ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯ ಒನ್‌ಪ್ಲಸ್ (Oneplus Company) ಉತ್ಪನ್ನಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ವಿಭಾಗದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿರುವ ಕಂಪನಿಯು ಫೆಬ್ರವರಿ 7 ರಂದು ಮತ್ತೊಂದು ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಮುಂದಿನ ಸರಣಿಯು ಒನ್‌ಪ್ಲಸ್ 11 (Oneplus 11 Smartphone) ಮತ್ತು ಒನ್‌ಪ್ಲಸ್ 11ಆರ್ ಮಾದರಿಗಳನ್ನು ತರುತ್ತದೆ. ಆದರೆ ಅದೇ ಸಮಯದಲ್ಲಿ, ಕಂಪನಿಯು ಮತ್ತೊಂದು ಹೊಸ ಉತ್ಪನ್ನವನ್ನು ಸಹ ಬಿಡುಗಡೆ ಮಾಡುತ್ತದೆ ಎಂದು ವರದಿಯಾಗಿದೆ. ಕಂಪನಿಯು ಒನ್‌ಪ್ಲಸ್ ಪ್ಯಾಡ್ (Oneplus Pad Tablet) ಹೆಸರಿನ ಹೊಸ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಇದೀಗ ಟೆಕ್ ಮಾರುಕಟ್ಟೆಗೆ ಜನಪ್ರಿಯ ಕಂಪೆನಿಯಾಗಿರುವ ಒನ್‌ಪ್ಲಸ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಒನ್‌ಪ್ಲಸ್ ಪ್ಯಾಡ್ ಎಂದು ಹೆಸರನ್ನು ಇಡಲಾಗಿದೆ. ಈ ಟ್ಯಾಬ್ನ ವಿನ್ಯಾಸದ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಫೀಚರ್ಸ್ಗಳ ಮಾಹಿತಿಯು ಸಹ ಹೊರಬಿದ್ದಿದೆ.
ಒನ್‌ಪ್ಲಸ್ ಪ್ಯಾಡ್
ಒನ್‌ಪ್ಲಸ್ ಪ್ಯಾಡ್ನ ಬಿಡುಗಡೆಯಾದ ಅಧಿಕೃತ ಚಿತ್ರದ ಪ್ರಕಾರ, ಈ ಸಾಧನವು ಸ್ಲಿಮ್ ಬೆಜೆಲ್‌ಗಳು, ಸಿಂಗಲ್ ಲೆನ್ಸ್, ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಕ್ಯಾಮೆರಾ ಮಾಡ್ಯೂಲ್, ಹಿಂಭಾಗದಲ್ಲಿ ಹಸಿರು-ಮ್ಯಾಟ್ ಫಿನಿಶ್‌ನಂತಹ ವೈಶಿಷ್ಟ್ಯಗಳು ಒನ್‌ಪ್ಲಸ್ ಪ್ಯಾಡ್ ಟ್ಯಾಬ್ಲೆಟ್‌ನಲ್ಲಿ ಇರುವ ಸಾಧ್ಯತೆಯಿದೆ.
ಈ ಟ್ಯಾಬ್ಲೆಟ್ ತಯಾರಿಕೆಯಲ್ಲಿ ಬಳಸಲಾದ ವಸ್ತುಗಳ ವಿವರಗಳು ಇನ್ನೂ ಯಾವುದೇ ರೀತಿಯಲ್ಲಿ ಬಹಿರಂಗವಾಗಿಲ್ಲ. ಆದರೆ ಇದು ಅಲ್ಯೂಮಿನಿಯಂನಿಂದ ತಯಾರಿಯಾಗಿದೆ ಎಂಬ ವದಂತಿಗಳಿವೆ. ಸೋರಿಕೆಯಾದ ಚಿತ್ರವನ್ನು ನೋಡುವಾಗ ಈ ಸಾಧನದ ಆಕರ್ಷಕ ನೋಟಕ್ಕಾಗಿ ಫ್ಲಾಟ್ ರೀತಿಯಲ್ಲಿ ಬದಿಗಳನ್ನು ವಿನ್ಯಾಸಗೊಳಿಸಲಾಗಿದೆ.
ಬೆಲೆ ಮತ್ತು ಲಭ್ಯತೆ
ಇನ್ನು ಒನ್‌ಪ್ಲಸ್ ಪ್ಯಾಡ್ ಟ್ಯಾಬ್ಲೆಟ್ನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಕಂಪೆನಿ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಹಾಗೆಯೇ ಈ ಟ್ಯಾಬ್ಲೆಟ್ ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಹಲವಾರು ಗುಣಮಟ್ಟದ ಫೀಚರ್ಸ್ಗಳನ್ನು ಹೊಂದಿಕೊಂಡು ಬರುವ ನಿರೀಕ್ಷೆಯಿದೆ.
ಏಕಕಾಲದಲ್ಲಿ ಹಲವ ಸಾಧನಗಳ ಲಾಂಚ್
ಒನ್‌ಪ್ಲಸ್ ಪ್ಯಾಡ್ ಜೊತೆಗೆ, ಕಂಪನಿಯು ಒನ್‌ಪ್ಲಸ್ 11 5ಜಿ ಸ್ಮಾರ್ಟ್‌ಫೋನ್, ಒನ್‌ಪ್ಲಸ್ 11ಆರ್ 5ಜಿ, ಒನ್‌ಪ್ಲಸ್ ಬಡ್ಸ್ ಪ್ರೋ 2, ಒನ್‌ಪ್ಲಸ್ ಟಿವಿ 65 ಪ್ರೋ Q2 ನಂತಹ ಸಾಧನಗಳನ್ನು ಸಹ ಬಿಡುಗಡೆ ಮಾಡುತ್ತದೆ.
ಒನ್‌ಪ್ಲಸ್ 11 ಸ್ಮಾರ್ಟ್ಫೋನ್ನ ಫೀಚರ್ಸ್
ಮುಂಬರುವ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್ ಪ್ರಮುಖ ವಿಭಾಗದಲ್ಲಿ ಬರಲಿದೆ. 12 ಜಿಬಿ ರ್‍ಯಾಮ್ ಮತ್ತು 256ಜಿಬಿ ಬೇಸ್ ಮಾಡೆಲ್ ರೂ 54,999 ರ ಆರಂಭಿಕ ಬೆಲೆಯಲ್ಲಿ ಪ್ರಾರಂಭಿಸಬಹುದು. 16ಜಿಬಿ ರ್‍ಯಾಮ್ ಮತ್ತು 256ಜಿಬಿ ರೂಪಾಂತರದ ಬೆಲೆ ರೂ. 59,999 ಹಾಗೆಯೇ 16ಜಿಬಿ ರ್‍ಯಾಮ್ ಮತ್ತು 512ಜಿಬಿ ರೂಪಾಂತರದ ಬೆಲೆ ರೂ.66,999 ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಡಿಸ್ಪ್ಲೇ ಮತ್ತು ಇತರೆ ಫೀಚರ್ಸ್
ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್ ಹೊಸ ಕ್ವಾಲ್ಕಮ್ ಸ್ನಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಆಪರೇಟಿಂಗ್ ಸಿಸ್ಟಮ್ ಕಲರ್ಓಎಸ್ 13.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಹ್ಯಾಂಡ್‌ಸೆಟ್ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು 6.7-ಇಂಚಿನಕ್ಯೂಹೆಚ್ಡಿ+ ಸ್ಯಾಮ್ಸಂಗ್ LTPO 3.0 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ.
ಇದನ್ನೂ ಓದಿ: ವಾಟ್ಸಾಪ್ ಬಳಕೆದಾರರಿಗೆ ಗುಡ್ನ್ಯೂಸ್! ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಕಂಪೆನಿ
ಈ ಡಿಸ್ಪ್ಲೇಯು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. 525ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 1300 ನಿಟ್‌ಗಳವರೆಗೆ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್ಫೋನ್ನ ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7 ಅನ್ನು ಆ್ಯಡ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ