ಚೀನಾದ (China) ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿಯಾಗಿರುವ (Smartphone Company) ಒನ್ಪ್ಲಸ್ (Oneplus) ಭಾರತದ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಒನ್ಪ್ಲಸ್ ಬಿಡುಗಡೆ ಮಾಡಿರುವಂತಹ ಸಾಧನಗಳು ಎಲ್ಲ ಪ್ರೀಮಿಯಂ ಸಾಧನಗಳಾಗಿದೆ. ಒನ್ಪ್ಲಸ್ ಕಂಪನಿ ಇದುವರೆಗೆ ತನ್ನ ಸೀರಿಸ್ನಲ್ಲಿ ಬಹಳಷ್ಟು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ಮುಂದಿನ ವರ್ಷ ಈ ಕಂಪನಿ ಎರಡು 5ಜಿ ಪ್ರೀಮಿಯಂ ಮೊಬೈಲ್ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಮೊಬೈಲ್ಗಳ ಫೀಚರ್ಸ್ಗಳು (Mobile Features) ಇದೀಗ ಕೆಲವೊಂದು ವರದಿಗಳಲ್ಲಿ ಸೋರಿಕೆಯಾಗಿವೆ. 2023ರಲ್ಲಿ ಒನ್ಪ್ಲಸ್ನಿಂದ ಒನ್ಪ್ಲಸ್ 11 5ಜಿ ಮತ್ತು ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ. ಫೆಬ್ರವರಿ 7, 2023 ರಲ್ಲಿ ಒನ್ಪ್ಲಸ್ 11 ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ಒನ್ಪ್ಲಸ್ ತನ್ನ ಬ್ರಾಂಡ್ನ ಅಡಿಯಲ್ಲಿ ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದೆ ಎಂದು ಸುದ್ದಿ ಸೋರಿಕೆಯಾಗಿದೆ. ಮುಂದಿನ ವರ್ಷ ಫೆಬ್ರವರಿ 7 ರಂದು ಒನ್ಪ್ಲಸ್ 11 ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ಆದರೆ ಮುಂಬರುವ ಸ್ಮಾರ್ಟ್ಫೋನ್ ಫೀಚರ್ಸ್ ಬಗ್ಗೆ ಸೋರಿಕೆಯಾಗಿದ್ದು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಟಿಪ್ಸ್ಟರ್ ಯೋಗೇಶ್ ಬ್ರಾರ್ ವರದಿಯ ಪ್ರಕಾರ
ಯೋಗೇಶ್ ಬ್ರಾರ್ ಅವರು ಮುಂಬರುವ ಒನ್ಪ್ಲಸ್ 11 ಸ್ಮಾರ್ಟ್ಫೋನ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೆ ಮುಂದಿನ ವರ್ಷ ಬಿಡುಗಡೆಯಾಗಲಿರುವ ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ನ ಅಂದಾಜು ಬೆಲೆ ಮತ್ತು ವಿವರಗಳನ್ನು ವರದಿ ಮಾಡಿದ್ದಾರೆ.
ಇದನ್ನೂ ಓದಿ: ಜನವರಿಯಿಂದ ಈ ನಿಯಮಗಳನ್ನು ಪಾಲಿಸದಿದ್ರೆ ಕಠಿಣ ಕ್ರಮ! ಸರ್ಕಾರದಿಂದ ಹೊಸ ರೂಲ್ಸ್
ಈ ಎರಡು 5G ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಕಳೆದ ತಿಂಗಳಿನಿಂದ ಭಾರತದಲ್ಲಿ ಪರೀಕ್ಷಿಸಲಾಗುತ್ತಿದೆ ಎಂದು ಬ್ರಾರ್ ಹೇಳಿದರು. ಈ ಎರಡೂ ಮೊಬೈಲ್ಗಳು ಬೇರೆ ಬೇರೆ ಫೀಚರ್ಸ್ಗಳನ್ನು ಹೊಂದಿಕೊಂಡು ಕ್ವಾಲಿಟಿ ಕ್ಯಾಮೆರಾಗಳೊಂದಿಗೆ ಬಹುತೇಕ ಒಂದೇ ವಿನ್ಯಾಸದಲ್ಲಿ ಬರಲಿದೆ. ಇನ್ನು ಈ ಎರಡರಲ್ಲಿ, ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ ಕಡಿಮೆ ಬೆಲೆಗೆ ಬರಬಹುದು ಎಂದು ಊಹೆ ಮಾಡಿದ್ದಾರೆ.
ಒನ್ಪ್ಲಸ್ 11 ಫೀಚರ್ಸ್
ಒನ್ಪ್ಲಸ್ 11 ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ QHD+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಮುಂಭಾಗದ ಕ್ಯಾಮರಾವು 32 ಮೆಗಾಪಿಕ್ಸೆಲ್ನೊಂದಿಗೆ ಬರಲಿದೆ . ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಬಹುದು. ಇದು 50ಎಮ್ಪಿ ಸೋನಿ IMX890 ಮುಖ್ಯ ಕ್ಯಾಮೆರಾ, 48ಎಮ್ಪಿ ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು 32ಎಮ್ಪಿ ಟೆಲಿಫೋಟೋ ಸೆನ್ಸಾರ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಇನ್ನು ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಇದು 100W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಸ್ನ್ಯಾಪ್ಡ್ರಾಗನ್ 8 Gen 2 ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸಬಹುದು. ಆಂಡ್ರಾಯ್ಡ್ 13 ಆಧಾರಿತ OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.
ಬೆಲೆ
ಒನ್ಪ್ಲಸ್ 11 ಸ್ಮಾರ್ಟ್ಫೋನ್ನ ಬೆಲೆ ರೂ.55,000 ಮತ್ತು ರೂ.65,000 ದ ನಡುವೆ ಇರುತ್ತದೆ ಎಂದು ಟಿಪ್ಸ್ಟರ್ ಅಂದಾಜಿಸಿದ್ದಾರೆ. ಇದು ಈಗಾಗಲೇ ಭಾರತದಲ್ಲಿ ಬಿಡುಗಡೆಯಾದ ಒನ್ಪ್ಲಸ್ 10 ಪ್ರೋನ ಬೆಲೆಗಿಂತ ಕಡಿಮೆಯಾಗಿದೆ. ಒನ್ಪ್ಲಸ್10 ಪ್ರೋ ಸ್ಮಾರ್ಟ್ಫೋನ್ ಅನ್ನು 66,999 ರೂಪಾಯಿಗೆ ಬಿಡುಗಡೆ ಮಾಡಲಾಗಿದೆ.
ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ ಫೀಚರ್ಸ್
ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ 120Hz ನ ಸ್ಕ್ರೀನ್ ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ಬರಬಹುದು. ಇದರಲ್ಲಿ ಸ್ನ್ಯಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಅನ್ನುಹೊಂದಿರುವ ಸಾಧ್ಯತೆಯಿದೆ. ಹ್ಯಾಂಡ್ಸೆಟ್ 5000mAh ಬ್ಯಾಟರಿಯನ್ನು ಹೊಂದಿದ್ದುಇದು 100W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಬಹುದು. ಇದರಲ್ಲಿ 50ಎಮ್ಪಿ ಪ್ರಾಥಮಿಕ ಕ್ಯಾಮೆರಾ, 8ಎಮ್ಪಿ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಸೆಲ್ಫಿಗಳಿಗಾಗಿ ಸ್ಮಾರ್ಟ್ಫೋನ್ ಮುಂಭಾಗದಲ್ಲಿ 16ಎಮ್ಪಿ ಕ್ಯಾಮೆರಾವನ್ನು ಅಳವಡಿಸಿರಬಹುದು.
ಬೆಲೆ
ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಒನ್ಪ್ಲಸ್ 11 ಆರ್ ಸ್ಮಾರ್ಟ್ಫೋನ್ ಬೆಲೆ ರೂ.50,000 ಕ್ಕಿಂತ ಕಡಿಮೆ ಇರುತ್ತದೆ ಎಂದು ಟಿಪ್ಸ್ಟರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ