ಒನ್​ಪ್ಲಸ್​ ಗ್ರಾಹಕರೇ ಗಮನಿಸಿ! ಈ ಅಪ್​ಡೇಟ್​ ಡೌನ್​ಲೋಡ್​ ಮಾಡಿ ಕಷ್ಟ ಪಡಬೇಡಿ


Updated:June 26, 2018, 11:14 AM IST
ಒನ್​ಪ್ಲಸ್​ ಗ್ರಾಹಕರೇ ಗಮನಿಸಿ! ಈ ಅಪ್​ಡೇಟ್​ ಡೌನ್​ಲೋಡ್​ ಮಾಡಿ ಕಷ್ಟ ಪಡಬೇಡಿ

Updated: June 26, 2018, 11:14 AM IST
ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಅತ್ಯಂತ ಸಕ್ಸಸ್​ಫುಲ್​ ಮೊಬೈಲ್​ ಮಾರಾಟ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಒನ್​ಪ್ಲಸ್​ ಮೊಬೈಲ್​ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಪ್​ಡೇಟ್​ನಿಂದ ಮೊಬೈಲ್​ ಬಳಕೇದಾರರು ಪರದಾಡುವಂತಾಗಿದೆ.

ಮೊಬೈಲ್​ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಭಿವೃದ್ಧಿ ಪಡಿಸಿದ ಹೊಸ ಅಪ್​ಡೇಟ್​ನ್ನು ಒನ್​ಪ್ಲಸ್ ಬಿಡುಗಡೆಗೊಳಿಸಿತ್ತು. ಇದಾದ ಕೆಲವೇ ಕ್ಷಣದಲ್ಲಿ ಬ್ಯಾಟರಿ ಸೇರಿ ಇತರೇ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ಗ್ರಾಹಕರ ದೂರು ನೀಡತೊಡಗಿದ್ದಾರೆ.

ಒನ್​ಪ್ಲಸ್​ 6 ಗ್ರಾಹಕರು ಬ್ಯಾಟರಿ ತೊಂದರೆಯನ್ನು ಅನುಭವಿಸಿದರೆ ಮತ್ತೆ ಕೆಲವರು ಡಿಸ್​ಪ್ಲೇ ಸಂಬಂಧಿಸಿದ ತೊಂದರೆಯನ್ನು ಅನುಭವಿಸಿದ್ದಾರೆ. OxygenOS 5.1.6 and 5.1.8 ಅಪ್​ಡೇಟ್​ನ್ನು ಒನ್​ಪ್ಲಸ್​ ಬಿಡುಗಡೆಗೊಳಸಿತ್ತು. ಇದರಲ್ಲಿ ಮೊಬೈಲ್​ ಪರದೇ ಮೇಲೆ ಇರುವ ಗಡಿಯಾರವನ್ನು ಅರ್ಧ ಪರದೆಗೆ ಸೀಮಿತಗೊಳಿಸುವ ಬದಲಾವಣೆ ತರಲಾಗಿತ್ತು. ಉಳಿದಂತೆ ಯಾವುದೇ ಬದಲಾವಣೆಯನ್ನು ಒನ್​ಪ್ಲಸ್​ ಮಾಡಿಲ್ಲ.

ಆದರೂ ಈ ಅಪ್​ಡೇಟ್​ನ್ನು ಇನ್ಸ್ಟಾಲ್​ ಮಾಡಿಕೊಂಡ ಬಳಿಕ ಕೆಲ ಗ್ರಾಹಕರ ಬ್ಯಾಟರಿ ಶೇ.50ರಷ್ಟಿದ್ದರೂ ಸ್ವಿಚ್​ ಆಫ್​ ಆಗ ತೊಡಗಿದೆ, ಒಂದು ವೇಳೆ ಚಾರ್ಜ್​ಗೆ ಇಟ್ಟರೆ ಮೊಬೈಲ್​ ಎಂದಿನಂತೆ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ.

ಇನ್ನೂ ಕೆಲವರು ಮೊಬೈಲ್​ ಕ್ಯಾಮೆರಾದಲ್ಲೂ ತೊಂದರೆಯನ್ನು ಅನುಭವಿಸುವಂತಾಗಿದೆ, ಒನ್​ಪ್ಲಸ್​ ಪ್ಲಾಟ್​ಫಾರ್ಮ್​ನಲ್ಲಿರುವ ದೂರಿನ ಪ್ರಕಾರ ಈ ಅಪ್​ಡೇಟ್​ ಬಳಿಕ ಕೆಲ ಗ್ರಾಹಕರ ಕ್ಯಾಮೆರಾ ಕೆಲಕಾಲ ಸ್ಥಗಿತಗೊಳ್ಳುತ್ತದೆ.

ಒನ್​ಪ್ಲಸ್​ 3 ಮತ್ತು 3T ಮೊಬೈಲ್​ ಗ್ರಾಹಕರು ಬ್ಯಾಟರಿ ಡ್ರೈ ಆಗುತ್ತದೆ ಎಂದು ದೂರು ನೀಡಿದ್ದಾರೆ, ಕೆಲವರ ಮೊಬೈಲ್​ ಬ್ಯಾಟರಿ ಶೇ.15ರಷ್ಟಿದ್ದರೂ ಒಂದೇ ಕ್ಷಣದಲ್ಲಿ ಸ್ವಿಚ್​ ಆಫ್​ ಆಗುತ್ತದೆ. ಕೆಲ ತಜ್ಞರ ಪ್ರಕಾರ ಸ್ಕ್ರೀನ್​ ಅಪ್​ಡೇಟ್​ನಲ್ಲಿರವ ದೋಷಗಳೇ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳುತ್ತಿದೆ
ಎಂದು ಹೇಳುತ್ತಿದ್ದಾರೆ.
Loading...

ಅದೇನೆ ಇರಲಿ ಕಂಪನಿ ಮಾತ್ರಾ ಈ ಕುರಿತು ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...