ಇತ್ತೀಚೆಗೆ ಒನ್ಪ್ಲಸ್ ನೋರ್ಡ್ 2 (OnePlus Nord 2) ಸ್ಮಾರ್ಟ್ಫೋನ್ (Smartphone) ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡ (Explod) ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಒನ್ಪ್ಲಸ್ ನೋರ್ಡ್ ಸಿಇ(OnePlus Nord CE) ಸ್ಮಾರ್ಟ್ಫೋನ್ ಜೇಬಿನಲ್ಲಿದ್ದಾಗಲೇ (Pocket) ಸ್ಪೋಟಗೊಂಡಿದೆ. ಅದೃಷ್ಟವಶಾತ್ ಬಳೆದಾರನಿಗೆ ಯಾವುದೇ ತೊಂದರೆಯಾಗದೆ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ದುಶ್ಯಂತ್ ಗೋಸ್ವಾಮಿ ಎಂಬವರು ಆರು ತಿಂಗಳ ಹಿಂದೆ OnePlus Nord CE ಖರೀದಿಸಿದ್ದರು ಮತ್ತು ಅದನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಈ OnePlus Nord CE ಸ್ಮಾರ್ಟ್ಫೋನ್ ಜೇಬಿನಲ್ಲಿರಿಸಿದ್ದಾಗಲೇ ಸ್ಫೋಟಗೊಂಡಿದೆ. ಟ್ವಿಟರ್ ಮತ್ತು ಲಿಂಕ್ಡ್ಇನ್ನಲ್ಲಿ ಗೋಸ್ವಾಮಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಆದರೆ ಇವರಿಗೆ ಎದಾರದ ತೊಂದರೆಯನ್ನು ಕಂಡು ಒನ್ಪ್ಲಸ್ ಕಂಪನಿ ಪ್ರತಿಕ್ರಿಯಿಸಿದೆ ಮತ್ತು ಬದಲಿ ಹ್ಯಾಂಡ್ಸೆಟ್ ಅನ್ನು ಕಳುಹಿಸುವುದಾಗಿ ಒನ್ಪ್ಲಸ್ ತಂಡವು ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿದ ದುಶ್ಯಂತ್ ಗೋಸ್ವಾಮಿ "ಎಲ್ಲರ ಸಹಾಯವನ್ನು ನಾನು ಪ್ರಶಂಸಿಸುತ್ತೇನೆ" ಎಂದು ಹೇಳಿದ್ದಾರೆ. ಕಳೆದ ರಾತ್ರಿ 8 ಗಂಟೆಗೆ ಒನ್ಪ್ಲಸ್ ತಂಡವು ನನಗೆ ಕರೆ ಮಾಡಿ ಮಂಗಳವಾರದೊಳಗೆ ನನಗೆ ಹೊಸ ಸ್ಮಾರ್ಟ್ಫೋನನ್ನು ಕಳುಹಿಸುವುದಾಗಿ ಭರವಸೆ ನೀಡಿದೆ ಎಂದು ಟ್ವಿಟರ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಕಂಪನಿಯು ಈ ಸ್ಮಾರ್ಟ್ಫೋನ್ ಸ್ಫೋಟದ ಕಾರಣದ ಬಗ್ಗೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ!
ಗೋಸ್ವಾಮಿ ಟ್ವಿಟರ್ನಲ್ಲಿ ಹಾಕಲಾಗಿದ್ದ ಪೋಸ್ಟ್ ಅನ್ನು ತೆಗೆಯಲಾಗಿದೆ. ಆದರೆ ಅದಕ್ಕೂ ಮುನ್ನ "ನಾನು ಅತ್ಯಂತ ಜನಪ್ರಿಯ ಬ್ರ್ಯಾಂಡ್ ONEPLUS ಫೋನ್ ಅನ್ನು ಖರೀದಿಸಿದ್ದೆ, ಅದು ಅತ್ಯುತ್ತಮ ಗುಣಮಟ್ಟವೆಂದು ಸಾರುತ್ತಾ ಬಂದಿದೆ. ನನ್ನ ಫೋನ್ ಕೇವಲ 6 ತಿಂಗಳಷ್ಟು ಹಳೆಯದು ಮತ್ತು ನಾನು ಅದನ್ನು ನನ್ನ ಜೇಬಿನಿಂದ ಹೊರತೆಗೆಯುತ್ತಿರುವಾಗ ಅದು ಸ್ಫೋಟಿಗೊಂಡಿದೆ. ಇದು ಕೇವಲ ಭಯಾನಕ ಮಾತ್ರವಲ್ಲ, ಇದು ಮಾರಣಾಂತಿಕವಾಗಿದೆ. ಅಪಘಾತಕ್ಕೆ ಬ್ರಾಂಡ್ ಜವಾಬ್ದಾರನಾಗಿರುವುದೇ?" ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಓದಿ: Moto G71: ಪವರ್ಫುಲ್ ಬ್ಯಾಟರಿಯ 5G ಸ್ಮಾರ್ಟ್ಫೋನ್ ಪರಿಚಯಿಸಿದ ಮೊಟೊರೊಲಾ!
ಪೋಸ್ಟ್ ಜೊತೆಗೆ, ಗೋಸ್ವಾಮಿ ಅವರು ತಮ್ಮ ಸುಟ್ಟ ಒನ್ಪ್ಲಸ್ ನಾರ್ಡ್ CE ನ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದರು. ಸ್ಮಾರ್ಟ್ಫೋನಿನ ಮುಂಭಾಗ ಮತ್ತು ಹಿಂಭಾಗದಿಂದ ಸಂಪೂರ್ಣವಾಗಿ ಹಾಳಾಗಿದ್ದು, ಬ್ಯಾಟರಿ, ಡಿಸ್ಪ್ಲೇ ಮತ್ತು ಕ್ಯಾಮೆರಾ ಸಂಪೂರ್ಣ ನಾಶವಾಗಿದೆ.
ಇದನ್ನು ಓದಿ: Smartphone Battery: ನಿಮ್ಮ ಸ್ಮಾರ್ಟ್ಫೋನ್ ಚಾರ್ಜ್ ಬೇಗನೆ ಖಾಲಿಯಾಗುತ್ತಿದ್ಯಾ? ಹಾಗಿದ್ರೆ ಈ ಟ್ರಿಕ್ಸ್ ಅನುಸರಿಸಿ ನೋಡಿ
OnePlus Nord ಫೋನ್ ಸ್ಫೋಟದ ಬಗ್ಗೆ ಕೇಳಿಬರುತ್ತಿರುವ ಸುದ್ದಿ ಇದೇ ಮೊದಲಲ್ಲ. ಈ ಹಿಂದೆ, ಭಾರತದಲ್ಲಿ ಮತ್ತು ವಿದೇಶದಲ್ಲೂ ಕೆಲವು ಬಳಕೆದಾರರ ಕೈಯಿಂದ OnePlus Nord 2 ಸ್ಫೋಟಗೊಂಡ ವರದಿಯನ್ನು ಕೇಳಿದ್ದೇವೆ. ಹಾಗಾಗಿ, ಈ ಸ್ಫೋಟಗಳು ಏಕೆ ಸಂಭವಿಸುತ್ತಿವೆ ಎಂಬುದರ ಕುರಿತು ಕಂಪನಿಯು ಯಾವುದೇ ನಿರ್ದಿಷ್ಟ ವಿಚಾರವನ್ನು ಇದುವರೆಗೆ ಬಹಿರಂಗಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ