HOME » NEWS » Tech » ONEPLUS LAUNCHES NEW 4K SMART TV ONEPLUS TV U1S PRICE OTHER DETAILS HG

ವಾಯ್ಸ್ ಕಂಟ್ರೋಲ್, ವಿಡಿಯೋ ಕರೆ ಮಾಡಬಹುದಾದ OnePlus TV U1S ಮಾರುಕಟ್ಟೆಗೆ; ಬೆಲೆ?

OnePlus TV U1S 4K TVಯು ದೃಶ್ಯ ವಿಸ್ತರಣಾ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ವಾಯ್ಸ್ ಕಮ್ಯಾಂಡ್ ಹಾಗೂ OnePlus ವಾಚ್ ಅನ್ನು ರಿಮೋಟ್ ಆಗಿ ಬಳಸಬಹುದಾದ ಟಿವಿ ಬೋಸ್ಟಿಂಗ್ ಬೆಂಬಲವನ್ನೂ ನೀಡಲಾಗಿದೆ.

news18-kannada
Updated:June 11, 2021, 10:10 AM IST
ವಾಯ್ಸ್ ಕಂಟ್ರೋಲ್, ವಿಡಿಯೋ ಕರೆ ಮಾಡಬಹುದಾದ OnePlus TV U1S ಮಾರುಕಟ್ಟೆಗೆ; ಬೆಲೆ?
OnePlus TV U1S
  • Share this:
ಚೀನಾ ಮೂಲದ OnePlus ಸಂಸ್ಥೆ ಹೊಸ OnePlus TV U1S ಸ್ಮಾರ್ಟ್​ಟಿವಿಯ ಜತೆಗೆ Nord CE 5G ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ ಟಿವಿಯನ್ನು ಹಲವು ಫೀಚರ್​ ಹೊಂದಿದೆ. ವಾಯ್ಸ್​ ಕಂಟ್ರೋಲ್​, ಧ್ವನಿ ಕಮಾಂಡ್​, ಕ್ಯಾಮೆರಾ, ವಿಡಿಯೋ ಕರೆಯನ್ನು ಕೂಡ ಮಾಡಬಹುದಾದ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಹಾಗಿದ್ದರೆ ಹೊಸ ಸ್ಮಾರ್ಟ್​ಟಿವಿ ಬೆಲೆ ಮತ್ತು ಹೆಚ್ಚಿನ ವಿಶೇಷತೆ ಬಗ್ಗೆ ತಿಳಿಯೋಣ

OnePlus TV U1S: ಸಿನೆಮ್ಯಾಟಿಕ್ 4K ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳು

OnePlus ಪರಿಚಯಿಸಿರುವ OnePlus TV U1S ಹೊಸ ಸ್ಮಾರ್ಟ್​ಟಿವಿ ಹಿಂದಿಗಿಂತ ಹೆಚ್ಚು ಅಂತರ್ ಸಂಪರ್ಕ ಹೊಂದಿದೆ.

OnePlus TV U1S 4K TVಯು ದೃಶ್ಯ ವಿಸ್ತರಣಾ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ವಾಯ್ಸ್ ಕಮ್ಯಾಂಡ್ ಹಾಗೂ OnePlus ವಾಚ್ ಅನ್ನು ರಿಮೋಟ್ ಆಗಿ ಬಳಸಬಹುದಾದ ಟಿವಿ ಬೋಸ್ಟಿಂಗ್ ಬೆಂಬಲವನ್ನೂ ನೀಡಲಾಗಿದೆ.  OnePlus TWS ಉತ್ಪನ್ನಗಳಂತಹ ವೈರ್‌ಲೆಸ್ ಹೆಡ್‌ಸೆಟ್‌ಗಳನ್ನೂ ಬೆಂಬಲಿಸುತ್ತಿದ್ದು, ಇದರೊಂದಿಗೆ ಸ್ಟೈಲಿಶ್ ಹಾಗೂ ಬೆಜ಼ೆಲ್-ಲೆಸ್ ವಿನ್ಯಾಸವನ್ನೂ ನೀಡುತ್ತಿದ್ದೆವೆ, ಇದು "ತೀವ್ರತರವಾದ ಆಳ" ಆಡಿಯೋ ಅನುಭವ ನೀಡುತ್ತದೆ.

ನೂತನ ಟಿವಿಯಲ್ಲಿ ವಾಯ್ಸ್​ ಕಮ್ಯಾಂಡ್ ಮೂಲಕ  ಇಂಟರ್​ಫೇಸ್ ನೇವಿಗೇಟ್ ಮಾಡಬಹುದು.  4K ಡಿಸ್​ಪ್ಲೇ ಪ್ಯಾನೆಲ್​ ಹೊಂದಿರುವ ಈ ಟಿವಿಯಲ್ಲಿ ಗಾಮಾ ಎಂಜಿನ್ ಆಪ್ಟಿಮೈಸೇಷನ್ ಬರುತ್ತದೆ. ಇನ್ನುಕಡಿಮೆ ರೆಸಲ್ಯೂಷನ್​ನಲ್ಲೂ ಉತ್ತಮ ವಿಶ್ಯುಯಲ್ಸ್​ ವೀಕ್ಷಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಟಿವಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು,  ವಿಡಿಯೋ ಕಾಲ್ ಮಾಡಬಹುದು.

ಸದ್ಯ OnePlus TV U1S 4K TV ಮೂರು ಗಾತ್ರದಲ್ಲಿ ಖರೀದಿಗೆ ಸಿಗಲಿದೆ. 50 ಇಂಚಿನ, 55 ಇಂಚಿನ ಮತ್ತು 65 ಇಂಚಿನ ಟಿವಿ ಸಿಗಲಿದೆ.  ಟಿವಿ ಬೆಲೆ 39 ಸಾವಿರದಿಂದ ಪ್ರಾರಂಭವಾಗುತ್ತದೆ.

OnePlus Nord CE 5G ವಿಶೇಷತೆಗಳು ಮತ್ತು ವೈಶಿಷ್ಟ್ಯಗಳುOnePlus Nord CE 5G ಸ್ಮಾರ್ಟ್‌ಫೋನ್ ಅತ್ಯಂತ ತೆಳುವಾದ ಮತ್ತು ಹಿಂದಿನ Nord ಫೋನ್‌ಗಳಿಗಿಂತ ತುಂಬಾ ಹಗುರವಾಗಿದೆ. ಅದರರ್ಥ ಇದರ ವೈಶಿಷ್ಟ್ಯಗಳಲ್ಲಿ ಹೊಂದಾಣಿಕೆಯಾಗಿದೆ ಎಂದಲ್ಲ. ಕೊಂಚ ವಿಭಿನ್ನವಾಗಿ ಪರಿಚಯಿಸಿದೆ.

ಹೊಸ ಫೋನ್ OnePlus Nord CE 5G 7.9 ಮಿಮೀ ದಪ್ಪ, ಪೂರ್ಣ 0.3 ಮಿಮೀ ತೆಳುವಾಗಿದೆ. ನಾವು ಹಿಂಭಾಗದಲ್ಲಿ 64 MP ಟ್ರಿಪಲ್ ಕ್ಯಾಮೆರಾ, 48 MP ಮುಂಭಾಗದ ಕ್ಯಾಮೆರಾ, ಹಾಗೂ 30 ನಿಮಿಷಗಳಲ್ಲಿ ನಿಮ್ಮ ಫೋನ್ ಅನ್ನು 70% ನಷ್ಟು ಚಾರ್ಜ್ ಮಾಡುವ ವಾರ್ಪ್ ಚಾರ್ಜ್ 30T ಬೆಂಬಲಿಸುವ 4,500 mAh ಬ್ಯಾಟರಿ ನೋಡಬಹುದು. ಇದರ ಹೆಡ್‌ಫೋನ್ ಜ್ಯಾಕ್ ಪ್ರತಿಯೊಬ್ಬರಿಗೂ ಪ್ರಯತ್ನಿಸಬೇಕೆನಿಸುವ ಭಾವನೆ ಮೂಡಿಸುತ್ತದೆ.

ಅಂದಹಾಗೆಯೇ ಸ್ಮಾರ್ಟ್​ಫೋನ್​ ಬೆಲೆ 23 ಸಾವಿರ ರೂ ಆಗಿದೆ. ಅಮೆಜಾನ್​ ಮತ್ತು ಒನ್​ಪ್ಲಸ್​ ಅಧಿಕೃತ ವೆಬ್​ಸೈಟ್​ ಮೂಲಕ ಜೂನ್​ 16ರಿಂದ ಖರೀದಿಗೆ ಸಿಗಲಿದೆ.

OnePlus TV U1S ಜೂನ್ 10ರಿಂದ ರೆಡ್ ಕೇಬಲ್ ಮೂಲಕ ಮೊದಲ ಮಾರಾಟ ಮಾಡುತ್ತಿದೆ. ಇಂದಿನಿಂದ 11 ರಿಂದ ಮುಕ್ತ ಮಾರಾಟ ಲಭ್ಯವಿದೆ. Nord CE 5G ಜೂನ್ 11 ರಂದು ರೆಡ್ ಕೇಬಲ್ ಫಸ್ಟ್ ಪ್ರೀ-ಆರ್ಡರ್ ಆಗಿ ಲಭ್ಯವಿದ್ದು, ಜೂನ್ 16 ರಿಂದ ಮುಕ್ತ ಮಾರಾಟವಿರಲಿದೆ.
Published by: Harshith AS
First published: June 11, 2021, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories