OnePlus: ನೂತನ ಸ್ಮಾರ್ಟ್​ಫೋನ್​ ಪರಿಚಯಿಸಿದ ಒನ್​​ಪ್ಲಸ್​​; ಸೀಮಿತ ಆವೃತ್ತಿಯಲ್ಲಿ 8T Cyberpunk 2077

OnePlus 8T Cyberpunk 2077: ಸದ್ಯ ಚೀನಾದಲ್ಲಿ ಈ ನೂತನ ಸ್ಮಾರ್ಟ್​ಫೋನ್​ ಬಿಡುಗಡೆಗೊಂಡಿದ್ದು, ಸೀಮಿತ ಆವೃತ್ತಿಯನ್ನಷ್ಟೆ ಅಲ್ಲಿನ ಮಾರುಕಟ್ಟೆಗೆ ಪರಿಚಯಿಸಿದೆ.

OnePlus 8T Cyberpunk 2077

OnePlus 8T Cyberpunk 2077

  • Share this:
    ಬದಲಾದ ಕಾಲಮಾನದಲ್ಲಿ ನೂತನ ಸ್ಮಾಟ್​ಫೋನ್​ಗಳು ಮಾರುಕಟ್ಟೆಗೆ ಬರುತ್ತಿದೆ. ಹೊಸ ಫೀಚರ್​ ಅಳವಡಿಸಿಕೊಂಡಿರುವ ​ಫೋನ್​ಗಳು ರಾರಾಜಿಸುತ್ತಿವೆ. ಅದರಂತೆ ಇದೀಗ ಚೀನಾ ಮೂಲದ ಒನ್​ಪ್ಲಸ್​ ಸಂಸ್ಥೆ 8T Cyberpunk 2077 ಹೆಸರಿನ ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ.

    ಸದ್ಯ ಚೀನಾದಲ್ಲಿ ಈ ನೂತನ ಸ್ಮಾರ್ಟ್​ಫೋನ್​ ಬಿಡುಗಡೆಗೊಂಡಿದ್ದು, ಸೀಮಿತ ಆವೃತ್ತಿಯನ್ನಷ್ಟೆ ಅಲ್ಲಿನ ಮಾರುಕಟ್ಟೆಗೆ ಪರಿಚಯಿಸಿದೆ. ಒನ್​ಪ್ಲಸ್​ 8T Cyberpunk 2077 ಸ್ಮಾರ್ಟ್​ಫೋನ್​ ವಿಶೇಷ ಫೀಚರ್​ ಅಳವಡಿಸಿಕೊಂಡಿದ್ದು,  6.55 ಇಂಚಿನ ಫುಲ್​ ಹೆಚ್​ಡಿ+ ಫ್ಲ್ಯುಡ್​ ಅಮೋಲ್ಡ್​ ಡಿಸ್​ಪ್ಲೇ ಹೊಂದಿದೆ. ಆ್ಯಂಡ್ರಾಯ್ಡ್​ 11 ಬೆಂಬಲವನ್ನು ಪಡೆದಿದೆ. ಇನ್ನು 12GB RAM​ ಮತ್ತು 256GB ಸ್ಟೊರೇಜ್​ ಆವೃತ್ತಿಯಲ್ಲಿ ಪರಿಚಯಿಸಿದೆ.

    ಕ್ವಾಡ್​ ಕ್ಯಾಮೆರಾ ಸೆಟಪ್​ ಇದರಲ್ಲಿ ನೀಡಲಾಗಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಱಸೆಲ್ ಸೋನಿ ಐಎಮ್​ಎಕ್ಸ್​586 ಪ್ರೈಮರಿ ಸೆನ್ಸಾರ್​​ ಕ್ಯಾಮೆರಾ, 16 ಮೆಗಾಫಿಕ್ಸೆಲ್​ ಸೋನಿ ಐಎಮ್​ಎಕ್ಸ್​481 ಸೆನ್ಸಾರ್​ ನೀಡಲಾಗಿದೆ. 5 ಮೆಗಾಫಿಕ್ಸೆಲ್​ ಮಾಕ್ರೊ ಸೆನ್ಸಾರ್​, 2 ಮೆಗಾಫಿಕ್ಸೆಲ್​​ ಮೊನೊಕ್ರೋಮ್​ ಸೆನ್ಸಾರ್​ ಹೊಂದಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ಆಳವಡಿಸಲಾಗಿದೆ.

    ಇನ್ನು ಸ್ಮಾರ್ಟ್​ಫೋನ್ ​5G ಮತ್ತು 4Gಯಲ್ಲಿ ಕಾರ್ಯನಿರ್ವಹಿಸುತ್ತದೆ. ವೈ-ಫೈ, ಬ್ಲೂಟೂತ್​ 5.1, GPS​ ಜೊತೆಗೆ ಯುಎಸ್​ಬಿ ಟೈಪ್​ ಸಿ ಪೋರ್ಟ್​ ನೀಡಲಾಗಿದೆ. ಧೀರ್ಘಕಾಲದ ಬ್ಯಾಟರಿ ಬಾಳಿಕೆಗೆ 4,500mAh​ ಬ್ಯಾಟರಿ ಅಳವಡಿಸಲಾಗಿದೆ.

    ಬೆಲೆ: ಚೀನಾದಲ್ಲಿ ಒನ್​ಪ್ಲಸ್​​ 8T Cyberpunk 2077 ಸೀಮಿತ ಆವೃತ್ತಿ ಸ್ಮಾರ್ಟ್​ಫೋನ್ ​ ಬೆಲೆ 44,500 ರೂ ಇದ್ದು, ನವೆಂಬರ್​ 11 ರಿಂದ ಚೀನಾದಲ್ಲಿ ಮಾರಾಟ ಮಾಡುತ್ತಿದೆ.
    Published by:Harshith AS
    First published: