news18-kannada Updated:January 11, 2021, 2:47 PM IST
OnePlus Band
ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದ್ದ ಒನ್ಪ್ಲಸ್ ಸಂಸ್ಥೆ ಇದೀಗ ಬ್ಯಾಂಡ್ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬ್ಯಾಂಡ್ ಶಿಯೋಮಿ ಸಂಸ್ಥೆಯ ಮಿ ಸ್ಮಾರ್ಟ್ ಬ್ಯಾಂಡ್ 5ನಂತೆ ಫೀಚರ್ ಹೊಂದಿದೆ. ಅಮೋಲ್ಡ್ ಡಿಸ್ಪ್ಲೇ ಜೊತೆಗೆ ರಕ್ತದಲ್ಲಿರುವ ಆಕ್ಸಿಜನ್ ಸಾಚ್ಯುರೇಶನ್ ಮತ್ತು ಎದೆ ಬಡಿತ ಮಾನಿಟರ್ ಮಾಡುವ ಫೀಚರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರಿಗಾಗಿ 13 ವ್ಯಾಯಾಮ ಮೋಡ್ ಇದರಲ್ಲಿದೆ.
OnePlus Band ವಿಶೇಷತೆ:ಒನ್ಪ್ಲಸ್ ಬ್ಯಾಂಡ್ 1.1 ಇಂಚಿನ ಅಮೋಲ್ಡ್ ಡಿಸ್ಪ್ಲೇ ಜೊತೆಗೆ 126x294 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ 3 ಆ್ಯಕ್ಸಿಸ್ ಅಕ್ಸೆಲೆರೊಮೀಟರ್ ಮತ್ತು ಗೈರೊಸ್ಕೋಪ್ ಇದರಲ್ಲಿ. ಹಾರ್ಟ್ರೇಟ್ ಸೆನ್ಸಾರ್, ಬ್ಲಡ್ ಆಕ್ಸಿಜನ್ ಸೆನ್ಸಾರ್ ಫೀಚರ್ ನೀಡಿದೆ.
ಅಷ್ಟು ಮಾತ್ರವಲ್ಲದೆ, ಓಟ, ಹೊರಾಂಗಣ ಓಟ, ಕ್ರಿಕೆಟ್, ಬ್ಯಾಡ್ಮಿಟನ್, ಸ್ಮಿಮ್ಮಿಂಗ್, ನಿದ್ದೆ, ಯೋಗ ಮುಂತಾದ 13 ವ್ಯಾಯಾಮ ಮೋಡ್ಗಳನ್ನು ಇದರಲ್ಲಿ ನೀಡಲಾಗಿದೆ. ಐಪಿ68 ಸರ್ಟಿಫಿಕೇಶನ್ ಮತ್ತು 5ಎಟಿಎಮ್ ವಾಟರ್-ರೆಸಿಸ್ಟೆಂಟ್ ರೇಟಿಂಗ್ ಇದರಲ್ಲಿದೆ.
ಇನ್ನು ಒನ್ಪ್ಲಸ್ ಬ್ಯಾಂಡ್ ಆ್ಯಂಡ್ರಾಯ್ಡ್ 6.0ನಿಂದ ಕಾರ್ಯನಿರ್ವಹಿಸುತ್ತದೆ. ಐಫೋನ್ಗೂ ಸಪೋರ್ಟ್ ನೀಡಲಿದೆ. ಬ್ಲೂಟೂತ್ ವಿ5.0 ಮೂಲಕ ಸ್ಮಾರ್ಟ್ಫೋನ್ಗೆ ಕನೆಕ್ಟ್ ಮಾಡಬಹುದಾಗಿದೆ.
ಅಷ್ಟು ಮಾತ್ರವಲ್ಲದೆ, ರಿಯಲ್-ಟೈಮ್ ಮೆಸೇಜ್ ನೋಟಿಫಿಕೇಶನ್, ಇನ್ಕಮ್ಮಿಂಗ್ ಕರೆ ಅಲರ್ಟ್, ಕರೆ ಕಡಿತ, ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಕ್ಯಾಮೆರಾ ಮುಂತಾದ ಫೀಚರ್ ಕೂಡ ಇದರಲ್ಲಿದೆ.
ಅಂದಹಾಗೆಯೇ, ಈ ಬ್ಯಾಂಡ್ನಲ್ಲಿ 100mAh ಬ್ಯಾಟರಿ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 14 ದಿನಗಳ ಕಾಲ ಬಳಸಬಹುದಾಗಿದೆ.
ಒನ್ಪ್ಲಸ್ ಬ್ಯಾಂಡ್ ಬೆಲೆ:
ಒನ್ಪ್ಲಸ್ ಮಾರುಕಟ್ಟೆಗೆ ಪರಿಚಯಿಸಿರುವ ನೂತನ ಬ್ಯಾಂಡ್ ಕಪ್ಪು ಬಣ್ಣದಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ. ಅಂತೆಯೇ, ಒನ್ಪ್ಲಸ್ ಸ್ಟೋರ್ ಆ್ಯಪ್, ಫ್ಲಿಪ್ಕಾರ್ಟ್, ಅಮೆಜಾನ್, ಆಫ್ಲೈನ್ ಸ್ಟೋರ್ಗಳಲ್ಲಿ ಜನವರಿ 13ರಿಂದ ಸಿಗಲಿದೆ. ಇನ್ನು ಈ ನೂತನ ಬ್ಯಾಂಡ್ ಬೆಲೆ 2,499 ರೂ ಆಗಿದೆ.
Published by:
Harshith AS
First published:
January 11, 2021, 2:47 PM IST