• Home
  • »
  • News
  • »
  • tech
  • »
  • OnePlus TV 55 Y1S Pro ಬಿಡುಗಡೆ: ಕೈಗೆಟುಕುವ ದರದಲ್ಲಿ ಉನ್ನತ-ಗುಣಮಟ್ಟ, ಲಾರ್ಜ್-ಸ್ಕ್ರೀನ್ ಸ್ಮಾರ್ಟ್ ಹೋಂ ಮನರಂಜನೆ ನೀಡುತ್ತದೆ

OnePlus TV 55 Y1S Pro ಬಿಡುಗಡೆ: ಕೈಗೆಟುಕುವ ದರದಲ್ಲಿ ಉನ್ನತ-ಗುಣಮಟ್ಟ, ಲಾರ್ಜ್-ಸ್ಕ್ರೀನ್ ಸ್ಮಾರ್ಟ್ ಹೋಂ ಮನರಂಜನೆ ನೀಡುತ್ತದೆ

ಕೆಲವು ವಾರಗಳ ಹಿಂದೆ ಘೋಷಿಸಲಾದಂತೆ OnePlus TV 55 Y1S Pro ಈ ವರ್ಷದ ಅತ್ಯಂತ ಆಕರ್ಷಕ ಬಿಡುಗಡೆಗಳಲ್ಲಿ ಒಂದು ಆಗಿದೆ.

ಕೆಲವು ವಾರಗಳ ಹಿಂದೆ ಘೋಷಿಸಲಾದಂತೆ OnePlus TV 55 Y1S Pro ಈ ವರ್ಷದ ಅತ್ಯಂತ ಆಕರ್ಷಕ ಬಿಡುಗಡೆಗಳಲ್ಲಿ ಒಂದು ಆಗಿದೆ.

ಕೆಲವು ವಾರಗಳ ಹಿಂದೆ ಘೋಷಿಸಲಾದಂತೆ OnePlus TV 55 Y1S Pro ಈ ವರ್ಷದ ಅತ್ಯಂತ ಆಕರ್ಷಕ ಬಿಡುಗಡೆಗಳಲ್ಲಿ ಒಂದು ಆಗಿದೆ.

  • Share this:

    ಕೆಲವು ವಾರಗಳ ಹಿಂದೆ ಘೋಷಿಸಲಾದಂತೆ OnePlus TV 55 Y1S Pro ಈ ವರ್ಷದ ಅತ್ಯಂತ ಆಕರ್ಷಕ ಬಿಡುಗಡೆಗಳಲ್ಲಿ ಒಂದು ಆಗಿದೆ. ಆಕರ್ಷಕ ವಿನ್ಯಾಸದೊಂದಿಗೆ ಹಲವಾರು ಸ್ಮಾರ್ಟ್ ಫೀಚರ್‌ಗಳನ್ನು ಒಳಗೊಂಡಿರುವ ಹೊಚ್ಚ-ಹೊಸ OnePlus TV 55 Y1S Pro, ಉನ್ನತ-ಗುಣಮಟ್ಟದ, ಬೃಹತ್ 4K ಡಿಸ್‌ಪ್ಲೇ ನೀಡುತ್ತದೆ.


    ಉನ್ನತ-ಗುಣಮಟ್ಟ ಎಂದರೇನು? ಅದೇ ರೀತಿ, ಕೈಗೆಟುಕುವ ದರ ಎಂಬುದಕ್ಕೆ ಇನ್ನೇನು ಹೇಳುವಿರಿ – ಇದರ ದರ ಬರೀ ರೂ. 39,999 4K UHD ರೆಸಲೂಶನ್ ಅನ್ನು ಈ TV ಒದಗಿಸುತ್ತದೆ ಮಾತ್ರವಲ್ಲದೆ, 10-ಬಿಟ್ ಪ್ಯಾನೆಲ್‌ ಇರುವುದರಿಂದ 1 ಬಿಲಿಯನ್‌ಗಿಂತಲೂ ಹೆಚ್ಚಿನ ಕಲರ್‌ಗಳನ್ನು ಸಹ ನೀಡುತ್ತದೆ ಹಾಗೂ HDR10, HDR10+ ಮತ್ತು HLG ಅನ್ನು ಬೆಂಬಲಿಸುತ್ತದೆ. ಇದೆಲ್ಲದರ ಜತೆಗೆ ಇದರ ಅದ್ಭುತ ಸ್ಪೀಕರ್‌ಗಳು ಹಾಗೂ ಹಲವಾರು ಸ್ಮಾರ್ಟ್‌ ಫೀಚರ್‌ಗಳು ನಿಮ್ಮ ವೀಕ್ಷಣಾ ಅನುಭವವನ್ನು ಇನ್ನಷ್ಟು ಆನಂದದಾಯಕವಾಗಿಸುತ್ತವೆ.


    ಈ ಬೃಹತ್ ವೇರಿಯಂಟ್ ಎಲ್ಲಾ ಇತರ ಫೀಚರ್‌ಗಳನ್ನು ಸಹ ಒಳಗೊಂಡಿದ್ದು, ಅದು Y1S ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಇನ್ನಷ್ಟು ಎಫರ್ಟ್‌ಲೆಸ್ ನ್ಯಾವಿಗೇಶನ್ ಅನುಭವಕ್ಕಾಗಿ Android 10-ಆಧಾರಿತ OxygenPlay 2.0 OS, ವೀಕ್ಷಿಸುತ್ತಿರುವಾಗಲೇ ಕಲರ್‌ಗಳನ್ನು ವೃದ್ಧಿಸಲು Gamma Engine ಮತ್ತು ಕ್ರೀಡೆ ಹಾಗೂ ಅಂತಹುದೇ ಇತರ ಕಾರ್ಯಕ್ರಮಗಳ ತಡೆರಹಿತ, ಆನಂದದಾಯಕ ಮತ್ತು ಇನ್ನಷ್ಟು ರಿಯಲಿಸ್ಟಿಕ್ ಮೋಶನ್ ಒಳಗೊಂಡ ವೀಕ್ಷಣೆಗಾಗಿ MEMC ಅನ್ನು ಇದು ಒಳಗೊಂಡಿದೆ.  


    ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಂಟೆಂಟ್ ಅನ್ನು ಸಂಯೋಜಿಸುವ ಮೂಲಕ, ಜತೆಗೆ ಬಳಸಲು ಸುಲಭವಾದ ಇಂಟರ್‌ಫೇಸ್‌ನಲ್ಲಿ 230 ಕ್ಕೂ ಹೆಚ್ಚು ಲೈವ್ ಚಾನೆಲ್‌ಗಳ ಮೂಲಕ OxygenPlay 2.0 ನಿಮ್ಮ ಅನುಭವವನ್ನು ಸ್ಮಾರ್ಟರ್‌ ಹಾಗೂ ಇನ್ನಷ್ಟು ತಡೆರಹಿತ ಆಗಿಸುತ್ತದೆ.


    OnePlus’ ಸ್ಮಾರ್ಟ್, ಕನೆಕ್ಟೆಡ್ ಎಕೊಸಿಸ್ಟಂನಲ್ಲಿರುವ ತಡೆರಹಿತ ಕನೆಕ್ಟಿವಿಟಿಯಿಂದಾಗಿ TV ಯು ಸ್ಮಾರ್ಟ್ ಹೋಂ ಹಬ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಉದಾಹರಣೆಗೆ, ನೀವು TV ಯಲ್ಲಿ Google Assistant ಅನ್ನು ಪ್ರವೇಶಿಸಬಹುದು, OnePlus Buds ಮತ್ತು Buds Pro ನೊಂದಿಗೆ ಇಂಟೆಲಿಜೆಂಟ್ ಆಗಿ ಜೋಡಿಸಬಹುದು ಮತ್ತು OnePlus Watch ಅನ್ನು ಸ್ಮಾರ್ಟ್ ರಿಮೋಟ್ ಆಗಿಯೂ ಬಳಸಬಹುದು. ಇದಿಷ್ಟೇ ಅಲ್ಲದೆ, ನೀವು ನಿದ್ರೆಗೆ ಜಾರಿದ್ದೀರಿ ಎಂಬುದನ್ನು Watch ಪತ್ತೆ ಹಚ್ಚಿದಾಗ ಸ್ವಯಂಚಾಲಿತವಾಗಿ TV ಯನ್ನು ಆಫ್ ಮಾಡುವ ಸ್ಮಾರ್ಟ್ ಸ್ಲೀಪ್ ಕಂಟ್ರೋಲ್ (Smart Sleep Control) ಫೀಚರ್ ಅನ್ನು ಸಹ ಈ TV ಬೆಂಬಲಿಸುತ್ತದೆ.


    ಹೆಚ್ಚುವರಿಯಾಗಿ, TV ಯೊಂದಿಗೆ ಒಂದು ಬಾರಿಗೆ 5 ಡಿವೈಸ್‌ಗಳವರೆಗೂ ಜೋಡಣೆ ಮಾಡಬಹುದು ಮತ್ತು ಫೋನ್ ಅನ್ನು ರಿಮೋಟ್ ಆಗಿ ಬಳಸಬಹುದು. ಇದು Wi-Fi ಮತ್ತು ಡೇಟಾದ ಮೂಲಕ ಆಗುತ್ತದೆ ಹಾಗೂ ನಿಮ್ಮ OnePlus ಸ್ಮಾರ್ಟ್‌ಫೋನ್‌ನಿಂದ ತಡೆರಹಿತವಾಗಿ ಕಂಟೆಂಟ್ ಅನ್ನು ಪ್ರಸಾರ ಮಾಡಬಹುದು. 


    ಈ ಎಲ್ಲ ಅನುಭವವನ್ನು ಉಲ್ಲಸಿತಗೊಳಿಸಲು ಇದು 24W ಪವರ್‌ನ ಔಟ್‌ಪುಟ್ ಮಾಡಬಹುದಾದ ಫುಲ್-ರೇಂಜ್ ಸ್ಪೀಕರ್ ಡ್ರೈವರ್‌ಗಳನ್ನು ಒಳಗೊಂಡಿದ್ದು, ಅದರ ಮೂಲಕ Dolby Audio ವನ್ನು ಬೆಂಬಲಿಸುತ್ತದೆ. ಒಂದು ಬೃಹತ್ ಹಾಲ್‌ಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪವರ್ ಆಯಿತು.


    ಈ ಆಕರ್ಷಕ, ಬೆಝೆಲ್-ಲೆಸ್ TV ಯು ಪ್ರಸ್ತುತ OnePlus.in, Amazon.in ಮತ್ತು Flipkart ನಲ್ಲಿ, ಜತೆಗೆ ಆಫ್‌ಲೈನ್ ಚಾನೆಲ್‌ಗಳು ಹಾಗೂ OnePlus Experience ಸ್ಟೋರ್‌ಗಳಲ್ಲಿ ರೂ. 39,999 ಕ್ಕೆ ಲಭ್ಯವಿದೆ. ಎಲ್ಲಾ ಪ್ರಮುಖ ಬ್ಯಾಂಕ್‌ಗಳು 9 ತಿಂಗಳುಗಳವರೆಗೆ ನೋ-ಕಾಸ್ಟ್ EMI ಗಳನ್ನು ಒದಗಿಸುತ್ತಿವೆ.

    First published: