ಚೀನಾದ ಟೆಕ್ ದೈತ್ಯ ಒನ್ಪ್ಲಸ್ (Oneplus) ತನ್ನ ಮೆಗಾ ಬಿಡುಗಡೆ ಸಮಾರಂಭದಲ್ಲಿ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ, ಕಂಪನಿಯು ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಒನ್ಪ್ಲಸ್ 11 (Oneplus 11), ಒನ್ಪ್ಲಸ್s 11R, ಒನ್ಪ್ಲಸ್ TV 65 Q2 Pro ಮತ್ತು ಒನ್ಪ್ಲಸ್ ಬಡ್ಸ್ ಪ್ರೋ 2 ಅನ್ನು ಬಿಡುಗಡೆ ಮಾಡಿದೆ. ಈ ಮೆಗಾ ಈವೆಂಟ್‌ನಲ್ಲಿ, ಕಂಪನಿಯು ಮೊದಲ ಟ್ಯಾಬ್ಲೆಟ್ ಆಗಿರುವ ಒನ್ಪ್ಲಸ್ ಪ್ಯಾಡ್ ಅನ್ನು ಪರಿಚಯಿಸಿದೆ, ಇದು ಆ್ಯಪಲ್ ನ ಐಪ್ಗೆಯಾಡ್ಗೆ ಸ್ಪರ್ಧಿಸಲಿದೆ. ಒನ್ಪ್ಲಸ್ ಪ್ಯಾಡ್ 11 (Oneplus Pad 11). 6 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಟ್ಯಾಬ್ಲೆಟ್ ಒನ್ಪ್ಲಸ್ ನ ವಿವಿಧ ಸಾಧನಗಳೊಂದಿಗೆ ಸಂಪರ್ಕಿಸಬಹುದು.
ಒನ್ಪ್ಲಸ್ ತನ್ನ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಮತ್ತು ಟ್ಯಾಬ್ಲೆಟ್‌ಗಳು ಸಹ ಸೇರಿವೆ. ವಿಶೇಷವಾಗಿ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್ ಆಗಿರುವ ಒನ್ಪ್ಲಸ್ ಪ್ಯಾಡ್ ಅನ್ನು ತನ್ನ ಮೆಗಾ ಈವೆಂಟ್‌ನಲ್ಲಿ ಪರಿಚಯಿಸಿದೆ.
ಈ ಟ್ಯಾಬ್ ಮೂಲಕ ಬಳಕೆದಾರರು ಮ್ಯಾಗ್ನೆಟಿಕ್ ಕೀಬೋರ್ಡ್‌ನೊಂದಿಗೆ ಸುಲಭವಾಗಿ ಟೈಪ್ ಮಾಡಲು ಸಾಧ್ಯವಾಗುತ್ತದೆ. ಕಂಪನಿಯ ಮೊದಲ ಟ್ಯಾಬ್ಲೆಟ್ 67W ವೇಗದ ಚಾರ್ಜಿಂಗ್ ಬೆಂಬಲ ಮತ್ತು 1 ತಿಂಗಳ ಸ್ಟ್ಯಾಂಡ್‌ಬೈ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಈ ಟ್ಯಾಬ್ಲೆಟ್ ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಘೋಷಿಸಿದೆ.
ಇದನ್ನೂ ಓದಿ: ಜಿಯೋನ ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ಯಾವುದು ಉತ್ತಮ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಒನ್ಪ್ಲಸ್ ಪ್ಯಾಡ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್ ಅನ್ನು ಹೊಂದಿದೆ. ಇದು 8ಜಿಬಿ ರ್‍ಯಾಮ್ ನೊಂದಿಗೆ ಬರುತ್ತದೆ. ಒನ್ಪ್ಲಸ್ ಪ್ಯಾಡ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 9510mAh ಬ್ಯಾಟರಿಯಿಂದ ಚಾಲಿತವಾಗಿದೆ. ಒನ್ಪ್ಲಸ್ ಪ್ಯಾಡ್‌ನ ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ, ಇದು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆಯುತ್ತದೆ.
ಒನ್ಪ್ಲಸ್ 11 5ಜಿ
ಟ್ಯಾಬ್ಲೆಟ್ ಹೊರತುಪಡಿಸಿ, ಕಂಪನಿಯು ಒನ್ಪ್ಲಸ್ 11 5ಜಿ ಫೋನ್ ಅನ್ನು ಒನ್ಪ್ಲಸ್ ಲಾಂಚ್ ಈವೆಂಟ್ 2023 ರಲ್ಲಿ ಪರಿಚಯಿಸಿದೆ. ಇದರ 8 ಜಿಬಿ ರ್‍ಯಾಮ್ ಮತ್ತು 128ಜಿಬಿ ರೂಪಾಂತರದ ಬೆಲೆ 56,999 ರೂ, ಆದರೆ 16ಜಿಬಿ ರ್‍ಯಾಮ್ ಮತ್ತು 256ಜಿಬಿ ರೂಪಾಂತರದ ಬೆಲೆ 61,999 ರೂಪಾಯಿ. ಬಳಕೆದಾರರು ಈ ಫೋನ್ ಅನ್ನು ಮೊದಲೇ ಬುಕ್ ಮಾಡಬಹುದು.
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 2 ಚಿಪ್‌ಸೆಟ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಈ ಫೋನ್ 3 ನೇ ತಲೆಮಾರಿನ ಹ್ಯಾಸೆಲ್ಬ್ಲಾಡ್ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ಫೋನ 5000mAh ಬ್ಯಾಟರಿ ಮತ್ತು 100W SuperWook ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ,.
ಒನ್ಪ್ಲಸ್ ಟಿವಿ 65 Q2 ಪ್ರೋ
ಒನ್ಪ್ಲಸ್ ನ ಹೊಸ ಸ್ಮಾರ್ಟ್ ಟಿವಿಯನ್ನು ರೂ 99,999 ಕ್ಕೆ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ಟಿವಿಯು 2019 ರಲ್ಲಿ ಬಿಡುಗಡೆಯಾದ ಕ್ಯೂ1 ಪ್ರೋನ ಅಪ್‌ಗ್ರೇಡ್ ಆವೃತ್ತಿಯಾಗಿದೆ. ಇದು 65-ಇಂಚಿನ QLED 4K ಸ್ಮಾರ್ಟ್ ಟಿವಿಯು ನೀಲಿ ಎಲ್ಇಡಿ ಬ್ಯಾಕ್‌ಲೈಟ್‌ನೊಂದಿಗೆ ಫ್ಲ್ಯಾಗ್‌ಶಿಪ್-ಲೆವೆಲ್ QLED ಪ್ಯಾನೆಲ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇದರ ಹೊರತಾಗಿ, ಇದು 120Hz ರಿಫ್ರೆಶ್ ರೇಟ್ ಮತ್ತು ಟಾಪ್-ಶೆಲ್ಫ್ ಹಾರ್ಡ್‌ವೇರ್‌ನ ಬೆಂಬಲವನ್ನು ಪಡೆಯುತ್ತದೆ. ಒನ್ಪ್ಲಸ್ ನ ಹೊಸ ಟಿವಿ ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಪೂರ್ವ-ಬುಕಿಂಗ್ ಮಾರ್ಚ್ 6 ರಿಂದ ಪ್ರಾರಂಭವಾಗುತ್ತದೆ.
ಒನ್ಪ್ಲಸ್ ಬಡ್ಸ್ ಪ್ರೋ 2
ಒನ್ಪ್ಲಸ್ ಹೊಸ ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಈ ಬಡ್‌ಗಳು ಗೂಗಲ್ ನ ಪ್ರಾದೇಶಿಕ ಆಡಿಯೋ ವೈಶಿಷ್ಟ್ಯವನ್ನು ಅಳವಡಿಸಿಕೊಂಡ ಮೊದಲ TWS ಇಯರ್‌ಬಡ್‌ಗಳಲ್ಲಿ ಒಂದಾಗಿದೆ. ಇದನ್ನು ಆರ್ಬರ್ ಗ್ರೀನ್, ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಮಿಸ್ಟಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಬೆಲೆ 11,999 ರೂ ಆಗಿದ್ದು, ಗ್ರಾಹಕರು ಭಾರತೀಯ ಮಾರುಕಟ್ಟೆಗೆ ವಿಶೇಷ 2R ಆವೃತ್ತಿಯನ್ನು ಹೊಂದಿರುವ ಬಡ್ಸ್ ಅನ್ನು ಕೇವಲ 9,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ