HOME » NEWS » Tech » ONEPLUS WATCH RELEASING ON MARCH 23 ONE PLUS SMART WATCH FIRST LOOK IS HERE STG SCT

OnePlus Watch: ನಾಳೆ ಬಿಡುಗಡೆಯಾಗಲಿದೆ ಒನ್‌ಪ್ಲಸ್ ಸ್ಮಾರ್ಟ್ ವಾಚ್; ಇದರ ವೈಶಿಷ್ಟ್ಯಗಳೇನು?

OnePlus Smart Watch | ಬಿಡುಗಡೆಗೆ ಸಜ್ಜಾಗಿರುವ ಒನ್‌ಪ್ಲಸ್ ಸ್ಮಾರ್ಟ್‌ ವಾಚ್‌ನಲ್ಲಿ ವಿನ್ಯಾಸದ ದೃಷ್ಟಿಯಿಂದ ಒಪ್ಪೊ ವಾಚ್ ಆರ್‌ಎಕ್ಸ್‌ ಅನ್ನು ಹೋಲುತ್ತದೆ. ಒನ್‌ಪ್ಲಸ್ ವಾಚ್, RTOS ಆಧಾರಿತ ಸ್ಮಾರ್ಟ್ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುತ್ತದೆ.

news18-kannada
Updated:March 22, 2021, 2:14 PM IST
OnePlus Watch: ನಾಳೆ ಬಿಡುಗಡೆಯಾಗಲಿದೆ ಒನ್‌ಪ್ಲಸ್ ಸ್ಮಾರ್ಟ್ ವಾಚ್; ಇದರ ವೈಶಿಷ್ಟ್ಯಗಳೇನು?
ಒನ್​ಪ್ಲಸ್ ವಾಚ್
  • Share this:
ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ ಒನ್‌ಪ್ಲಸ್ ಮೊಬೈಲ್ ತಯಾರಿಕಾ ಕಂಪನಿಯು, ಈಗ ಸ್ಮಾರ್ಟ್ ವಾಚ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಕಂಪನಿಯು ಫಿಟ್​ನೆಸ್ ಬ್ಯಾಂಡ್ ಬಿಡುಗಡೆ ಮಾಡಿತ್ತು. ಈಗ ಸ್ಮಾರ್ಟ್ ವಾಚ್ ಮೂಲಕ ತನ್ನ ಜಾಲವನ್ನು ವಿಸ್ತರಿಸುತ್ತಿದೆ.

ಮಂಗಳವಾರ ಉದ್ಘಾಟನೆಗೆ ಸಜ್ಜಾಗಿರುವ ಒನ್‌ಪ್ಲಸ್ ವಾಚ್, RTOS ಆಧಾರಿತ ಸ್ಮಾರ್ಟ್ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್ ವಾಚ್ ಉದ್ಘಾಟನೆಗೂ ಮುಂಚೆ ಪ್ರತಿದಿನವೂ ಒಂದಲ್ಲ ಒಂದು ಹೊಸ ವಿಷಯವನ್ನು ನೀಡುತ್ತಿದೆ. ಈಗ ಖ್ಯಾತ ಯೂಟ್ಯೂಬರ್ ಅನ್ "ಬಾಕ್ಸ್ ಥೆರಪಿ" ಖಾತೆಯಿಂದ ಒನ್‌ಪ್ಲಸ್ ವಾಚ್‌ನ ನಿರೂಪಣೆ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ. "#OnePlusWatch ನಲ್ಲಿ ಒನ್‌ಪ್ಲಸ್ ವಾಚ್‌ನ ಎಕ್ಸ್‌ಕ್ಲೂಸಿವ್ ನೋಟ ಇಲ್ಲಿದೆ" ಎಂದು ಯೂಟ್ಯೂಬರ್ ಹೇಳಿದ್ದಾನೆ.

ಬಿಡುಗಡೆಗೆ ಸಜ್ಜಾಗಿರುವ ಒನ್‌ಪ್ಲಸ್ ಸ್ಮಾರ್ಟ್‌ ವಾಚ್‌ನಲ್ಲಿ ವಿನ್ಯಾಸದ ದೃಷ್ಟಿಯಿಂದ ಒಪ್ಪೊ ವಾಚ್ ಆರ್‌ಎಕ್ಸ್‌ ಅನ್ನು ಹೋಲುತ್ತದೆ. ಸೋರಿಕೆಯಾದ ಚಿತ್ರದಲ್ಲಿನ ಸ್ಮಾರ್ಟ್ ವಾಚ್ ಕಂಪನಿಯು ಚಿತ್ರಗಳು ಮತ್ತು ವಿಡಿಯೋ ತುಣುಕುಗಳ ಮೂಲಕ ಹಂಚಿಕೊಳ್ಳುತ್ತಿರುವ ಒಂದಕ್ಕೊಂದು ಒಂದು ಹೋಲಿಕೆಯನ್ನು ಹೊಂದಿವೆ.

ಇದನ್ನೂ ಓದಿ: Twitter: ಟ್ವೀಟ್​ನಲ್ಲಿ ಹೊಸ ಫೀಚರ್ ಪರಿಚಯಿಸಲಿದೆ ಟ್ವಿಟ್ಟರ್‌; ಏನದು ಗೊತ್ತಾ?

ಅನ್ ಬಾಕ್ಸ್ ಥೆರಪಿ ಹಂಚಿಕೊಂಡ ಚಿತ್ರದಂತೆ ಸ್ಮಾರ್ಟ್ ವಾಚ್ ನ ಮಾದರಿಯು ವೃತ್ತಾಕಾರದ ವಿನ್ಯಾಸವನ್ನು ಹೊಂದಿದೆ. ವಾಚ್ ನ ಬಲಭಾಗದಲ್ಲಿ ಎರಡು ಬಟನ್ ಗಳಿದ್ದು, ಅವುಗಳಲ್ಲಿ ಒಂದು ಒನ್‌ಪ್ಲಸ್ ಬ್ರ್ಯಾಂಡಿಂಗ್ ಅನ್ನು ಒಳಗೊಂಡಿದೆ. ನಿರೂಪಣೆಯಲ್ಲಿನ ಒನ್‌ಪ್ಲಸ್ ವಾಚ್‌ನ ಒಟ್ಟಾರೆ ವಿನ್ಯಾಸವು ಒಪ್ಪೋ ವಾಚ್ ಆರ್‌ಎಕ್ಸ್‌ಗೆ ಹೋಲುತ್ತದೆ. ಇದು ಒನ್‌ಪ್ಲಸ್ ಮತ್ತು ಒಪ್ಪೊ ಎರಡೂ ಒಂದೇ ಕಂಪನಿಯಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಒಡೆತನದಲ್ಲಿದೆ.

ಅಲ್ಲದೆ, ವಾ‍ಚ್ ನ ವಿನ್ಯಾಸವು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 2 ಅನ್ನು ಹೋಲುತ್ತದೆ. ಇದು ವೃತ್ತಾಕಾರದ ಡಯಲ್‌ನೊಂದಿಗೆ ಬರುತ್ತದೆ. ಆದರೂ, ಇಲ್ಲಿಯವರೆಗೆ ಬಿಡುಗಡೆಯಾದ ಒಂದೇ ಚಿತ್ರದಿಂದ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಬೇಕಾಗಿದೆ. ಅನ್ ಬಾಕ್ಸ್ ಥೆರಪಿ ಹಂಚಿಕೊಂಡ ಚಿತ್ರವನ್ನು ನಂತರ ಒನ್‌ಪ್ಲಸ್ ಮರು-ಟ್ವೀಟ್ ಮಾಡಿ, “ಮಾರ್ಚ್ 23ರಂದು ಇನಷ್ಟು ಮಾಹಿತಿ ಹಂಚಿಕೊಳ್ಳಲಿದ್ದೇವೆ” ಎಂದು ಹೇಳಿದೆ.
Youtube Video
ಒನ್‌ಪ್ಲಸ್ ವಾಚ್ ಬಗ್ಗೆ ಅಧಿಕೃತ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲವಾದರೂ, ಸ್ಮಾರ್ಟ್ ವಾಚ್ 46 ಎಂಎಂ ಡಯಲ್ ಗಾತ್ರದೊಂದಿಗೆ ಬರಲಿದೆ ಎಂದು ವರದಿಯಾಗಿದೆ ಮತ್ತು ಇದು ಕಪ್ಪು ಮತ್ತು ಸಿಲ್ವರ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಸ್ಮಾರ್ಟ್ ವಾಚ್ ಹೃದಯ ಬಡಿತ ಸಂವೇದಕ, ಎಸ್‌ಪಿಒ 2 ಸಂವೇದಕ, ಐಪಿ 68 ಧೂಳು ಮತ್ತು ನೀರಿನ ಪ್ರತಿರೋಧ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ ಎಂದು ವರದಿಯಾಗಿದೆ. ಸ್ಮಾರ್ಟ್ ವಾಚ್ ಫಿಟ್ನೆಸ್-ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಎಂದು ವರದಿಯಾಗಿದೆ. ಸ್ವಿಮ್ಮಿಂಗ್ ಮೋಡ್, 4 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಮತ್ತು ಒನ್‌ಪ್ಲಸ್ ವಾರ್ಪ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.
Published by: Sushma Chakre
First published: March 22, 2021, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories