Oneplus Nord 2: 5G ಸ್ಮಾರ್ಟ್‌ಫೋನ್‌ ಒನ್‌ಪ್ಲಸ್ ನಾರ್ಡ್ 2, ಒನ್ ಪ್ಲಸ್ ಬಡ್ಸ್ ಪ್ರೊ ಇದೀಗ ಭಾರತದಲ್ಲಿ ಲಭ್ಯ

ಒನ್‌ಪ್ಲಸ್ ನಾರ್ಡ್ 2 ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಮೊದಲನೆಯದು 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂಪಾಯಿಯಾಗಿದ್ದು ಮತ್ತು ಆಗಸ್ಟ್ 2021 ರಲ್ಲಿ ಖರೀದಿಗೆ ಲಭ್ಯವಿರುತ್ತದೆ.

OnePlus Nord 2

OnePlus Nord 2

  • Share this:

    ಒನ್‌ಪ್ಲಸ್ ಕಂಪೆನಿಯು ಇಂದು ಭಾರತದಲ್ಲಿ ತನ್ನ ಗ್ರಾಹಕರಿಗಾಗಿ 5ಜಿ ಸ್ಮಾರ್ಟ್‌ಫೋನ್‌ಒನ್‌ಪ್ಲಸ್ ನಾರ್ಡ್ 2 ಮತ್ತು ಒನ್‌ಪ್ಲಸ್ ಬಡ್ಸ್ ಪ್ರೊ ಅನ್ನು ಬಿಡುಗಡೆ ಮಾಡಿದೆ. ಒನ್‌ಪ್ಲಸ್ ನಾರ್ಡ್ 2 ಕಂಪೆನಿಯ ನಾರ್ಡ್ ಸರಣಿಗೆ ಸೇರುತ್ತದೆ, ಈಗಾಗಲೇ ಈ ಸರಣಿಯು ಒನ್‌ಪ್ಲಸ್ ನಾರ್ಡ್ ಮತ್ತು ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಅನ್ನು ಒಳಗೊಂಡಿದೆ.


    ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್ ಅನ್ನು ಹೊಂದಿದ್ದು, 50 ಮೆಗಾ ಪಿಕ್ಸಲ್ ಮೂರು ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಈ 5G ಸ್ಮಾರ್ಟ್‌ಫೋನ್‌ 4,500 ಮೆಗಾ ಅಂಪೇರ್ ಪ್ರತಿ ಗಂಟೆಗೆ ಬ್ಯಾಟರಿಯನ್ನು ಹೊಂದಿದ್ದು, 65 ವ್ಯಾಟ್ ವಾರ್ಪ್ ಚಾರ್ಜ್‌ಗೆ ಬೆಂಬಲಿಸುತ್ತದೆ.


    ಒನ್‌ಪ್ಲಸ್ ನಾರ್ಡ್2, ಒನ್‌ಪ್ಲಸ್ ಬಡ್ಸ್ ಪ್ರೊ ಬೆಲೆಲಭ್ಯತೆಮಾರಾಟದ ಕೊಡುಗೆಗಳು ಹೀಗಿವೆ


    ಒನ್‌ಪ್ಲಸ್ ನಾರ್ಡ್ 2 ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಮೊದಲನೆಯದು 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂಪಾಯಿಯಾಗಿದ್ದು ಮತ್ತು ಆಗಸ್ಟ್ 2021 ರಲ್ಲಿ ಖರೀದಿಗೆ ಲಭ್ಯವಿರುತ್ತದೆ. ಎರಡನೆಯ ರೂಪಾಂತರ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 29,999 ರೂಪಾಯಿ ಮತ್ತು ಕೊನೆಯದಾಗಿ ಮೂರನೆಯ ವಿಧ 12 GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 34,999 ರೂಪಾಯಿ ಆಗಿದ್ದು, ಈ ಎರಡು ಸ್ಟೋರೇಜ್ ರೂಪಾಂತರಗಳು ಜುಲೈ 28 ರಂದು ಮಾರಾಟಕ್ಕೆ ಲಭ್ಯವಿರುತ್ತವೆ.


    ಸ್ಮಾರ್ಟ್‌ಫೋನ್ ಬ್ಲೂ ಹೇಸ್ (ನೀಲಿ), ಗ್ರೇ ಸಿಯೆರಾ (ಬೂದು) ಮತ್ತು ಗ್ರೀನ್ ವುಡ್ಸ್ (ಹಸಿರು) (ಭಾರತದಲ್ಲಿ ಮಾತ್ರ) ಬಣ್ಣ ರೂಪಾಂತರಗಳಲ್ಲಿ ಬರುತ್ತದೆ. ಜುಲೈ 28 ರಿಂದ ವಿಜಯ್ ಸೇಲ್ಸ್‌ನಿಂದ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರುತ್ತವೆ.


    ಸ್ಮಾರ್ಟ್‌ಫೋನ್‌ ಈಗ ರೆಡ್ ಕೇಬಲ್ ಕ್ಲಬ್ ಸದಸ್ಯರು ಮತ್ತು ಅಮೆಜಾನ್ ಪ್ರೈಮ್ ಸದಸ್ಯರಿಗೆ ಜುಲೈ 26 - 27 ರಂದು ಒನ್‌ಪ್ಲಸ್.ಇನ್, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಅಮೆಜಾನ್ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್ಗ‌ಳಲ್ಲಿ ಖರೀದಿಸಲು ಲಭ್ಯವಿರುತ್ತದೆ.


    ಮಾರಾಟದ ಕೊಡುಗೆ ಪ್ರಕಾರವಾಗಿ, ಒನ್‌ಪ್ಲಸ್.ಇನ್ ಅಥವಾ ಒನ್‌ಪ್ಲಸ್ ಸ್ಟೋರ್ ಆ್ಯಪ್ ಮೂಲಕ ಖರೀದಿಸುವ ಖರೀದಿದಾರರು ಒನ್‌ಪ್ಲಸ್ ಬ್ಯಾಂಡ್ ಅಥವಾ ಒನ್‌ಪ್ಲಸ್ ಬಡ್ಸ್ ಝಡ್ ಅನ್ನು 1,499 ರೂಪಾಯಿಗೆ ಪಡೆಯಲು ಅರ್ಹರಾಗಿರುತ್ತಾರೆ. ಇದರ ಜೊತೆಗೆ, ಒನ್‌ಪ್ಲಸ್ ಸ್ಟೋರ್ ಆ್ಯಪ್ ಮೂಲಕ ಖರೀದಿಸುವ ಮೊದಲ 2,000 ಖರೀದಿದಾರರು ಒನ್‌ಪ್ಲಸ್ ಹ್ಯಾಂಡಿ ಫ್ಯಾನಿ ಪ್ಯಾಕ್ ಅನ್ನು ಗೆಲ್ಲುತ್ತಾರೆ.


    ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮತ್ತು ಇಎಂಐ ವಹಿವಾಟುಗಳಿಗೆ 1,000 ರೂಪಾಯಿ ಖರೀದಿದಾರರು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ನಿಂದ ಒನ್‌ಪ್ಲಸ್ ನಾರ್ಡ್ 2 5G ಗೆ ಅಪ್‌ಗ್ರೇಡ್ ಮಾಡುತ್ತಿದ್ದರೆ, ಅವರಿಗೆ ತ್ವರಿತ ರಿಯಾಯಿತಿ 1,000 ರೂಪಾಯಿ ನೀಡಲಾಗುತ್ತದೆ. ಈ ಕೊಡುಗೆ ಜುಲೈ 26 ರಿಂದ ಜುಲೈ 31 ರವರೆಗೆ ಮಾತ್ರ ಲಭ್ಯವಿರುತ್ತದೆ.


    ಒನ್‌ಪ್ಲಸ್ ನಾರ್ಡ್ 2 5G ಖರೀದಿಸಿದಾಗ, ಗ್ರಾಹಕರು 3 ತಿಂಗಳ ಸ್ಪೋಟಿಫೈ ಪ್ರೀಮಿಯಂ ಅನ್ನು ಉಚಿತವಾಗಿ ಪಡೆಯುತ್ತಾರೆ. ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್ ಕೇಬಲ್ ಕ್ಲಬ್‌ಗೆ ಸೇರುವ ಖರೀದಿದಾರರು ರೆಡ್ ಕೇಬಲ್ ಕೇರ್ ಯೋಜನೆಯೊಂದಿಗೆ ಹೆಚ್ಚುವರಿ 1 TB ಮೇಗಾ ಕ್ಲೌಡ್ ಸ್ಟೋರೇಜ್ ಅನ್ನು ಪಡೆಯುತ್ತಾರೆ.


    ಒನ್‌ಪ್ಲಸ್ ಬಡ್ಸ್ ಪ್ರೊ ಇಂಡಿಯಾ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ ಆದರೆ ಇದರ ಬೆಲೆ ಅಮೆರಿಕದಲ್ಲಿ 150 ಡಾಲರ್ (ಅಂದಾಜು 11,200 ರೂ) ಆಗಿದೆ. ಅವು ಗ್ಲೋಸಿ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್ ಕಲರ್ ರೂಪಾಂತರಗಳಲ್ಲಿ ಬರುತ್ತವೆ. ಒನ್‌ಪ್ಲಸ್ ಬಡ್ಸ್ ಪ್ರೊ ಇಂಡಿಯಾಅಮೆಜಾನ್.ಇನ್, ಒನ್‌ಪ್ಲಸ್.ಇನ್, ನಲ್ಲಿ ಮತ್ತು ಒನ್‌ಪ್ಲಸ್ ಪಾಲುದಾರರ ಅಂಗಡಿಗಳಲ್ಲಿ ಲಭ್ಯವಿರುತ್ತವೆ.


    5ಜಿ ಒನ್‌ಪ್ಲಸ್ ನಾರ್ಡ್2ಸ್ಮಾರ್ಟ್‌ಫೋನ್ ವಿಶೇಷತೆಗಳು


    ಒನ್‌ಪ್ಲಸ್ ನಾರ್ಡ್ 2 5G 6.43 ಇಂಚಿನ ಪೂರ್ಣ ಎಚ್‌ಡಿ + ಫ್ಲೂಯಿಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 12 GB RAM ಮತ್ತು 256GB ಆಂತರಿಕ ಸ್ಟೋರೇಜ್ ಅನ್ನು ನೀಡುತ್ತದೆ. ಸ್ಮಾರ್ಟ್‌ಫೋನ್ ಆಕ್ಸಿಜನ್ OS11.3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಒನ್‌ಪ್ಲಸ್ ನಾರ್ಡ್ 2 ಎರಡು ಓಎಸ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಸಾಫ್ಟ್‌ವೇರ್ ಬೆಂಬಲವನ್ನು ಪಡೆಯುವುದನ್ನು ದೃಢಪಡಿಸಲಾಗಿದೆ.


    ಇದು ಮೂರು ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಅದು 50 ಮೆಗಾ ಪಿಕ್ಸಲ್ ಐಎಂಎಕ್ಸ್ 766 ಸಂವೇದಕ, 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2 ಮೆಗಾ ಪಿಕ್ಸಲ್ ತೃತೀಯ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಇದು 32 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ ಸೆಟಪ್ ನೊಂದಿಗೆ ಬರುತ್ತದೆ. ಕ್ಯಾಮೆರಾ ಡ್ಯುಯಲ್ ವಿಡಿಯೋ, ನೈಟ್‌ಸ್ಕೇಪ್ ಅಲ್ಟ್ರಾ, ಗ್ರೂಪ್ ಶಾಟ್ 2.0 ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.


    ಒನ್‌ಪ್ಲಸ್ ಬಡ್ಸ್ ಪ್ರೊ ವಿಶೇಷತೆಗಳು


    ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು 11 ಮಿಲಿ ಮೀಟರ್ ಡೈನಾಮಿಕ್ ಡ್ರೈವರ್‌ಗಳು, ಡಾಲ್ಬಿ ಅಟ್ಮೋಸ್ ಬೆಂಬಲ, ಮೂರು ಮೈಕ್ರೊಫೋನ್‌ನೊಂದಿಗೆ ಬರುತ್ತವೆ. ಒನ್‌ಪ್ಲಸ್ ಬಡ್ಸ್ ಪ್ರೊ ಐಪಿ 55 ನೀರು ಮತ್ತು ಧೂಳಿನ ಪ್ರತಿರೋಧಕಗಳಾಗಿದ್ದು ಮತ್ತು ಉತ್ತಮ ಗೇಮಿಂಗ್‌ಗಾಗಿ 96 ಎಂಎಸ್ ಲೇಟೆನ್ಸಿ ಸಹ ಹೊಂದಿದೆ. ಇಯರ್‌ಬಡ್‌ಗಳು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತವೆ. ಒನ್‌ಪ್ಲಸ್ ಬಡ್ಸ್ ಪ್ರೊ 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು ಕೇವಲ 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.


    First published: