ವಿಶ್ವದಾದ್ಯಂತ ತಮ್ಮ ವಿನೂತನ ಮೊಬೈಲ್ ಬ್ರ್ಯಾಂಡ್ (Mobile Brand) ಮೂಲಕ ಗ್ರಾಹಕರಿಗೆ ಹತ್ತಿರವಾಗಿರುವ ಮೊಬೈಲ್ ತಯಾರಕ ಕಂಪನಿಗಳಲ್ಲಿ ಒನ್ಪ್ಲಸ್ (OnePlus) ಕಂಪನಿ ಸಹ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಒನ್ಪ್ಲಸ್ ಕಂಪನಿಯು ಹಲವು ಶ್ರೇಣಿಗಳಲ್ಲಿ ಫೋನ್ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ (Market) ಈಗಾಗಲೇ ತನ್ನ ಹೆಸರನ್ನು ಬಲ ಪಡಿಸಿಕೊಂಡಿದೆ ಎಂದು ಹೇಳಬಹುದು. ಸದ್ಯ ಒನ್ಪ್ಲಸ್ ಕಂಪನಿಯು ತನ್ನ ಜನಪ್ರಿಯ ಸ್ಮಾರ್ಟ್ಫೋನ್ ಮಾಡೆಲ್ ಅನ್ನು ಭಾರತದಲ್ಲಿ (India) ಸ್ಥಗಿತಗೊಳಿಸಲಿದೆ (Stop) ಎಂದು ಹೇಳಲಾಗುತ್ತಿದೆ.
ಒನ್ಪ್ಲಸ್ ಕಂಪನಿಯು ಕ್ರಮೇಣ ಭಾರತೀಯ ಮಾರುಕಟ್ಟೆಯಿಂದ ಒನ್ಪ್ಲಸ್ 9ಆರ್ ಮಾಡೆಲ್ ಅನ್ನು ಹೊರ ತೆಗೆಯುತ್ತದೆ ಎಂದು ಕಂಪನಿಯ ಮೂಲಗಳು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಒನ್ಪ್ಲಸ್ 9ಆರ್ ಮಾಡೆಲ್ ಸ್ಮಾರ್ಟ್ಫೋನ್ಗಳ ಸ್ಟಾಕ್ ಇರುವವರೆಗೆ ಮಾತ್ರವೇ ಭಾರತದ ಗ್ರಾಹಕರು ಅದನ್ನು ಖರೀದಿಸಬಹುದಂತೆ ಎಂದು ಹೇಳಿದೆ.
ಚೀನಾ ಸ್ಮಾರ್ಟ್ಫೋನ್ ತಯಾರಕರಾದ ಒನ್ಪ್ಲಸ್ ಕಂಪನಿಯು ತನ್ನ ಜನಪ್ರಿಯ ಸ್ಮಾರ್ಟ್ಫೋನ್ ಮಾಡೆಲ್ ಆದಂತಹ ಒನ್ಪ್ಲಸ್ 9ಆರ್ ಅನ್ನು ಭಾರತದಲ್ಲಿ ಜನವರಿ 14ರಂದು ಬಿಡುಗಡೆ ಮಾಡಲು ಯೋಜಿಸಿರುವ ಒನ್ಪ್ಲಸ್ 9ಆರ್ಟಿ ಸಲುವಾಗಿ ಹಿಂತೆಗೆದುಕೊಳ್ಳಲಿದ್ದಾರೆ ಎಂದು ವದಂತಿ ಈಗಾಗಲೇ ಹಬ್ಬಿತ್ತು. ಬೆಲೆಯ ವಿಷಯದಲ್ಲಿ, ಈ ಎರಡೂ ಸ್ಮಾರ್ಟ್ಫೋನ್ಗಳು ಭಾರತೀಯ ಮಾರುಕಟ್ಟೆಯಲ್ಲಿ ಒಂದೇ ರೀತಿಯ ಬೆಲೆ ಟ್ಯಾಗ್ ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ, ಒನ್ಪ್ಲಸ್ 9ಆರ್ ಮಾಡೆಲ್ ಸ್ಮಾರ್ಟ್ಫೋನ್ ಅಮೆಜಾನ್ನಲ್ಲಿ 8ಜಿಬಿ ರ್ಯಾಮ್ ಮತ್ತು 128ಜಿಬಿ ಆಂತರಿಕ ಸ್ಟೋರೇಜ್ ಇರುವ ಮಾಡೆಲ್ 39,999 ಬೆಲೆಗೆ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 870 ಚಿಪ್ ಸೆಟ್ ಅನ್ನು ಹೊಂದಿರುತ್ತದೆ. ಕ್ವಾಡ್ ಕ್ಯಾಮೆರಾ ಸ್ಮಾರ್ಟ್ಫೋನ್ 48 ಮೆಗಾ ಪಿಕ್ಸಲ್ ಮುಖ್ಯ ಲೆನ್ಸ್ ಜೊತೆಗೆ 16 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಲೆನ್ಸ್, 5 ಮೆಗಾ ಪಿಕ್ಸಲ್ ಮ್ಯಾಕ್ರೋ ಮತ್ತು 2 ಮೆಗಾ ಪಿಕ್ಸಲ್ ಮೋನೋಕ್ರೋಮ್ ಸೆನ್ಸರ್ ಅನ್ನು ಹೊಂದಿದೆ. ಇದು 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಪಂಚ್ ಹೋಲ್ ಡಿಸ್ಪ್ಲೇ ಫೋನ್ 4,500 ಎಂಎಎಚ್ ಬ್ಯಾಟರಿಯನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: Trick: ಸ್ಮಾರ್ಟ್ಫೋನ್ ಪಾಸ್ವರ್ಡ್ ಮರೆತಿದ್ದೀರಾ? ಅನ್ಲಾಕ್ ಮಾಡಲು ಈ ಟ್ರಿಕ್ ಟ್ರೈ ಮಾಡಿ ನೋಡಿ
ಈ ಮಧ್ಯೆ, ಒನ್ಪ್ಲಸ್ ಕಂಪನಿಯು ಭಾರತದಲ್ಲಿ ಒನ್ಪ್ಲಸ್ 9ಆರ್ಟಿ ಮತ್ತು ಹೊಸ ಇಯರ್ ಬಡ್, ಬಡ್ಸ್ ಝಡ್2 ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಒನ್ಪ್ಲಸ್ 9ಆರ್ಟಿ ಒಐಎಸ್ನೊಂದಿಗೆ 50 ಮೆಗಾ ಪಿಕ್ಸಲ್ ಮುಖ್ಯ ಲೆನ್ಸ್ ಹೊಂದಿದ್ದು, ಇದು ಸೋನಿ ಐಎಂಎಕ್ಸ್766 ಸೆನ್ಸರ್ ಆಗಿರುತ್ತದೆ. ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸಲ್ ಹೊಂದಿದೆ. ಈ ಸ್ಮಾರ್ಟ್ಫೋನ್ 120 ಹರ್ಟ್ಜ್ ರಿಫ್ರೆಶ್ ರೇಟ್ ಎಫ್ಎಚ್ಡಿ+ ಒಎಲ್ಇಡಿ ಡಿಸ್ಪ್ಲೇಯನ್ನು ಸಹ ಹೊಂದಿದೆ.
ಒನ್ಪ್ಲಸ್ 9ಆರ್ಟಿ ಆಕ್ಟಾ-ಕೋರ್ ಸ್ವರೂಪದಲ್ಲಿ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 888 ಎಸ್ಒಸಿಯನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಜೊತೆಗೆ ಕನಿಷ್ಠ 6ಜಿಬಿ ರ್ಯಾಮ್ ಮತ್ತು ಅತಿ ಹೆಚ್ಚು 12ಜಿಬಿವರೆಗೆ ಇದನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಜನರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಸಂಗ್ರಹಿಸುವ ಡೇಟಾ ಪ್ರಮಾಣವನ್ನು ಗಮನಿಸಿದರೆ ಇದರ ಆಂತರಿಕ ಸ್ಟೋರೇಜ್ 128ಜಿಬಿಯಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: WhatsApp ಪರಿಚಯಿಸಲಿದೆ ಹೊಸ 3 ವೈಶಿಷ್ಟ್ಯ! ಅಪ್ಡೇಟ್ ಮಾಡಲು ರೆಡಿಯಾಗಿರಿ
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಆಂಡ್ರಾಯ್ಡ್ 12 ಅನ್ನು ಕಲರ್ ಒಎಸ್ 12 ಎಂದು ಕರೆಯುತ್ತಾರೆ. ಒನ್ಪ್ಲಸ್ 65ವ್ಯಾಟ್ ಫಾಸ್ಟ್ ಚಾರ್ಜರ್ ಜೊತೆಗೆ 4,500 ಎಂಎಎಚ್ ಬ್ಯಾಟರಿಯನ್ನು ಇದರಲ್ಲಿ ಸೇರಿಸಬಹುದು ಎಂದು ಅಂದಾಜಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ