ಒನ್​ಪ್ಲಸ್​ ಸಂಸ್ಥೆಯ ವಿದ್ಯಾರ್ಥಿ ರಾಯಭಾರಿ ಆಗಲು ಏನು ಮಾಡಬೇಕು?


Updated:July 5, 2018, 8:40 PM IST
ಒನ್​ಪ್ಲಸ್​ ಸಂಸ್ಥೆಯ ವಿದ್ಯಾರ್ಥಿ ರಾಯಭಾರಿ ಆಗಲು ಏನು ಮಾಡಬೇಕು?

Updated: July 5, 2018, 8:40 PM IST
ಚೀನಾದ ಸ್ಮಾರ್ಟ್​ಫೋನ್​ ನಿರ್ಮಾಣ ಸಂಸ್ಥೆ ಒನ್​ಪ್ಲಸ್​ ಮೊಬೈಲ್ ಇದೀಗ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ಆಫರ್​ ನೀಡಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಹೊಂದಿರುವ ವಿದ್ಯಾರ್ಥಿಗಳನ್ನು 'ವಿದ್ಯಾರ್ಥಿ ರಾಯಭಾರಿ ಕಾರ್ಯಕ್ರಮ'ದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ.

ಭಾರತದ ಖ್ಯಾತ ವಿಶ್ವವಿದ್ಯಾಲದಿಂದ ಇದೇ ಸೆ.1ರಂದು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಇವರುಗಳೆಲ್ಲಾ ಒನ್​ಪ್ಲಸ್​ ಕಮ್ಯೂನಿಟಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಇವರಿಗೆ ಮಾಸಿಕ ವೇತನ, ನಿಗದಿತ ತರಬೇತಿ ಮಗಿದ ಬಳಿಕ ಪ್ರಮಾಣಪತ್ರವನ್ನು ಇದರೊಂದಿಗೆ ಇಂಟರ್ನ್ ಆಗಿ ಒನ್​ಪ್ಲಸ್​ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕೂಡಾ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  • ಒನ್​ಪ್ಲಸ್​ ರಾಯಭಾರಿಯಾಗಲು ಇರಬೇಕಾದ ಅರ್ಹತೆಗಳು   • ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವಾಕಾಂಕ್ಷೆ ಹೊಂದಿರಬೇಕು. ಇದು ಸಂಸ್ಥೆಯ ಮೊದಲ ಆಯ್ಕೆ

  • Loading...

  • ವೈಯಕ್ತಿಕ ಮೌಲ್ಯಗಳು: ಸಂಸ್ಥೆ ನಿಮ್ಮ ವೈಯಕ್ತಿಕ ಮೌಲ್ಯದ ಕುರಿತು ಪರೀಕ್ಷೆ ನಡೆಸುತ್ತದೆ,

  • ವಿದ್ಯಾರ್ಥಿಯ ಸೃಜನಶೀಲತೆಯೂ ಇಲ್ಲಿ ಕೌಂಟ್​ ಆಗುತ್ತದೆ

  • ಮೊಬೈಲ್​ ಹಾಗೂ ತಂತ್ರಜ್ಞಾನ ಕ್ಷೇತ್ರದ ಕುರಿತು ಜ್ಞಾನ ಹೊಂದಿರುವರುಗೆ ಮೊದಲ ಆದ್ಯತೆ.

  • ಮೊಬೈಲ್​ ಹಾಗೂ ತಂತ್ರಜ್ಞಾನ ಮಾತ್ರವಲ್ಲದೇ ಇದರ ಮಾರುಕಟ್ಟೆ ಮತ್ತು ಈ ಕ್ಷೇತ್ರದ ಬಗೆಗಿನ ಉತ್ಸಾಹವನ್ನೂ ಪರೀಕ್ಷಿಸುತ್ತದೆ,

  • ಕೇವಲ ತಂತ್ರಜ್ಞಾನವಲ್ಲ ವಿದ್ಯಾರ್ಥಿಗಳಿ  ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರಬೇಕು.

  • ಇವೆಲ್ಲವೂ ಒಂದು ಬದಿಯಾದರೆ ಸಂಹವನಾ ತೀಕ್ಷ್ಣತೆಯನ್ನೂ ಸಹ ಸಂಸ್ಥೆ ಗಮನಿಸುತ್ತದೆ. ನಿಮ್ಮ ವರ್ತನೆಗಳ ಆಧಾರದ ಮೇಲೂ ರಾಯಭಾರಿಯನ್ನಾಗಿ ನೇಮಿಸಬಹುದು.

First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ