OnePlus ಹೊಸ ಸ್ಮಾರ್ಟ್‌ಫೋನ್‌ 9RT ಹೇಗಿದೆ..? ಇದರ ವಿಶೇಷತೆಗಳು ಹೇಗಿದೆ ಗೊತ್ತೇ?

ಒನ್‍ಪ್ಲಸ್‌ 9RT ಬಗ್ಗೆ ಚಿರಪರಿಚಿತ ಅನುಭವ ನೀಡುತ್ತವೆ. ಆದರೆ, ಈ ಫೋನ್ ಅನ್ನು ಮೇಲಕ್ಕೆ ಉಜ್ಜಿ ತೆರೆದಾಗ, ಹ್ಯಾಕರ್ ಬ್ಲ್ಯಾಕ್ ರಿಯರ್ ಪ್ಯಾನೆಲ್ ನಿಮ್ಮಲ್ಲಿ ರೋಮಾಂಚಕ ಅಚ್ಚರಿ ಉಂಟು ಮಾಡುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಉತ್ಕೃಷ್ಟ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು (Smartphones) ಅಚ್ಚರಿ ಪಡುವಂತಹ ವೈಶಿಷ್ಟ್ಯಗಳನ್ನೇನೂ ನೀಡುತ್ತಿಲ್ಲ. ಅದು ಒಳ್ಳೆಯದೂ ಆಗಿರಬಹುದು ಅಥವಾ ಕೆಟ್ಟದೂ ಆಗಿರಬಹುದು. ಆದರೆ, ಆ್ಯಪಲ್, ಸ್ಯಾಮ್‌ಸಂಗ್(Samsung) ಹಾಗೂ ಒನ್ ಪ್ಲಸ್‌ನಂತಹ ಬ್ರ್ಯಾಂಡೆಡ್‌ (Branded) ಸ್ಮಾರ್ಟ್‌ಫೋನ್‌ಗಳು ಕಾಸಿಗೆ ತಕ್ಕ ಕಜ್ಜಾಯ ಎಂಬಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ದರ ವೈವಿಧ್ಯದಲ್ಲಿ ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳು ಇದೇ ನಿರೂಪಣೆಗೆ ಪಕ್ಕಾಗಿವೆ. ಈ ಫೋನ್ ಒಳಗೊಂಡಿರುವ ವೈಶಿಷ್ಟ್ಯಗಳಿಗೆ 5 ಸ್ಟಾರ್ ರೇಟಿಂಗ್ಸ್‌ ನೀಡಿದಾಗಲೂ ಜನರಲ್ಲಿ ಖರೀದಿಸುವ ಭರಾಟೆ ಸೃಷ್ಟಿಸದಿದ್ದರೂ ಅವರನ್ನು ತುದಿಗಾಲ ಮೇಲಂತೂ ನಿಲ್ಲಿಸಲಿವೆ.

ಒನ್‍ಪ್ಲಸ್‌ 9RT ಈ ವರ್ಷದ ಆರಂಭದಲ್ಲಿ ಆ ಕಂಪನಿಯಿಂದ ಬಿಡುಗಡೆಯಾಗಿರುವ ನೂತನ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಈ ಬ್ರ್ಯಾಂಡ್ ಯೋಜನೆಯು ತನ್ನ ಗ್ರಾಹಕರನ್ನು ಗುರಿಯಾಗಿಸಿಕೊಂಡು ಪರಿಚಯಿಸಿರುವ ವೈಶಿಷ್ಟ್ಯಗಳು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ ಒನ್‍ಪ್ಲಸ್‌ ಪರಂಪರೆಯನ್ನು ದೃಢವಾಗಿ ತನ್ನ ಹೆಗಲ ಮೇಲೆ ಹೊತ್ತುಕೊಂಡು ಮುಂದುವರಿಸಿದ್ದು, ಗ್ರಾಹಕರು ಈ ಫೋನ್ ಖರೀದಿಸಲು ಹೋದಾಗ ಅದರ ಪೊಟ್ಟಣದ ಅಂಚಿನಲ್ಲಿ ನೀಡಲಾಗಿರುವ ಆಯತಾಕಾರದಲ್ಲಿ ಏನೆಂದು ನಮೂದಿಸುತ್ತಾರೆ ಎಂದು ಅದಕ್ಕೆ ತಿಳಿದೇ ಇದೆ.

ಚಿರಪರಿಚಿತ ಅನುಭವ
ಉದ್ದನೆಯ ಕೆಂಪು ಪೊಟ್ಟಣದೊಂದಿಗೆ ಶುರುವಾಗಿ ಅದರ ಪ್ರಥಮ ದರ್ಶನವೊದಗಿಸುವ ಗಾಢ ಬಣ್ಣದ ಸಾಧನದವರೆಗೆ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಲಾಗಿದೆ. ಈ ಎಲ್ಲವೂ ಒನ್‍ಪ್ಲಸ್‌ 9RT ಬಗ್ಗೆ ಚಿರಪರಿಚಿತ ಅನುಭವ ನೀಡುತ್ತವೆ. ಆದರೆ, ಈ ಫೋನ್ ಅನ್ನು ಮೇಲಕ್ಕೆ ಉಜ್ಜಿ ತೆರೆದಾಗ, ಹ್ಯಾಕರ್ ಬ್ಲ್ಯಾಕ್ ರಿಯರ್ ಪ್ಯಾನೆಲ್ ನಿಮ್ಮಲ್ಲಿ ರೋಮಾಂಚಕ ಅಚ್ಚರಿ ಉಂಟು ಮಾಡುತ್ತದೆ. ಇದು ನೀವು ಮೆಚ್ಚುವ ಬಣ್ಣವಾಗಿದ್ದು, ನಿಮ್ಮನ್ನು ಮಾತ್ರವಲ್ಲದೆ ಮಿಲಿಯನ್‌ಗಟ್ಟಲೆ ಜನರಲ್ಲಿ ಆತ್ಮೀಯತೆ ಹುಟ್ಟಿಸಿರುವ ಬಣ್ಣ ಇದಾಗಿದೆ. ಈ ಬ್ರ್ಯಾಂಡ್ ಅನ್ನು ತೆರೆದು ನೋಡಿದಾಗ ಅದು ನಿಮ್ಮ ಕಣ್ಣಿಗೆ ಕ್ಷಣ ಮಾತ್ರದಲ್ಲಿ ಅರ್ಥವಾಗುತ್ತದೆ.

ಇದನ್ನೂ ಓದಿ: OnePlus: ಕಿಸೆಯಲ್ಲಿದ್ದ ಒನ್​ಪ್ಲಸ್​ ಸ್ಮಾರ್ಟ್​ಫೋನ್​ ಸ್ಫೋಟ; ಬಳಕೆದಾರನ ಸ್ಥಿತಿ ಏನಾಗಿದೆ ಗೊತ್ತಾ?

ಈ ಸ್ಮಾರ್ಟ್‌ಫೋನ್‌ನ ಒಟ್ಟಾರೆ ಸ್ವರೂಪವು ಇತ್ತೀಚೆಗೆ ಬಿಡುಗಡೆಯಾಗಿರುವ ಸ್ಯಾಮ್‌ಸಂಗ್ ಫೋನ್ ಮಾದರಿಗಳನ್ನು ನೆನಪಿಸುತ್ತದೆಯಾದರೂ, ತನ್ನ ದೊಡ್ಡ ಗಾತ್ರದ ಕ್ಯಾಮೆರಾ, ಹಿಂಬದಿಯ ಬಲಬದಿಯಲ್ಲಿರುವ ಎಚ್ಚರಿಸುವ ಜಾರಿಕೆಯಯಲ್ಲಿನ ವೈಶಿಷ್ಟ್ಯಗಳಿಂದ ಅವಕ್ಕಿಂತ ಭಿನ್ನವಾಗಿದೆ. ಈ ಫೋನ್ ಉತ್ತಮ ಹಿಡಿಕೆಯನ್ನು ಹೊಂದಿದ್ದು, ಮ್ಯಾಟ್ ಫಿನಿಶ್ ಕಾರಣಕ್ಕೆ ಫೋನ್ ಮೇಲೆ ಯಾವುದೇ ಬೆರಳಚ್ಚು ಉಳಿಯದಿರುವುದನ್ನು ಖಾತ್ರಿ ಪಡಿಸುತ್ತದೆ. ಇದರ ತೂಕ ಕೂಡಾ ಸರಿಯಾಗಿಯೇ ಇದೆ.

ಡಿಸ್ಪ್ಲೇ ಹೇಗಿದೆ..?
ಈ ಒನ್‌ಪ್ಲಸ್ ಫೋನ್ ಎಂದಿನಂತೆ ಹೇಳಿಕೆ ನೀಡುವ ಡಿಸ್ಪ್ಲೇ ವೈಶಿಷ್ಟ್ಯವನ್ನೂ ಹೊಂದಿದೆ. ಒನ್‍ಪ್ಲಸ್‌ 9RT 120 ಹರ್ಟ್ಜ್ ಡಿಸ್ಲ್ಪ್ಲೇ ಹೊಂದಿದ್ದು, ಕಂಪನಕಾರಿಯಾಗಿದ್ದು, ಅಚ್ಚುಕಟ್ಟಾಗಿಯೂ ಇದೆ. ಡಿಸ್ಪ್ಲೇ ಬೆಳಕು ಸೂಕ್ಷ್ಮಿಯಾಗಿದ್ದು, ಯಾವುದೇ ಸನ್ನಿವೇಶದಲ್ಲಿ ಪ್ರಕಾಶಮಾನಗೊಳ್ಳುವ ಅಥವಾ ಮಬ್ಬಾಗುವ ಹೊಂದಾಣಿಕೆಯನ್ನು ಹೊಂದಿದೆ. ಹಲವಾರು ಡಿಸ್ಪ್ಲೇ ಬಗೆಗಳಿದ್ದು, ನೀವು ನಿಜಕ್ಕೂ ಇಷ್ಟ ಪಡುವ ಬಗೆಗಳನ್ನು ಆರಿಸಿಕೊಳ್ಳಬಹುದಾಗಿದೆ. ನೀವು ಸಿನಿಮಾ ವೀಕ್ಷಣೆ ಬಗೆಯ ಡಿಸ್ಪ್ಲೇಯನ್ನು ಆಯ್ದುಕೊಂಡು ಹಲವಾರು ವಿಡಿಯೋಗಳನ್ನು ಆರಾಮವಾಗಿ ಹಾಗೂ ಬೆಚ್ಚಗೆ ವೀಕ್ಷಿಸಬಹುದಾಗಿದೆ.

ಕಾರ್ಯನಿರ್ವಹಣೆ ಒನ್‌ಪ್ಲಸ್ ಫೋನ್‌ಗಳ ವಿಚಾರದಲ್ಲಿ ಸಮಸ್ಯೆಯೇ ಅಲ್ಲ. ನೀವು ಖರೀದಿಸಲಿರುವ ಒನ್‌ಪ್ಲಸ್ 9RT ಉನ್ನತ ಗುಣಮಟ್ಟದ ಲೈನ್ ಪ್ರೊಸೆಸರ್ ಒಳಗೊಂಡಿದ್ದು, ಭವಿಷ್ಯದ ಖಾತ್ರಿಯನ್ನೂ ನೀಡುತ್ತದೆ. 5ಜಿ ತರಂಗಾಂತರಕ್ಕೆ ಧನ್ಯವಾದಗಳು..! ಒಂದು ವಾರ ಕಾಲ ನಡೆದಿರುವ ಈ ಫೋನ್ ಪರಿಶೀಲನೆಯ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಸ್ಥಿರತೆ ಹೊಂದಿರುವುದು ಕಂಡು ಬಂದಿದೆ ಹಾಗೂ ತಾನು ಕೊಡುಗೆ ನೀಡಿರುವ ದರಕ್ಕಿಂತ ಹೆಚ್ಚು ಬಯಸುವಂತಿದೆ.

ಬ್ಯಾಟರಿ 36 ಗಂಟೆ ಬಾಳಿಕೆ..!
ಈ ಫೋನ್‌ನ ಬ್ಯಾಟರಿ ನಿಯಮಿತ ಬಳಕೆಗಳಲ್ಲಿ 36 ಗಂಟೆ ಅವಧಿ ಕಾಲ ಬಾಳಿಕೆ ಬರಲಿದ್ದು, ಕೇವಲ ಒಂದು ಗಂಟೆಯೊಳಗೆ ಚಾರ್ಜ್ ಮಾಡಬಹುದಾಗಿದೆ. ಈ ನಡುವೆ ಎಲ್ಲರೂ ಅತಿ ವೇಗದ ಚಾರ್ಜರ್ ಕುರಿತು ಮಾತನಾಡುತ್ತಿದ್ದು, ಒನ್‌ಪ್ಲಸ್ ತನ್ನ 65 ವ್ಯಾಟ್ ವಾರ್ಪ್ ಚಾರ್ಜರ್ ನೊಂದಿಗೆ ಈ ಸಾಧ್ಯತೆಯನ್ನು ಸರಿಯಾಗಿ ಸಾಧಿಸಿದೆ ಎನ್ನಲು ಅಡ್ಡಿಯಿಲ್ಲ.

ಅಚ್ಚರಿದಾಯಕ ಹೊಸ ವೈಶಿಷ್ಟ್ಯವೇನಿಲ್ಲ..!
ಈ ಫೋನ್‌ನಲ್ಲಿ ನೀವು ಕೆಟ್ಟ ಹೊಡೆತ ಅನುಭವಿಸುವಂಥ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ. ಹಾಗೆಯೇ ತನ್ನ ಹೊಸ ಉತ್ಪನ್ನದಲ್ಲಿ ಅಚ್ಚರಿ ಪಡಿಸುವಂತಹ ಯಾವುದೇ ಹೊಸ ವೈಶಿಷ್ಟ್ಯವನ್ನೂ ಒನ್ ಪ್ಲಸ್ ಅಳವಡಿಸಿಲ್ಲ. ಅಂತಹ ಅಚ್ಚರಿಯ ವೈಶಿಷ್ಟ್ಯಗಳನ್ನು ಪಡೆಯಲು ನಾವು ಬಹುಶಃ ಒನ್ ಪ್ಲಸ್ 10 ಮಾದರಿಗೆ ಕಾಯಬೇಕಾಗಬಹುದು.

ಇದನ್ನೂ ಓದಿ: OnePlus 9RT: ತ್ರಿವಳಿ ಕ್ಯಾಮೆರಾ, 4,500 mAh ಬ್ಯಾಟರಿ.. ಭಾರತೀಯರ ಮನಗೆದ್ದ OnePlus 9RT 5G ಸ್ಮಾರ್ಟ್​ಫೋನ್​

ಒನ್‌ಪ್ಲಸ್ 9RTಯನ್ನು ನೀವು ಖರೀದಿಸಬಹುದೆ..?
ಒನ್‌ಪ್ಲಸ್ 9RTಯನ್ನು ನೀವು ಖರೀದಿಸಬಹುದೆ ಎಂಬ ಪ್ರಶ್ನೆಗೆ ಉತ್ತರ ಹೌದು. ನೀವು ನಿಮ್ಮ ಬಳಿ ಒನ್‌ಪ್ಲಸ್ ಸ್ಮಾರ್ಟ್ ಫೋನ್‌ನ ಹಳೆ ಆವೃತ್ತಿಯನ್ನು ಅಥವಾ ಆ‍್ಯಂಡ್ರಾಯ್ಡ್ ಫೋನ್ ಹೊಂದಿದ್ದು, ನಿಮ್ಮನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಬಲ್ಲ ಹೊಸ ಫೋನ್ ನಿರೀಕ್ಷೆಯಲ್ಲಿದ್ದರೆ ಈ ಫೋನ್ ಖರೀದಿ ಯೋಗ್ಯ. ನೀವೇನಾದರೂ ಉನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಆ್ಯಂಡ್ರಾಯ್ಡ್ ಫೋನ್‌ಗಳ ಅನುಭವಕ್ಕಾಗಿ ಹುಟುಕಾಟ ನಡೆಸುತ್ತಿದ್ದರೆ ಲಭ್ಯವಿರುವ ಉತ್ಕೃಷ್ಟ ಫೋನ್‌ಗಳ ಪೈಕಿ ಒನ್‌ಪ್ಲಸ್ 9RT ಸರಿಯಾದ ಆಯ್ಕೆಯಾಗಲಿದೆ. ಈ ಫೋನ್ ಎಲ್ಲ ವೈಶಿಷ್ಟ್ಯಗಳ ಮೇಲೂ ಗುರುತು ಮೂಡಿಸುತ್ತದೆಯಾದರೂ ನಿಮ್ಮ ಬ್ಯಾಂಕ್ ಬಾಕಿಗೆ ಮಾತ್ರ ಅಂತಹ ಕನ್ನ ಕೊರೆಯುವುದಿಲ್ಲ..!
Published by:vanithasanjevani vanithasanjevani
First published: