ಮೊಬೈಲ್ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆಯಾಗುತ್ತಿರುತ್ತದೆ. ಆದರೆ ಒಂದಕ್ಕೊಂದು ಪೈಪೋಟಿ ನೀಡುವ ಸಲುವಾಗಿ ಈ ಮೊಬೈಲ್ ಕಂಪನಿಗಳು (Mobile Company) ವಿಶೇಷ ಫೀಚರ್ಸ್ಗಳನ್ನು ಅಳವಡಿಸುತ್ತಾರೆ. 2022 ರ ವರ್ಷವನ್ನು ಒಮ್ಮೆ ಮೆಲುಕು ಹಾಕುವುದಾದರೆ ಆ ವರ್ಷದಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳ ಸಂಖ್ಯೆಗೆ ಲೆಕ್ಕವೇ ಇಲ್ಲದಂತಾಗಿದೆ. ಕಾರಣ ದಿನಕ್ಕೊಂದರಂತೆ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿತ್ತು. ಇದೀಗ ಮಾರಕಟ್ಟೆಯಲ್ಲಿ ಸ್ಮಾರ್ಟ್ಫೋನ್ ಬ್ರಾಂಡ್ಗಳಲ್ಲಿ ಸಂಚಲನ ಮೂಡಿಸಿದ ಕಂಪನಿಯೆಂದರೆ ಅದು ಒನ್ಪ್ಲಸ್. ಈ ಕಂಪನಿಯ ಬಹುನಿರೀಕ್ಷಿತ ಒನ್ಪ್ಲಸ್ 11 5ಜಿ (OnePlus 11 5G) ಮೊಬೈಲ್ ಬಿಡುಗಡೆಯಾಗಿದೆ. ಇದು ಹಲವಾಋಉ ಫೀಚರ್ಸ್ಗಳನ್ನು ಹೊಂದಿದೆ.
ಒನ್ಪ್ಲಸ್ ಕಂಪನಿಯ ಹೊಸ ಒನ್ಪ್ಲಸ್ 11 5ಜಿ ಎಂಬ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಇದು ಒನ್ಪ್ಲಸ್ 10 ಸ್ಮಾರ್ಟ್ಫೋನ್ನ ಅಪ್ಗ್ರೇಡ್ ವರ್ಷನ್ ಆಗಿದ್ದು, ಬಹಳಷ್ಟು ಫೀಚರ್ಸ್ಗಳನ್ನು ಒಳಗೊಂಡಿದೆ.
ಎಲ್ಲಿ ಬಿಡುಗಡೆ?
ಸದ್ಯ ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಭಾರತದ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಕಾಲಿಡಲಿದೆ ಎಂದು ಕಂಪನಿ ಹೇಳಿದೆ. ಇದರ ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ಈ ಕೆಳಗಿನ ಲೇಖನವನ್ನು ಫುಲ್ ಓದಿ.
ಇದನ್ನೂ ಓದಿ: ಸ್ಯಾಮ್ಸಂಗ್ ಕಂಪನಿಯ ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ
ಡಿಸ್ಪ್ಲೇ ಫೀಚರ್ಸ್
ಒನ್ಪ್ಲಸ್ 11 ಸ್ಮಾರ್ಟ್ಫೋನ್ 1,440 x 3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ QHD+ E4 OLED ಡಿಸ್ಪ್ಲೇಯನ್ನು ಹೊಂದಿದೆ. ಇದು ಮೂರನೇ ವರ್ಷನ್ನ ಲೋ-ಟೆಂಪ್ರೇಚರ್ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ಟೆಕ್ನಾಲಜಿಯನ್ನು ಒಳಗೊಂಡಿದೆ. ಪ್ರತಿ ಇಂಚಿನ ಪಿಕ್ಸೆಲ್ ಸಾಂದ್ರತೆ 525ppi ಆಗಿದ್ದು, 50,00,000:1 ಕಾಂಟ್ರಾಸ್ಟ್ ಅನುಪಾತ ಪಡೆದಿದೆ. ಇದರೊಂದಿಗೆ 1300 ನಿಟ್ಸ್ ಬ್ರೈಟ್ನೆಸ್ ಅನ್ನು ಸಾಮರ್ಥ್ಯವನ್ನು ಈ ಡಿಸ್ಪ್ಲೇಯಲ್ಲಿ ಅಳವಡಿಸಲಾಗಿದೆ.
ಕ್ಯಾಮೆರಾ ಫೀಚರ್ಸ್
ಒನ್ಪ್ಲಸ್ 11 ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರುವ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಇತರೆ ಫೀಚರ್ಸ್
ಒನ್ಪ್ಲಸ್ 11 ಸ್ಮಾರ್ಟ್ಫೋನ್ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ ಇದು 100W ಫಾಸ್ಟ್ ಚಾರ್ಜಿಂಗ್ ಫೀಚರ್ಸ್ ಅನ್ನು ಸಹ ಹೊಂದಿದೆ. ಹಾಗೆಯೇ ಯುಎಸ್ಬಿ 2.0 ಟೈಪ್-ಸಿ ಪೋರ್ಟ್ ಅನ್ನು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಬಳಸುತ್ತದೆ. ಜೊತೆಗೆ ಡಾಲ್ಬಿ ಅಟ್ಮೋಸ್, ಸ್ಟಿರಿಯೋ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5ಜಿ, ವೈಫೈ 6 802.11 a/b/g/n/ac/ax, ಬ್ಲೂಟೂತ್ 5.3 ಸೌಲಭ್ಯವನ್ನು ನೀಡಲಾಗಿದೆ.
ಒನ್ಪ್ಲಸ್ 11 5ಜಿ ಮೊಬೈಲ್ನ ಪ್ರೊಸೆಸರ್ ಸಾಮರ್ಥ್ಯ
ಒನ್ಪ್ಲಸ್ 11 ಸ್ಮಾರ್ಟ್ಫೋನ್ ಆಕ್ಟಾ ಕೋರ್ ಸ್ನ್ಯಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ನಲ್ಲಿ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12ಜಿಬಿ ರ್ಯಾಮ್ ಮತ್ತು 256ಜಿಬಿ, 12ಜಿಬಿ ರ್ಯಾಮ್ ಮತ್ತು 512 ಜಿಬಿ ಮತ್ತು 16 ಜಿಬಿ ರ್ಯಾಮ್ ಮತ್ತು 512 ಜಿಬಿ ಇಂಟರ್ನಲ್ ಸ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳಲ್ಲಿ ಇದನ್ನು ಪಡೆಯಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಒನ್ಪ್ಲಸ್ 11 ಸ್ಮಾರ್ಟ್ಫೋನ್ 12ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ ಮೊಬೈಲ್ ಅನ್ನು RMB 3999 ಅಂದರೆ ಭಾರತದಲ್ಲಿ ಅಂದಾಜು 48,080 ರೂಪಾಯಿಗಳಿಗೆ ಖರೀದಿಸಬಹುದು.
ಒನ್ಪ್ಲಸ್ 11 ಸ್ಮಾರ್ಟ್ಫೋನ್ 12ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಹೊಂದಿದ ಮೊಬೈಲ್ ಅನ್ನು RMB 4399 ಅಂದರೆ ಭಾರತದಲ್ಲಿ ಅಂದಾಜು 52,890 ರೂಪಾಯಿಗೆ ಪಡೆಯಬಹುದು.
ಒನ್ಪ್ಲಸ್ 11 ಸ್ಮಾರ್ಟ್ಫೋನ್ 16ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಹೊಂದಿದ ಮೊಬೈಲ್ ಅನ್ನು RMB 4899 ಅಂದರೆ ಭಾರತದಲ್ಲಿ ಅಂದಾಜು 58,890 ರೂಪಾಯಿಗೆ ಹೊಂದಬಹುದು.
ಈ ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಅಂದರೆ ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ