HOME » NEWS » Tech » ONEPLUS NORD CE 5G WITH SNAPDRAGON 750G SOC SMARTPHONE LAUNCHED PRICE IN INDIA HG

OnePlus Nord CE: ತ್ರಿವಳಿ ಕ್ಯಾಮೆರಾ, 4500 mAh ಬ್ಯಾಟರಿ ಸಾಮರ್ಥ್ಯ​; ಒನ್​ಪ್ಲಸ್​ ಪರಿಚಯಿಸಿದೆ OnePlus Nord CE 5G ಸ್ಮಾರ್ಟ್​ಫೋನ್​!

OnePlus Nord CE 5G ಸ್ಮಾರ್ಟ್‌ಫೋನ್ ಅತ್ಯಂತ ತೆಳುವಾದ ಮತ್ತು ಹಿಂದಿನ Nord ಫೋನ್‌ಗಳಿಗಿಂತ ತುಂಬಾ ಹಗುರವಾಗಿದೆ. ಅದರರ್ಥ ಇದರ ವೈಶಿಷ್ಟ್ಯಗಳಲ್ಲಿ ಹೊಂದಾಣಿಕೆಯಾಗಿದೆ ಎಂದಲ್ಲ. ಕೊಂಚ ವಿಭಿನ್ನವಾಗಿ ಪರಿಚಯಿಸಿದೆ.

news18-kannada
Updated:June 11, 2021, 10:17 AM IST
OnePlus Nord CE: ತ್ರಿವಳಿ ಕ್ಯಾಮೆರಾ, 4500 mAh ಬ್ಯಾಟರಿ ಸಾಮರ್ಥ್ಯ​; ಒನ್​ಪ್ಲಸ್​ ಪರಿಚಯಿಸಿದೆ OnePlus Nord CE 5G ಸ್ಮಾರ್ಟ್​ಫೋನ್​!
OnePlus Nord CE 5G
  • Share this:
ಚೀನಾ ಮೂಲದ OnePlus ತನ್ನ ಹೊಸ Nord CE 5G ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ತನ್ನ ಹೊಸ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿದೆ. ನೂತನ ಸ್ಮಾರ್ಟ್​ ಫೋನ್ ಮತ್ತು ಟಿವಿ ಹೇಗಿದೆ? ಅದರ ವಿಶೇಷತೆ, ಬೆಲೆ ಎಷ್ಟು ನೋಡೋಣ..

OnePlus Nord CE 5G ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು

OnePlus Nord CE 5G ಸ್ಮಾರ್ಟ್‌ಫೋನ್ ಅತ್ಯಂತ ತೆಳುವಾದ ಮತ್ತು ಹಿಂದಿನ Nord ಫೋನ್‌ಗಳಿಗಿಂತ ತುಂಬಾ ಹಗುರವಾಗಿದೆ. ಅದರರ್ಥ ಇದರ ವೈಶಿಷ್ಟ್ಯಗಳಲ್ಲಿ ಹೊಂದಾಣಿಕೆಯಾಗಿದೆ ಎಂದಲ್ಲ. ಕೊಂಚ ವಿಭಿನ್ನವಾಗಿ ಪರಿಚಯಿಸಿದೆ.

ಹೊಸ ಫೋನ್ OnePlus Nord CE 5G 7.9 ಮಿಮೀ ದಪ್ಪ, ಪೂರ್ಣ 0.3 ಮಿಮೀ ತೆಳುವಾಗಿದೆ. ನಾವು ಹಿಂಭಾಗದಲ್ಲಿ 64 MP ಟ್ರಿಪಲ್ ಕ್ಯಾಮೆರಾ, 48 MP ಮುಂಭಾಗದ ಕ್ಯಾಮೆರಾ, ಹಾಗೂ 30 ನಿಮಿಷಗಳಲ್ಲಿ ನಿಮ್ಮ ಫೋನ್ ಅನ್ನು 70% ನಷ್ಟು ಚಾರ್ಜ್ ಮಾಡುವ ವಾರ್ಪ್ ಚಾರ್ಜ್ 30T ಬೆಂಬಲಿಸುವ 4,500 mAh ಬ್ಯಾಟರಿ ನೋಡಬಹುದು. ಇದರ ಹೆಡ್‌ಫೋನ್ ಜ್ಯಾಕ್ ಪ್ರತಿಯೊಬ್ಬರಿಗೂ ಪ್ರಯತ್ನಿಸಬೇಕೆನಿಸುವ ಭಾವನೆ ಮೂಡಿಸುತ್ತದೆ.

ಅಂದಹಾಗೆಯೇ ಸ್ಮಾರ್ಟ್​ಫೋನ್​ ಬೆಲೆ 23 ಸಾವಿರ ರೂ ಆಗಿದೆ. ಅಮೆಜಾನ್​ ಮತ್ತು ಒನ್​ಪ್ಲಸ್​ ಅಧಿಕೃತ ವೆಬ್​ಸೈಟ್​ ಮೂಲಕ ಜೂನ್​ 16ರಿಂದ ಖರೀದಿಗೆ ಸಿಗಲಿದೆ.OnePlus TV U1S: ಸಿನೆಮ್ಯಾಟಿಕ್ 4K ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳು

ಟಿವಿ ಶ್ರೇಣಿ ಅಸಕ್ತಿದಾಯಕವಾಗಿದೆ. OnePlus ಈ ಹೊಸ ಸ್ಮಾರ್ಟ್​ಟಿವಿ ಹಿಂದಿಗಿಂತ ಹೆಚ್ಚು ಅಂತರ್ ಸಂಪರ್ಕ ಹೊಂದಿದೆ ಮತ್ತು OnePlus TV U1S ಆಗಿದ್ದು, ಇದು Nord CE ಯೊಂದಿಗೆ ಪಾದಾರ್ಪಣೆ ಮಾಡಿದೆ.OnePlus TV U1S 4K TVಯು ದೃಶ್ಯ ವಿಸ್ತರಣಾ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ವಾಯ್ಸ್ ಕಮ್ಯಾಂಡ್ ಹಾಗೂ OnePlus ವಾಚ್ ಅನ್ನು ರಿಮೋಟ್ ಆಗಿ ಬಳಸಬಹುದಾದ ಟಿವಿ ಬೋಸ್ಟಿಂಗ್ ಬೆಂಬಲವನ್ನೂ ನೀಡಲಾಗಿದೆ.  OnePlus TWS ಉತ್ಪನ್ನಗಳಂತಹ ವೈರ್‌ಲೆಸ್ ಹೆಡ್‌ಸೆಟ್‌ಗಳನ್ನೂ ಬೆಂಬಲಿಸುತ್ತಿದ್ದು, ಇದರೊಂದಿಗೆ ಸ್ಟೈಲಿಶ್ ಹಾಗೂ ಬೆಜ಼ೆಲ್-ಲೆಸ್ ವಿನ್ಯಾಸವನ್ನೂ ನೀಡುತ್ತಿದ್ದೇವೆ, ಇದು "ತೀವ್ರತರವಾದ ಆಳ" ಆಡಿಯೋ ಅನುಭವ ನೀಡುತ್ತದೆ.

OnePlus TV U1S ಜೂನ್ 10ರಿಂದ ರೆಡ್ ಕೇಬಲ್ ಮೂಲಕ ಮೊದಲ ಮಾರಾಟ ಮಾಡುತ್ತಿದೆ. ಇಂದಿನಿಂದ 11 ರಿಂದ ಮುಕ್ತ ಮಾರಾಟ ಲಭ್ಯವಿದೆ. Nord CE 5G ಜೂನ್ 11 ರಂದು ರೆಡ್ ಕೇಬಲ್ ಫಸ್ಟ್ ಪ್ರೀ-ಆರ್ಡರ್ ಆಗಿ ಲಭ್ಯವಿದ್ದು, ಜೂನ್ 16 ರಿಂದ ಮುಕ್ತ ಮಾರಾಟವಿರಲಿದೆ.
Published by: Harshith AS
First published: June 11, 2021, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories