Oneplusನಿಂದ 9, 9 ಪ್ರೊ, 9R​​ ಸ್ಮಾರ್ಟ್​ಫೋನ್​ ಜೊತೆಗೆ ಆಕರ್ಷಕ ಸ್ಮಾರ್ಟ್​ವಾಚ್​ ರಿಲೀಸ್; ಬೆಲೆ, ಏನು ವಿಶೇಷತೆ?

Oneplus 9: ನೂತನ ಸ್ಮಾರ್ಟ್ಫೋನ್​ 6.55 ಇಂಚಿನ ಫುಲ್​-ಹೆಚ್​+ ಫ್ಲುಯ್ಡ್​​ ಡಿಸ್​ಪ್ಲೇ ಹೊಂದಿದೆ. ಒಕ್ಟಾ-ಕೋರ್​ ಕ್ವಾಲ್​​ಕಾಮ್​ ಸ್ನಾಪ್​ಡ್ರಾಗನ್​ 888 ಪ್ರೊಸೆಸರ್​ ಜೊತೆಗೆ ಆ್ಯಂಡ್ರಾಯ್ಡ್​ 11 ಜೊತೆಗೆ ಆಕ್ಸಿಜನ್​ಒಎಸ್​​ 11 ಬೆಂಬಲ ಪಡೆದಿದೆ.

oneplus 9

oneplus 9

  • Share this:
    ಈ ವರ್ಷ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷೆಯ ಸ್ಮಾರ್ಟ್​ಫೋನ್​ಗಳಲ್ಲಿ​ ಒನ್​​ಪ್ಲಸ್​​ 9 ಮತ್ತು ಒನ್​ಪ್ಲಸ್​​ 9 ಪ್ರೊ ಹೆಸರು ಕಾಣಿಸಿಕೊಂಡಿತ್ತು. ಇದೀಗ ಇವರೆಡು ಸ್ಮಾರ್ಟ್​ಫೋನ್​ ತನ್ನ ಬ್ರಾಂಡ್​ನೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಸ್ವೀಡಿಸ್​ ಬ್ರಾಂಡ್​ ಆದ ಹಾಸೆಲ್​ಬ್ಲಾಡ್​​ ಮತ್ತು ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​ 888 ಪ್ರೊಸೆಸರ್​ನಲ್ಲಿರುವ ಈ ಸ್ಮಾರ್ಟ್​ಫೋನ್​ ಆಕರ್ಷಕ ಫೀಚರ್ಸ್​ ಹೊಂದಿದೆ. ಜೊತೆಗೆ ಫಾಸ್ಟ್​ ಚಾರ್ಜಿಂಗ್​ ಸೌಲಭ್ಯ ಇದರಲ್ಲಿ .

    ಒನ್​ಪ್ಲಸ್​ 9, ಒನ್​ಪ್ಲಸ್​ 9 ಪ್ರೊ, ಒನ್​ಪ್ಲಸ್​​ 9ಆರ್​ ಮತ್ತು ಸ್ಮಾರ್ಟ್​ವಾಚ್​ ಅನ್ನು ಪರಿಚಯಿಸಿದೆ:

    ಒನ್​ಪ್ಲಸ್​​ 9 ಸ್ಮಾರ್ಟ್​ಫೋನ್​ 8ಜಿಬಿ+128ಜಿಬಿ ವೇರಿಯಂಟ್​ನಲ್ಲಿದ್ದು, ಇದರ ಬೆಲೆ 49,999 ರೂ ಆಗಿದೆ. 12ಜಿಬಿ+ 256ಜಿಬಿ ಆಯ್ಕೆಯ ಫೋನ್ ಬೆಲೆ 54,999 ರೂ ಇದೆ. ಅಂತೆಯೇ ಒನ್​ಪ್ಲಸ್​ 9 ಪ್ರೊ 8ಜಿಬಿ ರ್ಯಾಮ್​+ 128ಜಿಬಿ ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.  ಇದರ ಬೆಲೆ 64,999 ರೂ. ಇನ್ನು ಒನ್​ಪ್ಲಸ್​ 9 ಆರ್​ ಸ್ಮಾರ್ಟ್​ಫೋನ್​ 8ಜಿಬಿ+128ಜಿಬಿ ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದ್ದು, 39,999 ರೂ ಆಗಿದೆ. ಇನ್ನು ವಾಚ್​​ ಬೆಲೆ 16,999 ರೂ ಆಗಿದೆ.

    ಒನ್​ಪ್ಲಸ್​ 9 ವಿಶೇಷತೆ:

    ನೂತನ ಸ್ಮಾರ್ಟ್ಫೋನ್​ 6.55 ಇಂಚಿನ ಫುಲ್​-ಹೆಚ್​+ ಫ್ಲುಯ್ಡ್​​ ಡಿಸ್​ಪ್ಲೇ ಹೊಂದಿದೆ. ಒಕ್ಟಾ-ಕೋರ್​ ಕ್ವಾಲ್​​ಕಾಮ್​ ಸ್ನಾಪ್​ಡ್ರಾಗನ್​ 888 ಪ್ರೊಸೆಸರ್​ ಜೊತೆಗೆ ಆ್ಯಂಡ್ರಾಯ್ಡ್​ 11 ಜೊತೆಗೆ ಆಕ್ಸಿಜನ್​ಒಎಸ್​​ 11 ಬೆಂಬಲ ಪಡೆದಿದೆ.

    ಇನ್ನು ಫೋಟೋಗ್ರಾಫಿಗೆ ತಕ್ಕಂತೆ 48 ಮೆಗಾಫಿಕ್ಸೆಲ್​​ ಸೋನಿ ಐಎಮ್​ಎಕ್ಸ್​689 ಪ್ರೈಮರಿ ಸೆನ್ಸಾರ್​​, 50 ಮೆಗಾಫಿಕ್ಸೆಲ್ ಸೆಕೆಂಡರಿ ಸೆನ್ಸಾರ್​​ ಮತ್ತು 2 ಮೆಗಾಫಿಕ್ಸೆಲ್​​ ಮೊನೊಕ್ರೋಮ್​ ಸೆನ್ಸಾರ್​ ನೀಡಲಾಗಿದೆ.

    ಧೀರ್ಘ ಬಾಳಿಕೆಗಾಗಿ 4,500ಎಮ್​ಎಹೆಚ್ ಬ್ಯಾಟರಿ ಇದರಲ್ಲಿ ನೀಡಲಾಗಿದೆ. ಗ್ರಾಹಕರಿಗಾಗಿ ನೀಲಿ, ಕಪ್ಪು, ವಿಂಟರ್​ ಮಿಸ್ಟ್​ ಬಣ್ಣದಲ್ಲಿ ಪರಿಚಯಿಸಿದೆ.

    ಒನ್​ಪ್ಲಸ್​ 9 ವಿಶೇಷತೆ:

    ಈ ಸ್ಮಾರ್ಟ್​ಫೋನ್​​ 6.7 ಇಂಚಿನ ಹೆಚ್​+ಫ್ಲುಯ್ಡ್​ ಡಿಸ್​ಪ್ಲೇ ಜೊತೆಗೆ ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​ 888 ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ.  ಜೊತೆಗೆ ಕಡಿಮೆ ಟೆಂಪರೇಚರ್​ ಪೊಲಿಕ್ರಿಸ್ಟಾಲಿನ್​ ಆಕ್ಸೈಡ್​​ ಟೆಕ್ನಾಲಜಿ ಹೊಂದಿದೆ. ಅದರ ಜೊತೆಗೆ ಹೈಪರ್​ ಟಚ್​ ಸಪೋರ್ಟ್​, ಗೇಮಿಂಗ್​ ಆಡಲು ಹೇಳಿ ಮಾಡಿಸಿದಂತಿದೆ.

    ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದಾಗ ಮುಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಪ್ರೈಮರಿ+ 50 ಮೆಗಾಫಿಕ್ಸೆಲ್​ ಸೆಕೆಂಡರಿ +8 ಮೆಗಾಫಿಕ್ಸೆಲ್​ ಟೆಲಿಫೋಟೋ ಶೂಟರ್​ ಮತ್ತು 2 ಮೆಗಾಫಿಕ್ಸೆಲ್​ ಮೊನೊಕ್ರೋಮ್​​ ಸೆನ್ಸಾರ್​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಸೆನ್ಸಾರ್​​ ನೀಡಲಾಗಿದೆ.

    ಒನ್​ಪ್ಲಸ್​ 9ಆರ್​ ವಿಶೇಷತೆ:

    ಒನ್​​ಪ್ಲಸ್​ 9 ಆರ್​ ಸ್ಮಾರ್ಟ್​ಫೋನ್​ 6.5 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​ 870 ಎಸ್​ಒಸಿಯಿಂದ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​ 11 ಜೊತೆಗೆ ಆಕ್ಸಿಜನ್​ಒಎಸ್​ 11 ಬೆಂಬಲ ಪಡೆದಿದೆ.

    ಸ್ಮಾರ್ಟ್​ಫೊನ್​ ಮುಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಧೀರ್ಘ ಬಾಳಿಕೆಗೆ 4,500 ಎಮ್​ಎಹೆಚ್​ ಬ್ಯಾಟರಿ ನೀಡಲಾಗಿದೆ.

    ಒನ್​ಪ್ಲಸ್​ ವಾಚ್​:

    ನೂತನ ವಾಚ್​ 1.39 ಇಂಚಿನ ಹೆಚ್​ಡಿ ಅಮೋಲ್ಡ್​ ಡಿಸ್​ಪ್ಲೇ ಹೊಂದಿದೆ. ಜೊತೆಗೆ ವಾಯ್ಸ್​ ಕರೆ, ನೋಟಿಫಿಕೇಶನ್ ನೋಡಬಹುದಾಗಿದೆ. ರಿಮೋಟ್​ ಕಂಟ್ರೋಲ್ ಆಯ್ಕೆ ಇದರಲ್ಲಿದೆ. ಅಷ್ಟೇ ಅಲ್ಲದೆ, ಉಸಿರಾಟ, ಎದೆಬಡಿತ ಕುರಿತು ಮಾಹಿತಿ ನೀಡುತ್ತದೆ.

    ಅಂದಹಾಗೆಯೇ ಇದರಲ್ಲಿ ಜಿಪಿಎಸ್​ ಸಪೋರ್ಟ್​, ಐಪಿ68 ಮತ್ತು 5ಎಟಿಎಮ್​ ವಾಟರ್​ ರೆಸಿಸ್ಟಂಟ್​​ ನೀಡಲಾಗಿದೆ. ಫಾಸ್ಟ್​ ಚಾರ್ಜಿಂಗ್​ ಸೌಲಭ್ಯವಿರುವ ಈ ವಾಚ್​ ಬ್ಯಾಟರಿ ಸಾಮರ್ಥ್ಯವು ಉತ್ತಮವಾಗಿದೆ.
    Published by:Harshith AS
    First published: