HOME » NEWS » Tech » ONEPLUS TV 40Y1 INDIA LAUNCH SET FOR MAY 24 HG 2

ಇಂದು OnePlus TV 40Y1 ಮಾರುಕಟ್ಟೆಗೆ; ಬೆಲೆ ಎಷ್ಟು ಗೊತ್ತಾ?

ಒನ್​ಪ್ಲಸ್​ 32Y1  ಮತ್ತು ಟಿವಿ 43Y1 ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತಿದೆ. ಆದರೆ ನೂತನ ಒನ್​ಪ್ಲಸ್​ 40Y1 ಟಿವಿ ಎರಡು ಮಾದರಿಗಿಂತ ಕೊಂಚ ಭಿನ್ನವಾಗಿದೆ. ಮಾತ್ರವಲ್ಲದೆ ಅದಕ್ಕಿಂತ ಅಗ್ಗದ ಬೆಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

news18-kannada
Updated:May 24, 2021, 10:03 AM IST
ಇಂದು OnePlus TV 40Y1 ಮಾರುಕಟ್ಟೆಗೆ; ಬೆಲೆ ಎಷ್ಟು ಗೊತ್ತಾ?
OnePlus TV 40Y1
  • Share this:
ಒನ್​ಪ್ಲಸ್​ ನೂತನ  ಟಿವಿಯೊಂದನ್ನು ಸಿದ್ಧಪಡಿಸಿದ್ದು, ಮುಂದಿನ ವಾರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಈ ಮೊದಲು ಹೇಳಿಕೊಂಡಿತ್ತು. ಅದರಂತೆ ಇಂದು ಒನ್​ಪ್ಲಸ್​ 40Y1  ಹೆಸರಿನ ಟಿವಿಯನ್ನು ಪರಿಚಯಿಸುತ್ತಿದೆ. 40 ಇಂಚಿನ ಟಿವಿ ಇದಾಗಿದೆ.

ಒನ್​ಪ್ಲಸ್​ 32Y1  ಮತ್ತು ಟಿವಿ 43Y1 ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತಿದೆ. ಆದರೆ ನೂತನ ಒನ್​ಪ್ಲಸ್​ 40Y1 ಟಿವಿ ಎರಡು ಮಾದರಿಗಿಂತ ಕೊಂಚ ಭಿನ್ನವಾಗಿದೆ. ಮಾತ್ರವಲ್ಲದೆ ಅದಕ್ಕಿಂತ ಅಗ್ಗದ ಬೆಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಒನ್​ಪ್ಲಸ್ ಕಂಪನಿ ಈ ಮೊದಲೇ​  40Y1 ಟಿವಿ ಮೇ 24ರಂದು ಮಾರುಕಟ್ಟೆಗೆ ಬರಲಿದೆ ಎಂದು ಟ್ವೀಟ್​ ಮಾಡಿತ್ತು. ನೂತನ ಟಿಬಿಯನ್ನು ಇಂದು 12 ಗಂಟೆಗೆ ಸರಿಯಾಗಿ ಒನ್​ಪ್ಲಸ್​. ಇನ್​ ಸೈಟಿನಲ್ಲಿ ಮಾರಾಟ ಮಾಡುತ್ತಿದೆ. ಅಂತೆಯೇ ಒನ್​ಪ್ಲಸ್​ 32Y1 ಟಿವಿ ಬೆಲೆ 15,999 ರೂ ಆಗಿದ್ದು, 43 ಇಂಚಿನ ಮಾಡೆಲ್ ಬೆಲೆ 26,999 ರೂ ಆಗಿದೆ. ಒನ್​ಪ್ಲಸ್​  40Y1 ಟಿವಿ ಬೆಲೆ ಇವೆರಡಕ್ಕಿಂತ  ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಒನ್​ಪ್ಲಸ್​ ಟಿವಿ 40Y1 ವಿಶೇಷತೆಗಳು:

ನೂತನ ಟಿವಿ 64 -ಬಿಟ್​ ಪ್ರೊಸೆಸರ್​ ಮತ್ತು ಆ್ಯಂಡ್ರಾಯ್ಡ್​​ ಟಿವಿ 9 ಬೇಸ್ಡ್​​ ಆಕ್ಸಿಜನ್​ಪ್ಲೇ ಬೆಂಬಲ ಪಡೆದಿದೆ.  40 ಇಂಚಿನ ಟಿವಿ ಫುಲ್​ ಡಿಸ್​ಪ್ಲೇ ಇದಾಗಿದ್ದು,  93 ಡಿಸಿಐ 93 ಕಲರ್​ ಗ್ರಾಮಟ್​ ಮತ್ತು ಗಮ್ಮಾ ಇಂಜಿನ್​ ಪಿಕ್ಚರ್​ ಎನ್​ಹೆನ್ಸ್​ ಫೀಚರ್​ ಹೊಂದಿದೆ. ಬೆಜೆಲ್​-ಲೆಸ್​ ಡಿಸೈನ್​ ಮತ್ತು ಇಂಟಿಗ್ರೇಟ್​​ ಫೀಚರ್​ ಇದರಲ್ಲಿದೆ.

ಒನ್​ಪ್ಲಸ್​ ಟಿವಿ 40Y1 ಕ್ರೋಮ್​ಕಾಸ್ಟ್​​, ಅಲೆಕ್ಸಾ, ಗೂಗಲ್​ ಅಸಿಸ್ಟೆಂಟ್​​ಗೂಗಲ್​ ಪ್ಲೇ ಸ್ಟೋರ್​ ಬಳಸಬಹುದಾದ ಆಯ್ಕೆ ಇದರಲ್ಲಿದೆ. ಅದರ ಜೊತೆಗೆ ನೆಟ್​ಫ್ಲಿಕ್ಸ್​, ಪ್ರೈಮ್​ ವಿಡಿಯೋ, ಯ್ಯೂಟೂಬ್​ ವೀಕ್ಷಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಆಟೋಮ್ಯಾಟಿಕ್​ ರೀಮೆಂಡರ್​ ಹೊಸ ಟಿವಿ ಶೋ, ಸಿನಿಮಾ ವೀಕ್ಷಿಸಬಹುದಾಗಿದೆ.

ಒನ್​ಪ್ಲಸ್​ ಪರಿಚಯಿಸುತ್ತಿರುವ ನೂತನ ಟಿವಿಯಲ್ಲಿ ವೈ-ಫೈ 802.11 ಬಿ/ಜಿ/ಎನ್​ ಸೌಲಭ್ಯ. ಬ್ಲೂಟೂತ್​ ವಿ5, 20 ವ್ಯಾಟ್​ ಸ್ಪೀಕರ್,​ ಡಾಲ್ಬಿ ಆಡಿಯೋ ಸಪೋರ್ಟ್​​ ಹೊಂದಿದೆ. ಇಂಟರ್​ನೆಟ್​ ಪೋರ್ಟ್​​, ಆರ್​ಎಫ್​ ಕನೆಕ್ಷನ್​ ಇನ್​ಪುಟ್​, ಎರಡು ಹೆಚ್​ಡಿಎಂಐ ಪೋರ್ಟ್​​, ಒಂದು ಎವಿ ಇನ್​, ಡಿಜಿಟಲ್​ ಆಡಿಯೋ ಔಟ್​ಪುಟ್, ಎರಡು ಯುಎಸ್​ಬಿ ಪೋರ್ಟ್​ ನೀಡಿದೆ.
Published by: Harshith AS
First published: May 24, 2021, 10:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories