ಕೆಲವು ವರ್ಷಗಳಿಂದ ಭಾರತದಲ್ಲಿ (India) ಆನ್ಲೈನ್ ಶಾಪಿಂಗ್ (Online Shopping) ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇತ್ತಿಚೆಗೆ ಆನ್ಲೈನ್ ಶಾಪಿಂಗ್ನಲ್ಲಿ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಲು ಮತ್ತು ಶಾಪಿಂಗ್ ಮಾಡಲು ಈಗ ಹೆಚ್ಚು ಇಕಾಮರ್ಸ್ ವೆಬ್ಸೈಟ್ (E-Commerse Website)ಗಳನ್ನೇ ಅನುಸರಿಸುತ್ತಾರೆ. ಆದರೆ ಆನ್ಲೈನ್ ಶಾಪಿಂಗ್ ಎಷ್ಟೇ ಸುಲಭವಾಗಿದ್ದರೂ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ನೀವು ವಂಚಕರಿಗೆ ಗುರಿಯಾಗುವುದು ಗ್ಯಾರಂಟಿ. ಸದ್ಯ ಪ್ರಪಂಚದಾದ್ಯಂತ ಹೊಸ ಓಟಿಪಿ ಸ್ಕ್ಯಾಮ್ (OTP Scam) ಪ್ರಕರಣಗಳು ಬಹಳಷ್ಟು ಸುದ್ದಿಯಲ್ಲಿವೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಹ್ಯಾಕರ್ಸ್ಗಳು ಸ್ಮಾರ್ಟ್ಫೊನ್ ಬಳಕೆದಾರರನ್ನೇ ಹೆಚ್ಚು ಗುರಿಯಾಗಿಸಿಕೊಂಡು ಅವರನ್ನು ವಂಚನೆ ಮಾಡುತ್ತಿದ್ದಾರೆ. ಅವರ ಮೊಬೈಲ್ಗಳನ್ನು ಹ್ಯಾಕ್ ಮಾಡುವ ಮೂಲಕ ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚುತ್ತಿದ್ದಾರೆ. ಇದೀಗ ಓಟಿಪಿ ಸ್ಕ್ಯಾಮ್ ಮಾಡುವ ಮೂಲಕ ಹಗರಣ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರು ಬ್ಯಾಂಕ್ ಖಾತೆ ಖಾಲಿಯಾಗುವುದು ಗ್ಯಾರಂಟಿ.
ಏನಿದು ಓಟಿಪಿ ಹಗರಣ?
ಇಲ್ಲಿಯವರೆಗೆ ಎಲ್ಲರಿಗೂ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ತಿಳಿದಿದೆ. ಈಗಿನ ಟೆಕ್ನಾಲಜಿಯಲ್ಲಿ ಓಟಿಪಿ ಇಲ್ಲದೆ ಯಾವುದೇ ವಹಿವಾಟು ನಡೆಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಆರ್ಡರ್ಗಳು ಹೆಚ್ಚಾಗುತ್ತಿದ್ದಂತೆ, ವಂಚಕರು ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಇನ್ಮುಂದೆ ಯಾರಿಗೂ ಪಾಸ್ವರ್ಡ್ ಶೇರ್ ಮಾಡುವಂತಿಲ್ಲ!
ತೆಲಂಗಾಣದ ಸೈಬರಾಬಾದ್ನ ಸೈಬರ್ ಕ್ರೈಮ್ ವಿಂಗ್ ಪೊಲೀಸರು ಈ ಹೊಸ ರೀತಿಯ ಓಟಿಪಿ ವಂಚನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಅಕ್ಷರಸ್ಥರು ಈ ಬಗ್ಗೆ ಜಾಗರೂಕರಾದರೂ ಅವರ ಕುಟುಂಬದ ಸದಸ್ಯರು ಈ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆಯಿದೆ ಎಂದು ಪಲೀಸರು ಹೇಳುತ್ತಾರೆ. ಆದ್ದರಿಂದ, ಓಟಿಪಿಯಂತಹ ಸೂಕ್ಷ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಓಟಿಪಿ ಸ್ಕ್ಯಾಮ್ ಹೇಗೆ ಮಾಡುತ್ತಾರೆ?
ಈ ಡೆಲಿವರಿ ಒಟಿಪಿ ಹಗರಣದಲ್ಲಿ, ಇಕಾಮರ್ಸ್ ಕಂಪನಿಗೆ ಸೇರಿದ ಡೆಲಿವರಿ ಬಾಯ್ ಮನೆಗೆ ಬರುತ್ತಾನೆ. ಆನ್ಲೈನ್ನಲ್ಲಿ ಆರ್ಡರ್ ಮಾಡದಿದ್ದರೂ ಆರ್ಡರ್ ಬಂದಿದೆ ಎಂದು ಹೇಳಿ ಮನೆಯವರನ್ನು ನಂ.ಬಿಸುವ ಪ್ರಯತ್ನ ಮಾಡುತ್ತಾರೆ. ಆರ್ಡರ್ ಅನ್ನು ತಲುಪಿಸಲು ಓಟಿಪಿ ಹೇಳಿ ಎಂದು ಕೇಳುತ್ತಾರೆ. ಆರ್ಡರ್ ನೀವು ಮಾಡದ ಕಾರಣ, ಆರ್ಡರ್ ಅನ್ನು ಕ್ಯಾನ್ಸಲ್ ಮಾಡಲು ನೀವು ಓಟಿಪಿ ಹೇಳ್ಬೇಕು ಎಂದು ಹೇಳುತ್ತಾರೆ. ಅವರು ನೀವು ಓಟಿಪಿ ಹೇಳುವವರೆಗೂ ಬಿಡುವುದಿಲ್ಲ. ಇಕಾಮರ್ಸ್ ಕಂಪನಿಯಿಂದ ಆರ್ಡರ್ ಬಂದಿದೆ ಎಂದು ಓಟಿಪಿ ಹಂಚಿದರೆ ಡೆಲಿವರಿ ಬಾಯ್ ರೂಪದಲ್ಲಿ ವಂಚಕರು ನಿಮ್ಮ ಹಣ ದೋಚುತ್ತಾರೆ. ನೀವು ಶೇರ್ ಮಾಡಿದ ಓಟಿಪಿಯಿಂದ ಅವರು ನಿಮ್ಮ ಬ್ಯಾಂಕ್ ಅಕೌಂಟ್ನ ಡೀಟೇಲ್ಸ್ ಅನ್ನು ಪಡೆಯುತ್ತಾರೆ.
ಎಚ್ಚರಿಕೆಯಿಂದಿರಿ
ಈ ಹ್ಯಾಕರ್ಸ್ಗಳ ಮುಖ್ಯ ಉದ್ದೇಶವೇ ಕುಟುಂಬದ ಹಿರಿಯರ ಅಥವಾ ಅವಿದ್ಯಾವಂತರ ಬ್ಯಾಂಕ್ ಖಾತೆಗಳನ್ನು ದೋಚುವುದು. ಹಾಗೇ ಒಂದು ವೇಳೆ ಓಟಿಪಿ ನೀಡಿ ಆರ್ಡರ್ ಮಾಡಿದ್ದು ಹೌದು ಎಂದು ಒಪ್ಪಿಕೊಂಡರೆ ಅವರಿಗೆ ಹಣ ಪಾವತಿಸಲು ಲಿಂಕ್ ಕಳುಹಿಸುತ್ತಾರೆ. ಒಂದು ವೇಳೆ ನೀವು ಆ ಲಿಂಕ್ ಮೂಲಕ ಹಣ ಪಾವತಿಸಲು ಟ್ರೈ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ನ ಕಂಪ್ಲೀಟ್ ಡೀಟೇಲ್ಸ್ ಹ್ಯಾಕರ್ಸ್ಗಳಿಗೆ ತಿಳಿಯುತ್ತದೆ. ಆದ್ದರಿಂದ ಯಾವುದೇ ಓಟಿಪಿ ಇನ್ನೊಬ್ಬರಿಗೆ ನೀಡಬೇಕಾದ್ರೆ ಎಚ್ಚರವಹಿಸಿ. ಆನ್ಲೈನ್ಡೆಲಿವರಿ ಬಾಯ್ಸ್ ಮತ್ತು ಏಜೆಂಟ್ಗಳಿಗೆ ಓಟಿಪಿ ನೀಡುವಾಗ ಸರಿಯಾಗಿ ಖಚಿತಪಡಿಸಿಕೊಳ್ಳಿ. ವಿಶ್ವಾಸಾರ್ಹವಲ್ಲದ ಮತ್ತು ಅಪರಿಚಿತ ವೆಬ್ಸೈಟ್ಗಳ ಲಿಂಕ್ಗಳನ್ನು ಚೆಕ್ ಮಾಡದೆ ತೆರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ