ಆಕರ್ಷಕ ಗಣರಾಜ್ಯೋತ್ಸವ ಆಫರ್‌ಗಳೊಂದಿಗೆ ಖರೀದಿದಾರರನ್ನು ತನ್ನೆಡೆ ಸೆಳೆಯುತ್ತಿರುವ OnePlus

4K QLED ಡಿಸ್‌ಪ್ಲೇ, Dolby ವಿಷನ್ ಜೊತೆಗೆ 50W 8-ಸ್ಪೀಕರ್ ಸೆಟಪ್ ಮತ್ತು Dolby Atmos ಹೊಂದಿರುವ OnePlus TV Q ಸರಣಿಯ ಮೇಲೆ ಗ್ರಾಹಕರು INR 4000 ವರೆಗಿನ ತ್ವರಿತ ರಿಯಾಯಿತಿ ಪಡೆಯಬಹುದು.

OnePlus

OnePlus

 • Share this:
  ಭಾರತದಲ್ಲಿ ಬರಲಿರುವ ಗಣರಾಜ್ಯೋತ್ಸವದ ಆಚರಣೆಗೆ ಮುಂಚಿತವಾಗಿ OnePlus ಕೆಲವು ಉತ್ತಮ ಆಫರ್‌ಗಳನ್ನು ನೀಡಲಿದೆ. ಆಫರ್‌ಗಳು ಅದರ ಸಂಪೂರ್ಣ ಉತ್ಪನ್ನಗಳಾದ್ಯಂತ ಇರಲಿದ್ದು - ಅದು OnePlus 8T ಅಥವಾ OnePlus Nord ‌ನಂತಹ ಸ್ಮಾರ್ಟ್‌ಫೋನ್‌ಗಳಾಗಿರಬಹುದು, ಅದರ U ಮತ್ತು Y ಸರಣಿಯ ಸ್ಮಾರ್ಟ್ ಟಿವಿಗಳಾಗಿರಬಹುದು ಅಥವಾ OnePlus ಆ್ಯಕ್ಸೆಸರೀಸ್ ಆಗಿಯಬಹುದು. ಜಗತ್ತಿನ ಅತ್ಯುನ್ನತ ತಂತ್ರಜ್ಞಾನ ಕಂಪನಿಯಿಂದ ಹೆಚ್ಚು ಮೆಚ್ಚುಗೆ ಪಡೆದ ಕೆಲವು ಉತ್ಪನ್ನಗಳು ಮತ್ತು ಡಿವೈಸ್‌ಗಳನ್ನು ಕೊಳ್ಳಲು ನೀವು ಕಾಯುತ್ತಿದ್ದರೆ, ಇದಕ್ಕಿಂತ ಸೂಕ್ತ ಸಮಯ ಮತ್ತೊಂದಿಲ್ಲ.

  OnePlus ‌ನಿಂದ ನೀವು ಪಡೆಯಬಹುದಾದ ಎಲ್ಲಾ ಗಣರಾಜ್ಯೋತ್ಸವದ ಪ್ರಸ್ತುತ ಆಫರ್‌ಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ. ಇದು ನಿಮ್ಮ ಆಯ್ಕೆಯನ್ನು ಸುಲಭಗೊಳಿಸಲಿದೆ. ಕೆಳಗಿನ ಪಟ್ಟಿಯಿಂದ ನಿಮ್ಮ ಆಯ್ಕೆಯನ್ನು ಪಡೆದುಕೊಂಡು ನಿಮ್ಮ ನೆಚ್ಚಿನ OnePlus ಡಿವೈಸ್‌ನೊಂದಿಗೆ ನಿಮ್ಮ ವರ್ಷವನ್ನು ಭಿನ್ನವಾಗಿ ಪ್ರಾರಂಭಿಸಿ.

  OnePlus 8T 5G
  OnePlusನ ಇತ್ತೀಚಿನ ಸ್ಮಾರ್ಟ್‌ಫೋನ್ OnePlus 8T 5G ಪ್ರಸ್ತುತ ಮೊದಲ ಬಾರಿಗೆ ಇನ್ನೂ ಕಡಿಮೆ ದರದಲ್ಲಿ ಲಭ್ಯವಿದೆ. ನಿಜವಾದ ಬೆಲೆ INR 42,999 ನಿಂದ ಇದ್ದರೂ ಸಹ, 8T ಶ್ರೇಣಿಯು ಈಗ Amazon India ದ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ INR 38,999 ಗೆ ಸಿಗಲಿದೆ, ಇದು INR 4,000 ನ ಉಳಿತಾಯವನ್ನು ನಿಮಗೆ ನೀಡಲಿದೆ. ಜನವರಿ 19-23 ರಿಂದ ಈ ಸೇವೆ ಲಭ್ಯವಿದ್ದು, ಬೆಲೆ ಸೀಮಿತ ಅವಧಿಗೆ ಮಾನ್ಯವಾಗಿರುವ Amazon ಕೂಪನ್‌ಗಳ ಮೂಲಕ INR 2500 ರಿಯಾಯಿತಿಯನ್ನು ಒಳಗೊಂಡಿರುತ್ತದೆ ಮತ್ತು SBI ಕ್ರೆಡಿಟ್ ಕಾರ್ಡ್‌ಗಳ ಮೂಲಕ INR 1500 ರಿಯಾಯಿತಿ ಲಭ್ಯವಿದೆ.

  ನೀವು OnePlus ‌ನಿಂದ ನೇರವಾಗಿ ಖರೀದಿಸಲು ಬಯಸಿದಲ್ಲಿ, ಅಧಿಕೃತ ವೆಬ್‌ಸೈಟ್‌ನಲ್ಲೂ ಮನಸೂರೆಗೊಳ್ಳುವ ಆಫರ್‌ಗಳಿವೆ. HDFC Bank ಕಾರ್ಡ್‌ಗಳು ಮತ್ತು oneplus.in ನಲ್ಲಿನ EasyEMI, OnePlus ಸ್ಟೋರ್ ಆ್ಯಪ್ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ 8T 5G ಖರೀದಿಸಿದಲ್ಲಿ ನೀವು INR 2000 ರಿಯಾಯಿತಿ ಪಡೆಯಲಿದ್ದೀರಿ. oneplus.in ಮತ್ತು OnePlus ಸ್ಟೋರ್ ಆ್ಯಪ್‍ನಲ್ಲಿ ಮಾಡಿದ ಖರೀದಿಯ ಮೇಲೆ ಆಯ್ದ American Express ಕಾರ್ಡ್‌ಗಳ ಮೇಲೆ 10% ಕ್ಯಾಶ್‌ಬ್ಯಾಕ್ ಸಿಗಲಿದೆ. 120Hz ಡಿಸ್‌ಪ್ಲೇ, ಇತ್ತೀಚಿನ Qualcomm Snapdragon 865 ಪ್ರೊಸೆಸರ್ ಮತ್ತು ಗಟ್ಟಿಯಾದ ಕ್ಯಾಮೆರಾ-ಸೆಟಪ್‌ನಂತಹ ಪ್ರಮುಖ ವೈಶಿಷ್ಟ್ಯಗಳೊಂದಿಗೆ, OnePlus 8T 5G ಮುಂದಿನ ಕೆಲವು ವರ್ಷಗಳ ಬಳಕೆಗೆ ನಿಶ್ಚಿಂತೆಯಿಂದ ಮಾಡಬಹುದಾದ ಸ್ಮಾರ್ಟ್‌ಫೋನ್ ಮೇಲಿನ ಹೂಡಿಕೆಯಾಗಿದೆ.

  OnePlus Nord  2020 ರ ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಈಗ ಸಾಟಿಯಿಲ್ಲದ ಬೆಲೆಯಲ್ಲಿ ಲಭ್ಯವಿದೆ. ಫ್ಲಾಗ್‌ಶಿಪ್-ಲೆವೆಲ್ ವೈಶಿಷ್ಟ್ಯಗಳಾದ ಫ್ಲೂಯಿಡ್ 90Hz ಡಿಸ್‌ಪ್ಲೇ, Qualcomm Snapdragon 765G ಪ್ರೊಸೆಸರ್ ಮತ್ತು ಬೆಲೆಗೆ ತಕ್ಕಂತಹ ಕೆಲವು ಸಮರ್ಥ ಕ್ಯಾಮೆರಾಗಳನ್ನು ನೀಡುತ್ತಾ OnePlus Nord ತನ್ನತ್ತ ನಮ್ಮನ್ನು ಸೆಳೆಯಲು ತಯಾರಾಗಿ ನಿಂತಿದೆ.

  ಗ್ರೇ ಆಶ್, ಬ್ಲೂ ಮಾರ್ಬಲ್ ಮತ್ತು ಗ್ರೇ ಓನಿಕ್ಸ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, 8+128GB ವೇರಿಯೆಂಟ್‌ನ ಮೂಲ ಬೆಲೆ INR 27,999 ಆಗಿದ್ದು, 12+256GB ವೇರಿಯೆಂಟ್ INR 29,999 ಗೆ ಲಭ್ಯವಿದೆ. HDFC Bank ಕಾರ್ಡ್‌ಗಳೊಂದಿಗೆ, ನೀವು ಈಗ ಈ ಪ್ರೀಮಿಯಂ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ ಅನ್ನು ಎಲ್ಲಿಂದರಾದರೂ ಖರೀದಿಸಿ, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆರು ತಿಂಗಳ ಬಡ್ಡಿರಹಿತ ಇಎಂಐನೊಂದಿಗೆ INR 1000 ರಿಯಾಯಿತಿ ಅಥವಾ ಆರು ತಿಂಗಳ ಬಡ್ಡಿರಹಿತ ಇಎಂಐನೊಂದಿಗಿನ ಇಎಂಐ ಪಡೆಯಬಹುದು.

  OnePlus TVs  ಕೆಲವು ಅತ್ಯುತ್ತಮ ವಿನ್ಯಾಸಗಳು, ಉನ್ನತ ದರ್ಜೆಯ ಡಿಸ್‌ಪ್ಲೇ ಮತ್ತು Dolby ಆಡಿಯೊವನ್ನು ಒಳಗೊಂಡಿರುವ OnePlus TV ಗಳು ಅಲ್ಪಾವಧಿಯಲ್ಲಿಯೇ ಪ್ರಭಾವಶಾಲಿ ಜನಪ್ರಿಯತೆಯನ್ನು ಗಳಿಸಿರುವುದರಲ್ಲಿ ಆಶ್ಚರ್ಯವಿಲ್ಲ. OnePlus ತನ್ನ ಗಣರಾಜ್ಯೋತ್ಸವದ ಸೇಲ್ ಮೂಲಕ ಬಜೆಟ್ Y ಸರಣಿ ಮತ್ತು ಫ್ಲ್ಯಾಗ್‌ಶಿಪ್ Q1 ಸರಣಿಗಳಲ್ಲಿ ಕೆಲವು ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ.

  4K QLED ಡಿಸ್‌ಪ್ಲೇ, Dolby ವಿಷನ್ ಜೊತೆಗೆ 50W 8-ಸ್ಪೀಕರ್ ಸೆಟಪ್ ಮತ್ತು Dolby Atmos ಹೊಂದಿರುವ OnePlus TV Q ಸರಣಿಯ ಮೇಲೆ ಗ್ರಾಹಕರು INR 4000 ವರೆಗಿನ ತ್ವರಿತ ರಿಯಾಯಿತಿ ಪಡೆಯಬಹುದು. HDFC ಕ್ರೆಡಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಡೆಬಿಟ್ ಕಾರ್ಡ್ ಇಎಂಐ ಬಳಸಿ ಖರೀದಿಸುವಾಗ ಗ್ರಾಹಕರು OnePlus TV Y ಸರಣಿಯ ಮೇಲೆ INR 1000 ರವರೆಗೆ ರಿಯಾಯಿತಿ ಪಡೆಯಬಹುದು. OnePlus TV Y Series 43” ಮೇಲೆ ಹೆಚ್ಚುವರಿ INR 1000 ರಿಯಾಯಿತಿ ಮತ್ತು OnePlus Y Series 32” TV ಮೇಲೆ INR 500 ರಿಯಾಯಿತಿ ಪಡೆಯುವ ಆಯ್ಕೆಯೂ ಲಭ್ಯವಿದೆ.

  OnePlus ಆ್ಯಕ್ಸೆಸರೀಸ್
  ಇಂದಿನಿಂದ ಜನವರಿ 24 ರವರೆಗೆ, ನಿಮ್ಮ ನೆಚ್ಚಿನ OnePlus ಆ್ಯಕ್ಸೆಸರೀಸ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. OnePlus Bullets Wireless Z ಸರಣಿಯು ಈಗ ಕೇವಲ INR 1899 ನಲ್ಲಿ ಲಭ್ಯವಿದೆ, ಆದರೆ OnePlus ಪವರ್‌ಬ್ಯಾಂಕ್ oneplus.in ನಲ್ಲಿ ಮತ್ತು OnePlus ಸ್ಟೋರ್ ಆ್ಯಪ್‍ನಲ್ಲಿ ಕೇವಲ INR 999 ಗೆ ಲಭ್ಯವಿದೆ. ಇದಲ್ಲದೆ, oneplus.in ನಲ್ಲಿ ಮತ್ತು OnePlus ಸ್ಟೋರ್ ಆ್ಯಪ್‍ನಲ್ಲಿ OnePlus Buds, INR 4699 ಬೆಲೆಯಲ್ಲಿ ಮತ್ತು OnePlus Buds Z, INR 2799 ಬೆಲೆಯಲ್ಲಿ ಲಭ್ಯವಿದೆ.
  ಇದೇ ಅಲ್ಲದೆ, OnePlus Bullets Wireless Z Bass ಎಡಿಷನ್, OnePlus Buds ಮತ್ತು OnePlus Buds Z ಸಹ Amazon.in, Flipkart.com, OnePlus ಎಕ್ಸ್‌ಕ್ಲೂಸಿವ್ ಆಫ್‌ಲೈನ್ ಸ್ಟೋರ್‌ಗಳು ಮತ್ತು ಪಾಲುದಾರ ರಿಟೇಲ್ ಔಟ್‌ಲೆಟ್‌ಗಳಲ್ಲಿ 5% ರಿಯಾಯಿತಿಯಲ್ಲಿ ಲಭ್ಯವಿದೆ.

  OnePlus ಸ್ಟೋರ್ ಆ್ಯಪ್‌ ಅಥವಾ oneplus.in ‌ನಲ್ಲಿ ಸೈನ್ ಅಪ್ ಮಾಡುವ ಮೂಲಕ ಗ್ರಾಹಕರು ಎಲ್ಲಾ OnePlus ಉತ್ಪನ್ನಗಳಲ್ಲಿ ರೆಡ್ ಕೇಬಲ್ ಕ್ಲಬ್ ಸದಸ್ಯತ್ವ ಪ್ರಯೋಜನಗಳಾಗಿ ಹೆಚ್ಚುವರಿ INR 100 ಅನ್ನು ಉಳಿಸಬಹುದು. ರೆಡ್ ಕೇಬಲ್ ಕ್ಲಬ್ ಸದಸ್ಯರಾಗಿ, ನೀವು ಡಿಸ್‌ಕೌಂಟ್ ವೌಚರ್‌ಗಳನ್ನು ಪಡೆಯಬಹುದು ಮತ್ತು ಜನವರಿ 31 ರವರೆಗೆ ರೆಡ್ ಕೇಬಲ್ ಪ್ರಿವ್‌ನಲ್ಲಿ ಇತ್ತೀಚಿನ ಸರಕುಗಳನ್ನು ತಮ್ಮದಾಗಿಸಿಕೊಳ್ಳಬಹುದು.

  ರೆಡ್ ಕೇಬಲ್ ಪ್ರಿವ್‌ನ ಭಾಗವಾಗಿ, OnePlus 8, 8 Pro & 8T 5G ಖರೀದಿಯಲ್ಲಿ ನೀವು OnePlus ಪವರ್‌ಬ್ಯಾಂಕ್‌ಗೆ ಫ್ರೀ ವೌಚರ್ ಪಡೆಯಲು ಅರ್ಹರಾಗಿದ್ದೀರಿ ಮತ್ತು OnePlus 3 ಯಿಂದ OnePlus 6T ಬಳಸುವ ಗ್ರಾಹಕರಿಗೆ ಬ್ಯಾಟರಿ ಬದಲಿಗಾಗಿ 50% ರಿಯಾಯಿತಿ ದರದಲ್ಲಿ ವೌಚರ್ ಪಡೆಯುತ್ತೀರಿ. ಅದು 2021 ರ ಅಂತ್ಯದವರೆಗೆ ಮಾನ್ಯವಾಗಿವುದು.

  OnePlus ಅರ್ಬನ್ ಟ್ರಾವೆಲರ್ ಬ್ಯಾಕ್‌ಪ್ಯಾಕ್ ರೆಡ್ ಕೇಬಲ್ ಕ್ಲಬ್ ಸದಸ್ಯರಿಗಾಗಿ ಪ್ರತ್ಯೇಕವಾಗಿ ಖರೀದಿಸಲು ಲಭ್ಯವಿದೆ. ನೀವು ಮಾಡಬೇಕಾಗಿರುವುದು ರೆಡ್ ಕೇಬಲ್ ಪ್ರಿವ್‌ನಿಂದ ಆಹ್ವಾನ ಕೋಡ್ ಅನ್ನು ಕ್ಲೈಮ್ ಮಾಡುವುದು ಮತ್ತು oneplus.in ಅಥವಾ OnePlus ಸ್ಟೋರ್ ಆ್ಯಪ್‌ನಲ್ಲಿ ಖರೀದಿ ಮಾಡುವುದು.

  OnePlus ಗಣರಾಜ್ಯೋತ್ಸವದ ಆಫರ್‌ನ ಅಡಿಯಲ್ಲಿ ಅನೇಕ ಡಿವೈಸ್‌ಗಳ ಮೇಲಿರುವ ವಿಭಿನ್ನ ಆಫರ್‌ಗಳು ನಿಮ್ಮೆಲ್ಲರಿಗೂ ವಿಶೇಷವಾದದ್ದನ್ನು ನೀಡಲಿದೆ. ಜನವರಿ 26 ರಂದು ಸೇಲ್ ಮುಗಿಯುವ ಮೊದಲು ಈ ರಿಯಾಯಿತಿಯ ಆನಂದವನ್ನು ಪಡೆಯಿರಿ ಮತ್ತು ನಿಮ್ಮ ನೆಚ್ಚಿನ ಡಿವೈಸ್‌ಗಳ ಮಾಲೀಕರಾಗಿ.
  Published by:zahir
  First published: