HOME » NEWS » Tech » ONEPLUS NORD LAUNCH TODAY HOW TO WATCH LIVESTREAM EXPECTED PRICE SPECIFICATIONS VB

OnePlus Nord Launch: ಇಂದು ಒನ್​ಪ್ಲಸ್ ನಾರ್ಡ್ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ; ಕಡಿಮೆ ಬೆಲೆಗೆ ಆಕರ್ಷಕ ಫೀಚರ್

ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765ಜಿ ಪ್ರೊಸೆಸರ್‌ ಅನ್ನು ಒಳಗೊಂಡಿವೆ. ಜೊತೆಗೆ 5G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿವೆ. ‌ಅಲ್ಲದೆ 4115 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

news18-kannada
Updated:July 21, 2020, 11:13 AM IST
OnePlus Nord Launch: ಇಂದು ಒನ್​ಪ್ಲಸ್ ನಾರ್ಡ್ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ; ಕಡಿಮೆ ಬೆಲೆಗೆ ಆಕರ್ಷಕ ಫೀಚರ್
ಒನ್​ಪ್ಲಸ್ ನಾರ್ಡ್ ಹೊಸ ಸ್ಮಾರ್ಟ್​ಫೋನ್
  • Share this:
ಒನ್‌ಪ್ಲಸ್‌ ಭಾರತದ ನಂಬರ್‌ ಒನ್‌ ಪ್ರಿಮಿಯಂ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌. ತನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಮೊಬೈಲ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ತನ್ನ ವಿಶಿಷ್ಟ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿರುವ ಒನ್‌ಪ್ಲಸ್‌ ಸದ್ಯ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದೀಗ ಒನ್‌ಪ್ಲಸ್ ನೋರ್ಡ್​ ಸ್ಮಾರ್ಟ್‌ಫೋನ್‌ ಮತ್ತು ಒನ್‌ಪ್ಲಸ್ ಇಯರ್ ಬಡ್ಸ್​ ಲಾಂಚ್ ಆಗಲು ತಯಾರಾಗಿದೆ.

ಅತ್ಯುತ್ತಮ ಡಿಸ್‌ಪ್ಲೇ ವಿನ್ಯಾಸ ಉತ್ತಮ ಬ್ಯಾಟರಿ ಸೌಲಭ್ಯ ಹೊಂದಿರುವ ಒನ್​ಪ್ಲಸ್ ನೋರ್ಡ್​ ಏಕಕಾಲಕ್ಕೆ ಭಾರತ ಸೇರಿದಂತೆ ವಿಶ್ವದಲ್ಲಿ ಇಂದು (ಜುಲೈ 21) ಬಿಡುಗಡೆಯಾಗಲಿದೆ. ಸಂಜೆ 7:30ಕ್ಕೆ ಒನ್​ಪ್ಲಸ್ ನೋರ್ಡ್ ಸ್ಮಾರ್ಟ್​ಫೋನ್ ಲಾಂಚ್ ಆಗಲಿದ್ದು, ಒನ್​ಪ್ಲಸ್ ಅಧಿಕೃತ ವೆಬ್​ಸೈಟ್​ನಲ್ಲಿ ಲೈವ್ ನೋಡಬಹುದಾಗಿದೆ.

6000mAh ಬ್ಯಾಟರಿ, 10 ಸಾವಿರಕ್ಕಿಂತ ಕಡಿಮೆ ಬೆಲೆ: ನೂತನ ಸ್ಮಾರ್ಟ್​ಫೋನ್ ಖರೀದಿಗೆ ಮುಗಿಬಿದ್ದ ಜನ..!

ಇನ್ನೂ ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765ಜಿ ಪ್ರೊಸೆಸರ್‌ ಅನ್ನು ಒಳಗೊಂಡಿವೆ. ಜೊತೆಗೆ 5G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿವೆ. ‌ಅಲ್ಲದೆ 4115 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಒನ್​ಪ್ಲಸ್ ನೋರ್ಡ್ ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರುವ 6.5-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇಯು ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಜೊತೆಗೆ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು 20: 9 ರಚನೆಯ ಅನುಪಾತವನ್ನ ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765ಜಿ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದರೊಂದಿಗೆ 6 GB RAM, 8GB RAM, 12GB RAM ಮತ್ತು 128GB ಹಾಗೂ 256GB ಇಂಟರ್‌ ಸ್ಟೋರೇಜ್‌ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನ ಹೊಂದಿದೆ.

ವಿಪಿಎನ್​ ಆ್ಯಪ್​​ ಬಳಸುತ್ತಿದ್ದೀರಾ?; ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಿವೆ ಈ ಆ್ಯಪ್​​ಗಳುಇನ್ನೂ ಕ್ಯಾಮೆರಾ ವಿಚಾರಕ್ಕೆ ಬಂದರೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಸೆನ್ಸಾರ್ ಜೊತೆಗೆ f/ 1.7 ಲೆನ್ಸ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿರುತ್ತದೆ. ಮೂರನೇ ಕ್ಯಾಮೆರಾ 5 ಡೆಪ್ತ್​ ಸೆನ್ಸಾರ್ ಮತ್ತು ಮಾಕ್ರೋ ಕ್ಯಾಮೆರಾ ಆಗಿದೆ.

ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಹೊಂದಿದ್ದು ಮುಂಬಾಗದಲ್ಲಿ ಎರಡು ಕ್ಯಾಮೆರಾ ಇರುವ ಮೊದಲ ಒನ್​ಪ್ಲಸ್ ಸ್ಮಾರ್ಟ್​ಫೋನ್ ನೋರ್ಡ್​ ಆಗಿದೆ. ಇದರ ಜೊತ ಇಂದು ಒನ್​ಪ್ಲಸ್ ಕಂಪನಿಯು ಒನ್‌ಪ್ಲಸ್ ಇಯರ್ ಬಡ್ಸ್ ಅನ್ನು ಪ್ರಾರಂಭಿಸುತ್ತದೆ.

ಒನ್​ಪ್ಲಸ್ ನೋರ್ಡ್​​ ಸ್ಮಾರ್ಟ್​ಫೋನ್ ಬೆಲೆ:

24,999 ರೂ. (6GB RAM -128GB ಸ್ಟೋರೇಜ್)

27,999 ರೂ. (8GB RAM – 128GB ಸ್ಟೋರೇಜ್)

30,999 ರೂ. (12GB RAM – 256GB ಸ್ಟೋರೇಜ್)
Published by: Vinay Bhat
First published: July 21, 2020, 11:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories