ಕಾಲೇಜು ವಿದ್ಯಾರ್ಥಿಗಳಿಗಾಗಿ ‘Education benefit’ ಒದಗಿಸಿದ ಒನ್​ಪ್ಲಸ್​​​​ ಸಂಸ್ಥೆ; ಸ್ಮಾರ್ಟ್​ಫೋನ್​ ಖರೀದಿ ವೇಳೆ ಸಿಗಲಿದೆ ಆಕರ್ಷಕ ಆಫರ್​

OnePlus Education Benefits: ಸುಮಾರು 760 ವಿಶ್ವವಿದ್ಯಾಲಯ ಮತ್ತು 38,498 ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಆಫರ್​ ನೀಡಿದ್ದು, ಗ್ರಾಹಕರಿಗಾಗಿ ಸ್ಮಾರ್ಟ್​ಫೋನ್​ ಮತ್ತು ಸ್ಮಾರ್ಟ್​ಟಿವಿ ಮೇಲೆ 1 ಸಾವಿರ ಡಿಸ್ಕೌಂಟ್​ ನೀಡಿದೆ.

ಒನ್​ಪ್ಲಸ್​​​​

ಒನ್​ಪ್ಲಸ್​​​​

 • Share this:
  ಒನ್​​ಪ್ಲಸ್​ ಸ್ಮಾರ್ಟ್​ಫೋನ್​ ಸಂಸ್ಥೆ ಇದೀಗ ಎಜುಕೇಶನ್​ ಬೆನಿಫಿಟ್ ನೀಡಲು ಮುಂದಾಗಿದ್ದು, ಅದರ ಮೂಲಕ ಸ್ಮಾರ್ಟ್​ಫೋನ್​ಗಳ ಮೇಲೆ ಎಕ್ಸಿಕ್ಲೂಸಿವ್​ ಡಿಸ್ಕೌಂಟ್​ ನೀಡುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಫ್ಯಾಕಲ್ಟಿ ಸದಸ್ಯರಿಗೆ ಈ ಡಿಸ್ಕೌಂಟ್​ ಅನ್ನು ಒದಗಿಸುತ್ತಿದೆ.

  ಒನ್​ಪ್ಲಸ್​ ನವೆಂಬರ್​ 17ರಂದು ಈ ಆಫರ್​ ಅನ್ನು ಘೋಷಿಸಿದೆ. ಕೊರೋನಾ ಕಾಲಘಟ್ಟದಲ್ಲಿ ಸ್ಮಾರ್ಟ್​ಫೋನ್​ಗಳ ಬೇಡಿಕೆ ಹೆಚ್ಚಾಗಿದೆ. ಅನೇಕರು ಆನ್​ಲೈನ್​ ತರಗತಿ ಆಲಿಸಲು ಸ್ಮಾರ್ಟ್​ಫೋನ್​ ಖರೀದಿಸಿದ್ದಾರೆ. ಇದೀಗ ಒನ್​ಪ್ಲಸ್​​ ಸಂಸ್ಥೆ ಕೂಡ ಕಾಲೇಜು ವಿದ್ಯಾರ್ಥಿಗಳಿಗೆ ಎಜುಕೇಶನ್​ ಬೆನಿಫಿಟ್​ ಒದಗಿಸುವ ಮೂಲಕ ಕಡಿಮೆ ಬೆಲೆ ಸ್ಮಾರ್ಟ್​ಫೋನ್​ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

  ಸುಮಾರು 760 ವಿಶ್ವವಿದ್ಯಾಲಯ ಮತ್ತು 38,498 ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಆಫರ್​ ನೀಡಿದ್ದು, ಗ್ರಾಹಕರಿಗಾಗಿ ಸ್ಮಾರ್ಟ್​ಫೋನ್​ ಮತ್ತು ಸ್ಮಾರ್ಟ್​ಟಿವಿ ಮೇಲೆ 1 ಸಾವಿರ ಡಿಸ್ಕೌಂಟ್​ ನೀಡಿದೆ.

  ಇನ್ನು ಒನ್​ಪ್ಲಸ್​ ಬುಡ್ಸ್​ ಝೆಡ್​ ಮೇಲೆ ಶೇ 5ರಷ್ಟು ಡಿಸ್ಕೌಂಟ್​ ನೀಡಿದೆ. ಅದರ ಜೊತೆಗೆ ಸ್ಟೂಡೆಂಟ್​ ಮತ್ತು ಟೀಚರ್​ಗೆ ಆಕರ್ಷಕ ವಾಚರ್​ ನೀಡಲಿದೆ.

  ಒನ್​ಪ್ಲಸ್​​​​​ 8, ಒನ್​ಪ್ಲಸ್ 8 ಪ್ರೊ ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಒನ್​ಪ್ಲಸ್ 8ಟಿ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿದೆ. ಒನ್​ಪ್ಲಸ್ 8 ಬೆಲೆ 41,999 ರೂ.ಆಗಿದೆ. ಪ್ರೊ ಮಾಡೆಲ್​ ಬೆಲೆ 54,999 ರೂ. ಇರಲಿದೆ. ಒನ್​ಪ್ಲಸ್ 8ಟಿ 42,999 ರೂ.ಗೆ ಮಾರಾಟ ಮಾಡುತ್ತಿದೆ.

  ಒನ್​ಪ್ಲಸ್ ಬುಡ್ಸ್​ ಝೆಡ್​ ಇಯರ್​ಫೋನ್​ ಅನ್ನು 2,999 ರೂ.ಗೆ ಮಾರಾಟ ಮಾಡುತ್ತಿದೆ. ಇನ್ನು ಸ್ಮಾರ್ಟ್​ಫೋನ್​ ಕೇಸ್​ಮೇಲೆ ಶೇ.5ರಷ್ಟು ಆಫರ್​ ನೀಡುತ್ತಿದೆ.

  Published by:Harshith AS
  First published: