OnePlus Nord 3: ಬಿಡುಗಡೆಗೂ ಮೊದಲೇ ಲೀಕ್ ಆಯ್ತು ಒನ್​ಪ್ಲಸ್​ ನಾರ್ಡ್​ 3 ಸ್ಮಾರ್ಟ್​​ಫೋನ್​ ಫೀಚರ್ಸ್​!

ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌

ಒನ್​ಪ್ಲಸ್​ ಕಂಪೆನಿ ಈ ಹಿಂದೆ ತನ್ನ ಬ್ರಾಂಡ್​ನ ಅಡಿಯಲ್ಲಿ ಒನ್​ಪ್ಲಸ್​ ನಾರ್ಡ್ 3 ಸ್ಮಾರ್ಟ್​​ಫೋನ್​ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ಇದರ ಬಿಡುಗಡೆಗೆ ಮೊದಲೇ ಫೀಚರ್ಸ್​ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಹಾಗಿದ್ರೆ ಒನ್​ಪ್ಲಸ್​ ನಾರ್ಡ್​ 3 ಸ್ಮಾರ್ಟ್​​ಫೋನ್​ನ ಫೀಚರ್ಸ್​ ಹೇಗಿದೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ಗಳಿಗೆ (Smartphones) ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಮೊಬೈಲ್​ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆಯಾಗ್ತಿದ್ದಾ ಹಾಗೇ, ಹೊಸ ಹೊಸ ಕಂಪೆನಿಗಳು ಸಹ ಹುಟ್ಟಿಕೊಳ್ತಾ ಇದೆ. ಆದರೆ ಎಷ್ಟೇ ಹೊಸ ಕಂಪೆನಿಗಳು, ಸ್ಮಾರ್ಟ್​​ಫೋನ್​​ಗಳು ಬಂದರೂ ಹಿಂದೆ ಇದ್ದ ಕಂಪೆನಿಗಳು ಮಾತ್ರ ತನ್ನ ಸ್ಥಾನವನ್ನು ಬಿಟ್ಟುಕೊಟ್ಟೇ ಇಲ್ಲ. ಇದೀಗ ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳನ್ನು ಉತ್ಪಾದನೆ ಮಾಡುವಲ್ಲಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಕಂಪೆನಿಯೆಂದರೆ ಅದು ಒನ್​ಪ್ಲಸ್​ ಕಂಪೆನಿ (OnePlus Company). ಈ ಕಂಪೆನಿ ಈವರೆಗೆ ಹೆಚ್ಚೆಂದರೆ ದುಬಾರಿ ಬೆಲೆಯ ಸ್ಮಾರ್ಟ್​​ಫೋನ್​ಗಳನ್ನೇ ಬಿಡುಗಡೆ ಮಾಡಿದೆ. ಅದರೆ ಇವೆಲ್ಲದಕ್ಕೂ ಮೊಬೈಲ್​ ಮಾರುಕಟ್ಟೆಯಲ್ಲಿ (Mobile Market) ಬಹಳಷ್ಟು ಬೇಡಿಕೆಯಿದೆ. ಸದ್ಯ ಒನ್​ಪ್ಲಸ್​ ಕಂಪೆನಿಯಿಂದ ಹೊಸ ಸ್ಮಾರ್ಟ್​​ಫೋನ್ ಒಂದು ಬಿಡುಗಡೆಯಾಗ್ತಿದೆ.


    ಒನ್​ಪ್ಲಸ್​ ಕಂಪೆನಿ ಈ ಹಿಂದೆ ತನ್ನ ಬ್ರಾಂಡ್​ನ ಅಡಿಯಲ್ಲಿ ಒನ್​ಪ್ಲಸ್​ ನಾರ್ಡ್ 3 ಸ್ಮಾರ್ಟ್​​ಫೋನ್​ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ಇದರ ಬಿಡುಗಡೆಗೆ ಮೊದಲೇ ಫೀಚರ್ಸ್​ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಹಾಗಿದ್ರೆ ಒನ್​ಪ್ಲಸ್​ ನಾರ್ಡ್​ 3 ಸ್ಮಾರ್ಟ್​​ಫೋನ್​ನ ಫೀಚರ್ಸ್​ ಹೇಗಿದೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯಿರಿ.


    ಒನ್​ಪ್ಲಸ್​ ನಾರ್ಡ್​​ 3 ಸ್ಮಾರ್ಟ್​ಫೋನ್​ನ ಡಿಸ್​ಪ್ಲೇ ವಿನ್ಸಾಸ


    ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಜೂನ್ ಮತ್ತು ಜುಲೈ ನಡುವೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದ್ದು, 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಸಹ ಪಡೆದಿರಬಹುದು ಎನ್ನಲಾಗಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌ ಹೊಂದಿರಲಿದೆ.


    ಇದನ್ನೂ ಓದಿ: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ


    ಒನ್​ಪ್ಲಸ್​ ನಾರ್ಡ್​​ 3 ಸ್ಮಾರ್ಟ್​ಫೋನ್​ನ ಕ್ಯಾಮೆರಾ ಸೆಟಪ್


    ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂಬ ನಿರೀಕ್ಷೆಯಿದೆ.


    ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌


    ಪ್ರೊಸೆಸರ್ ಸಾಮರ್ಥ್ಯ


    ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಡೈಮೆನ್ಸಿಟಿ 9000 ಎಸ್​​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ 16ಜಿಬಿ ರ್‍ಯಾಮ್ ಮತ್ತು 256ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.


    ಬ್ಯಾಟರಿ ಬ್ಯಾಕಪ್ ಹೇಗಿದೆ?


    ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಈ ಬ್ಯಾಟರಿಯು 80W SuperVOOC ಚಾರ್ಜಿಂಗ್‌ ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇದಲ್ಲದೆ ಆಕ್ಸಿಲೆರೋ ಮೀಟರ್‌, ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್​ ಅನ್ನು ಹೊಂದಿರುವ ನಿರೀಕ್ಷೆಯಿದೆ.


    ಬೆಲೆ ಮತ್ತು ಲಭ್ಯತೆ


    ಇನ್ನು ಒನ್​ಪ್ಲಸ್​ ನಾರ್ಡ್​​ 3 ಸ್ಮಾರ್ಟ್​​ಫೋನ್​ನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಕಂಪೆನಿ ಇದುವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಜೂನ್​ ಮತ್ತು ಜುಲೈ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.




    ಒನ್​​ಪ್ಲಸ್​ 11 5ಜಿ ಸ್ಮಾರ್ಟ್​​ಫೋನ್​


    ಒನ್‌ಪ್ಲಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಒನ್‌ಪ್ಲಸ್‌ 11 5ಜಿ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಒನ್‌ಪ್ಲಸ್‌ 11 5ಜಿ ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,440x3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್​​ಫೋನ್​ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಸಹ ಹೊಂದಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು