One Plus Nord 2: ಯಾವಾಗ ಬಿಡುಗಡೆ, ಏನು ಸ್ಪೆಷಲ್ ಫೀಚರ್ಸ್, ರೇಟ್ ಎಷ್ಟು ? ಫುಲ್ ಡೀಟೆಲ್ಸ್ ಇಲ್ಲಿದೆ

One Plus Nord 2: ಒನ್‌ಪ್ಲಸ್ ಕಂಪನಿಯ ನಾರ್ಡ್ 2 ಸ್ಮಾರ್ಟ್‌ಫೋನ್‌ 31,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಆಗಲಿದ್ದು ಇದರಲ್ಲಿ 8 ಜಿಬಿ ರ‍್ಯಾಮ್‌ ಇದ್ದು, 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಅಲ್ಲದೆ, 34,999 ರೂ. ಗೆ 12 ಜಿಬಿ ರ‍್ಯಾಮ್‌ ಮತ್ತು 256 ಜಿಬಿ ಸ್ಟೋರೇಜ್ ಅನ್ನು ಹೊಂದಿರುತ್ತದೆ.

ಒನ್ ಪ್ಲಸ್ ನಾರ್ಡ್ 2

ಒನ್ ಪ್ಲಸ್ ನಾರ್ಡ್ 2

  • Share this:
One Plus Nord 2: ಬಹು ನಿರೀಕ್ಷಿತ ಒನ್‌ಪ್ಲಸ್ ನಾರ್ಡ್ 2 5ಜಿ ಸ್ಮಾರ್ಟ್‌ಫೋನ್‌ ಅನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಹೊಸದಾಗಿ ಬಿಡುಗಡೆ ಆಗುವ 5ಜಿ ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆಯ ಬಗ್ಗೆ ತುಂಬಾನೇ ಉಹಾಪೋಹಗಳು ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಆದರೆ ಈಗ 91ಮೊಬೈಲ್ಸ್ ಬಿಡುಗಡೆ ಮಾಡಿದಂತಹ ವರದಿಯ ಪ್ರಕಾರ ಒನ್‌ಪ್ಲಸ್ ಕಂಪೆನಿಯ ನಾರ್ಡ್ 2 ಸ್ಮಾರ್ಟ್‌ಫೋನ್‌ 31,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಆಗಲಿದೆ ಎಂಬ ಹೊಸ ಸುದ್ದಿ ಬಂದಿರುವುದು ಈ 5ಜಿ ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳಲು ಕಾತುರತೆಯಿಂದ ಕಾಯುವವರಿಗೆ ಸುಳಿವು ನೀಡಿದಂತೆ ಆಗಿದೆ. ಒನ್‌ಪ್ಲಸ್ ಕಂಪನಿಯ ನಾರ್ಡ್ 2 ಸ್ಮಾರ್ಟ್‌ಫೋನ್‌ಗಳು ಆರಂಭದಲ್ಲಿ 2 ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಈ ವರದಿಯಲ್ಲಿ ಹೇಳಿದ್ದಾರೆ. ಈ ಸ್ಮಾರ್ಟ್‌ಫೋನ್‌ ಜುಲೈ 22ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಅದರ ಆರಂಭಿಕ ಬೆಲೆ ಮತ್ತು ಎಷ್ಟು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂಬ ಮಾಹಿತಿಗಳು ಬಿಡುಗಡೆಯ ನಂತರವೇ ಖಚಿತವಾಗಿ ತಿಳಿದುಕೊಳ್ಳಬಹುದಾಗಿದೆ.


ಒನ್‌ಪ್ಲಸ್ ಕಂಪನಿಯ ನಾರ್ಡ್ 2 ಸ್ಮಾರ್ಟ್‌ಫೋನ್‌ 31,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಆಗಲಿದ್ದು ಇದರಲ್ಲಿ 8 ಜಿಬಿ ರ‍್ಯಾಮ್‌ ಇದ್ದು, 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಅಲ್ಲದೆ, 34,999 ರೂ. ಗೆ 12 ಜಿಬಿ ರ‍್ಯಾಮ್‌ ಮತ್ತು 256 ಜಿಬಿ ಸ್ಟೋರೇಜ್ ಅನ್ನು ಹೊಂದಿರುತ್ತದೆ. ಈ ವರದಿಯಲ್ಲಿ ಒನ್‌ಪ್ಲಸ್‌ನ ನಾರ್ಡ್ 2 ಸ್ಮಾರ್ಟ್‌ಫೋನ್‌ ಗ್ರೇ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದೂ ತಿಳಿಸಿದ್ದಾರೆ.


ಕಳೆದ ವರ್ಷ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು ಅದರ ಆರಂಭಿಕ ಬೆಲೆಯು 24,999 ಆಗಿತ್ತು. ಇದರಲ್ಲಿ 6 ಜಿಬಿ ರ‍್ಯಾಮ್‌, 64 ಜಿಬಿ ಸ್ಟೋರೇಜ್ ಅನ್ನು ಹೊಂದಿತ್ತು. ಅಲ್ಲದೆ, 27,999 ರೂ. ಬೆಲೆಯ ಸ್ಮಾರ್ಟ್‌ಫೋನ್‌ನಲ್ಲಿ 8 ಜಿಬಿ ರ‍್ಯಾಮ್‌ ಮತ್ತು 128 ಜಿಬಿ ಸ್ಟೋರೇಜ್ ಅನ್ನು ಹೊಂದಿತ್ತು. ಇದರಲ್ಲಿ ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ 29,999 ರೂ. ಆರಂಭಿಕ ಬೆಲೆ ಹೊಂದಿದ್ದು, ಅದರಲ್ಲಿ 12 ಜಿಬಿ ರ‍್ಯಾಮ್‌ ಹೊಂದಿದ್ದು 256 ಜಿಬಿ ಸ್ಟೋರೇಜ್ ಹೊಂದಿತ್ತು. ಒನ್‌ಪ್ಲಸ್ ಈಗ ನಾರ್ಡ್ 2 ಸ್ಮಾರ್ಟ್‌ಫೋನ್‌ನ ಒಂದೊಂದೇ ವಿಶೇಷತೆಗಳನ್ನು ಬಿಡುಗಡೆ ಮಾಡುತ್ತಿದೆ.




ಹೊಸದಾಗಿ ಬಿಡುಗಡೆಗೆ ಸಿದ್ಧವಾಗಿರುವಂತಹ 5 ಜಿಬಿ ನಾರ್ಡ್ ಸ್ಮಾರ್ಟ್‌ಫೋನ್‌ 2 ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಬೆಂಬಲಿಸುತ್ತದೆ ಮತ್ತು ಮೂರು ವರ್ಷಗಳ ಭದ್ರತಾ ಅಪಡೇಟ್ಗಳನ್ನೂ ಬೆಂಬಲಿಸುತ್ತದೆ ಎಂದು ಒನ್‌ಪ್ಲಸ್ ಭರವಸೆ ನೀಡಿದೆ. ಇದರ ಕ್ಯಾಮೆರಾ ಮೂರು ಲೆನ್ಸ್ ಅನ್ನು ಹೊಂದಿದ್ದು, 50 ಮೆಗಾ ಪಿಕ್ಸಲ್ ಕ್ಯಾಮೆರಾ ಲೆನ್ಸ್ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.







ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: