• Home
  • »
  • News
  • »
  • tech
  • »
  • 65W SuperVOOC ಚಾರ್ಜಿಂಗ್‌ನೊಂದಿಗಿನ OnePlus Nord CE 2 5G ಫೆಬ್ರವರಿ 22ರಿಂದ ಮುಕ್ತ ಖರೀದಿಗೆ ಲಭ್ಯವಾಗಲಿದೆ: ನೀವೇಕೆ ಇದನ್ನು ಖರೀದಿಸಬೇಕು ಎಂಬುದು ಇಲ್ಲಿದೆ

65W SuperVOOC ಚಾರ್ಜಿಂಗ್‌ನೊಂದಿಗಿನ OnePlus Nord CE 2 5G ಫೆಬ್ರವರಿ 22ರಿಂದ ಮುಕ್ತ ಖರೀದಿಗೆ ಲಭ್ಯವಾಗಲಿದೆ: ನೀವೇಕೆ ಇದನ್ನು ಖರೀದಿಸಬೇಕು ಎಂಬುದು ಇಲ್ಲಿದೆ

ಒನ್ ಪ್ಲಸ್ ಹೊಸಾ ಫೋನ್

ಒನ್ ಪ್ಲಸ್ ಹೊಸಾ ಫೋನ್

Nord CE 2 5G ಯು ಬಹಾಮ ಬ್ಲೂ ಮತ್ತು ಗ್ರೇ ಮಿರರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಮೊದಲಿನದರಲ್ಲಿ ಮ್ಯಾಟ್ ಫಿನಿಷಿಂಗ್ ಇದ್ದರೆ, ಇನ್ನೊಂದರಲ್ಲಿ ಹೆಚ್ಚಿನ ಪ್ರತಿಬಿಂಬವಿದೆ. ಈ ಎರಡೂ ಸಹ, ಈ ಫೋನ್‌ ತನ್ನ ನೈಜ ಬೆಲೆಗಿಂತ ಹೆಚ್ಚಿನ ಬೆಲೆಯದ್ದು ಇರಬಹುದು ಎನಿಸುವಂತೆ ಮಾಡುತ್ತವೆ

  • Share this:

    OnePlus Nord CE 2 ಫೆಬ್ರುವರಿ 22 ರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಆರಂಭಿಸಲಿದ್ದು, 6/128 GB ಮಾದರಿಗೆ ರೂ. 23,999 ದಿಂದ ದರಗಳು ಆರಂಭವಾಗುತ್ತವೆ. 8 GB ವೇರಿಯಂಟ್‌ಗೆ ನೀವು ಇನ್ನೂ ರೂ. 1,000 ಹೆಚ್ಚು ನೀಡಬೇಕಾಗುತ್ತದೆ. ಇದೇಕೆ ಅಷ್ಟು ಆಕರ್ಷಕವಾಗಿದೆ? ಇರಲಿ, ಒಂದು ಸಂಗತಿಗಾಗಿ ತಲೆದೂಗಬೇಕು, ಅದೇನೆಂದರೆ ಹಲವಾರು ಸ್ಮಾರ್ಟ್‌ಫೋನ್ ತಯಾರಕರು ಚಾರ್ಜರ್‌ಗಳಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡದೇ ಇರುವ ಸಂದರ್ಭದಲ್ಲಿ, ಸುಮಾರು 30 ನಿಮಿಷಗಳಲ್ಲಿ ಫೋನ್‌ನ 100% ಚಾರ್ಜ್ ಮಾಡುವ 65W SuperVOOC ಚಾರ್ಜಿಂಗ್ ಯುನಿಟ್ ಅನ್ನು OnePlus ನಿರ್ಮಿಸಿದೆ. ಎರಡನೆಯದಾಗಿ, ಚೊಕ್ಕ ಚಿಕ್ಕ ಪ್ಯಾಕೇಜ್‌ನಲ್ಲಿ Nord CE 2 ಅತ್ಯುತ್ತಮ ಮೌಲ್ಯ ಹೊಂದಿದೆ ಎಂಬ ಭಾವನೆ ತರುತ್ತದೆ.


    ನಿಮ್ಮ ರೂ. 23,999 ನಿಮಗೆ 6 GB RAM ಮತ್ತು 128 GB ಯ ಸಂಗ್ರಹಣೆಯನ್ನು ಮಾತ್ರ ನೀಡುವುದಿಲ್ಲ, ಅದರೊಂದಿಗೆ 7.8 ಮಿ.ಮೀ ದಪ್ಪವಿರುವ ಚಸಿಸ್, ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಮತ್ತು 90 Hz ರಿಫ್ರೆಶ್ ರೇಟ್‌ನೊಂದಿಗಿನ 6.43-ಇಂಚಿನ AMOLED ಡಿಸ್‌ಪ್ಲೇ, ಡ್ಯುಯಲ್ ಸಿಮ್ ಜತೆಗೆ 1 TB microSD ಕಾರ್ಡ್‌ಗಳನ್ನು ಬೆಂಬಲಿಸುವ ಟ್ರಿಪಲ್-ಸ್ಲಾಟ್ ಕಾರ್ಡ್ ಟ್ರೇ, ಚಾರ್ಜಿಂಗ್ ವೇಗವನ್ನು ದ್ವಿಗುಣಗೊಳಿಸಲು ಡ್ಯುಯಲ್ 2250 mAh ಬ್ಯಾಟರಿಗಳು ಮತ್ತು ಇನ್ನಷ್ಟು ವೈಶಿಷ್ಟ್ಯಗಳನ್ನು ನೀಡುತ್ತದೆ!


    ಇದಿಷ್ಟೇ ಅಲ್ಲ, ಇದರೊಂದಿಗೆ ಹೆವಿ-ಲಿಫ್ಟಿಂಗ್ ಮಾಡುವ MediaTek Dimensity 900 5G ಚಿಪ್ ಇದೆ, ಜತೆಗೆ ವಾಸ್ತವವಾಗಿ ಆ ಸ್ಲಿಮ್ ಚಸಿಸ್‌ನಲ್ಲಿ 3.5 ಮಿ.ಮೀ ನೈಜ ಆಡಿಯೊ ಜ್ಯಾಕ್ ಕೂಡ ಇದೆ. 


    ರೇರ್ ಕ್ಯಾಮರಾವು 8 MP ಅಲ್ಟ್ರಾ-ವೈಡ್ ಮತ್ತು 2 MP ಮ್ಯಾಕ್ರೊ ಕ್ಯಾಮರಾಗಳೊಂದಿಗೆ ಜೋಡಣೆಯಾದ 64 MP ಸೆನ್ಸರ್ ಅನ್ನು ವೈಶಿಷ್ಟ್ಯಭರಿತವಾಗಿಸಿದೆ. ಕ್ಯಾಮರಾದ ಬೆಳಕು ಒಟ್ಟುಗೂಡಿಸುವ ಸಾಮರ್ಥ್ಯಗಳನ್ನು ಸುಧಾರಿಸಲು 64 MP ಯುನಿಟ್ ಸಾಮಾನ್ಯವಾಗಿ 16 MP ಗೆ ಕುಗ್ಗುತ್ತದೆ ಮತ್ತು AI-ಬೆಂಬಲಿತ ಕಲರ್ ಸೈನ್ಸ್‌ನೊಂದಿಗೆ ಸುಂದರ, ಸ್ಪಷ್ಟ ಚಿತ್ರಗಳನ್ನು ನೀಡುವ ಭರವಸೆ ನೀಡುತ್ತದೆ.


    AI ಬಗ್ಗೆ ಹೇಳುವುದಾದರೆ, Dimensity 900 SoC ಅತ್ಯುತ್ತಮ ಬಣ್ಣಗಳನ್ನು ಮಾತ್ರ ಸಕ್ರಿಯಗೊಳಿಸುವುದಿಲ್ಲ, ಆದರೆ AI-ವರ್ಧಿತ ವೈಶಿಷ್ಟ್ಯಗಳಾದ ಅತ್ಯುತ್ತಮ ನೈಟ್ ಮೋಡ್, ಹೆಚ್ಚಿನ ನೈಸರ್ಗಿಕ ಸ್ಕಿನ್ ಟೋನ್, ಸೀನ್ ಡಿಟೆಕ್ಷನ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಸಹ ಸಕ್ರಿಯಗೊಳಿಸುತ್ತದೆ.


    ಹೆಚ್ಚುವರಿಯಾಗಿ, HD ಯಲ್ಲಿ 240 FPS ಸ್ಲೋ-ಮೋಷನ್ ರೆಕಾರ್ಡಿಂಗ್ ಆಯ್ಕೆಯೊಂದಿಗೆ ನೀವು ರೇರ್ ಕ್ಯಾಮರಾದಿಂದ 4K 30 ವೀಡಿಯೊ ಮಾಡಬಹುದು. ಆಸಕ್ತಿದಾಯಕವಾದ ವ್ಲಾಗ್‌ಗಳನ್ನು ಚಿತ್ರೀಕರಿಸಲು ನೀವು ಒಂದೇ ಸಮಯದಲ್ಲಿ ಫ್ರಂಟ್ ಮತ್ತು ರೇರ್ ಕ್ಯಾಮರಾವನ್ನು ಬಳಸುವಂತೆ ಡ್ಯುಯಲ್-ವ್ಯೂ ರೆಕಾರ್ಡಿಂಗ್ ಮೋಡ್ ಅವಕಾಶ ನೀಡುತ್ತದೆ. 


    Nord CE 2 5G ಯು ಬಹಾಮ ಬ್ಲೂ ಮತ್ತು ಗ್ರೇ ಮಿರರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಮೊದಲಿನದರಲ್ಲಿ ಮ್ಯಾಟ್ ಫಿನಿಷಿಂಗ್ ಇದ್ದರೆ, ಇನ್ನೊಂದರಲ್ಲಿ ಹೆಚ್ಚಿನ ಪ್ರತಿಬಿಂಬವಿದೆ. ಈ ಎರಡೂ ಸಹ, ಈ ಫೋನ್‌ ತನ್ನ ನೈಜ ಬೆಲೆಗಿಂತ ಹೆಚ್ಚಿನ ಬೆಲೆಯದ್ದು ಇರಬಹುದು ಎನಿಸುವಂತೆ ಮಾಡುತ್ತವೆ. ವಿನ್ಯಾಸವನ್ನು ಪರಿಷ್ಕರಿಸಲಾಗಿದ್ದು, ಈ ಬಾರಿ ಕ್ಯಾಮರಾ ಸ್ಥಳವನ್ನು ಇನ್ನಷ್ಟು ಮೃದುವಾಗಿ ಬಳಸುವಂತಹ ನಯವಾದ ಆಕರ್ಷಕ ವಿನ್ಯಾಸವನ್ನು OnePlus ನೀಡಿದೆ.


    ಒಂದು ವೇಳೆ ನೀವು 22 ಫೆಬ್ರುವರಿಯಂದು ಈ ಫೋನ್ ಖರೀದಿಸಲು ಬಯಸಿದರೆ, EMI ಪಾವತಿಗಳು ಹಾಗೂ ನೋ-ಕಾಸ್ಟ್ EMI ಆಯ್ಕೆಯ ಮೇಲೆ ICICI ಬ್ಯಾಂಕ್ ರೂ. 1,500 ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಫೋನ್ ಖರೀದಿಸುವುದರಿಂದ ನೀವು OnePlus Buds Z ಮತ್ತು Red Cable ಸದಸ್ಯತ್ವಗಳ ಮೇಲೆ ರಿಯಾಯಿತಿಯನ್ನು ಪಡೆಯುವಿರಿ, ಜತೆಗೆ ಮೂರು ತಿಂಗಳು ಉಚಿತ Spotify Premium ಸಹ ಪಡೆಯುವಿರಿ.


    24k ದರದಲ್ಲಿ, ಈ ಫೋನ್‌ನ ವೈಶಿಷ್ಟ್ಯಗಳ ಗುಚ್ಛವನ್ನು ನೀವು ಇಷ್ಟಪಡದೆ ಇರಲಾರಿರಿ, ಹಾಗೂ ‘Core Edition’ ಫೋನ್ ಆಗಿ, ಮೂಲ ಅಂಶಗಳನ್ನು ಇಷ್ಟು ಚೆನ್ನಾಗಿ OnePlus ಹೇಗೆ ರೂಪಿಸಿದೆ ಎಂದು ಆಶ್ಚರ್ಯಪಡುವುದರಲ್ಲಿ ಸಂಶಯವಿಲ್ಲ.

    Published by:Soumya KN
    First published: