ಈ ಬಾರಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿ ಇದ್ದ ಸಾಧನಗಳೆಂದರೆ ಅದು ಮ್ಯೂಸಿಕ್ ಗ್ಯಾಜೆಟ್ಸ್ಗಳು (Music Gadgets). ಅದ್ರಲ್ಲೂ ಇಯರ್ ಬಡ್ಸ್ಗಳ (Earbuds) ಮೇಲೆ ಹೆಚ್ಚು ಬೇಡಿಕೆಯಿತ್ತು. ಇತ್ತೀಚೆಗೆ ಮಾರುಕಟ್ಟೆಗೆ ಹಲವಾರು ಇಯರ್ಬಡ್ಸ್ಗಳು ಬಿಡುಗಡೆಯಾಗಿದೆ. ಇವುಗಳ ಸಾಲಿಗೆ ಇದೀಗ ಒನ್ಪ್ಲಸ್ ಕೂಡ ಸೇರಿದೆ. ಒನ್ಪ್ಲಸ್ (Oneplus) ಈ ಹಿಂದೆ ಕೇವಲ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಒನ್ಪ್ಲಸ್ ಕಂಪನಿ ತನ್ನ ಕಂಪನಿಯ ಅಡಿಯಲ್ಲಿ ಸಾಕಷ್ಟು ಪ್ರೀಮಿಯಂ ಸ್ಮಾರ್ಟ್ಫೋನ್ (Premium Smartphone)ಗಳನ್ನು ಬಿಡುಗಡೆ ಮಾಡಿದೆ. ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳಿಗೆ ಈಗಲೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಆದರೆ ಇದೀಗ ಈ ಕಂಪನಿ ಮತ್ತೊಂದು ಪ್ರೊಡಕ್ಟ್ನ ಉತ್ಪಾದನೆಯಲ್ಲಿ ದಾಕಲೆಯನ್ನು ಸೃಷ್ಟಿಸಲು ರೆಡಿಯಾಗಿದೆ.
ಒನ್ಪ್ಲಸ್ ಕಂಪನಿಯ ಅಡಿಯಲ್ಲಿ ಇದೀಗ ವರ್ಷಾಂತ್ಯದಲ್ಲಿ ಹೊಸ ಒನ್ಪ್ಲಸ್ ಬಡ್ಸ್ ಪ್ರೋ 2 ಎಂಬ ಇಯರ್ಬಡ್ಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಫೀಚರ್ಸ್, ಬೆಲೆ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಒನ್ಪ್ಲಸ್ ಬಡ್ಸ್ ಪ್ರೋ 2
ಒನ್ಪ್ಲಸ್ ಬಡ್ಸ್ ಪ್ರೋ 2 ಲಾಂಚ್ ಆಗುವ ಮುನ್ನವೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, 2020 ರಲ್ಲಿ ಲಾಂಚ್ ಆದ ಇಯರ್ಬಡ್ಸ್ಗೆ ಉತ್ತರಾಧಿಕಾರಿಯಾಗಲಿದೆ. ಅದರಂತೆ ಅಧಿಕೃತವಾಗಿ ಬಹಿರಂಗವಾದ ಮಾಹಿತಿ ಪ್ರಕಾರ, ಈ ಬಡ್ಸ್ ಪ್ರೋ 2, 48dB ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಹಾಗೆಯೇ ಇದರ ಹಳೆಯ ವೇರಿಯಂಟ್ ಒನ್ಪ್ಲಸ್ ಬಡ್ಸ್ ಪ್ರೋ 40dB ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಹೊಂದಿತ್ತು.
ಇದನ್ನೂ ಓದಿ: ಹೊಸ ಸ್ಮಾರ್ಟ್ಫೋನ್ ಖರೀದಿಸಬೇಕು ಅಂದ್ಕೊಂಡಿದ್ದೀರಾ? ಇಲ್ಲಿದೆ ನೋಡಿ 2022ರ ಬೆಸ್ಟ್ ಮೊಬೈಲ್ಸ್
ವಿನ್ಯಾಸ ಟೀಸರ್ ಮೂಲಕ ಬಿಡುಗಡೆ
ಇದರ ವಿನ್ಯಾಸವನ್ನು ಅಧಿಕೃತವಾಗಿ ಟೀಸರ್ ಮೂಲಕ ಬಹಿರಂಗಪಡಿಸಲಾಗಿದ್ದು, ಬಡ್ಸ್ಗಳ ಶೈಲಿ ಆಫ್-ಇಯರ್ ವಿನ್ಯಾಸ ಹೊಂದಿದ್ದು, ಪ್ರತಿ ಬಡ್ಸ್ ಮೇಲಿನ ಅರ್ಧವು ಫ್ರಾಸ್ಟೆಡ್ ಮ್ಯಾಟ್ ಫಿನಿಶ್ ಅನ್ನು ಹೊಂದಿದ್ದು, ಕೆಳಗಿನ ಅರ್ಧ ಭಾಗವು ಶೈನಿಂಗ್ ಶೈಲಿಯನ್ನು ಹೊಂದಿಕೊಂಡಿದೆ.
ಇತರ ಫೀಚರ್ಸ್
ಕಳೆದ ಬಡ್ಸ್ಗೆ ಹೋಲಿಕೆ ಮಾಡಿದರೆ ಈ ಹೊಸ ಬಡ್ಸ್ ಅತ್ಯುತ್ತಮ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಹೊಂದಿದೆ ಎಂಬುದು ಬಹಿರಂಗವಾಗಿದೆ. ಹಾಗೆಯೇ ಹೈ-ರೆಸ್ ಆಡಿಯೋ ಬೆಂಬಲದೊಂದಿಗೆ ಪ್ಯಾಕ್ ಇದು ಆಗಿದೆ. ಇದಿಷ್ಟೇ ಅಲ್ಲದೆ 4000Hz ಅಲ್ಟ್ರಾ-ವೈಡ್ಬ್ಯಾಂಡ್ ನಾಯ್ಸ್ ಕ್ಯಾನ್ಸಲಿಂಗ್ ಆಯ್ಕೆ ಹೊಂದಿದ್ದು, ಈ ಬಡ್ಸ್ 10Hz~40KHz ಸೌಂಡ್ ಕ್ವಾಲಿಟಿಯನ್ನು ಒಳಗೊಂಡಿದೆ.
ಬ್ಯಾಟರಿ ಫೀಚರ್ಸ್
ಈ ಹೊಸ ಇಯರ್ಬಡ್ಸ್ಗಳು 9 ಗಂಟೆಯ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಈ ಇಯರ್ ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಬಳಕೆದಾರರು 38 ಗಂಟೆಗಳ ಬ್ಯಾಟರಿ ಬ್ಯಾಕ್ಅಪ್ ಪಡೆಯಬಹುದು. ಹಾಗೆಯೇ ಇದು ವೇಗದ ಚಾರ್ಜಿಂಗ್ ಮತ್ತು ವಾಯರ್ಲೆಸ್ ಚಾರ್ಜಿಂಗ್ ಆಯ್ಕೆಯನ್ನೂ ಸಹ ಹೊಂದಿದೆ. ಅದರಲ್ಲೂ 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 3 ಗಂಟೆಗಳ ಬ್ಯಾಟರಿ ಬ್ಯಾಕಪ್ ಪಡೆಯಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಒನ್ಪ್ಲಸ್ನ ಹಳೆಯ ಇಯರ್ಬಡ್ಸ್ ವರ್ಷನ್ನ ಬೆಲೆ 9,999 ರೂಪಾಯಿಗಳಷ್ಟಿತ್ತು. ಆದರೆ, ಈ ಹೊಸ ಇಯರ್ಬಡ್ಸ್ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಅಂದಾಜಿನ ಪ್ರಕಾರ 12,000 ರೂ. ಗಳ ಬೆಲೆ ಇರಬಹುದು ಎನ್ನಲಾಗಿದೆ. ಈ ಮೂಲಕ ಈ ಡಿವೈಸ್ ಒಪ್ಪೋದ ಪ್ರಮುಖ ಇಯರ್ಬಡ್ಸ್ನ ಬೆಲೆಯನ್ನೇ ಹೋಲಲಿದೆ. ಇನ್ನು ಬಣ್ಣದ ವಿಚಾರಕ್ಕೆ ಬಂದರೆ ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದೆ.
ಯಾವಾಗ ಬಿಡುಗಡೆಯಾಗುತ್ತದೆ?
ಒನ್ಪ್ಲಸ್ ಕಂಪನಿಯ ಬಡ್ಸ್ ಪ್ರೋ 2 ಅನ್ನು ಜನವರಿ 4 ರಂದು ಚೀನಾದಲ್ಲಿ ಒನ್ಪ್ಲಸ್ 11 ಅನ್ನು ಲಾಂಚ್ ಜೊತೆಗೆ ಇದನ್ನೂ ಸಹ ಲಾಂಚ್ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದಾದ ನಂತರ ಭಾರತದಲ್ಲಿ ಫೆಬ್ರವರಿ 7 ರಂದು ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ