Online Fruads: ದಿನೇ ದಿನೇ ಹೆಚ್ಚುತ್ತಿದೆ ಆನ್‌ಲೈನ್ ವಂಚನೆಗಳು! ವರದಿಯಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ
Online Fruads: ದಿನೇ ದಿನೇ ಹೆಚ್ಚುತ್ತಿದೆ ಆನ್‌ಲೈನ್ ವಂಚನೆಗಳು! ವರದಿಯಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ
ಸಾಂಕೇತಿಕ ಚಿತ್ರ
Online Fruads: ಇತ್ತೀಚೆಗೆ ಆನ್‌ಲೈನ್ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಈ ಬಗ್ಗೆ ಕಂಪನಿಯೊಂದು ಸಮೀಕ್ಷೆ ನಡೆಸಿದ್ದು ಇದರಲ್ಲಿ ಯಾರೂ ಊಹೆ ಮಾಡದಂತಹ ಸಂಖ್ಯೆಯಲ್ಲಿ ವಂಚನೆಯ ಪ್ರಕರಣಗಳು ಕಂಡುಬಂದಿದೆ.
ಇತ್ತೀಚೆಗೆ ಟೆಕ್ನಾಲಜಿ ಬಹಳಷ್ಟು ಅಭಿವೃದ್ಧಿಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಯಾರ ಕೈ ನೋಡಿದ್ರೂ ಮೊಬೈಲ್ಗಳೇ ಕಣ್ಣಿಗೆ ಕಾಣಸಿಗುತ್ತವೆ. ಆದರೆ ಇದನ್ನೇ ಗುರಿಯಾಗಿಸಿಕೊಂಡು ಕೆಲ ವಂಚಕರು ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಈ ಮೂಲಕ ಬಳಕೆದಾರರ ಬ್ಯಾಂಕಿನಿಂದ ಹಣವನ್ನು ದೋಚುತ್ತಿದ್ದಾರೆ.
ದಿನಹೋದಂತೆ ದೇಶದಲ್ಲಿ ಆನ್‌ಲೈನ್ ವಂಚನೆಯ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣಗಳು ದಿನದಿಂದ ದಿನಕ್ಕೆ ವರದಿಯಾಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ, 39 ಪ್ರತಿಶತ ಭಾರತೀಯ ಕುಟುಂಬಗಳು ಆನ್‌ಲೈನ್ ಹಣಕಾಸು ವಂಚನೆಗೆ ಬಲಿಯಾಗಿವೆ. 24ರಷ್ಟು ಮಂದಿ ಮಾತ್ರ ಹಣ ವಾಪಸ್ ಪಡೆದಿದ್ದಾರೆ.
ಇನ್ನು ಈ ಆನ್‌ಲೈನ್ ವಂಚನೆಯ ಬಗ್ಗೆ ವರದಿಯನೊಂದು ಬಹಿರಂಗವಾಗಿದ್ದು, ಇದರಲ್ಲಿ ಶೇಕಡಾ 23 ಪ್ರತಿಶತದಷ್ಟು ಜನರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಂಚನೆಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ಶೇಕಡಾ 13 ರಷ್ಟು ಜನರು ಖರೀದಿ, ಮಾರಾಟ, ಜಾಹೀರಾತು ಈ ರೀತಿಯ ವೆಬ್ ಸೈಟ್ ಬಳಕೆದಾರರಿಂದ ಮೋಸ ಹೋಗಿದ್ದಾರೆ ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 13 ರಷ್ಟು ಜನರು ವೆಬ್‌ಸೈಟ್‌ನಿಂದ ಹಣವನ್ನು ಸ್ವೀಕರಿಸಿದ್ದಾರೆ ಆದರೆ ಆ ಬೆಲೆಗೆ ತಕ್ಕಂತೆ ಪ್ರೊಡಕ್ಟ್ ಅನ್ನು ಕಳುಹಿಸಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಶೇಕಡಾ 10ರಷ್ಟು ಜನರು ಎಟಿಯಂ ಮೂಲಕವೂ ವಂಚನೆಗೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.
ಇನ್ನು ಸಮೀಕ್ಷೆ ಒಳಗಾದವರಲ್ಲಿ 30 ಪ್ರತಿಶತ ಕುಟುಂಬದಲ್ಲಿ ಕನಿಷ್ಟ ಒಬ್ಬರು ಈ ಹಣಕಾಸಿನ ವಂಚನೆಗೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದರಲ್ಲಿ ಶೇಕಡಾ 9 ಪ್ರತಿಶತದಷ್ಟು ಜನರು ತಮ್ಮ ಕುಟುಂಬದಲ್ಲಿ ಅನೇಕ ಜನರು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ದೇಶದ 331 ಜಿಲ್ಲೆಗಳ 32 ಸಾವಿರ ಜನರ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗಿದೆ. ಅವರಲ್ಲಿ 66 ಪ್ರತಿಶತ ಪುರುಷರು ಮತ್ತು 34 ಪ್ರತಿಶತ ಮಹಿಳೆಯರು ಭಾಗವಹಿಸಿದ್ದಾರೆ. ಇವರಲ್ಲಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನು ಈ ವಂಚನೆಗೆ ಸಂಬಂಧಿಸಿದಂತೆ ಯಾರೇ ಆಗಲಿ ಬಳಕೆದಾರರು ಎಚ್ಚರದಿಂದಿರುವುದು ಉತ್ತಮ. ಆದ್ದರಿಂದ ಯಾವುದೇ ಲಿಂಕ್ಗಳು ಮೊಬೈಲ್ನಲ್ಲಿ, ಲ್ಯಾಪ್ಟಾಪ್ನಲ್ಲಿ ಬಂದಾಗ ಎಚ್ಚರದಿಂದಿರಬೇಕು. ಇಲ್ಲದಿದ್ದರೆ ಈ ರೀತಿಯ ವಂಚನೆಗಳಿಗೆ ಗುರಿಯಾಗಬೇಕಾಗುತ್ತದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ