One Plus Nord2 Review: ಮಾರುಕಟ್ಟೆಯಲ್ಲಿರುವ ಎಲ್ಲಾ ಫೋನ್​ಗಳಿಗಿಂತ ಇದು ಹೇಗೆ ಭಿನ್ನ?

One Plus Nord2: ಒನ್‌ಪ್ಲಸ್ ನಾರ್ಡ್ 2 5G 6.43 ಇಂಚಿನ ಪೂರ್ಣ ಎಚ್‌ಡಿ + ಫ್ಲೂಯಿಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 12 GB RAM ಮತ್ತು 256GB ಆಂತರಿಕ ಸ್ಟೋರೇಜ್ ಅನ್ನು ನೀಡುತ್ತದೆ.

OnePlus Nord 2

OnePlus Nord 2

  • Share this:

One Plus Nord2: ಇತ್ತೀಚೆಗೆ ಒನ್‌ಪ್ಲಸ್ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಬದಲಿಗೆ ಮಧ್ಯಮ ದರಗಳ ಸ್ಮಾರ್ಟ್‌ಫೋನ್ ಲಾಂಚ್‌ಗೆ ಗಮನ ಹರಿಸಿದ್ದು ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಉತ್ತಮ ಉದಾಹರಣೆಯಾಗಿದೆ. ಇದೀಗ ಒನ್‌ಪ್ಲಸ್ ನಾರ್ಡ್ 2 ಅನ್ನು ಕೂಡ ಮಧ್ಯಮ ಶ್ರೇಯಾಂಕಿತ ಬೆಲೆಯಲ್ಲಿಯೇ ಲಾಂಚ್‌ ಮಾಡಿರುವ ಕಂಪೆನಿ ಕೈಗೆಟಕುವ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಫೀಚರ್ ಹಾಗೂ ಓಎಸ್ ಇರುವ ಡಿವೈಸ್‌ಗಳನ್ನು ಫೋನ್ ಪ್ರಿಯರಿಗೆ ಒದಗಿಸುತ್ತಿವೆ. ಒನ್ ಪ್ಲಸ್ ನಾರ್ಡ್ ಆರಂಭ ಬೆಲೆ ರೂ 29,999 ರಿಂದ ಆರಂಭಗೊಂಡು ರೂ 34,999 ರವರೆಗೆ ಇದೆ. ನೀವು ಆಯ್ಕೆಮಾಡುವ ರ‍್ಯಾಮ್ ಹಾಗೂ ಸ್ಟೋರೇಜ್ ಸಂಗ್ರಹಣೆಯನ್ನು ಇದು ಆಧರಿಸಿದೆ. ರಿಯಲ್ ಮಿ ಎಕ್ಸ್7 ಮ್ಯಾಕ್ಸ್ 5ಜಿ, ಪೋಕೋ ಎಫ್‌3 ಜಿಟಿ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್ ಅನ್ನು ಒಳಗೊಂಡಿದ್ದು ನಾರ್ಡ್ 2 ಕೂಡ ಅದೇ ಚಿಪ್ ಅನ್ನು ಪಡೆದುಕೊಂಡಿದೆ. ಒನ್ ಪ್ಲಸ್ ವಿನ್ಯಾಸ ಹಾಗೂ ಕ್ರಿಯಾತ್ಮಕ ಅಂಶಗಳು ಭಿನ್ನವಾಗಿದ್ದು ಗಮನ ಸೆಳೆಯುವ ಡಿವೈಸ್ ಇದಾಗಿದೆ ಎಂಬುದಂತೂ ನಿಜವಾಗಿದೆ. 5 ಜಿ ಡಿವೈಸ್ ಇದಾಗಿರುವುದರಿಂದ ಇದರಲ್ಲಿರುವ ಗ್ರಾಫಿಕ್ಸ್ ಕೂಡ ಸರಳವಾಗಿದ್ದು ಕಣ್ಮನ ಸೆಳೆಯುವಂತಿದೆ.


ಇದು ಮೂರು ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಅದು 50 ಮೆಗಾ ಪಿಕ್ಸಲ್ ಐಎಂಎಕ್ಸ್ 766 ಸಂವೇದಕ, 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2 ಮೆಗಾ ಪಿಕ್ಸಲ್ ತೃತೀಯ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಇದು 32 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ ಸೆಟಪ್ ನೊಂದಿಗೆ ಬರುತ್ತದೆ. ಕ್ಯಾಮೆರಾ ಡ್ಯುಯಲ್ ವಿಡಿಯೋ, ನೈಟ್‌ಸ್ಕೇಪ್ ಅಲ್ಟ್ರಾ, ಗ್ರೂಪ್ ಶಾಟ್ 2.0 ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.


ಒನ್‌ಪ್ಲಸ್ ನಾರ್ಡ್ 2 5G 6.43 ಇಂಚಿನ ಪೂರ್ಣ ಎಚ್‌ಡಿ + ಫ್ಲೂಯಿಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 12 GB RAM ಮತ್ತು 256GB ಆಂತರಿಕ ಸ್ಟೋರೇಜ್ ಅನ್ನು ನೀಡುತ್ತದೆ. ಸ್ಮಾರ್ಟ್‌ಫೋನ್ ಆಕ್ಸಿಜನ್ OS11.3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಒನ್‌ಪ್ಲಸ್ ನಾರ್ಡ್ 2 ಎರಡು ಓಎಸ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಸಾಫ್ಟ್‌ವೇರ್ ಬೆಂಬಲವನ್ನು ಪಡೆಯುವುದನ್ನು ದೃಢಪಡಿಸಲಾಗಿದೆ.


ಇದನ್ನೂ ಓದಿ: Hyundai i20 N Line: ಹೊಸಾ ಕಾರ್ ತರುತ್ತಿದೆ ಹುಂಡೈ, ಈ ವರ್ಷವೇ ಮಾರುಕಟ್ಟೆಗೆ ರಿಲೀಸ್, ಫೀಚರ್ಸ್ ಏನಿದೆ ನೋಡಿ!

ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು 11 ಮಿಲಿ ಮೀಟರ್ ಡೈನಾಮಿಕ್ ಡ್ರೈವರ್‌ಗಳು, ಡಾಲ್ಬಿ ಅಟ್ಮೋಸ್ ಬೆಂಬಲ, ಮೂರು ಮೈಕ್ರೊಫೋನ್‌ನೊಂದಿಗೆ ಬರುತ್ತವೆ. ಒನ್‌ಪ್ಲಸ್ ಬಡ್ಸ್ ಪ್ರೊ ಐಪಿ 55 ನೀರು ಮತ್ತು ಧೂಳಿನ ಪ್ರತಿರೋಧಕಗಳಾಗಿದ್ದು ಮತ್ತು ಉತ್ತಮ ಗೇಮಿಂಗ್‌ಗಾಗಿ 96 ಎಂಎಸ್ ಲೇಟೆನ್ಸಿ ಸಹ ಹೊಂದಿದೆ. ಇಯರ್‌ಬಡ್‌ಗಳು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತವೆ. ಒನ್‌ಪ್ಲಸ್ ಬಡ್ಸ್ ಪ್ರೊ 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು ಕೇವಲ 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: