Smart Phone: ಕೈಗೆಟುಕುವ ದರದಲ್ಲಿ ಹೊಸ ಸ್ಮಾರ್ಟ್​ಫೋನ್ ಲಾಂಚ್ ಮಾಡಲಿದೆ OnePlus

ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ 90Hz ಡಿಸ್‌ಪ್ಲೇ ಯೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಡಿವೈಸ್ ಹೊಂದಿರಲಿದೆ ಎನ್ನಲಾಗಿದೆ

OnePlus

OnePlus

  • Share this:
ಭಾರತೀಯ ಮಾರುಕಟ್ಟೆಗೆ (Indian market) ಅನುಗುಣವಾಗಿರುವ 20,000 ರೂ. ಒಳಗಿನ ಹೊಸ ನಾರ್ಡ್-ಸ್ಮಾರ್ಟ್‌ಫೋನ್‌ಗಳ (Nord-Smartphones) ತಯಾರಿಯಲ್ಲಿ ಪ್ರಸ್ತುತ ಒನ್‌ಪ್ಲಸ್(OnePlus) ಕಾರ್ಯನಿರತವಾಗಿದೆ ಎಂಬ ಮಾಹಿತಿ ದೊರಕಿದೆ. ಹೊಸ ಸ್ಮಾರ್ಟ್‌ಫೋನ್ ಏಪ್ರಿಲ್ ಹಾಗೂ ಜೂನ್(Mid-April and June) ಮಧ್ಯಭಾಗದಲ್ಲಿ ಲಾಂಚ್ ಆಗಬಹುದಾದ ನಿರೀಕ್ಷೆ(Expected) ಇದ್ದು ಈ ಕುರಿತು ಇನ್ನಷ್ಟು ಹೆಚ್ಚಿನ ವಿವರಗಳು ದೊರೆಯಬೇಕಾಗಿದೆ. ಆದರೂ ಗ್ರಾಹಕರಲ್ಲಿ ಈ ಹೊಸ ಸ್ಮಾರ್ಟ್‌ ಪೋನ್‌ ಬಗ್ಗೆ ಸಾಕಷ್ಟು ಕುತುಹಲ ಹೊಂದಿದ್ದಾರೆ.

ಕೈಗೆಟಕುವ ದರದಲ್ಲಿ ಒನ್‌ಪ್ಲಸ್ ನಾರ್ಡ್ ಸೀರಿಸ್ ಡಿವೈಸ್‌ಗಳು:
91 ಮೊಬೈಲ್ಸ್ ಪ್ರಕಾರ ಒನ್‌ಪ್ಲಸ್ ನಾರ್ಡ್ 3 (OnePlus Nord 3) ಯ ನಂತರ ಹೊಸ ನಾರ್ಡ್ ಫೋನ್‌ಗಳು ಪರಿಚಯಗೊಳ್ಳಲಿವೆ ಎಂಬ ಮಾಹಿತಿ ಇದ್ದು ಕಂಪನಿ ಈ ಕುರಿತು ಯಾವುದೇ ಮಾಹಿತಿಯನ್ನು ದೃಢೀಕರಿಸಿಲ್ಲ. ಪ್ರಸ್ತುತ ಕಂಪನಿ ಒನ್‌ಪ್ಲಸ್ ನಾರ್ಡ್ ಸೀರಿಸ್‌ನ ಅಡಿಯಲ್ಲಿ 2 ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.

ಹೆಚ್ಚು ಕೈಗೆಟಕುವ ದರದಲ್ಲಿ ಒನ್‌ಪ್ಲಸ್ ನಾರ್ಡ್ ಸಿಇ (OnePlus Nord CE (Core Edition) 5 ಜಿ ಆರಂಭ ಬೆಲೆ 22,999 ರೂ. ಗಳಲ್ಲಿ ಲಭ್ಯವಿದ್ದು (6ಜಿಬಿ) 12 ಜಿಬಿ ರ‍್ಯಾಮ್ ಹಾಗೂ 256 ಜಿಬಿ ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ 27,999 ರೂ. ಆಗಿದೆ. ಮೀಡಿಯಾ ಟೆಕ್ 1200-ಚಾಲಿತ ನಾರ್ಡ್ 2 ಬೆಲೆ 6ಜಿಬಿ + 128ಜಿಬಿ ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ 27,999 ರೂ ಆಗಿದೆ.

ಇದನ್ನೂ ಓದಿ: OnePlus ಹೊಸ ಸ್ಮಾರ್ಟ್‌ಫೋನ್‌ 9RT ಹೇಗಿದೆ..? ಇದರ ವಿಶೇಷತೆಗಳು ಹೇಗಿದೆ ಗೊತ್ತೇ?

ಡಿವೈಸ್ 5ಜಿ ಸಂಪರ್ಕ
ವದಂತಿಯ ಪ್ರಕಾರ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ 90Hz ಡಿಸ್‌ಪ್ಲೇ ಯೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಡಿವೈಸ್ ಹೊಂದಿರಲಿದೆ ಎನ್ನಲಾಗಿದೆ. ಅಂತೆಯೇ ಡಿವೈಸ್ 5ಜಿ ಸಂಪರ್ಕವನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಸುದ್ದಿ ವರದಿ ಮಾಡಿದೆ. ಕ್ವಾಲ್‌ಕಾಮ್ ಸಾಕ್ (Qualcomm SoC) ಬದಲಿಗೆ ಮೀಡಿಯಾ ಟೆಕ್ (MediaTek) ಚಿಪ್‌ಸೆಟ್ ಅನ್ನು ನಾರ್ಡ್ ಹೊಂದಲಿದೆ ಎನ್ನಲಾಗಿದ್ದು ಸಾಮಾನ್ಯವಾಗಿ ಒನ್‌ಪ್ಲಸ್ ಇದೇ ವಿಶೇಷತೆಗಳನ್ನು ತನ್ನ ಡಿವೈಸ್‌ಗಳಲ್ಲಿ ಆದ್ಯತೆ ನೀಡುತ್ತದೆ.

ಮೂರು ನಾರ್ಡ್ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ:
ಸ್ಮಾರ್ಟ್‌ಫೋನ್ ಕುರಿತು ಇನ್ನಷ್ಟು ವಿವರಗಳು ಇನ್ನೂ ದೊರೆಯಬೇಕಾಗಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಆಸಕ್ತಿಕರವಾದ ಇನ್ನೊಂದು ಸುದ್ದಿ ಎಂದರೆ ಒನ್‌ಪ್ಲಸ್ ನಾರ್ಡ್ 2 ಸಿಇ (OnePlus Nord 2 CE) ಎಂದು ಕರೆಯಲಾದ ಮತ್ತೊಂದು ಒನ್‌ಪ್ಲಸ್ ನಾರ್ಡ್ ಫೋನ್‌ನ ಅಭಿವೃದ್ಧಿಯ ಕುರಿತಾಗಿಯೂ ಇದೇ ಪ್ರಕಟಣೆಯನ್ನು ಈ ಹಿಂದೆಯೂ ವರದಿ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಪ್ರಸ್ತುತಪಡಿಸಲೇ ಬೇಕು. ಅಂದರೆ ಈ ವರ್ಷ 3 ನಾರ್ಡ್ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ನಾವು ನೋಡಬಹುದು ಎಂಬುದು ಸ್ಪಷ್ಟವಾಗಿದೆ. ಅವು ಯಾವುವೆಂದರೆ ಒನ್‌ಪ್ಲಸ್ ನಾರ್ಡ್ 3 (OnePlus Nord 3), ಒನ್‌ಪ್ಲಸ್ ನಾರ್ಡ್ 2 ಸಿಇ 5ಜಿ (OnePlus Nord 2 CE 5G), ಹಾಗೂ 20,000 ರೂ. ಗಳೊಳಗೆ ದೊರೆಯುವ ಒನ್‌ಪ್ಲಸ್ ನಾರ್ಡ್ (OnePlus Nord).

ನಾರ್ಡ್ ಸ್ಮಾರ್ಟ್‌ಫೋನ್
ವದಂತಿಯು ನಿಖರವಾಗಿದ್ದರೆ ಒನ್‌ಪ್ಲಸ್ ನಾರ್ಡ್ ಸಿಇ 5ಜಿ (OnePlus Nord CE 5G) ಯ ಅದೇ ವೈಶಿಷ್ಟ್ಯಗಳನ್ನು ಕಂಪನಿಯ ಕೈಗೆಟಕುವ ಬೆಲೆಯ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ ಕೂಡ ಪಡೆದುಕೊಳ್ಳಲಿದೆ ಎಂಬುದನ್ನು ನಾವು ನಿರೀಕ್ಷಿಸಬಹುದಾಗಿದೆ. ಡಿವೈಸ್ 6.4 ಇಂಚಿನ ಪೂರ್ಣ ಎಚ್‌ಡಿ + ಅಮೋಲೆಡ್ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್, 12ಜಿಬಿ ರ‍್ಯಾಮ್, 256 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆಯುತ್ತದೆ.

ಇದನ್ನೂ ಓದಿ: OnePlus 9RT: ತ್ರಿವಳಿ ಕ್ಯಾಮೆರಾ, 4,500 mAh ಬ್ಯಾಟರಿ.. ಭಾರತೀಯರ ಮನಗೆದ್ದ OnePlus 9RT 5G ಸ್ಮಾರ್ಟ್​ಫೋನ್​

ಇತರ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಂತೆ ನಾರ್ಡ್ ಸಿಇ 5ಜಿ ಬ್ಯಾಟರಿ ಸಾಮರ್ಥ್ಯದಲ್ಲೂ ಅತ್ಯುತ್ತಮ ಎಂದೆನಿಸಿದ್ದು 65 W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಫೋನ್ 4,500mAh ಬ್ಯಾಟರಿಯನ್ನು ಒಳಗೊಂಡಿದೆ. ಫೋನ್ ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅಂತೆಯೇ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ.
Published by:vanithasanjevani vanithasanjevani
First published: