HOME » NEWS » Tech » ONEPLUS NORD CE 5G NOW AVAILABLE OXYGENOS UPDATE BRINGS CAMERA ENHANCEMENTS FOR HDR AND NIGHTSCAP STG HG

OnePlus Nord CE 5G; ಆಕ್ಸಿಜನ್ ಓಎಸ್ ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​!

OnePlus Nord CE 5G: ಈ ಹೊಸ ಅಪ್‌ಡೇಟ್ ಎಚ್‌ಡಿಆರ್‌ನಲ್ಲಿ ಶೂಟಿಂಗ್ ಅನುಭವವನ್ನು ಅತ್ಯುತ್ತಮಗೊಳಿಸಲಿದ್ದು ನೈಟ್‌ಸ್ಕೇಪ್ ಶೂಟಿಂಗ್ ಪರಿಣಾಮವನ್ನು ಸುಧಾರಿಸಲಿದೆ ಹಾಗೂ ಸುಲಭ ರೆಕಾರ್ಡಿಂಗ್‌ಗೆ ಅವಕಾಶ ಮಾಡಿಕೊಡಲಿದೆ.

news18-kannada
Updated:June 19, 2021, 1:23 PM IST
OnePlus Nord CE 5G; ಆಕ್ಸಿಜನ್ ಓಎಸ್ ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​!
OnePlus Nord CE 5G
  • Share this:
ಒನ್‌ಪ್ಲಸ್ ನೋರ್ಡ್ ಕುಟುಂಬಕ್ಕೆ ಹೊಸ ಸೇರ್ಪಡೆಯಾಗಿರುವ OnePlus Nord CE 5G ಅನ್ನು ಒನ್ ಪ್ಲಸ್ ಬಿಡುಗಡೆ ಮಾಡಿದೆ. ಬಜೆಟ್ ಬೆಲೆಯಲ್ಲಿ ಬಂದಿರುವ ಈ ಸ್ಮಾರ್ಟ್​ಫೋನ್​ 22,999ರೂ.ಗೆ ಬಳಕೆದಾರರಿಗೆ ಕೈ ಸೇರಲಿದೆ. ಜೂನ್ 16 ರಂದು ಒನ್ ಪ್ಲಸ್ ಈ ಫೋನ್‌ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಆಕ್ಸಿಜನ್ ಓಎಸ್ ಆವೃತ್ತಿಯನ್ನು ಇದರಲ್ಲಿ ನೋಡಬಹುದಾಗಿದೆ. ಅತ್ಯಾಧುನಿಕ ಆಕ್ಸಿಜನ್ ಅಪ್‌ಡೇಟ್ ರಚನೆ ಸಂಖ್ಯೆ 11.0.3.3EB13DA ಹಾಗೂ 140MB ಗಾತ್ರದಲ್ಲಿದೆ.

ಈ ಹೊಸ ಅಪ್‌ಡೇಟ್ ಎಚ್‌ಡಿಆರ್‌ನಲ್ಲಿ ಶೂಟಿಂಗ್ ಅನುಭವವನ್ನು ಅತ್ಯುತ್ತಮಗೊಳಿಸಲಿದ್ದು ನೈಟ್‌ಸ್ಕೇಪ್ ಶೂಟಿಂಗ್ ಪರಿಣಾಮವನ್ನು ಸುಧಾರಿಸಲಿದೆ ಹಾಗೂ ಸುಲಭ ರೆಕಾರ್ಡಿಂಗ್‌ಗೆ ಅವಕಾಶ ಮಾಡಿಕೊಡಲಿದೆ. ಆಕ್ಸಿಜನ್ ಅಪ್‌ಡೇಟ್‌ನ ವೈಶಿಷ್ಟ್ಯವೆಂದರೆ ಅಪ್‌ಡೇಟ್ ಇನ್‌ಸ್ಟಾಲ್ ಆಗುತ್ತಿರುವಾಗ ಡಿವೈಸ್ ಅನ್ನು ಆಫ್ ಮಾಡಬೇಕಾಗಿಲ್ಲ ಹಾಗೂ ಇನ್‌ಸ್ಟಾಲೇಶನ್ ಸಮಯದಲ್ಲಿ ಹ್ಯಾಂಡ್‌ಸೆಟ್ ಅನ್ನು ಬಳಸಲಾಗುವುದಿಲ್ಲ. ನೀವು ಪ್ರಮುಖ ಅಪ್‌ಡೇಟ್‌ಗಳಿಗೆ ಮೊಬೈಲ್ ಡೇಟಾವನ್ನು ವಿನಿಯೋಗಿಸುವುದು ಬೇಡ ಎಂದಾದಲ್ಲಿ ನೀವು ವೈ-ಫೈಗೆ ಬದಲಿಸಿಕೊಳ್ಳಬಹುದಾಗಿದೆ. ಇನ್ನು ಬಳಕೆದಾರರು ಪಾಪ್-ಅಪ್ ನೋಟಿಫಿಕೇಶನ್ ಅನ್ನು ಪಡೆದುಕೊಳ್ಳಲಿದ್ದಾರೆ. ನೀವು ಮ್ಯಾನುವಲ್ ಆಗಿ ಚೆಕ್ ಮಾಡಬೇಕು ಎಂದಾದಲ್ಲಿ ಸೆಟ್ಟಿಂಗ್‌ಗಳು > ಸಿಸ್ಟಮ್ > ಸಿಸ್ಟಮ್ ಅಪ್‌ಡೇಟ್‌ಗೆ ಹೋಗಬೇಕಾಗುತ್ತದೆ.

ಇನ್ನು ಬಜೆಟ್ ವಿಷಯಕ್ಕೆ ಬಂದಾಗ ಒನ್‌ಪ್ಲಸ್ ನೋರ್ಡ್ ಸಿಇ 5ಜಿ ಒನ್‌ಪ್ಲಸ್‌ನ ಅತ್ಯುನ್ನತ ಡಿವೈಸ್ ಎಂಬುದು ಸತ್ಯ. ಸ್ಮಾರ್ಟ್‌ಫೋನ್ ನೀಲಿ ಹಾಗೂ ಚಾರ್‌ಕೋಲ್ ಕಪ್ಪು ಬಣ್ಣ ಹಾಗೂ ಸಿಲ್ವರ್ ರೇ ಬಣ್ಣದಲ್ಲಿ ಬಂದಿದೆ. ಇದು 6GB RAM + 128GB (22,999 ರೂ), 8GB RAM + 128GB (24,999 ರೂ), ಹಾಗೂ 12GB RAM + 256GB (27,999 ರೂ) ಮಾಡೆಲ್‌ಗಳಲ್ಲಿ ಬಂದಿದೆ. ಸದ್ಯಕ್ಕೆ 6GB RAM + 128GB ಸ್ಟೋರೇಜ್ ಡಿವೈಸ್ ಅಮೆಜಾನ್‌ನಲ್ಲಿ ಲಭ್ಯವಿಲ್ಲ.

ಇನ್ನು ಒನ್‌ಪ್ಲಸ್ ನೋರ್ಡ್ ಸಿಇ ಸ್ನ್ಯಾಪ್‌ಡ್ರಾಗನ್ 750G ಪ್ರೊಸೆಸರ್ ಅನ್ನು ಹೊಂದಿದೆ. ಒನ್‌ಪ್ಲಸ್ ನೋರ್ಡ್ ಸಿಇ 4500 MAh ಬ್ಯಾಟರಿ, ವಾರ್ಪ್ ಚಾಜ್ 30T ಪ್ಲಸ್ ಎಂಬ ತಂತ್ರಜ್ಞಾನ ಹೊಂದಿದ್ದು, ಶೂನ್ಯ ದಿಂದ ಶೇ. 70ರವರೆಗೆ ಅರ್ಧಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಇದು ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 750G 5G ಪ್ರೊಸೆಸರ್ ಹೊಂದಿದ್ದು, ಹಿಂದಿನ ಪ್ರೊಸೆಸರ್‌ಗಿಂತ ಶೇ. 20ರಷ್ಟು ಹೆಚ್ಚು ವೇಗ ಹೊಂದಿದೆ. ಒನ್‌ಪ್ಲಸ್‌ನ ಪ್ರಸಿದ್ಧ ಆಕ್ಸಿಜನ್ ಓಎಸ್ 11 ಆವೃತ್ತಿ ಹೊಂದಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ ಹೊಂದಿದೆ. ಇದು 64 Megapixel ಮುಖ್ಯ ಲೆನ್‌ಸ್, 8 MP. ಅಲ್ಟ್ರಾ ವೈಡ್ ಲೆನ್‌ಸ್ ಮತ್ತು 2 MP. ಮೋನೋಕೊರೀಮ್ ಸೆನ್ಸರ್ ಹೊಂದಿದೆ. ಸೆಲ್ಫೀಗೆ 16 MP ಕ್ಯಾಮರಾ ಇದೆ. ವಿಶೇಷವೆಂದರೆ ಇದಕ್ಕೆ 3.5 mm ಆಡಿಯೋ ಜಾಕ್ ಹಾಕುವ ಸೌಲಭ್ಯ ನೀಡಲಾಗಿದೆ! ಈಗ ಬರುತ್ತಿರುವ ಒನ್ ಪ್ಲಸ್ ಫೋನ್‌ಗಳಲ್ಲಿ 3.5 mm ಆಡಿಯೋ ಜಾಕ್ ಸವಲತ್ತು ಇರಲಿಲ್ಲ. ಒನ್‌ಪ್ಲಸ್‌ನ ಅತ್ಯುನ್ನತ ದರ್ಜೆಯ ಫೋನ್‌ಗಳಿಗೆ ನೀಡುವಂತೆ, ಇದಕ್ಕೂ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಅಪ್‌ಡೇಟ್ ಹಾಗೂ ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ.

ಒನ್‌ಪ್ಲಸ್ ನೋರ್ಡ್ ಕುಟುಂಬಕ್ಕೆ ಹೊಸ ಸೇರ್ಪಡೆಯಾಗಿರುವ ಒನ್ ಪ್ಲಸ್ ನೋರ್ಡ್ ಸಿಇ 5G ಅನ್ನು ಒನ್ ಪ್ಲಸ್ ಬಿಡುಗಡೆ ಮಾಡಿದೆ. ಬಜೆಟ್ ಬೆಲೆಯಲ್ಲಿ ಬಂದಿರುವ ರೂ 22,999 ಕ್ಕೆ ಬಳಕೆದಾರರಿಗೆ ಕೈ ಸೇರಲಿದೆ. ಜೂನ್ 16 ರಂದು ಒನ್ ಪ್ಲಸ್ ಈ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಆಕ್ಸಿಜನ್ ಓಎಸ್ ಆವೃತ್ತಿಯನ್ನು ಇದರಲ್ಲಿ ನೋಡಬಹುದಾಗಿದೆ. ಅತ್ಯಾಧುನಿಕ ಆಕ್ಸಿಜನ್ ಅಪ್‌ಡೇಟ್ ರಚನೆ ಸಂಖ್ಯೆ 11.0.3.3EB13DA ಹಾಗೂ 140MB ಗಾತ್ರದಲ್ಲಿದೆ.

ಈ ಹೊಸ ಅಪ್‌ಡೇಟ್ ಎಚ್‌ಡಿಆರ್‌ನಲ್ಲಿ ಶೂಟಿಂಗ್ ಅನುಭವವನ್ನು ಅತ್ಯುತ್ತಮಗೊಳಿಸಲಿದ್ದು ನೈಟ್‌ಸ್ಕೇಪ್ ಶೂಟಿಂಗ್ ಪರಿಣಾಮವನ್ನು ಸುಧಾರಿಸಲಿದೆ ಹಾಗೂ ಸುಲಭ ರೆಕಾರ್ಡಿಂಗ್‌ಗೆ ಅವಕಾಶ ಮಾಡಿಕೊಡಲಿದೆ. ಆಕ್ಸಿಜನ್ ಅಪ್‌ಡೇಟ್‌ನ ವೈಶಿಷ್ಟ್ಯವೆಂದರೆ ಅಪ್‌ಡೇಟ್ ಇನ್‌ಸ್ಟಾಲ್ ಆಗುತ್ತಿರುವಾಗ ಡಿವೈಸ್ ಅನ್ನು ಆಫ್ ಮಾಡಬೇಕಾಗಿಲ್ಲ ಹಾಗೂ ಇನ್‌ಸ್ಟಾಲೇಶನ್ ಸಮಯದಲ್ಲಿ ಹ್ಯಾಂಡ್‌ಸೆಟ್ ಅನ್ನು ಬಳಸಲಾಗುವುದಿಲ್ಲ. ನೀವು ಪ್ರಮುಖ ಅಪ್‌ಡೇಟ್‌ಗಳಿಗೆ ಮೊಬೈಲ್ ಡೇಟಾವನ್ನು ವಿನಿಯೋಗಿಸುವುದು ಬೇಡ ಎಂದಾದಲ್ಲಿ ನೀವು ವೈ-ಫೈಗೆ ಬದಲಿಸಿಕೊಳ್ಳಬಹುದಾಗಿದೆ. ಇನ್ನು ಬಳಕೆದಾರರು ಪಾಪ್-ಅಪ್ ನೋಟಿಫಿಕೇಶನ್ ಅನ್ನು ಪಡೆದುಕೊಳ್ಳಲಿದ್ದಾರೆ. ನೀವು ಮ್ಯಾನುವಲ್ ಆಗಿ ಚೆಕ್ ಮಾಡಬೇಕು ಎಂದಾದಲ್ಲಿ ಸೆಟ್ಟಿಂಗ್‌ಗಳು > ಸಿಸ್ಟಮ್ > ಸಿಸ್ಟಮ್ ಅಪ್‌ಡೇಟ್‌ಗೆ ಹೋಗಬೇಕಾಗುತ್ತದೆ.
First published: June 19, 2021, 1:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories