Amazon Prime Day Saleನಲ್ಲಿ One Plus Nord 2 5G ಫೋನ್ ನೋಡಿದ್ರಾ? ಈಗಾಗಲೇ ಭಾರತದಲ್ಲಿ ಸಿಗುತ್ತಿದೆ!

One Plus Nord 2 5G ಭಾರತದಲ್ಲಿ ಲಭ್ಯವಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಇದರಲ್ಲಿ ಪ್ರೈಮರಿ ಕ್ಯಾಮರಾ, ಹೆಚ್ಚು ಸಾಮರ್ಥ್ಯವನ್ನೊಳಗೊಂಡ ಬ್ಯಾಟರಿ ಹೊಂದಿದೆ. ಅಲ್ಲದೇ ಬೇಗನೇ ಚಾರ್ಜ್ ಕೂಡ ಆಗುತ್ತದೆ. ಇದು Amazon Prime Day Saleನಲ್ಲೂ ಇದು ಲಭ್ಯವಿದೆ.

ಒನ್ ಪ್ಲಸ್ ನಾರ್ಡ್ 2

ಒನ್ ಪ್ಲಸ್ ನಾರ್ಡ್ 2

  • Share this:

One Plus Nord 2 5G: ಒನ್‍ಪ್ಲಸ್ ನಾರ್ಡ್ 2 5ಜಿ ಸ್ಮಾರ್ಟ್ಫೋನ್ ಕಂಪೆನಿಯು ಭಾರತೀಯರಿಗೆ ಸಿಹಿಸುದ್ದಿ ಕೊಟ್ಟಿದೆ. ನಿನ್ನೆಯಿಂದಲೇ ಒನ್‍ಪ್ಲಸ್ ನಾರ್ಡ್ 2 5ಜಿ ಭಾರತದಲ್ಲಿ ಲಭ್ಯವಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಇದರಲ್ಲಿ ಪ್ರೈಮರಿ ಕ್ಯಾಮರಾ, ಹೆಚ್ಚು ಸಾಮರ್ಥ್ಯವನ್ನೊಳಗೊಂಡ ಬ್ಯಾಟರಿ ಹೊಂದಿದೆ. ಅಲ್ಲದೇ ಬೇಗನೇ ಚಾರ್ಜ್ ಕೂಡ ಆಗುತ್ತದೆ. ಇದು ಅಮೆಜಾನ್ ಪ್ರೈಮ್ ಡೇಯಲ್ಲೂ ಲಭ್ಯವಿದೆ.ಇದನ್ನು ಅಮೆಜಾನ್ ಅಥವಾ ಒನ್ ಪ್ಲಸ್ ವೆಬ್‍ಸೈಟ್‍ನಲ್ಲಿ ಖರೀದಿಸಲು ಅವಕಾಶವಿದೆ. ಅಮೆಜಾನ್ ಪ್ರೈಮ್ ಸದಸ್ಯರು ಮತ್ತು ಒನ್‍ಪ್ಲಸ್ ’ರೆಡ್ ಕೇಬಲ್ ಕ್ಲಬ್ ಸದಸ್ಯರು ಇಂದು 12 ಜಿಬಿ ಮತ್ತು 8 ಜಿಬಿ ರೂಪಾಂತರಗಳ ಸ್ಮಾರ್ಟ್ಫೋನ್ ಖರೀದಿಸಬಹುದು. ಬ್ಲೂ ಹೇಸ್ ಬಣ್ಣದಲ್ಲಿರುವ 6 ಜಿಬಿ ರ‍್ಯಾಮ್ 128 ಜಿಬಿ ಸಂಗ್ರಹಣಾ ಸಾಮರ್ಥ್ಯದ ಸ್ಮಾರ್ಟ್‍ಫೋನ್ ಆಗಸ್ಟ್ 30ರಂದು ಸೀಮಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ.


ರಿಯಾಯಿತಿ
ಒನ್‍ಪ್ಲಸ್ ನಾರ್ಡ್ 2 5 ಜಿ ಸ್ಮಾರ್ಟ್ ಫೋನ್ ಸಾವಿರ ರೂ.ನ ತ್ವರಿತ ರಿಯಾಯಿತಿ ಒಳಗೊಂಡಂತೆ ಎಚ್‍ಡಿಎಫ್‍ಸಿ ಡೆಬಿಟ್ ಮತ್ತು ಕ್ರಡಿಟ್ ಕಾರ್ಡ್ ಹೊಂದಿರುವವರಿಗೆ ಮೂರು ಮತ್ತು ಆರು ತಿಂಗಳುಗಳವರೆಗೆ ಇಎಂಐ ಆಯ್ಕೆಯ ಮೇಲೆ ಯಾವುದೇ ವೆಚ್ಚವಿಲ್ಲ ಮತ್ತು ಇಎಂಐ ವಹಿವಾಟನ್ನು OnePlus.in ಮೂಲಕ ನಡೆಸಬಹುದು. ಗ್ರಾಹಕರಿಗೆ ಹೆಚ್ಚುವರಿ ರೂ 1,000 ವಿನಿಮಯ ರಿಯಾಯಿತಿ ಸಹ ಸಿಗುತ್ತದೆ. ಇದಲ್ಲದೆ, ಎಚ್‍ಡಿಎಫ್‍ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು ಮತ್ತು ಇಎಂಐ ವಹಿವಾಟುಗಳ ಮೂಲಕ ಒನ್‍ಪ್ಲಸ್ ನಾರ್ಡ್ 2 5 ಜಿ ಖರೀದಿಸುವ ಗ್ರಾಹಕರಿಗೆ ಅಮೆಜಾನ್ 10 ಪ್ರತಿಶತ ತ್ವರಿತ ರಿಯಾಯಿತಿ ನೀಡುತ್ತದೆ. ಒನ್‍ಪ್ಲಸ್ ನಾರ್ಡ್ 2 5ಜಿ ಅಮೆಜಾನ್ ಪ್ರೈಮ್ ಸದಸ್ಯರು ಮತ್ತು ರೆಡ್ ಕೇಬಲ್ ಕ್ಲಬ್‍ನ ಸದಸ್ಯರಿಗೆ ಮಾತ್ರ ಲಭ್ಯವಿದೆ ಮತ್ತು ಇತರ ಗ್ರಾಹಕರಿಗೆ ಹಾಗೂ ಅಮೆಜಾನ್, ಒನ್‍ಪ್ಲಸ್.ಇನ್, ಒನ್‍ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಇತರ ಚಿಲ್ಲರೆ ಚಾನೆಲ್‍ಗಳ ಮೂಲಕ ಜುಲೈ 28 ರಿಂದ ಲಭ್ಯವಾಗಲಿದೆ.


ಇದನ್ನೂ ಓದಿ: ಇತ್ತೀಚಿನ ಗ್ಯಾಜೆಟ್‌ಗಳಿಂದ ಹಿಡಿದು ಫ್ಯಾಶನ್ ಎಸೆನ್ಷಿಯಲ್‌ಗಳವರೆಗೆ ನಿಮ್ಮ ಎಲ್ಲಾ ಆಗತ್ಯಗಳನ್ನು ಪೂರೈಸಲು ಬಂದಿದೆ Amazon Prime Day

ವೈಶಿಷ್ಟ್ಯಗಳು
ಇದು 6.43 ಇಂಚು ಹೊಂದಿದ್ದು, ಎಚ್‍ಡಿ+ಅಲೊಲೆಡ್ ಡಿಸ್ಪ್ಲೇ ಹೊಂದಿದೆ. 90ಎಚ್‍ಜೆಡ್ ಪರಿಷ್ಕೃತ ದರವಿದೆ. 12 ಜಿಬಿ ರ‍್ಯಾಮ್ + 256 ಜಿಬಿ ಸಂಗ್ರಹಣ ಸಾಮರ್ಥ್ಯದ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಹೊಂದಿದೆ. 4,500ಎಂಎಎಚ್ ಬ್ಯಾಟರಿ ಹೊಂದಿದ್ದು, ಅದು 65ಡಬ್ಲ್ಯೂ ವೇಗದ ಜಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಇದರಲ್ಲಿ ಟ್ರಿಪಲ್ ಕ್ಯಾಮರಾ ಇದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಸೋನಿ ಐಎಂಎಕ್ಸ್ 766 ಶೂಟರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಏಕವರ್ಣದ ಸಂವೇದಕವಿದೆ. ಒನ್‍ಪ್ಲಸ್ ನಾರ್ಡ್ 2 5 ಜಿ 32 ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಹೊಂದಿದೆ.


ಎಷ್ಟು ಬೆಲೆ?
• 6 ಜಿಬಿ ರ‍್ಯಾಮ್+128 ಜಿಬಿ ಸಂಗ್ರಹಣ ಸಾಮರ್ಥ್ಯ = 27,999
• 8 ಜಿಬಿ ರ‍್ಯಾಮ್+128 ಜಿಬಿ ಸಂಗ್ರಹಣ ಸಾಮರ್ಥ್ಯ = 29,999
• 12 ಜಿಬಿ ರ‍್ಯಾಮ್ + 256 ಜಿಬಿ ಸಂಗ್ರಹಣ ಸಾಮರ್ಥ್ಯ = 34,999




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: