Oneplus Earbuds: ಒನ್​ಪ್ಲಸ್​ ಕಂಪೆನಿಯ ಹೊಸ ಇಯರ್​ಬಡ್ಸ್​ ಲಾಂಚ್​! ಫೀಚರ್ಸ್​ಗೆ ಫಿದಾ ಆಗೋದು ಗ್ಯಾರಂಟಿ

ಒನ್​​ಪ್ಲಸ್​ ಬಡ್ಸ್​ ಪ್ರೋ 2ಆರ್​

ಒನ್​​ಪ್ಲಸ್​ ಬಡ್ಸ್​ ಪ್ರೋ 2ಆರ್​

ಒನ್​ಪ್ಲಸ್​ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಡಿವೈಸ್​ಗಳ ಸಾಲಿನಲ್ಲಿ ಬಡ್ಸ್​​ ಪ್ರೋ 2ಆರ್​ ಕೂಡ ಒಂದಾಗಿದೆ. ಈ ಇಯರ್​ಬಡ್ಸ್​ ನಾಯ್ಸ್​ ಕ್ಯಾನ್ಸಲಿಂಗ್ ಫೀಚರ್​ ಅನ್ನು ಒಳಗೊಂಡಿದ್ದು, ಇನ್ನೂ ಹಲವಾರು ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗಿದ್ರೆ ಇದರ ಸ್ಪೆಷಲ್​ ಫೀಚರ್ಸ್​​, ಬೆಲೆ ಬಗ್ಗೆ ಕುತೂಹಲ ನಿಮಗಿದ್ರೆ ಈ ಲೇಖನವನ್ನೊಮ್ಮೆ ಓದಿ.

ಮುಂದೆ ಓದಿ ...
  • Share this:

    ಜಾಗತಿಕ ಮಾರುಕಟ್ಟೆಯಲ್ಲಿ ಒನ್​ಪ್ಲಸ್​ ಕಂಪೆನಿ (Oneplus Company) ಬಿಡುಗಡೆ ಮಾಡುವಂತಹ ಡಿವೈಸ್​ಗಳಿಗೆ ಬೇಡಿಕೆ ಹೆಚ್ಚೇ ಇರುತ್ತದೆ. ಈ ಮಧ್ಯೆ ಅಂತೂ ಒನ್​ಪ್ಲಸ್​ ಕಂಪೆನಿ ತನ್ನ ಗ್ರಾಹಕರಿಗೆ ಹೊಸ ಹೊಸ ಮಾದರಿಯ ಡಿವೈಸ್​ಗಳನ್ನು ಬಿಡುಗಡೆ ಮಾಡುತ್ತಿದೆ. ಒನ್​ಪ್ಲಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳನ್ನು (Premium Smartphones0 ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ಡಿವೈಸ್​ಗಳನ್ನು ಸಹ ಪರಿಚಯಿಸುತ್ತಿದೆ. ಇದರಲ್ಲಿ ಒನ್‌ಪ್ಲಸ್‌ 11 (Oneplus 11) ಹಾಗೂ ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ ಹಾಗೂ ಪ್ಯಾಡ್‌ ಜೊತೆಗೆ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದ್ದು, ಒನ್‌ಪ್ಲಸ್‌ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. 


    ಹೌದು, ಒನ್​ಪ್ಲಸ್​ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಡಿವೈಸ್​ಗಳ ಸಾಲಿನಲ್ಲಿ ಬಡ್ಸ್​​ ಪ್ರೋ 2ಆರ್​ ಕೂಡ ಒಂದಾಗಿದೆ. ಈ ಇಯರ್​ಬಡ್ಸ್​ ನಾಯ್ಸ್​ ಕ್ಯಾನ್ಸಲಿಂಗ್ ಫೀಚರ್​ ಅನ್ನು ಒಳಗೊಂಡಿದ್ದು, ಇನ್ನೂ ಹಲವಾರು ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗಿದ್ರೆ ಇದರ ಸ್ಪೆಷಲ್​ ಫೀಚರ್ಸ್​​, ಬೆಲೆ ಬಗ್ಗೆ ಕುತೂಹಲ ನಿಮಗಿದ್ರೆ ಈ ಲೇಖನವನ್ನೊಮ್ಮೆ ಓದಿ.


    ಒನ್​ಪ್ಲಸ್​ ಬಡ್ಸ್​ ಪ್ರೋ 2ಆರ್​ ವಿನ್ಯಾಸ


    ಒನ್​ಪ್ಲಸ್​ ಬಿಡುಗಡೆ ಮಾಡಿರುವಂತಹ ಈ ಇಯರ್​ಬಡ್ಸ್​  ಈ ಹಿಂದೆ ಬಿಡುಗಡೆಯಾಗಿರುವಂತಹ ಸ್ಟ್ಯಾಂಡರ್ಡ್​ ಬಡ್ಸ್​ ಪ್ರೋ 2 ಗೆ ಹೋಲುವ ಫೀಚರ್ಸ್​ಗಳನ್ನು  ಒಳಗೊಂಡಿದೆ. ಆದರೆ ವೈರ್​ಲೆಸ್​ ಚಾರ್ಜಿಂಗ್ ಮತ್ತು ಹೆಡ್​ ಟ್ರ್ಯಾಕಿಂಗ್​ ಫೀಚರ್​ ಮಾತ್ರ ಇದರಲ್ಲಿರುವ ಸ್ಪೆಷಲ್ ಫೀಚರ್ ಆಗಿದೆ. ಇದರೊಂದಿಗೆ ಈ ಇಯರ್‌ಬಡ್‌ಗಳು ಗ್ಲೋಸಿ ಸ್ಟೆಮ್ ಮತ್ತು ಮೇಲ್ಭಾಗದಲ್ಲಿ ಮ್ಯಾಟ್ ಫಿನಿಶ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ.


    ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಗಿಫ್ಟ್​ ನೀಡ್ಬೇಕು ಅಂದ್ಕೊಂಡಿದ್ದೀರಾ! ಇಲ್ಲಿದೆ ನೋಡಿ ಐಫೋನ್​ಗಳ ಮೇಲೆ ಬೆಸ್ಟ್​ ಆಫರ್ಸ್​


    ಪ್ರಮುಖ ಫೀಚರ್ಸ್​


    ಒನ್​​ಪ್ಲಸ್​ ಕಂಪೆನಿಯ ಈ ಹೊಸ ಇಯರ್‌ಬಡ್ಸ್‌ ಗುಣಮಟ್ಟದ ಆಡಿಯೋ, ಡೈನಾಡಿಯೋ ಟ್ಯೂನಿಂಗ್, ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ ಸೇರಿದಂತೆ ಹಲವಾರು ವಿಶೇಷ ಫೀಚರ್ಸ್​ಗಳನ್ನು ಒಳಗೊಂಡಿದೆ.


    ಒನ್​​ಪ್ಲಸ್​ ಬಡ್ಸ್​ ಪ್ರೋ 2ಆರ್​


    ಇದರೊಂದಿಗೆ ಈ ಬಡ್ಸ್‌ ಪ್ರೋ 2 ಆರ್​​ ನಲ್ಲಿ 11ಎಮ್​ಎಮ್​ ಮತ್ತು 6ಎಮ್​ಎಮ್​ ಗಾತ್ರದ ಡ್ಯುಯಲ್ ಡ್ರೈವರ್‌ ಆಯ್ಕೆಯನ್ನು ನೀಡಲಾಗಿದೆ. ಇವು 48ಡಿಬಿವರೆಗೆ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಫೀಚರ್ಸ್‌ ಅನ್ನು ಅಳವಡಿಸಲಿದ್ದು, ಈ ಮೂಲಕ ಕಾಲ್​​ನಲ್ಲಿ ಮಾತನಾಡಬೇಕಾದರೆ ಸುತ್ತಮುತ್ತಲಿನ ಸೌಂಡ್​ನ ಯಾವುದೇ ತೊಂದರೆಗಳಾಗುವುದಿಲ್ಲ.


    ಇನ್ನು ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಲು ಟ್ರಾನ್ಸ್ಪರೆನ್ಸಿ ಮೋಡ್ ಆಯ್ಕೆಯನ್ನು ಸಹ ನೀಡಲಾಗಿದೆ. ಹಾಗೆಯೇ ಬಡ್ಸ್‌ಗಳು ಎಲ್​ಹೆಚ್​ಡಿಸಿ 5.0 ಆಡಿಯೋ ಕೋಡೆಕ್ ಮತ್ತು ಗೇಮಿಂಗ್‌ಗಾಗಿ 54ms ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸಲಿದ್ದು, ಈ ಮೂಲಕ ಅತ್ಯುತ್ತಮವಾದ ಗೇಮಿಂಗ್‌ ಅನುಭವವನ್ನು ಸಹ ಬಳಕೆದಾರರು ಪಡೆಯಬಹುದಾಗಿದೆ.


    ಒನ್​ಪ್ಲಸ್​ ಬಡ್ಸ್​ ಪ್ರೋ 2ಆರ್​ ಬ್ಯಾಟರಿ ಸಾಮರ್ಥ್ಯ


    ಒನ್‌ಪ್ಲಸ್‌ ಬಡ್ಸ್‌ ಪ್ರೋ 2ಆರ್​ ಇಯರ್‌ಬಡ್ಸ್‌ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 39 ಗಂಟೆಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಡಿವೈಸ್​ನಲ್ಲಿ ನಾಯ್ಸ್​ ಕ್ಯಾ ನ್ಸಲಿಂಗ್ ಫೀಚರ್​ ಅನ್ನು ಆಫ್​ ಮಾಡಿ ಬಳಕೆ ಮಾಡಿದ್ರೆ 9 ಗಂಟೆಗಳ ಕಾಲ ಹೆಚ್ಚುವರಿಯಾಗಿ ಬಳಕೆ ಮಾಡಬಹುದು. ಇನ್ನು ಎಎನ್​ಸಿ ಫೀಚರ್ ಅನ್ನು ಆನ್​ ಮಾಡಿದ್ರೆ ಈ ಬಡ್ಸ್​​ಗಳು 6 ಗಂಟೆಗಳವರೆಗೆ ಪ್ಲೇ ಬ್ಯಾಕ್​ ಟೈಮ್​ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ.




    ಬೆಲೆ ಮತ್ತು ಲಭ್ಯತೆ


    ಒನ್‌ಪ್ಲಸ್‌ ಬಡ್ಸ್‌ ಪ್ರೋ 2ಆರ್​ ಇಯರ್‌ಬಡ್ಸ್‌ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದ್ದು, ಈ ಮೂಲಕ ಇದರ ಬೆಲೆ 9,999 ರೂಪಾಯಿಗಳಷ್ಟು ನಿಗದಿ ಮಾಡಲಾಗಿದೆ.  ಹಾಗೆಯೇ ಆದರೆ ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದೆಂದು ಕಂಪೆನಿ ಯಾವುದೇ ರೀತಿಯಲ್ಲೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದರಂತೆ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಬಡ್ಸ್‌ಗಳು ಕಂಡುಬರಲಿವೆ.

    Published by:Prajwal B
    First published: