• Home
 • »
 • News
 • »
 • tech
 • »
 • Bank Account Hack: ಒಂದೇ ಒಂದು ಮಿಸ್ಡ್​ ಕಾಲ್​ನಿಂದ ಕಳೆದುಕೊಂಡಿದ್ದು ಮಾತ್ರ ಬರೋಬ್ಬರಿ 50 ಲಕ್ಷ ರೂಪಾಯಿ! ಏನಾಯ್ತು ನೋಡಿ

Bank Account Hack: ಒಂದೇ ಒಂದು ಮಿಸ್ಡ್​ ಕಾಲ್​ನಿಂದ ಕಳೆದುಕೊಂಡಿದ್ದು ಮಾತ್ರ ಬರೋಬ್ಬರಿ 50 ಲಕ್ಷ ರೂಪಾಯಿ! ಏನಾಯ್ತು ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಬಹಳಷ್ಟು ಸಂಖ್ಯೆಯಲ್ಲಿ ಹ್ಯಾಕರ್ಸ್​ ದೊಡ್ಡ ಮೊತ್ತದಲ್ಲಿ ಹಣವನ್ನು ದೋಚುವ ಸಂಗತಿಯನ್ನು ನೋಡಿದ್ದೇವೆ. ಇಲ್ಲೊಬ್ಬರ ಬ್ಯಾಂಕ್ ಅಕೌಂಟ್​ನಿಂದ ಕೇವಲ ಮಿಸ್ಡ್​ ಕಾಲ್​ ಮೂಲಕ 50 ಲಕ್ಷ ರೂಪಾಯಿ ಕದ್ದಿದ್ದಾರೆ. ಏನಿದರ ಕಥೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

 • Share this:

  ಅನೇಕ ಸಲ ಈ ಟಿವಿಯಲ್ಲಿ ನಿಮ್ಮ ಮೊಬೈಲ್‌ಗೆ (Mobile) ಬಂದಂತಹ ಒಟಿಪಿಗಳು ಮತ್ತು ನಿಮ್ಮ ಬ್ಯಾಂಕ್ ಖಾತೆಯ (Bank Account) ಎಟಿಎಂ ಕಾರ್ಡ್ ನ (ATM Card) ಪಿನ್ ನಂಬರ್ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ ಅಂತ ಜನರನ್ನು ಈ ಸೈಬರ್ ಕ್ರೈಂ (Cyber Crime) ಇಲಾಖೆಯವರು, ಬ್ಯಾಂಕ್ ನವರು ಮತ್ತು ಪೊಲೀಸರು ಎಚ್ಚರಿಸುತ್ತಲೇ ಇರುತ್ತಾರೆ. ಆದರೂ ಸಹ ನಮ್ಮಲ್ಲಿ ಎಷ್ಟೋ ಜನರು ಇದೇ ತಪ್ಪುಗಳನ್ನು ಮಾಡಿ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿರುವ ಅನೇಕ ಘಟನೆಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಈಗಂತೂ ಖದೀಮ ಕಳ್ಳರು ಬ್ಲ್ಯಾಂಕ್ ಕರೆಗಳನ್ನ ಮಾಡಿ, ಅದನ್ನು ನಾವು ಎತ್ತಿಕೊಂಡರೆ ಸಾಕು ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವೆಲ್ಲಾ ದೋಚಿ ಬಿಡುತ್ತಾರೆ. ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಎಷ್ಟೋ ಬಾರಿ ನಿಮ್ಮ ಮೊಬೈಲ್ ಫೋನ್ ಗೆ ಬ್ಲ್ಯಾಂಕ್ ಕರೆಗಳು ಬರುತ್ತವೆ. ಆದರೆ ನಾವು ಫೋನ್ ಕರೆಯನ್ನ ಸ್ವೀಕರಿಸಿದಾಗ, ಆ ಕಡೆಯಿಂದ ನಮಗೆ ಯಾವುದೇ ಮಾತುಗಳು ಕೇಳಿಸುದಿಲ್ಲ. ನಾವು ಎಷ್ಟೇ ‘ಹಲೋ ಹಲೋ’ ಎಂದರೂ ಸಹ ಆ ಕಡೆಯಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇಂತಹ ಕರೆಗಳು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ದೊಡ್ಡ ಕಂಟಕವಾಗಬಹುದು ನೋಡಿ. ಇಂತಹ ಕರೆಗಳ ಬಗ್ಗೆ ಜನರು ತುಂಬಾನೇ ಜಾಗರೂಕರಾಗಿರಬೇಕು. ಹಾಗಿದ್ದರೆ, ನೀವು ಯಾವೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಇಲ್ಲಿದೆ ನೋಡಿ.


  ಹೀಗೆ ಬ್ಲ್ಯಾಂಕ್ ಕರೆಗಳನ್ನ ಸ್ವೀಕರಿಸಿ ಹಣ ಕಳೆದುಕೊಂಡ ದೆಹಲಿ ವ್ಯಕ್ತಿ


  ದೆಹಲಿಯಲ್ಲಿ, ಕೆಲವು ದಿನಗಳ ಹಿಂದೆ, ಭದ್ರತಾ ಸೇವಾ ಸಂಸ್ಥೆಯ ನಿರ್ದೇಶಕರೊಬ್ಬರು ಬ್ಲ್ಯಾಂಕ್ ಕರೆಗಳ ಮೂಲಕ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಗಳನ್ನ ಕಳೆದು ಕೊಂಡಿದ್ದಾರೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನಡೆದ ಅತಿದೊಡ್ಡ ಸೈಬರ್ ಅಪರಾಧ ವಂಚನೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.


  ಇದನ್ನೂ ಓದಿ: ಬಿಎಸ್​ಎನ್​ಎಲ್​ ಗ್ರಾಹಕರಿಗೆ ಬಿಗ್​ಶಾಕ್​! ಇನ್ಮುಂದೆ ಈ ರೀಚಾರ್ಜ್​ ಪ್ಲಾನ್​ ಇರಲ್ಲ


  ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಈ ವ್ಯಕ್ತಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹಲವಾರು ಬ್ಲ್ಯಾಂಕ್ ಕರೆಗಳನ್ನು ಸ್ವೀಕರಿಸಿದ್ದಾರೆ ಮತ್ತು ಅದರ ನಂತರ ಹಲವಾರು ಆರ್‌ಟಿಜಿಎಸ್ ವಹಿವಾಟು ಸಂದೇಶಗಳನ್ನು ಸಹ ಇವರು ತಮ್ಮ ಮೊಬೈಲ್ ಫೋನ್ ನಲ್ಲಿ ಕಂಡುಕೊಂಡಿದ್ದಾರೆ.


  ಸಾಂಕೇತಿಕ ಚಿತ್ರ


  ಇನ್ನೊಂದು ಬದಿಯಲ್ಲಿ ಏನನ್ನೂ ಕೇಳಲು ಸಾಧ್ಯವಾಗದ ಕಾರಣ ಅವರು ಆ ಬ್ಲ್ಯಾಂಕ್ ಕರೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂದು ಅವರು ಹೇಳಿದರು.


  ಕಳೆದುಕೊಂಡ ಹಣದ ವಹಿವಾಟಿನ ಬಗ್ಗೆ ಮೆಸೇಜ್ ಗಳು ಬಂದಿವೆ..


  ಸುಮಾರು 12 ಲಕ್ಷ ರೂಪಾಯಿಗಳನ್ನು ಭಾಸ್ಕರ್ ಮಂಡಲ್ ಎಂಬವರ ಒಂದು ನಿರ್ದಿಷ್ಟ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದ್ದು, ತಲಾ 10 ಲಕ್ಷ ರೂಪಾಯಿಗಳನ್ನು ಇತರರ ಬ್ಯಾಂಕ್ ಖಾತೆಗಳಿಗೆ ಮತ್ತು 4.6 ಲಕ್ಷ ರೂಪಾಯಿಗಳನ್ನು ಅವಿಜಿತ್ ಗಿರಿ ಎಂಬಾತನಿಗೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ.


  ಸ್ಕ್ಯಾಮರ್ ಗಳು 'ಸಿಮ್ ಸ್ವ್ಯಾಪ್' ತಂತ್ರವನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಇದರಲ್ಲಿ ಸ್ಕ್ಯಾಮರ್ ಗಳು ಎರಡು-ಅಂಶ ದೃಢೀಕರಣ ವ್ಯವಸ್ಥೆಯಲ್ಲಿ ಲೋಪವನ್ನು ಕಂಡುಕೊಳ್ಳುತ್ತಾರೆ, ಇದರಲ್ಲಿ ಎರಡನೇ ಹಂತವು ಪಠ್ಯ ಸಂದೇಶ ಅಥವಾ ಫೋನ್ ಗೆ ಕರೆ ಬಂದಿದೆ. "ಈ ವಂಚನೆಯಲ್ಲಿ, ಸ್ಕ್ಯಾಮರ್ ಗಳು ಜನರ ಮೊಬೈಲ್ ಫೋನ್ ವಾಹಕಗಳನ್ನು ಸಹ ಸಂಪರ್ಕಿಸುತ್ತಾರೆ ಮತ್ತು ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಅವರನ್ನು ಮೋಸಗೊಳಿಸುತ್ತಾರೆ. ಇದು ಸಂಭವಿಸಿದ ನಂತರ, ಅವರು ಫೋನ್ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ" ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.


  ಸಾಂಕೇತಿಕ ಚಿತ್ರ


  "ವಂಚಕರು ಸಮಾನಾಂತರ ಕರೆ ಮೂಲಕ ದೂರವಾಣಿಯಲ್ಲಿ ಒಟಿಪಿಗಳನ್ನು ಕೇಳುತ್ತಿರಬಹುದು" ಎಂದು ಮತ್ತೊಬ್ಬ ವ್ಯಕ್ತಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದೆ. ಆದಾಗ್ಯೂ, ಅವರು ಫೋನ್ ಹೈಜಾಕ್ ಸೇರಿದಂತೆ ಇತರ ಆಯಾಮಗಳ ಬಗ್ಗೆಯೂ ಸಹ ತನಿಖೆ ನಡೆಸುತ್ತಿದ್ದಾರೆ. ಈ ಖದೀಮರು ಜಾರ್ಖಂಡ್ ನ ಜಮ್ತಾರಾದಲ್ಲಿ ನೆಲೆಗೊಂಡಿರಬಹುದು ಮತ್ತು ಹಣವನ್ನು ಯಾರ ಖಾತೆಗಳಿಗೆ ವರ್ಗಾಯಿಸಲಾಗಿದೆಯೋ ಅವರು ಅವುಗಳನ್ನು ಕೇವಲ ಶುಲ್ಕ ಅಥವಾ ಬಾಡಿಗೆಗೆ ಒದಗಿಸಬಹುದು ಎಂದು ಸುದ್ದಿ ಮಾಧ್ಯಮದ ವರದಿ ಹೇಳಿದೆ.


  ದೆಹಲಿಯಲ್ಲಿ ನಡೆದಿತ್ತು ದೊಡ್ಡ ಮಟ್ಟದ ಹ್ಯಾಕಿಂಗ್ ಪ್ರಯತ್ನ..


  ಇತ್ತೀಚೆಗೆ ದೆಹಲಿಯಲ್ಲಿ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮೇಲೆ ರಾನ್ಸಮ್‌ವೇರ್ ದಾಳಿ ಅದರ ಸರ್ವರ್ ಗಳನ್ನು ಕನಿಷ್ಠ ಏಳು ದಿನಗಳ ಕಾಲ ಸೇವೆಯಿಂದ ಹೊರಗಿಟ್ಟಿತು. ಏಮ್ಸ್ ಮೇಲೆ ರಾನ್ಸಮ್‌ವೇರ್ ದಾಳಿ ನಡೆದ ಒಂದು ವಾರದ ನಂತರ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನವೆಂಬರ್ 30 ರಂದು 24 ಗಂಟೆಗಳಲ್ಲಿ ಸುಮಾರು 6,000 ಬಾರಿ ಹ್ಯಾಕಿಂಗ್ ಪ್ರಯತ್ನಗಳನ್ನು ಎದುರಿಸಿತು.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು