ಒನ್​ಪ್ಲಸ್​ ಬಳಕೆದಾರರಿಗೆ ಶಾಕಿಂಗ್​ ನ್ಯೂಸ್​; ಸೋರಿಕೆಯಾಗುತ್ತಿದೆ ನಿಮ್ಮ ಖಾಸಗಿ ಮಾಹಿತಿ!

Oneplus: 2018ರ ಜನವರಿ ತಿಂಗಳಿನಲ್ಲಿ ಭದ್ರತಾ ಉಲ್ಲಂಘನೆಯಿಂದಾಗಿ ಜಾಗತಿಕವಾಗಿ ಸುಮಾರು 40,000 ಬಳಕೆದಾರರ ಕ್ರೆಡಿಟ್​ ಕಾರ್ಡ್​ ಮಾಡಹಿತಿ ಸೋರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬಳಕೆದಾರ ಮಾಹಿತಿ ಸೋರಿಕೆಯಾಗುವುದರ ಮೂಲಕ ಶಾಕ್​ ನೀಡಿದೆ.

Harshith AS | news18-kannada
Updated:November 25, 2019, 2:19 PM IST
ಒನ್​ಪ್ಲಸ್​ ಬಳಕೆದಾರರಿಗೆ ಶಾಕಿಂಗ್​ ನ್ಯೂಸ್​; ಸೋರಿಕೆಯಾಗುತ್ತಿದೆ ನಿಮ್ಮ ಖಾಸಗಿ ಮಾಹಿತಿ!
ಒನ್​ಪ್ಲಸ್
  • Share this:
ಚೀನಾ ಮೂಲದ ಜನಪ್ರಿಯ ​ ಒನ್​ಪ್ಲಸ್​ ಸ್ಮಾರ್ಟ್​ಫೋನ್ ಕಂಪೆನಿ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು  ತಿಳಿಸಿದೆ.

ಮೂರನೇ ವ್ಯಕ್ತಿಗೆ ಒನ್​​ಪ್ಲಸ್​ ಸ್ಮಾರ್ಟ್​ಫೋನ್​ ಬಳಕೆದಾರನ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿದೆ ಎಂದು ಹೇಳಿದೆ. ಮಾತ್ರವಲ್ಲದೆ, ಹೆಸರು, ಸಂಪರ್ಕ ಸಂಖ್ಯೆ ಮತ್ತು ಇಮೇಲ್​ನಂತಹ ವೈಯ್ಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ ಎಂದು ಒನ್​​ಪ್ಲಸ್​ ಕಂಪೆನಿ ಪ್ರಕಟನೆಯ ಮೂಲಕ ತಿಳಿಸಿದೆ.

ಸಾಕಷ್ಟು ಜನರು ಒನ್​ಪ್ಲಸ್​ ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಿದ್ದಾರೆ. ಆದರೆ ಥರ್ಢ್​​​ ಪಾರ್ಟಿ ಆ್ಯಪ್​ ಮೂಲಕ ಬಳಕೆದಾರನ ಮಾಹಿತಿ ಸೋರಿಕೆಯಾಗಿದೆ. ಅದನ್ನು ಒನ್​ಪ್ಲಸ್​ ಭದ್ರತಾ ತಂಡ ಪತ್ತೆಹಚ್ಚಿದೆ ಎಂದು ತಿಳಿಸಿದೆ. ಮಾತ್ರವಲ್ಲದೆ, ಖಾಸಗೀ ಮಾಹಿತಿಗಳು ಸೋರಿಕೆಯಾಗಿದೆ. ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್!; ಮತ್ತೆ ‘ಬಾಷಾ‘ ರಿ-ರಿಲೀಸ್

2018ರ ಜನವರಿ ತಿಂಗಳಿನಲ್ಲಿ ಭದ್ರತಾ ಉಲ್ಲಂಘನೆಯಿಂದಾಗಿ ಜಾಗತಿಕವಾಗಿ ಸುಮಾರು 40,000 ಬಳಕೆದಾರರ ಕ್ರೆಡಿಟ್​ ಕಾರ್ಡ್​ ಮಾಡಹಿತಿ ಸೋರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬಳಕೆದಾರರ ಮಾಹಿತಿ ಸೋರಿಕೆಯಾಗುವುದರ ಮೂಲಕ ಶಾಕ್​ ನೀಡಿದೆ. ಮಾಹಿತಿಗಳ ಪ್ರಕಾರ ‘ಶಾಟ್ ಆನ್​ ಒನ್​ಪ್ಲಸ್​‘ ಅಪ್ಲಿಕೇಶನ್​ ಮೂಲಕ ಭದ್ರತಾ ದೋಷ ಕಂಡು ಬಂದಿದೆ ಎನ್ನಲಾಗಿದೆ.​

ಇದನ್ನೂ ಓದಿ: ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ; ಓರ್ವನ ಸಾವು, ಅನೇಕರಿಗೆ ಗಾಯ
First published: November 25, 2019, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading