Amazon | ತನ್ನದೇ ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ಅಮೆಜಾನ್ ಉತ್ಪನ್ನಗಳನ್ನು ನಕಲು ಮಾಡಿದೆ; ವರದಿ

Amazon: ಭಾರತದಲ್ಲಿ ಸೊಲಿಮೊ ಯೋಜನೆಯು ಅಂತಾರಾಷ್ಟ್ರೀಯ ಪ್ರಭಾವವನ್ನು ಹೊಂದಿದೆ: ಸೋಲಿಮೊ-ಬ್ರ್ಯಾಂಡ್ ಆರೋಗ್ಯ ಮತ್ತು ಗೃಹ ಉತ್ಪನ್ನಗಳನ್ನು ಈಗ ಅಮೆಜಾನ್‌ನ US ವೆಬ್‌ಸೈಟ್ Amazon.com ನಲ್ಲಿ ಮಾರಾಟಕ್ಕೆ ನೀಡಲಾಗಿದೆ.

Amazon

Amazon

 • Share this:

  Amazon copied products: ತನ್ನ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳನ್ನು ನಕಲಿಸಿದೆ ಹಾಗೂ ಇತರ ಮಾರಾಟಗಾರರ ವೆಚ್ಚವನ್ನು ಉಪಯೋಗಿಸಿ ತನ್ನದೇ ಆದ ಮಾರಾಟ ಸರಕನ್ನು ಉತ್ತೇಜಿಸಲು ಆಂತರಿಕ ದತ್ತಾಂಶವನ್ನು Amazon.com Inc ಬಳಸಿಕೊಳ್ಳುತ್ತಿದೆ ಎಂಬ ಆರೋಪ ರೀಟೇಲ್ ತಾಣದ ಕುರಿತಾಗಿ ಪದೇ ಪದೇ ಕೇಳಿಬರುತ್ತಿದ್ದು ಕಂಪನಿಯು ಈ ಆರೋಪಗಳನ್ನು ನಿರಾಕರಿಸಿದೆ.


  ರಾಯಿಟರ್ಸ್ ಪರಿಶೀಲಿಸಿದ ಅಮೆಜಾನ್‌ನ ಆಂತರಿಕ ಡೇಟಾಗಳು ಅಂದರೆ ಇಮೇಲ್‌ಗಳು, ಸ್ಟ್ರಾಟಜಿ ಪೇಪರ್‌ಗಳು ಹಾಗೂ ಬಿಸ್‌ನೆಸ್ ಪ್ಲಾನ್‌ಗಳು, ಕಂಪನಿಯು ಭಾರತದಲ್ಲಿ ತನ್ನ ಸಂಸ್ಥೆಯ ಉತ್ಪನ್ನ ಶ್ರೇಣಿಯನ್ನು ಹೆಚ್ಚಿಸಲು ನಕಲುಗಳನ್ನು ರಚಿಸಿ ಹಾಗೂ ಹುಡುಕಾಟ ಫಲಿತಾಂಶಗಳನ್ನು ಯುಕ್ತಿಯಿಂದ ನಿರ್ವಹಿಸುವ ವ್ಯವಸ್ಥಿತ ಅಭಿಯಾನವನ್ನು ನಡೆಸುತ್ತಿದೆ ಎಂಬುದು ತಿಳಿದುಬಂದಿದೆ. ಭಾರತದಲ್ಲಿ ಅಮೆಜಾನ್‌ನ ಖಾಸಗಿ-ಬ್ರ್ಯಾಂಡ್‌ಗಳ ತಂಡವು ಇತರ ಕಂಪನಿಗಳು ಮಾರಾಟ ಮಾಡಿದ ಉತ್ಪನ್ನಗಳನ್ನು ನಕಲಿಸಲು Amazon.in ನಿಂದ ಆಂತರಿಕ ಡೇಟಾವನ್ನು ಹೇಗೆ ರಹಸ್ಯವಾಗಿ ಬಳಸಿಕೊಂಡಿತು ಮತ್ತು ನಂತರ ಅವುಗಳನ್ನು ಹೇಘೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನೀಡಿತು ಎಂಬುದನ್ನು ದಾಖಲೆಗಳು ಬಹಿರಂಗಪಡಿಸುತ್ತವೆ. ಅಮೆಜಾನ್‌ನ ಹುಡುಕಾಟ ಫಲಿತಾಂಶಗಳನ್ನು ಬೆಂಬಲಿಸುವ ಮೂಲಕ ಅಮೆಜಾನ್‌ನ ಖಾಸಗಿ-ಬ್ರ್ಯಾಂಡ್ ಉತ್ಪನ್ನಗಳ ಮಾರಾಟವನ್ನು ಉದ್ಯೋಗಿಗಳು ಕಾಣುವಂತೆ ಮಾಡಿದರು. ಹೀಗಾಗಿ ಕಂಪನಿಯ ಪ್ರಾಡಕ್ಟ್‌ಗಳು 2016 ರ ಕಾರ್ಯತಂತ್ರದ ವರದಿಯು ಬಹಿರಂಗಪಡಿಸಿರುವಂತೆ, ಗ್ರಾಹಕರು Amazon.in ನಲ್ಲಿ ಶಾಪಿಂಗ್ ಮಾಡುವಾಗ ಮೊದಲ ಎರಡನೆಯ ಅಥವಾ ಮೂರನೇ ಹುಟುಕಾಟ ಫಲಿತಾಂಶಗಳಲ್ಲಿ ಗೋಚರಿಸುತ್ತದೆ.


  ರಾಯಿಟರ್ ತಿಳಿಸಿರುವ ದಾಖಲೆಯನ್ನು ಅರಿತುಕೊಂಡು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವಿವರಗಳನ್ನು ಇನ್ನೂ ಗುರುತಿಸಿಲ್ಲ ಇಲ್ಲವೇ ರಾಯಿಟರ್ಸ್ ಬಳಿ ವರದಿಗಳನ್ನು ಹಂಚಿಕೊಳ್ಳಲು ಕೇಳಿಲ್ಲ ಎಂಬುದು ಆಶ್ಚರ್ಯಕರವಾಗಿದೆ ಎಂದು ತಿಳಿಸಿದ್ದಾರೆ. ಕಸ್ಟಮರ್ ರಿಟರ್ನ್‌ಗಳು ಸೇರಿದಂತೆ Amazon.in ನಲ್ಲಿ ಇತರ ಬ್ರ್ಯಾಂಡ್‌ಗಳನ್ನು ಕುರಿತು ಅಮೆಜಾನ್ ಉದ್ಯೋಗಿಗಳು ಸ್ಯಾಮ್ಯದ ಡೇಟಾವನ್ನು ಅಧ್ಯಯನ ಮಾಡಿದ್ದಾರೆ ಎಂಬುದಾಗಿ ಆಂತರಿಕ ಡೇಟಾಗಳು ವರದಿ ಮಾಡಿವೆ. ಗುರಿ ಸರಕುಗಳನ್ನು ಟಾರ್ಗೆಟ್ ಮಾಡುವುದು ಹಾಗೂ ಗುರುತಿಸುವುದು – ರೆಫರೆನ್ಸ್ ಅಥವಾ ಬೆಂಚ್‌ಮಾರ್ಕ್‌ ಉತ್ಪನ್ನಗಳಂತೆ ವಿವರಿಸಲಾಗಿದೆ-ಅವುಗಳನ್ನು ಪುನರಾವರ್ತಿಸುವುದು. ಈ ಪ್ರಯತ್ನದ ಭಾಗವಾಗಿ 2016 ರ ಆಂತರಿಕ ವರದಿಯು ಕಂಪನಿಯು ಮೂಲತಃ ಭಾರತೀಯ ಮಾರುಕಟ್ಟೆಗೆ "ಸೊಲಿಮೊ" ಎಂದು ರಚಿಸಿದ ಬ್ರಾಂಡ್‌ಗಾಗಿ ಅಮೆಜಾನ್‌ನ ಕಾರ್ಯತಂತ್ರವನ್ನು ರೂಪಿಸಿತು. ಸೊಲಿಮೊ ತಂತ್ರವು ಸರಳವಾಗಿದೆ: "ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು Amazon.in ನಿಂದ ಮಾಹಿತಿಯನ್ನು ಬಳಸಿ ಮತ್ತು ನಂತರ ನಮ್ಮ ಗ್ರಾಹಕರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡಲು Amazon.in ಪ್ಲಾಟ್‌ಫಾರ್ಮ್ ಅನ್ನು ಹತೋಟಿಯಲ್ಲಿಡಿ." ಎಂದಾಗಿತ್ತು.


  ಭಾರತದಲ್ಲಿ ಸೊಲಿಮೊ ಯೋಜನೆಯು ಅಂತಾರಾಷ್ಟ್ರೀಯ ಪ್ರಭಾವವನ್ನು ಹೊಂದಿದೆ: ಸೋಲಿಮೊ-ಬ್ರ್ಯಾಂಡ್ ಆರೋಗ್ಯ ಮತ್ತು ಗೃಹ ಉತ್ಪನ್ನಗಳನ್ನು ಈಗ ಅಮೆಜಾನ್‌ನ US ವೆಬ್‌ಸೈಟ್ Amazon.com ನಲ್ಲಿ ಮಾರಾಟಕ್ಕೆ ನೀಡಲಾಗಿದೆ.


  ಕಂಪನಿಯ ಸ್ವಂತ ಉತ್ಪನ್ನಗಳಲ್ಲಿ ಕೆಲಸ ಮಾಡುವ ಅಮೆಜಾನ್ ಉದ್ಯೋಗಿಗಳು, ನಕಲು ಮಾಡಲು ಉದ್ದೇಶಿಸಿರುವ ಉತ್ಪನ್ನಗಳ ತಯಾರಕರೊಂದಿಗೆ ಪಾಲುದಾರರಾಗಲು ಯೋಜಿಸಿದ್ದಾರೆ ಎಂದು 2016 ರ ಡಾಕ್ಯುಮೆಂಟ್ ತೋರಿಸುತ್ತದೆ. ಏಕೆಂದರೆ ಈ ತಯಾರಕರು "ಉತ್ಪನ್ನದ ಅಂತಿಮ ಗುಣಮಟ್ಟದ ಮೇಲೆ ಪ್ರಭಾವ ಬೀರುವ ವಿಶಿಷ್ಟ ಪ್ರಕ್ರಿಯೆಗಳನ್ನು" ಬಳಸುತ್ತಾರೆ ಎಂಬುದನ್ನು ಅವರು ತಿಳಿದುಕೊಂಡರು.


  ಇಂಡಿಯಾ ಪ್ರೈವೇಟ್ ಬ್ರಾಂಡ್ಸ್ ಪ್ರೋಗ್ರಾಂ ಎಂಬ ಶೀರ್ಷಿಕೆಯ ಡಾಕ್ಯುಮೆಂಟ್ ತಿಳಿಸುವಂತೆ ಉತ್ಪನ್ನಗಳಲ್ಲಿ ಈ ಪರಿಣತಿಯನ್ನು ಅಭಿವೃದ್ಧಿಪಡಿಸುವುದು ಕಷ್ಟಕರವಾಗಿದೆ ಮತ್ತು ಆದ್ದರಿಂದ, ನಮ್ಮ ಉಲ್ಲೇಖಿತ ಉತ್ಪನ್ನದೊಂದಿಗೆ ಗುಣಮಟ್ಟವನ್ನು ಸಂಪೂರ್ಣವಾಗಿ ಹೊಂದಿಸಲು ನಾವು ಸಮರ್ಥರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು, ನಾವು ತಯಾರಕರೊಂದಿಗೆ ಮಾತ್ರ ಪಾಲುದಾರರಾಗಲು ನಿರ್ಧರಿಸಿದ್ದೇವೆ ಎಂಬುದನ್ನು ತಿಳಿಸಿದೆ.

  2020 ರಲ್ಲಿ ಯುಎಸ್ ಕಾಂಗ್ರೆಸ್ ಮುಂದೆ ಪ್ರಮಾಣವಚನ ಸ್ವೀಕರಿಸಿದಾಗ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇ-ಕಾಮರ್ಸ್ ದೈತ್ಯವು ತನ್ನ ಖಾಸಗಿ-ಲೇಬಲ್ ವ್ಯವಹಾರಕ್ಕೆ ಸಹಾಯ ಮಾಡಲು ವೈಯಕ್ತಿಕ ಮಾರಾಟಗಾರರ ಡೇಟಾವನ್ನು ಬಳಸುವುದನ್ನು ತನ್ನ ಉದ್ಯೋಗಿಗಳನ್ನು ನಿಷೇಧಿಸುತ್ತದೆ ಎಂದು ವಿವರಿಸಿದರು. ಹಾಗೂ 2019 ರಲ್ಲಿ ಅಮೆಜಾನ್ ಎಕ್ಸಿಕ್ಯೂಟಿವ್ ಕಂಪನಿಯು ತನ್ನದೇ ಆದ ಖಾಸಗಿ-ಲೇಬಲ್ ಉತ್ಪನ್ನಗಳನ್ನು ರಚಿಸಲು ಅಥವಾ ಅವರಿಗೆ ಅನುಕೂಲವಾಗುವಂತೆ ಅದರ ಹುಡುಕಾಟ ಫಲಿತಾಂಶಗಳನ್ನು ಬದಲಿಸಲು ಅಂತಹ ಡೇಟಾವನ್ನು ಬಳಸುವುದಿಲ್ಲ ಎಂದು ಸಾಕ್ಷ್ಯ ನೀಡಿತು.


  ಇದನ್ನು ಓದಿ: Flipkart: Big Diwali Sale ಆಯೋಜಿಸಲು ಸಜ್ಜಾದ ಫ್ಲಿಪ್​ಕಾರ್ಟ್​: ಸ್ಮಾರ್ಟ್​ಫೋನ್​ಗಳ ಮೇಲೆ ಶೇ.80ರಷ್ಟು ರಿಯಾಯಿತಿ!

  ರಾಯಿಟರ್ಸ್ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಅಮೆಜಾನ್ ತನ್ನ ಸ್ವಂತ ಉತ್ಪನ್ನಗಳಿಗೆ ಅನುಕೂಲವಾಗುವಂತೆ ಹುಡುಕಾಟ ಫಲಿತಾಂಶಗಳನ್ನು ಕುಶಲತೆಯಿಂದ ನಿರ್ವಹಿಸುವುದು, ಹಾಗೆಯೇ ಇತರ ಮಾರಾಟಗಾರರ ಸರಕುಗಳನ್ನು ನಕಲಿಸುವುದು ಅಮೆಜಾನ್‌ನಲ್ಲಿ ಔಪಚಾರಿಕ, ರಹಸ್ಯ ತಂತ್ರದ ಭಾಗವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಉನ್ನತ ಮಟ್ಟದ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಲಾಯಿತು. ಇಬ್ಬರು ಕಾರ್ಯಕಾರಿ ಅಧಿಕಾರಿಗಳು ಭಾರತದ ಕಾರ್ಯತಂತ್ರವನ್ನು ಪರಿಶೀಲಿಸಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ


  ಈ ವರದಿಯ ಪ್ರಶ್ನೆಗಳಿಗೆ ಲಿಖಿತ ಪ್ರತಿಕ್ರಿಯೆಯಲ್ಲಿ, ಅಮೆಜಾನ್ ಹೀಗೆ ಹೇಳಿದೆ: "ರಾಯಿಟರ್ಸ್ ನಮ್ಮೊಂದಿಗೆ ದಾಖಲೆಗಳನ್ನು ಅಥವಾ ಅವುಗಳ ಸಾಕ್ಷ್ಯವನ್ನು ಹಂಚಿಕೊಂಡಿಲ್ಲವಾದ್ದರಿಂದ, ಬಹಿರಂಗಪಡಿಸಿರುವ ಮಾಹಿತಿ ಮತ್ತು ಹಕ್ಕುಗಳ ಸತ್ಯಾಸತ್ಯತೆಯನ್ನು ದೃ ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಹೇಳಿಕೆಗಳು ತಪ್ಪು ಹಾಗೂ ಆಧಾರರಹಿತವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಅಮೆಜಾನ್ ಉದ್ಯೋಗಿಗಳು ತನ್ನದೇ ಬ್ರ್ಯಾಂಡ್‌ಗಳಿಗಾಗಿ ಇತರ ಕಂಪನಿಗಳ ಉತ್ಪನ್ನಗಳನ್ನು ನಕಲು ಮಾಡಿದ್ದಾರೆ ಎಂಬ ದಾಖಲೆಗಳಲ್ಲಿನ ಸಾಕ್ಷಿಗಳ ಬಗ್ಗೆ ರಾಯಿಟರ್ಸ್‌ನ ಪ್ರಶ್ನೆಗಳನ್ನು ಕೂಡ ಈ ಹೇಳಿಕೆಯು ಉಲ್ಲೇಖಿಸಿಲ್ಲ ಎಂಬುದು ಇಲ್ಲಿ ಗಮನಿಬೇಕಾದ ಅಂಶವಾಗಿದೆ.


  ಇದನ್ನು ಓದಿ:Vodafone Idea 219 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನೊಂದಿಗೆ ಹೆಚ್ಚುವರಿ ಡೇಟಾ ಆಫರ್: ಇಲ್ಲಿದೆ ಮಾಹಿತಿ

  ಅಮೆಜಾನ್ ಭಾರತದಲ್ಲಿ ತನ್ನ ಖಾಸಗಿ-ಬ್ರಾಂಡ್ ತಂತ್ರವನ್ನು 2016 ರಲ್ಲಿ ಪರಿಶೀಲಿಸುತ್ತಿದ್ದಂತೆ, ಅಮೆಜಾನ್ ಇಂಡಿಯಾ ಉದ್ಯೋಗಿಗಳು ದೀರ್ಘಕಾಲದ ಅಮೆಜಾನ್ ಮ್ಯಾನೇಜರ್ ಆಗಿದ್ದ ಗ್ರ್ಯಾಂಡಿನೆಟ್ಟಿ ಜೊತೆ ಸಭೆ ನಡೆಸಿದರು. ಈ ಸಮಯದಲ್ಲಿ ಅವರು ಕಂಪನಿಯ ಜನಪ್ರಿಯ ಸಾಧನವಾದ ಕಿಂಡಲ್‌ನ ಉಸ್ತುವಾರಿ ವಹಿಸಿದ್ದರು. ಆದರೆ ಅಮೆಜಾನ್ ತಾನು ಭಾರತ ಸೇರಿದಂತೆ ತನ್ನ ಅಂತಾರಾಷ್ಟ್ರೀಯ ಗ್ರಾಹಕ ವ್ಯಾಪಾರವನ್ನು ಶೀಘ್ರದಲ್ಲೇ ಮುನ್ನಡೆಸುವುದಾಗಿ ಘೋಷಿಸಿತ್ತು.


  "ಗ್ಲಾನ್ಸ್ ವ್ಯೂಸ್":


  1.3 ಬಿಲಿಯನ್ ಜನರು ಮತ್ತು ಬೆಳೆಯುತ್ತಿರುವ ಮಧ್ಯಮ ವರ್ಗದ ಜನಸಂಖ್ಯೆಯೊಂದಿಗೆ, ಭಾರತವು ಅಮೆಜಾನ್‌ಗೆ ಬೃಹತ್ ಮತ್ತು ಸಂಭಾವ್ಯ ಲಾಭದಾಯಕ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ಆದರೆ ಇದು ವಿದೇಶಿ ಇ-ಕಾಮರ್ಸ್ ಆಟಗಾರರು ಸಂಕೀರ್ಣ ಮತ್ತು ರಕ್ಷಣಾತ್ಮಕ ನಿಯಂತ್ರಕ ಆಡಳಿತವನ್ನು ಎದುರಿಸುತ್ತಿರುವ ದೇಶವಾಗಿದೆ. ಅಮೆಜಾನ್ ಮತ್ತು ಇತರ ವಿದೇಶಿ ಕಂಪನಿಗಳನ್ನು ತೃತೀಯ ಮಾರಾಟಗಾರರ ಆನ್‌ಲೈನ್ ಮಾರುಕಟ್ಟೆಯನ್ನು ನಿರ್ವಹಿಸಲು ನಿರ್ಬಂಧಿಸಲಾಗಿದೆ, ಯಾವುದೇ ಮಾರಾಟಗಾರರು ಪೈಪೋಟಿಯಲ್ಲಿ ಲಾಭ ಗಳಿಸಲು ಅವಕಾಶವಿಲ್ಲ ಹೀಗಾಗಿ, ಅಮೆಜಾನ್ ತನ್ನ ಹೆಚ್ಚಿನ ಖಾಸಗಿ ಬ್ರ್ಯಾಂಡ್‌ಗಳನ್ನು ಇತರ ಮಾರಾಟಗಾರರ ಮೂಲಕ ಮಾರಾಟ ಮಾಡುತ್ತದೆ.


  ತನ್ನ ಖಾಸಗಿ-ಬ್ರಾಂಡ್ ವ್ಯವಹಾರವನ್ನು ಆರಂಭಿಸುವಾಗ, ಅಮೆಜಾನ್ ತನ್ನ ಭಾರತೀಯ ವೆಬ್‌ಸೈಟನ್ನು ತನ್ನ ಸ್ವಂತ ಉತ್ಪನ್ನಗಳಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಲಾಭವನ್ನು ಪಡೆಯಲು ಹೇಗೆ ಬಳಸಿದೆ ಎಂಬುದನ್ನು ಆಂತರಿಕ ಡೇಟಾಗಳು ತೋರಿಸುತ್ತವೆ. ಅದರ ಸೊಲಿಮೊ ಬ್ರ್ಯಾಂಡ್ ಸೃಷ್ಟಿಯು ಒಂದು ಕೇಸ್ ಸ್ಟಡಿ ನೀಡುತ್ತದೆ. ಈ ಬ್ರ್ಯಾಂಡ್‌ನೊಂದಿಗೆ ಅಮೆಜಾನ್ ಸ್ಪರ್ಧಾತ್ಮಕ ಬ್ರಾಂಡ್‌ಗಳ ಗುಣಮಟ್ಟಕ್ಕೆ ಸಮನಾದ ಅಥವಾ ಮೀರಿದ ಆದರೆ 10% ರಿಂದ 15% ಅಗ್ಗದ ವಸ್ತುಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು 2016 ರ ಖಾಸಗಿ ಬ್ರಾಂಡ್‌ಗಳ ದಾಖಲೆ ತೋರಿಸುತ್ತದೆ. ಅಮೆಜಾನ್ ಉದ್ಯೋಗಿಗಳು ವಿಭಿನ್ನ ಉತ್ಪನ್ನ ವಿಭಾಗಗಳನ್ನು ಅಧ್ಯಯನ ಮಾಡಿದ್ದು Amazon.in ನಲ್ಲಿ ಆ ವಿಭಾಗಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದಕ್ಕೆ ಹೋಲಿಕೆ ಮಾಡಿದ್ದಾರೆ.


  ಈ ದಿಸೆಯಲ್ಲಿ ಅಮೆಜಾನ್ "ಗ್ಲಾನ್ಸ್ ವ್ಯೂಸ್" ಎಂಬ ಮಾಪನವನ್ನು ಬಳಸಿತು, ಇದರಿಂದ ತನ್ನ ವೆಬ್‌ಸೈಟ್‌ನಲ್ಲಿ ಯಾವ ಉತ್ಪನ್ನಗಳನ್ನು ಗ್ರಾಹಕರು ನೋಡುತ್ತಿದ್ದಾರೆ ಎಂಬುದನ್ನು ಪ್ರಮಾಣೀಕರಿಸುತ್ತದೆ. ಅಮೆಜಾನ್ ತನ್ನ ಖಾಸಗಿ-ಬ್ರ್ಯಾಂಡ್ ತಂಡಗಳು ಉತ್ಪನ್ನಗಳನ್ನು ಪ್ರಾರಂಭಿಸುವಲ್ಲಿ ಬಳಸುವ ಕೆಲವು ಡೇಟಾ ಸಾರ್ವಜನಿಕವಾಗಿದೆ ಎಂದು ಹೇಳಿದೆ.


  ಉತ್ಪನ್ನಗಳನ್ನು 'ಪುನರಾವರ್ತಿಸುವುದು' ಹೇಗೆ:


  ಅಮೆಜಾನ್‌ನ ಖಾಸಗಿ-ಬ್ರ್ಯಾಂಡ್ ಉದ್ಯೋಗಿಗಳು ಯಾವ ವರ್ಗಗಳನ್ನು ಪ್ರವೇಶಿಸಬೇಕೆಂದು ನಿರ್ಧರಿಸಿದ ನಂತರ, ಅವರು "ಉಲ್ಲೇಖ" ಅಥವಾ "ಬೆಂಚ್‌ಮಾರ್ಕ್" ಬ್ರ್ಯಾಂಡ್‌ಗಳನ್ನು "ಪುನರಾವರ್ತಿಸಲು" ಗುರುತಿಸಲು Amazon.in ನಲ್ಲಿ ಮಾರಾಟ ಮತ್ತು ಗ್ರಾಹಕ-ವಿಮರ್ಶೆ ಡೇಟಾವನ್ನು ಪರಿಶೀಲಿಸಿದರು ಎಂಬುದಾಗಿ 2016 ರ ಖಾಸಗಿ-ಬ್ರಾಂಡ್ ಡಾಕ್ಯುಮೆಂಟ್ ತೋರಿಸಿದೆ. ಸೊಲಿಮೊ ಪ್ರಕರಣದಲ್ಲಿ 2016 ರ ಮಾಹಿತಿ ತಿಳಿಸಿರುವಂತೆ ಬ್ರ್ಯಾಂಡ್‌ನ ಸರಕುಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು "ಗ್ರಾಹಕರ ಅವಶ್ಯಕತೆಗಳನ್ನು ಕಾರ್ಯಕ್ಷಮತೆಯ ದೃಷ್ಟಿಯಿಂದ ನಾವು ಈ ಉಲ್ಲೇಖಿತ ಉತ್ಪನ್ನಗಳನ್ನು ಗುರುತಿಸುತ್ತೇವೆ ಮತ್ತು ಪುನರಾವರ್ತಿಸುತ್ತೇವೆ." ಎಂದು ತಿಳಿಸಿದೆ. ಸೊಲಿಮೊ ಪ್ರಾಜೆಕ್ಟ್ ಕುರಿತು ಅಮೆಜಾನ್ ಹೇಳಿಕೆಗಳನ್ನು ನೀಡಲಿಲ್ಲ.


  ಅಮೆಜಾನ್ ಉದ್ದೇಶಿತ ಪ್ರತಿಸ್ಪರ್ಧಿ ಉತ್ಪನ್ನಗಳು ಕೂಡ ಭಾರತದಲ್ಲಿ ಜನಪ್ರಿಯವಾಗಿರುವ ಇತರ ಬ್ರ್ಯಾಂಡ್‌ಗಳನ್ನು ಒಳಗೊಂಡಿವೆ. ಪಾಟ್‌ಗಳು ಹಾಗೂ ಪ್ಯಾನ್‌ಗಳಿಗೆ ಉಲ್ಲೇಖಿತ ಬ್ರ್ಯಾಂಡ್ ಪ್ರೆಸ್ಟೀಜ್ ಆಗಿದೆ ಇದು ಭಾರತದ ಅತಿದೊಡ್ಡ ಅಡುಗೆ ಸಲಕರಣೆಗಳಿಗೆ ಒಂದು ಎಂಬ ಖ್ಯಾತಿ ಪಡೆದುಕೊಂಡಿದೆ. ಪುರುಷರ ಶರ್ಟ್‌ಗಳಿಗಾಗಿ ಪೀಟರ್ ಇಂಗ್ಲೆಂಡ್, ಲೂಯೀಸ್ ಫಿಲಿಪ್ಪಿ ಈ ಎರಡೂ ಬ್ರ್ಯಾಂಡ್‌ಗಳನ್ನು ಆದಿತ್ಯ ಬಿರ್ಲಾ ಸಮೂಹದಿಂದ ತಯಾರಿಸಲಾಗಿವೆ. ಭಾರತೀಯ ಸಮೂಹದ ಐಟಿಸಿ ಲಿಮಿಟೆಡ್ ಮಾಲೀಕತ್ವದ ಪುರುಷರ ಬ್ರ್ಯಾಂಡ್ ಜಾನ್ ಪ್ಲೇಯರ್ಸ್ ಅನ್ನು ಅಮೆಜಾನ್ ಗುರಿಯಾಗಿರಿಸಿಕೊಂಡಿದೆ.


  ಭಾರತದಲ್ಲಿ ಪ್ರೆಸ್ಟೀಜ್ ಬ್ರ್ಯಾಂಡ್ ಅನ್ನು ಹೊಂದಿರುವ TTK ಪ್ರೆಸ್ಟೀಜ್ ನ ವ್ಯವಸ್ಥಾಪಕ ನಿರ್ದೇಶಕ ಚಂದ್ರು ಕಲ್ರೊ ರಾಯಿಟರ್ಸ್‌ಗೆ ನೀಡಿರುವ ಹೇಳಿಕೆಯ ಪ್ರಕಾರ, "ಅಮೆಜಾನ್‌ಗೆ 'ರೆಫರೆನ್ಸ್ ಬ್ರಾಂಡ್' ಆಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಅಮೆಜಾನ್ ರೆಫರೆನ್ಸ್ ಬ್ರಾಂಡ್ ಎಂದರೇನು ಎಂದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.


  ನಕಲು ಮಾಡುವ ವ್ಯವಸ್ಥಿತ ಅಭಿಯಾನ:


  ಅಮೆಜಾನ್ ಉತ್ಪನ್ನ ವಿನ್ಯಾಸಗಳನ್ನು ನಕಲು ಮಾಡಿದೆ ಎಂದು ಅಮೆರಿಕದಲ್ಲಿ ಪದೇ ಪದೇ ಆರೋಪಿಸಲಾಗಿದೆ.


  2018 ರಲ್ಲಿ, ಹೋಮ್-ಗೂಡ್ಸ್ ರಿಟೇಲರ್ ವಿಲಿಯಮ್ಸ್-ಸೊನೊಮಾ ಇಂಕ್ ಅಮೆಜಾನ್ ವಿರುದ್ಧ ಫೆಡರಲ್ ಮೊಕದ್ದಮೆ ಹೂಡಿತು, ಇ-ಕಾಮರ್ಸ್ ತಾಣವು ಕಂಪನಿಯ ಸ್ವಾಮ್ಯದ ವಿನ್ಯಾಸಗಳನ್ನು ಕುರ್ಚಿಗಳು, ದೀಪಗಳು ಮತ್ತು ಅಮೆಜಾನ್ ಖಾಸಗಿ ಬ್ರ್ಯಾಂಡ್‌ಗಾಗಿ ನಕಲು ಮಾಡಿದೆ ಎಂದು ಆರೋಪಿಸಿತು.


  ಆನ್‌ಲೈನ್ ಮಾರಾಟಗಾರರ ಯಶಸ್ಸಿಗೆ ಗ್ರಾಹಕರು ಅಮೆಜಾನ್ ವೆಬ್‌ಸೈಟ್ ಅನ್ನು ಹುಡುಕಿದಾಗ ಹೆಚ್ಚಿನ ಉತ್ಪನ್ನಗಳು ಹೇಗೆ ಶ್ರೇಣಿಯಲ್ಲಿರುತ್ತವೆ. 2017 ರಲ್ಲಿ ಆಂತರಿಕ ಡಾಕ್ಯುಮೆಂಟ್ ವರದಿ ನೀಡಿರುವ ಪ್ರಕಾರ, ಹುಡುಕಾಟ ಫಲಿತಾಂಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬಳಕೆದಾರರ ಕ್ಲಿಕ್‌ಗಳು ಅಗ್ರ ಎಂಟರಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳಿಗಾಗಿ ಎಂದು ಗಮನಿಸಿದೆ.


  ಜುಲೈ ಆರಂಭದಲ್ಲಿ, ಅಮೆಜಾನ್ ಭಾರತಕ್ಕೆ ಈಗಾಗಲೇ ಬೇರೆಡೆ ವ್ಯಾಪಾರಗಳನ್ನು ನೀಡುವ ಕಾರ್ಯಕ್ರಮವನ್ನು ಪರಿಚಯಿಸುವುದಾಗಿ ಘೋಷಿಸಿತು. ಇದನ್ನು ಇಂಟಲ್ಯಾಕ್ಚುವಲ್ ಪ್ರಾಪರ್ಟಿ ಅಕ್ಲರೇಟರ್ (Intellectual Property Accelerator) ಎಂದು ಕರೆದಿದೆ. ಇದು Amazon.in ನಲ್ಲಿ ಕೆಲವು ಮಾರಾಟಗಾರರಿಗೆ ಬೌದ್ಧಿಕ-ಆಸ್ತಿ ತಜ್ಞರು ಮತ್ತು ಕಾನೂನು ಸಂಸ್ಥೆಗಳು ಒದಗಿಸಿದ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಮಾರಾಟಗಾರರಿಗೆ ತಮ್ಮ ಬ್ರ್ಯಾಂಡ್‌ಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವುದು ಎಂದು ಅಮೆಜಾನ್ ಹೇಳಿದೆ.


  First published: