುಂದೆ ಓದಿ ...
  • Share this:

    ಇತ್ತೀಚೆಗ ಪ್ರಪಂಚದಾದ್ಯಂತ ಸೈಬರ್​ ವಂಚನೆ (Cyber Crime) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸ್ಮಾರ್ಟ್​ಫೋನ್ (Smartphone)​ ಬಳಕೆದಾರರ ಡೇಟಾವನ್ನು, ಬ್ಯಾಂಕ್ (Bank) ಅನ್ನು ದರೋಡೆ ಮಾಡುವ ದೃಷ್ಟಿಯಿಂದ ಸೈಬರ್​ ವಂಚಕರು ಜನರಲ್ಲಿರುವಂತಹ ಸಾಧನಗಳನ್ನು ಹ್ಯಾಕ್ (Hack)​ ಮಾಡುತ್ತಿದ್ದಾರೆ. ಟೆಕ್ನಾಲಜಿ (Technology) ಬೆಳೆಯುತ್ತಿದೆ ಎಂಬುದು ಒಳ್ಳೆಯ ವಿಷಯ ಆದರೆ ಇದರಿಂದ ಅನೇಕರಿಗೆ ಸಮಸ್ಯೆಗಳು ಕೂಡ ಆಗುತ್ತಿದೆ ಎಂಬುದನ್ನು ಹೇಳಲು ಬೇಸರವಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಹ್ಯಾಕಿಂಗ್ ಸಿಸ್ಟಮ್ ಕೂಡ ಒಂದಾಗಿದೆ. ಇದೀಗ ಆಸ್ಟ್ರೇಲಿಯಾದಲ್ಲೊಂದು ಸೈಬರ್ ವಂಚನೆ ನಡೆದಿದ್ದು ಆ ವ್ಯಕ್ತಿ ಕಳೆದುಕೊಂಡಿದ್ದು ಮಾತ್ರ ಬರೋಬ್ಬರಿ 57.84 ಕೋಟಿ ರೂಪಾಯಿ. ಮನೆಯವರಂತೆಯೇ ವಾಟ್ಸಪ್​ನಲ್ಲಿ ಮೆಸೇಜ್ ಮಾಡಿ ಇತ್ತೀಚೆಗೆ ಸೈಬರ್ ಹಗರಣ ಮಾಡುತ್ತಿದ್ದಾರೆ.


    ಹೌದು, ಕೆಲ ಸೈಬರ್ ವಂಚಕರು ಇತ್ತೀಚೆಗ ವಾಟ್ಸಪ್​ನಲ್ಲಿ ಫ್ಯಾಮಿಲಿಯವರಂತೆ ಮೆಸೇಜ್ ಮಾಡುವ ಮೂಲಕ ತಮ್ಮ ಡೀಟೇಲ್ಸ್​ ಕೇಳುವ ಮೂಲಕ ಡೇಟಾವನ್ನು ಹ್ಯಾಕ್​ ಮಾಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲೊಂದು ಇಂಥದ್ದೇ ಘಟನೆ ನಡೆದಿದ್ದು ಕೇವಲ ’ಹೈ ಅಮ್ಮಾ’ ಎಂದು ಮೆಸೇಜ್ ಮಾಡುವ ಮೂಲಕ ಬರೋಬ್ಬರಿ 57.84 ಕೋಟಿ ಹಣವನ್ನು ದೋಚಿದ್ದಾರೆ.


    ಹಾಯ್​ ಅಮ್ಮಾ ಮೆಸೇಜ್​ ಮೂಲಕ ಹಗರಣ


    ಇದು ಒಂದು ರೀತಿಯಲ್ಲಿ ಸೈಬರ್ ವಂಚಕರ ಹೊಸ ಪ್ಲಾನ್ ಅಂತಾನೇ ಹೇಳ್ಬಹುದು. ಮೊದಲಿಗೆ ವಾಟ್ಸಪ್​ ಚ್ಯಾಟ್​ ಮಾಡುವ ಮೂಲಕ ಹ್ಯಾಕ್​ ಮಾಡಲು ಪ್ರಯತ್ನಿಸುತ್ತಾರೆ. ಹೇಗೆಂದರೆ ಮೊದಲಿಗೆ ಕುಟುಂಬ ಸದಸ್ಯರಂತೆಯೇ ಹಾಯ್​ ಅಮ್ಮಾ ಎಂದು ಮೆಸೇಜ್ ಮಾಡುತ್ತಾರೆ. ನಂತರ ಹೊಸ ಫೋನ್​ ಖರೀದಿಸಿಕೊಂಡಿದ್ದೇನೆ. ಅದಕ್ಕಾಗಿ ಹಣಬೇಕು ಅಥವಾ ನಿಮ್ಮ ಕುಟುಂಬದ ಸದಸ್ಯರ ಮೊಬೈಲ್​ ಕಳೆದುಹೋಗಿದೆ ಅಗತ್ಯ ಹಣಬೇಕು ಎಂದು ಬ್ಯಾಂಕ್​ ಡೀಟೇಲ್ಸ್​ ಕೇಳುವ ಮೂಲಕ ನಿಮ್ಮ ಬ್ಯಾಂಕ್​ನಲ್ಲಿರುವ ಹಣವನ್ನು ದೋಚುತ್ತಾರೆ.


    ಇದನ್ನೂ ಓದಿ: ಫಿಫಾ ವಿಶ್ವಕಪ್​ ಫುಟ್ಬಾಲ್‌ ಬಗ್ಗೆ ಜನರಿಗೆ ಕ್ರೇಜ್, ಗೂಗಲ್‌ನಲ್ಲಿ 100 ಕೋಟಿಗೂ ಅಧಿಕ ಜನರಿಂದ ಹುಡುಕಾಟ!


    ಈ ರೀತಿಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರ ಬಹಳಷ್ಟು ಸದ್ದು ಮಾಡುತ್ತಿದೆ.


    ಆಸ್ಟ್ರೇಲಿಯನ್​ ಗ್ರಾಹಕ ಮತ್ತು  ಕಾಂಪಿಟೇಶನ್ ಆಯೋಗದ (ACCC) ವರದಿಯ ಪ್ರಕಾರ


    ಈ ‘ಹಾಯ್​ ಮಮ್​‘ (ಹಾಯ್​ ಅಮ್ಮ) ಎಂಬ ಹಗರಣದ ಬಗ್ಗೆ ಆಸ್ಟ್ರೇಲಿಯನ್ ಗ್ರಾಹಕ ಮತ್ತು ಕಾಂಪಿಟೇಶನ್​ ಆಯೋಗ ವರದಿ ಮಾಡಿದೆ. ಇದರ ಮಾಹಿತಿಯ ಪ್ರಕಾರ  ಹಗರಣದಲ್ಲಿ ಅಂದಾಜು 1,150 ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ವರದಿಯ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಜನರು ಸುಮಾರು $2.6 ಮಿಲಿಯನ್ ನಷ್ಟು, ಅಂದರೆ ಅಂದಾಜು ಸುಮಾರು 21 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಅದರಲ್ಲೂ 2022 ರಲ್ಲೇ ಕನಿಷ್ಠ 11,100 ಸಂತ್ರಸ್ತರಿಂದ 7.2 ಮಿಲಿಯನ್ ಡಾಲರ್  ಅಂದರೆ ಅಂದಾಜು 57.84 ಕೋಟಿ ರೂಪಾಯಿ ವಂಚಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಇದು ಆಸ್ಟ್ರೇಲಿಯಾದಲ್ಲಿ ನಡೆದಿದೆಯಾದರೂ ಭಾರತದ ಬಳಕೆದಾರರು ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ ಎಂದಿದ್ದಾರೆ.


    ಸೈಬರ್ ಅಪರಾಧದಿಂದ ರಕ್ಷಿಸಿಕೊಳ್ಳುವುದು ಹೇಗೆ?


    ಫೋನ್ ಕಾಲ್​ನಲ್ಲಿ ಮಾತಾಡುವ ಸಮಯದಲ್ಲಿ ಯಾರೊಂದಿಗೂ ಓಟಿಪಿ ನಂರ್​ಗಳನ್ನು ಹಂಚಿಕೊಳ್ಳಬೇಡಿ. ಡೆಬಿಟ್ ಅಥವಾ ಇಲ್ಲ ಕ್ರೆಡಿಟ್​ಕಾರ್ಡ್​ ಪಿನ್, ಸಿವಿವಿ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅಪರಿಚಿತ ಸಂಖ್ಯೆಗಳು ಮತ್ತು ಇಮೇಲ್‌ಗಳ ಲಿಂಕ್‌ಗಳನ್ನು ತಿಳಿಯದೇ ಎಂದಿಗೂ ಕ್ಲಿಕ್ ಮಾಡಬೇಡಿ. ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಮಾತ್ರ ಬ್ರೌಸ್ ಮಾಡಿ. ಅನುಮಾನಾಸ್ಪದ ಲಾಗಿನ್‌ಗಳು, ಸಂದೇಶಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ. ಆನ್‌ಲೈನ್ ಶಾಪಿಂಗ್ ಸಮಯದಲ್ಲಿ ಪಾವತಿ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ಎಂದಿಗೂ ಉಳಿಸಬಾರದು. ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದರೆ ತಕ್ಷಣ ನಂಬಬೇಡಿ. ಯಾವುದೇ ಬ್ಯಾಂಕ್, ಯುಪಿಐ, ವೈಯಕ್ತಿಕ ವಿವರಗಳನ್ನು ನೀಡಬಾರದು.

    Published by:Prajwal B
    First published: