80W SUPERVOOC ಮತ್ತು ಶಕ್ತಿಶಾಲಿ ಹೊಸ SoC ಯೊಂದಿಗೆ ಶೀಘ್ರದಲ್ಲೇ ಬರಲಿದೆ OnePlus Nord 2T 5G: ಏನು ನಿರೀಕ್ಷಿಸಬೇಕು ಎಂಬುದು ಇಲ್ಲಿದೆ!

ಈ ವರ್ಷದ ಅಪ್‌ಗ್ರೇಡ್‌ಗಳು ಗಣನೀಯ ಪ್ರಾಮುಖ್ಯತೆಯನ್ನು ಹೊಂದಿವೆ. ಮೊದಲನೆಯದಾಗಿ, ನಿಮ್ಮ ಚಾರ್ಜರ್ 65W ನಿಂದ 80W SuperVooc ಗೆ (OnePlus 10 Pro ನಿಂದ ಪಡೆಯಲಾಗಿದೆ) ಅಪ್‌ಗ್ರೇಡ್ ಆಗಿದ್ದು, 15 ನಿಮಿಷಗಳಲ್ಲಿ ಇಡೀ ದಿನದ ಚಾರ್ಜ್‌ನ ಭರವಸೆ ನೀಡುತ್ತದೆ.

ಅತ್ಯಂತ ಪ್ರಮುಖವಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು OnePlus ಸಿದ್ಧವಾಗಿದೆ: ಅದು OnePlus Nord 2T 5G. ಜನಪ್ರಿಯವಾದ Nord 2 ಯಶಸ್ಸನ್ನು ಅನುಸರಿಸಿರುವ Nord 2T, ಅದನ್ನು ಪೂರೈಸಲು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.

ಅತ್ಯಂತ ಪ್ರಮುಖವಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು OnePlus ಸಿದ್ಧವಾಗಿದೆ: ಅದು OnePlus Nord 2T 5G. ಜನಪ್ರಿಯವಾದ Nord 2 ಯಶಸ್ಸನ್ನು ಅನುಸರಿಸಿರುವ Nord 2T, ಅದನ್ನು ಪೂರೈಸಲು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.

 • Share this:
  ಅತ್ಯಂತ ಪ್ರಮುಖವಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು OnePlus ಸಿದ್ಧವಾಗಿದೆ: ಅದು (OnePlus Nord 2T 5G). ಜನಪ್ರಿಯವಾದ Nord 2 ಯಶಸ್ಸನ್ನು ಅನುಸರಿಸಿರುವ Nord 2T, ಅದನ್ನು ಪೂರೈಸಲು ಅದ್ಭುತ ವೈಶಿಷ್ಟ್ಯಗಳನ್ನು (Features) ಹೊಂದಿದೆ. ನೀವಿಲ್ಲಿ ಗಮನಿಸಬೇಕಿರುವುದು ಏನೆಂದರೆ, ಇಂದು 30k ಒಳಗೆ ಮಾರಾಟವಾಗುತ್ತಿರುವ ಅತ್ಯಂತ ಜನಪ್ರಿಯ ಫೋನ್‌ಗಳಲ್ಲಿ (Nord 2) ಒಂದಾಗಿದೆ ಹಾಗೂ ತನ್ನ ಮೌಲ್ಯ ಮತ್ತು ತನ್ನ ಕ್ಯಾಮೆರಾದ ಅನನ್ಯತೆಗೆ ಅಪಾರ ಮೆಚ್ಚುಗೆ ಪಡೆದಿದೆ. Nord 2 ನ ನಂತರ ಸುಮಾರು ಒಂದು ವರ್ಷದ ಮೇಲೆ Nord 2T ಬಿಡುಗಡೆಯಾಗುತ್ತಿದ್ದು, ಸಾಕಷ್ಟು ವೈಶಿಷ್ಟ್ಯಗಳ ಪ್ರಕಾರಗಳಲ್ಲಿ ಕಾರ್ಯನಿರ್ವಹಣೆಯನ್ನು ಒದಗಿಸಬೇಕಿದೆ. 

  ಗೆಲುವಿನ ಫಾರ್ಮುಲಾದ ಪರಿಷ್ಕರಣೆ
  Nord ಪ್ರಕಾರಗಳಲ್ಲಿ ಇದ್ದ ಈ ಹಿಂದಿನ ಫೋನ್‌ಗಳಂತೆಯೇ, ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಂದ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮತ್ತು ಅವುಗಳನ್ನು ಕೈಗೆಟುಕುವ ದರದ ಪ್ಯಾಕೇಜ್‌ನಲ್ಲಿ ಒದಗಿಸುವ ಅದೇ ಗೆಲುವಿನ ಫಾರ್ಮುಲಾಕ್ಕೆ OnePlus ಅಂಟಿಕೊಂಡಂತೆ ಕಾಣಿಸುತ್ತದೆ 

  https://www.youtube.com/watch?v=gcKTC6yd3V4

  ಈ ವರ್ಷದ ಅಪ್‌ಗ್ರೇಡ್‌ಗಳು ಗಣನೀಯ ಪ್ರಾಮುಖ್ಯತೆಯನ್ನು ಹೊಂದಿವೆ. ಮೊದಲನೆಯದಾಗಿ, ನಿಮ್ಮ ಚಾರ್ಜರ್ 65W ನಿಂದ 80W SuperVooc ಗೆ (OnePlus 10 Pro ನಿಂದ ಪಡೆಯಲಾಗಿದೆ) ಅಪ್‌ಗ್ರೇಡ್ ಆಗಿದ್ದು, 15 ನಿಮಿಷಗಳಲ್ಲಿ ಇಡೀ ದಿನದ ಚಾರ್ಜ್‌ನ ಭರವಸೆ ನೀಡುತ್ತದೆ. ಎರಡನೆಯದಾಗಿ, ನೀವು ಹೊಚ್ಚ ಹೊಸ MediaTek Dimensity 1300 SoC ಪಡೆಯುತ್ತಿದ್ದು, ಅದು ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದಲ್ಲಿ ಮಾತ್ರ ಸುಧಾರಣೆಗಳನ್ನು ನೀಡುತ್ತಿಲ್ಲ, ಬದಲಾಗಿ ಉನ್ನತೀಕರಿಸಿದ AI ವೈಶಿಷ್ಟ್ಯಗಳ ಗುಚ್ಛವನ್ನೇ ನೀಡುತ್ತಿದ್ದು (ನಾವು ಅದನ್ನು OnePlus 10R ನಲ್ಲಿ ನೋಡಿದ್ದೇವೆ), ಅದು ಈಗಾಗಲೇ ಅದ್ಭುತವಾಗಿರುವ 50 MP Sony IMX 766 ಸೆನ್ಸರ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. 

  ಹೆಚ್ಚುವರಿಯಾಗಿ, ಲೋ-ಲ್ಯಾಟೆನ್ಸಿ ಆಡಿಯೊ ಮತ್ತು ವೇಗದ ಡಿಸ್‌ಪ್ಲೇಗಳನ್ನು ಬೆಂಬಲಿಸುವುದು ಸೇರಿದಂತೆ ಗೇಮಿಂಗ್-ಕೇಂದ್ರಿತ ಆಪ್ಟಿಮೈಸೇಶನ್‌ಗಳ ಗುಚ್ಛವನ್ನು Dimensity 1300 SoC ಬೆಂಬಲಿಸುತ್ತದೆ. ಅಸ್ಥಿರ OIS, 4K HDR ರೆಕಾರ್ಡಿಂಗ್, HDR10+ ಪ್ಲೇಬ್ಯಾಕ್ ಹಾಗೂ ಇನ್ನೂ ಹೆಚ್ಚಿನವುಗಳಿಗೆ ಬೆಂಬಲ ವ್ಯವಸ್ಥೆಯನ್ನು ಸಹ ಇದು ಒಳಗೊಂಡಿದೆ.

  ಅಂತಿಮವಾಗಿ, ಈ ಫೋನ್ OxygenOS 12.1 ನೊಂದಿಗೆ ಬಿಡುಗಡೆಯಾಗುತ್ತಿದ್ದು, ಅದು ವೇಗದ ಆ್ಯಪ್ ಲೋಡಿಂಗ್, ಅತ್ಯುತ್ತಮ ಗೇಮಿಂಗ್ ಮೋಡ್‌ನಂತಹ ವೈಶಿಷ್ಟ್ಯಗಳನ್ನು ಹಾಗೂ ಇತರ ಸುಧಾರಣೆಗಳು ಮತ್ತು ಜೀವನ ಗುಣಮಟ್ಟ ಸುಧಾರಣೆಗಳ ಗುಂಪನ್ನು ಹೊಂದಿದೆ. ಸ್ಕ್ರೀನ್ ಗಾತ್ರ ಹಾಗೂ ಒಟ್ಟಾರೆ ವಿನ್ಯಾಸವು ಬಹುತೇಕ ಈ ಹಿಂದಿನ ಮಾದರಿಯಂತೆಯೇ ಇರಬಹುದು ಎಂದು ನಿರೀಕ್ಷಿಸಲಾಗಿದೆ. 

  ಒಂದು ವೇಳೆ ಇದು OnePlus ಆಯ್ಕೆ ಮಾಡುವ “ಅನನ್ಯ OnePlus ಅನುಭವವನ್ನು ಇನ್ನಷ್ಟು ಸುಲಭಸಾಧ್ಯಗೊಳಿಸುವುದು” ಆಗಿದ್ದರೆ, ನಾವೆಲ್ಲರೂ ಅದನ್ನು ಬೆಂಬಲಿಸತ್ತೇವೆ!

  ನಾನು ಹೇಗೆ ಖರೀದಿಸುವುದು?
  ಈ ಫೋನ್ ಜುಲೈನಲ್ಲಿ ಬಿಡುಗಡೆಯಾಗಲಿದೆ ಎಂದು OnePlus ಹೇಳಿದೆ ಮತ್ತು ಅದು Amazon ಹಾಗೂ OnePlus’ ಆನ್‌ಲೈನ್‌ನಲ್ಲಿ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ದರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ.

  ನೀವು ಇಲ್ಲಿಗೆ ಭೇಟಿ ನೀಡುವ ಮೂಲಕ ಮತ್ತು ಸೂಚಿಸಿ (notify) ಬಟನ್ ಒತ್ತುವ ಮೂಲಕ ಸಹ OnePlus Nord 2T 5G ನೀವು ಗೆಲ್ಲಬಹುದು. ಯಾದೃಚ್ಛಿಕವಾಗಿ ಒಬ್ಬ ಜಯಶಾಲಿಯನ್ನು ಆಯ್ಕೆ ಮಾಡಲಾಗುವುದು ಮತ್ತು ಅವರು ಫೋನ್‌ಗಾಗಿ ರಿಡೀಮ್ ಮಾಡಬಹುದಾದ ಒಂದು ಕೂಪನ್ ಅನ್ನು ಸ್ವೀಕರಿಸುತ್ತಾರೆ. “Know your Nord” ಸ್ಪರ್ಧೆ ಸಹ ನಡೆಯುತ್ತಿದ್ದು, ಅದು ನೀವು ಫೋನ್ ಗೆಲ್ಲುವಂತೆ ಮಾಡಬಹುದು. ಬಿಡುಗಡೆಯ ಸಂದರ್ಭದಲ್ಲಿ ವಿಶೇಷವಾಗಿ Red Cable Plus ಸದಸ್ಯರಿಗೆ ಹಲವಾರು ಆಫರ್‌ಗಳು ಲಭ್ಯವಾಗಲಿದ್ದು, ಅವುಗಳಿಗಾಗಿ ಗಮನಿಸುತ್ತಿರಿ. 

  ಬಿಡುಗಡೆಯ ಕುರಿತು ಅಪ್-ಟು-ಡೇಟ್ ಮಾಹಿತಿಗಾಗಿ OnePlus IndiaInstagram ಮತ್ತು Facebook ಪುಟಗಳನ್ನು ಫಾಲೊ ಮಾಡುವುದನ್ನು ಮರೆಯದಿರಿ.
  Published by:Rahul TS
  First published: